Saturday 10th, May 2025
canara news

ಆಕಾಶವಾಣಿಯ ರಾಜ್ಯ ಮಟ್ಟದ 2019ನೇ ಸಾಲಿನ ವಾರ್ಷಿಕ ಸ್ಪರ್ಧೆ

Published On : 05 Dec 2019   |  Reported By : Rons Bantwal


ಅವಳಿ ಪುರಸ್ಕಾರಗಳಿಗೆ ಭಾಜನವಾದ ಕಲಬುರಗಿ ಆಕಾಶವಾಣಿ

ಮುಂಬಯಿ, ಡಿ.03: ಆಕಾಶವಾಣಿಯ ರಾಜ್ಯ ಮಟ್ಟದ 2019ನೇ ಸಾಲಿನ ವಾರ್ಷಿಕ ಸ್ಪರ್ಧೆಯಲ್ಲಿ ಅವಳಿ ಪುರಸ್ಕಾರ ಪಡೆದ ಕಲಬುರಗಿ ಆಕಾಶವಾಣಿಗೆ ಬೆಂಗಳೂರಿನ ಆಕಾಶವಾಣಿ ಕೇಂದ್ರದಲ್ಲಿ (ನ.29) ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು.

ಸಿನಿಮಾ ರಂಗದ ನಿರ್ಮಾಪಕ, ನಿರ್ದೇಶಕರಾದ ಎಸ್.ನಾರಾಯಣ್ ಅವರು ಕಲಬುರಗಿ ಆಕಾಶವಾಣಿ ಕೇಂದ್ರ ಸಿದ್ಧಪಡಿಸಿದ `ನಾಯಿಬಾಲ ಡೊಂಕೆ' ನಾಟಕ ನಿರ್ಮಾಣ ಮಾಡಿದ ಕಾರ್ಯಕ್ರಮ ನಿರ್ವಾಹಕ ರಾಜೇಂದ್ರ ಆರ್.ಕುಲಕರ್ಣಿ ಮತ್ತು ಸೋಮಶೇಖರ್ ಎಸ್.ರುಳಿ ಅವರಿಗೆ ಪ್ರಶಸ್ತಿ ಪತ್ರ, ಫಲಕ ನೀಡಿ ಸತ್ಕರಿಸಿದರು.

ಬೆಂಗಳೂರು ಆಕಾಶವಾಣಿ ಕೇಂದ್ರದ ಉಪಮಹಾ ನಿರ್ದೇಶಕಿ (ಇ) ನೇಹಾ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸರಕಾರದ ಯೋಜನೆಗಳಿಗೆ ಕೊಡಮಾಡುವ `ಪೆÇೀಷಣ್ ಅಭಿಯಾನ್' ವಿಭಾಗದಲ್ಲಿ ಅರ್ಹತಾ ಪ್ರಮಾಣ ಪತ್ರ (ಸರ್ಟಿಫಿಕೇಟ್ ಆಫ್ ಮೆರಿಟ್) ಎರಡನೇ ಬಹುಮಾನ ಪಡೆದ ಕಾರ್ಯಕ್ರಮ ನಿರ್ವಾಹಕ ಡಾ| ಸದಾನಂದ ಪೆರ್ಲ ಅವರಿಗೆ ಎಸ್. ನಾರಾಯಣ್ ಪುರಸ್ಕಾರ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಕವಯಿತ್ರಿ ವಿಮರ್ಶಕಿ ಡಾ| ಪಿ.ಚಂದ್ರಿಕಾ, ಬೆಂಗಳೂರು ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಡಾ| ನಿರ್ಮಲಾ ಎಲಿಗಾರ್, ಡಾ| ಎನ್.ರಘು, ಮಾರುಕಟ್ಟೆ ವಿಭಾಗದ ಉಪ ಮಹಾನಿರ್ದೇಶಕ ಅನಿಲ್ ಕುಮಾರ್ ಮಂಗಲಗಿ, ವಿವಿಧ ಭಾರತಿಯ ಉಪನಿರ್ದೇಶಕ ಆರ್.ಕೆ ಗೋವಿಂದರಾಜನ್, ಪಿಸಿಡಬ್ಲ್ಯೂ ಮುಖ್ಯಸ್ಥ ಉದಯವೀರ್ ಸಿಂಗ್, ತಾಂತ್ರಿಕ ವಿಭಾಗದ ಎಸ್.ಪಿ ಮೇತ್ರೆ, ಆಡಳಿತಾಧಿಕಾರಿ ಅಶ್ವಿನಿ, ಕಲಬುರಗಿ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ರಾಜೇಂದ್ರ ಆರ್ ಕುಲಕರ್ಣಿ ಉಪಸ್ಥಿತರಿದ್ದರು.

ಕಾರ್ಯಕ್ರಮ ನಿರ್ವಾಹಕ ಡಾ| ಎ.ಎಸ್ ಶಂಕರನಾರಾಯಣ್ ಸ್ವಾಗತಿಸಿದರು. ಉದ್ಘೋಷಕಿ ಕೆ.ಸುಮತಿ ಕಾರ್ಯಕ್ರಮ ನಿರೂಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here