Saturday 10th, May 2025
canara news

ಮುಂಬಯಿ ವಿವಿ ಕನ್ನಡ ವಿಭಾಗ-ಮಿತ್ರವೃಂದದ ಮುಲುಂಡ್‍ನ ರಾಮಚಂದ್ರ ಉಚ್ಚಿಲ್ ಶತಮಾನೋತ್ಸವ ಕಾರ್ಯಕ್ರಮ ಮುಂದೂಡಿಕೆ

Published On : 05 Dec 2019   |  Reported By : Rons Bantwal


ಮುಂಬಯಿ, ಡಿ.04: ಕನ್ನಡದ ಹೆಸÀರಾಂತ ಸಾಹಿತಿ, ಲೇಖಕ, ಸÀಂಘಟಕ ವಿದ್ವಾನ್ ರಾಮಚಂದ್ರ ಉಚ್ಚಿಲ್ ಅವರ ಜನ್ಮಶತಮಾನೋತ್ಸವದ ಸರಣಿ ಕಾರ್ಯಕ್ರಮದ ಉದ್ಘಾಟನೆ ಜನವರಿ 04ರಂದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆಯಲಿದೆ.

ಕನ್ನಡ ವಿಭಾಗದ ಮುಂಬಯಿ ವಿಶ್ವವಿದ್ಯಾಲಯ ಮಿತ್ರವೃಂದದ ಮುಲುಂಡ್ ಹಾಗೂ ಗುರುಶಿಷ್ಯ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಇದೇ ಸಂದರ್ಭದಲ್ಲಿ ವಿದ್ವಾನ್ ರಾಮಚÀಂದ್ರ
ಉಚ್ಚಿಲ್ ಅವರ ಕೃತಿಗಳ ಸಮೀಕ್ಷೆಯನ್ನು ಸಹ ಆಯೋಜಿಸಲಾಗಿದೆ.

ಡಾ| ವಾಣಿ ನಾರಾಯಣ ಉಚ್ಚಿಲ್ಕರ್ ಅವರ ಪತಿ ನಾರಾಯಣ ಉಚ್ಚಿಲ್ಕರ್ ಇತ್ತೀಚೆಗೆ ನಿಧನರಾದ ಕಾರಣದಿಂದ ಇದೇ ಡಿ.07 ರಂದು ಮುಂಬಯಿ ವಿಶ್ವವಿದ್ಯಾಲಯದಲ್ಲಿ ನಡೆಯ ಬೇಕಾಗಿದ್ದ ಜನ್ಮ ಶತಮಾನೋತ್ಸವ ಉದ್ಘಾಟನೆ ಕಾರ್ಯಕ್ರಮವನ್ನು ಜನವರಿ 04 ತಾರೀಖಿಗೆ ಮುಂದೂಡಲಾಗಿದೆ ಎಂದು ವಿಭಾಗದ ಮುಖ್ಯಸ್ಥ ಡಾ| ಜಿ.ಎನ್‍ಉಪಾಧ್ಯ, ಮಿತ್ರವೃಂದದ ಮುಲುಂಡ್ ಇದರ ಎಸ್.ಕೆ ಸುಂದರ್, ಎ.ನರಸಿಂಹ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here