Saturday 10th, May 2025
canara news

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ 75ರ ಸಂಭ್ರಮ-ಧಾರ್ಮಿಕ ಸಭೆ

Published On : 09 Dec 2019   |  Reported By : Rons Bantwal


ಶನೈಶ್ವರ ದೇವಸ್ಥಾನ ನಿರ್ಮಾಣವೇ ನಮ್ಮ ಆಶಯ : ಹರೀಶ್ ಜಿ.ಅವಿೂನ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.07: ಯೋಗ್ಯರಿಗೆ ಅವರ ಕರ್ಮವನ್ನು ಅವಲಂಬಿಸಿ ವರ ಮತ್ತು ಆಶೀರ್ವಾದಗಳನ್ನು ನೀಡುವಲ್ಲಿ ಶನೀಶ್ವರ ದೇವರು ಸಮರ್ಥರಾಗಿದ್ದು ಇಂತಹ ಶನಿದೇವರ ಆರಾಧಾನೆಯಿಂದ ನೆಮ್ಮದಿಯುತ ಮತ್ತು ಸಮೃದ್ಧಿಯ ಬದುಕು ಫಲಿಸುವುದು. ಶನಿ ಪುರಾಣಗಳಲ್ಲಿ ಶನೈಶ್ವರನು ಆಧ್ಯಾತ್ಮಿಕ ತಪಸ್ವಿ, ತಪಸ್ಸು, ಶಿಸ್ತು ಮತ್ತು ಕಠಿಣ ಪರಿಶ್ರಮಿ ಅನ್ನುವುದಿದೆ. ಹಿಂದೂ ಧರ್ಮದಲ್ಲಿ ನ್ಯಾಯದ ದೇವರು ಎಂದೆಣಿಸಿ ಎಲ್ಲರಿಗೂ ಅವರ ಆಲೋಚನೆಗಳು, ಮಾತು ಮತ್ತು ಕಾರ್ಯಗಳನ್ನು ಅವಲಂಬಿಸಿ ಫಲಿತಾಂಶ ನೀಡುವ ದೇವರೆಂದು ಬಿಂಬಿಸಲ್ಪಟ್ಟಿರುವ ಶನೈಶ್ವರ ಶಕ್ತಿಯನ್ನು ನಮ್ಮ ಪೂರ್ವಜರು ಬಲವಾಗಿ ಅರ್ಥೈಸಿ ಶನಿ ಮಹಾತ್ಮಾ ಸೇವಾ ಸಮಿತಿ ರಚಿಸಿ ನಮ್ಮ ಬಾಳಿಗೆ ಶಕ್ತಿ ತುಂಬಿದ್ದಾರೆ. ಆದುದರಿಂದ ನಾವೂ ಇದನ್ನು ಮುನ್ನಡೆಸುತ್ತಾ ಈ ಸೇವಾ ಸಮಿತಿ ಮೂಲಕ ಶನೈಶ್ವರ ದೇವಸ್ಥಾನ ನಿರ್ಮಾಣವೇ ನಮ್ಮ ಆಶಯ ಎಂದು ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ಗೌರವಾಧ್ಯಕ್ಷ ಹರೀಶ್ ಜಿ.ಅವಿೂನ್ ನುಡಿದರು.

ಫೆÇೀರ್ಟ್ (ವಿಟಿ) ಇಲ್ಲಿನ ಖಾಂಜಿ ಕೇತ್ಸೀ ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಸಂಜೆ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ತನ್ನ 75ನೇ ವಾರ್ಷಿಕ ಶನಿ ಮಹಾಪೂಜೆ ನೆರವೇರಿಸಿ ಆಯೋಜಿಸಿದ್ದ ಧಾರ್ಮಿಕ ಸಭಾಧ್ಯಕ್ಷತೆ ವಹಿಸಿ ಹರೀಶ್ ಅವಿೂನ್ ಮಾತನಾಡಿದರು.

ಅತಿಥಿü ಅಭ್ಯಾಗತರುಗಳಾಗಿ ಎಸ್‍ಎಸ್ ಟ್ರನ್ಸ್‍ಲ್ಯಾಂಡ್ ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಾನ್ಪಾಡ ಇದರ ಆಡಳಿತ ನಿರ್ದೇಶಕ ಸುಧಾಕರ ಆರ್.ಶೆಟ್ಟಿ ಹಿರಿಯಡ್ಕ, ಮುಕ್ಕ ಖಂಡೇವು ದೈವಸ್ಥಾನದ ಆದಿತ್ಯ ಮುಕ್ಕಳ್ದಿ, ಪಡ್ರೆ ಧೂಮಾವತಿ ಕ್ಷೇತ್ರದ ದೇವೆಂದ್ರ ಪೂಜಾರಿ, ಶ್ರೀ ಶನೀಶ್ವರ ದೇವಾಲಯ ನೆರೂಲ್ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ.ಪೂಜಾರಿ, ವೆಸ್ಟರ್ನ್ ಇಂಡಿಯಾ ಸೇವಾ ಸಮಿತಿಯ ಅಮೃತ ಮಹೋತ್ಸವ ಸ್ಮರಣ ಸಂಚಿಕೆಯ ಕಾರ್ಯಾಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್ ವೇದಿಕೆಯನ್ನು ಅಲಂಕರಿಸಿದ್ದರು.

ಈ ಶುಭಾವಸರದಲ್ಲಿ ಮಂದಿರದಲ್ಲಿ 50 ವರ್ಷಗಳ ಕಾಲ ಅರ್ಚಕರಾಗಿ, ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಿ| ನಾರಾಯಣ ಬಿ.ಸಾಲ್ಯಾನ್ ಸ್ಮರಣಾರ್ಥ ಪ್ರಶಸ್ತಿಯನ್ನು ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ ಡೊಂಬಿವಲಿ ಸಂಸ್ಥೆಗೆ ಅಧ್ಯಕ್ಷ ಸೋಮನಾಥ ಪೂಜಾರಿ ಮತ್ತು ಸುಜತಾ ಸೋಮನಾಥ್ ಅವರಿಗೆ ಅತಿಥಿüಗಳು ಪ್ರದಾನಿಸಿ ಗೌರವಿಸಿದರು ಹಾಗೂ ಹಿರಿಯ ಸದಸ್ಯ ಬಿ.ಎಸ್ ಕುಂದರ್ (ಪತ್ನಿ ರೋಹಿತಾ ಕುಂದರ್ ಜೊತೆಗೂಡಿ) ಅವರನ್ನು ಅತಿಥಿüಗಳು ಸನ್ಮಾನಿಸಿ ಅಭಿನಂದಿಸಿದರು. ಹೆಸರಾಂತ ಸಿತಾರ್ ವಾದಕ ಕೊರಗಪ್ಪ ಎ.ಕೋಟ್ಯಾನ್, ಪ್ರಭಾಕರ ಗುರುಸ್ವಾಮಿ ಪುಣ್, ಡಿ.ಬಿ ಅವಿೂನ್, ಸದಾನಂದ ಅಂಚನ್ ಥಾಣೆ, ಮತ್ತಿತರ ಗಣ್ಯರನ್ನು ಮತ್ತು ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಸಮಿತಿಯ ಪದಾಧಿಕಾರಿಗಳು ಉಪಸ್ಥಿತ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳನ್ನು ಮತ್ತು ಸಮಿತಿಗೆ ಹೆಚ್ಚಿನ ದೇಣಿಗೆ ಸಂಗ್ರಹಿಸಿದ ಮತ್ತು ಹಿರಿಕಿರಿಯ ಸದಸ್ಯರನ್ನು ಸ್ಮರಣಿಕೆಯನ್ನಿತ್ತು ಗೌರವಿಸಿದರು. ಅತಿಥಿüಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.

ಸೇವಾ ಸಮಿತಿ ಅಧ್ಯಕ್ಷ ಜಗದೀಶ್ ಜೆ.ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವಣೆಗೈದರು. ಉಪಾಧ್ಯಕ್ಷರುಗಳಾದ ರವಿ ಎಲ್.ಬಂಗೇರ ಮತ್ತು ಜನಾರ್ದನ ಶೆಟ್ಟಿ, ಕೋಶಾಧಿಕಾರಿ ಶರತ್ ಜಿ.ಪೂಜಾರಿ ಜೊತೆ ಕಾರ್ಯದರ್ಶಿ ರಾಜೇಶ್ ಸುವರ್ಣ, ಜೊತೆ ಕೋಶಾಧಿಕಾರಿಗಳಾದ ಪ್ರಶಾಂತ ಕರ್ಕೇರ ಮತ್ತು ಅಕ್ಷಯ್ ಸುವರ್ಣ, ವಜ್ರಮಹೋತ್ಸವ ಸಮಿತಿ ಕಾರ್ಯದರ್ಶಿ ಮೋಹನ್ ಪೂಜಾರಿ ಅತಿಥಿüಗಳಿಗೆ ಪುಷ್ಪಗುಪ್ಛ, ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ತಾರನಾಥ ಶೆಟ್ಟಿ ಮತ್ತು ಅನುಸೂಯ ಕಲ್ಲಪುತ್ತಿಗೆ ಸನ್ಮಾನಿತರನ್ನು ಪರಿಚಯಿಸಿದರು. ಸಮಿತಿ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ ಸದಸ್ಯರ ಯಾದಿ ವಾಚಿಸಿದರು. ವಸಂತ್ ಎನ್.ಸುವರ್ಣ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here