Saturday 10th, May 2025
canara news

ಮೈಸೂರು ಅಸೋಸಿಯೇಷನ್‍ನಲ್ಲಿ ಪ್ರದರ್ಶಿಸಲ್ಪಟ್ಟ `ಚಂದ್ರನಖಾಯಣ' ಕನ್ನಡ ನಾಟಕ

Published On : 11 Dec 2019   |  Reported By : Rons Bantwal


ನಟನೆಗೆ ಮಿಡಿತ ಬಂದಾಗ ನಾಟಕ ದೊರೆಯುತ್ತೆ-ಬಿ.ಆರ್ ಮಂಜುನಾಥ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.09: ಭಾರತೀಯ ರಂಗಭೂಮಿಗೆ ಶತಮಾನಗಲ ಇತಿಹಾಸವಿದೆ. ಅದರಲ್ಲಿ ನಾನು ಐದನೇ ತಲೆಮಾರು ಅಂದೆನಿಸಿದ್ದೇನೆ. ನಾಟಕ ಜೀಅನದ ಸ್ವರೂಪವಾಗಿದೆ ಆದ್ದರಿಂದ ನಾಟಕ ಅಂದ್ರೆ ಏನು ಅನ್ನುವುದನ್ನು ತಿಳಿಯುವ ಅಗ್ಯವಿದೆ. ಭಾವನೆಗಳು ಆಡುತ್ತಾ ನಟನೆಗೆ ಮಿಡಿತ ಬಂದಾಗ ನಾಟಕ ದೊರೆಯುತ್ತೆ. ಹಾಡು ಕುಣಿತ ಇಲ್ಲದೆ ನಾಟಕ ಆಗಲ್ಲ. ಆದುದರಿಂದ ನಾಟಕ ಕನ್ನಡದ ನೋಟಕವಾಗಿದ್ದು ಇದು ಬರೇ ಮಾತು ಆಗಲ್ಲ. ಸೊಂಟ ಕಂಠ ಇಲ್ಲದವನು ನಟನೆಗೆ ಯೋಗ್ಯನಲ್ಲ ಎಂದು ಹಿರಿಯ ನಾಟಕಕಾರ, ಸಂಘಟಕ ಡಾ| ಬಿ.ಆರ್ ಮಂಜುನಾಥ್ ಅಭಿಪ್ರಾಯ ಪಟ್ಟರು.

ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಯು ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ತನ್ನ ಸಭಾಗೃಹದಲ್ಲಿ ಕಳೆದ ರವಿವಾರ ಸಂಜೆ ಕನ್ನಡ ನಾಟಕ ಆಯೋಜಿಸಿದ್ದು, ಮೈಸೂರು ಅಸೋಸಿಯೇಶನ್‍ನ ಅಧ್ಯಕ್ಷೆ ಕಮಲಾ ಕಾಂತರಾಜ್ ಅಧ್ಯಕ್ಷತೆಯಲ್ಲಿ ಜರುಗಿಸಲಾದ ಸರಳ ಸಭಾಕಾರ್ಯಕ್ರಮವನ್ನುದ್ದೇಶಿಸಿ ಮಂಜುನಾಥ್ ಮಾತನಾಡಿದರು.

ಸಭಾ ಕಾರ್ಯಕ್ರಮದಲ್ಲಿ ಎಂ.ಗಣೇಶ ಉಡುಪಿ, ಪೃಥಿs್ವನ್ ಕೆ., ಡಾ| ಮಮತಾ ಟಿ.ರಾವ್ ವೇದಿಕೆಯಲ್ಲಿದ್ದು ಅವರನ್ನು ಕಮಲಾ ಕಾಂತರಾಜ್ ಸನ್ಮಾನಿಸಿ, ಕಲಾವಿದರಿಗೆ ಸ್ಮರಣಿಕೆ, ಪುಷ್ಫಗುಪ್ಚ ನೀಡಿ ಅಭಿನಂದಿಸಿ ಮಾತನಾಡಿ ಎಂ.ಗಣೇಶ ದೂರದಿಂದ ಮುಂಬಯಿಗೆ ಬಂದು ನಮ್ಮ ಕಲಾವಿದರನ್ನು ತಿದ್ದಿತೀಡಿ ನಾಟಕಕ್ಕೆ ಯೋಗ್ಯರನ್ನಾಗಿಸಿದ್ದಾರೆ ಅವರಿಗೆ ಅಭಿನಂದನೆ ಎಂದರು.

ಸಹೃದಯತೆಯನ್ನು ಒಳನಾಡ ಕರ್ನಾಟಕದಲ್ಲಿ ತಿಳಿದ ನಾನು ಅದರ ನಿಜವಾದ ಭಾವ ಮುಂಬಯಿನಲ್ಲಿ ಅನುಭವಿಸಿದೆ. ಕಲಾವಿದರಲ್ಲಿನ ಅಪ್ಪಟ ಕಲಾಪ್ರೇಮ ಹೊರನಾಡಿನ ಮುಂಬಯಿನಲ್ಲಿ ಕಲಿತೆ. ಇಲ್ಲಿನ ಕಲಾವಿದರು ಮತ್ತು ತಾಯಿಯಂದಿರು ನನ್ನನ್ನು ಬೆಳೆಸಿದ್ದಾರೆ ಎಂದು ಎಂ.ಗಣೇಶ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಂಗವಾಗಿ ಹೆಸರಾಂತ ನಾಟಕ ನಿರ್ದೇಶಕ ಎಂ.ಗಣೇಶ ಉಡುಪಿ ಇವರ ಪ್ರಧಾನ ನಿರ್ದೇಶನದಲ್ಲಿ ಮತ್ತು ಪೃಥಿs್ವನ್ ಕೆ., ಸಹ ನಿರ್ದೇಶನದಲ್ಲಿ ಡಾ| ಮಮತಾ ಟಿ.ರಾವ್ ರಚನೆಯ `ಚಂದ್ರನಖಾಯಣ' ನಾಟಕವನ್ನು ಲಲಿತಾ ಕಲಾ ವಿಭಾಗ ಮೈಸೂರು ಅಸೋಸಿಯೇಶನ್ ತಂಡದ ಕಲಾವಿದರು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನಾಟಕಕಾರರಾದ ಕೆ.ಮಂಜುನಾಥಯ್ಯ, ಡಾ| ವ್ಯಾಸರಾಯ ನಿಂಜೂರು, ಬೈಲೂರು ಬಾಲಚಂದ್ರ ರಾವ್, ರಮೇಶ್ ಎಂ.ರಾವ್, ವಿಶ್ವನಾಥ್ ಶೆಟ್ಟಿ ಪೇತ್ರಿ, ಯಜ್ಞ ನಾರಾಯಣ, ಅವಿನಾಶ್ ಕಾಮತ್, ಕರ್ನಾಟಕ ಸಂಘ ಮುಂಬಯಿ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್, ಬಿ.ಕೆ ಮಧುಸೂದನ್ ಮತ್ತಿತರ ಗಣ್ಯರು, ನಾಟಕಾಭಿಮಾನಿಗಳು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತ ನಾಟಕಕಾರ ಡಾ| ಭರತ್‍ಕುಮಾರ್ ಪೆÇಲಿಪು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here