Friday 26th, April 2024
canara news

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ-ಅಮೃತಮಹೋತ್ಸವ ಸಮಾಪನ

Published On : 12 Dec 2019   |  Reported By : Rons Bantwal


 ನವಪೀಳಿಯಲ್ಲಿ ಧರ್ಮಶ್ರದ್ಧೆ ಮೂಡಿಸುವ ಅಗತ್ಯವಿದೆ-ಶ್ರೀನಿವಾಸ ಸಾಫಲ್ಯ 

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.08: ಧರ್ಮ ಜಾಗೃತಿಯಿಂದ ಮಾತ್ರ ಸಂಸ್ಕಾರದ ಬದುಕು ಸಾಧ್ಯವಾಗಿದ್ದು, ಆ ನಿಟ್ಟಿನಲ್ಲಿ ನವಪೀಳಿಯಲ್ಲಿ ಧರ್ಮಶ್ರದ್ಧೆ ಮೂಡಿಸುವ ಜವಾಬ್ದಾರಿ ನಮ್ಮದಾಗಿದೆ. ಇದನ್ನು ಪ್ರಾಮಾಣಿಕವಾಗಿ ಭಾವೀ ಜನಾಂಗಕ್ಕೆ ಪರಿಚಯಿಸಿದ ಕೀರ್ತಿ ಈ ್ಲ ವೆಸ್ಟರ್ನ್ ಇಂಡಿಯಾ ಸಮಿತಿಗಿದೆ. ನಿಷ್ಠೆಯ ಸೇವೆಯಿಂದಲೇ 75ರ ಹೊಸ್ತಿಲಲ್ಲಿದೆ. ಸದಸ್ಯ ಬಾಂಧವರ ಸಹಯೋಗ, ಪರಿಶ್ರಮದ ಫಲವೇ ಅಮೃತಮಹೋತ್ಸವವಾಗಿದೆ. ಇಲ್ಲಿ ನಡೆದಿದ್ದು ಬರೇ ಪೂಜೆ ಪುರಸ್ಕಾರವಲ್ಲ ಬದಲಾಗಿ ಧಾರ್ಮಿಕ ಜಾಗೃತಿಯೂಂದಿಗೆ ಭಾವೀ ಪೀಳಿಗೆಯ ಮಾರ್ಗದರ್ಶನ. ಹಲವಾರು ಯುವಜನತೆಗೆ ಗ್ರಂಥ ಪಾರಾಯಣ ಕಲಿಸಿ ಧರ್ಮನಿಷ್ಠರನ್ನಾಗಿಸುವ ಜೊತೆಗೆ ವಾಸ್ತವ್ಯಕ್ಕೆ ಆಶ್ರಯದಾತರಾಗಿ ಬದುಕು ರೂಪಿಸುವಲ್ಲಿ ಯಶಕಂಡ ಈ ಸಮಿತಿಯ ಸೇವೆ ಸರ್ವೋತ್ಕೃಷ್ಟವಾದದು ಎಂದು ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ನುಡಿದರು.

 

ಇಂದಿಲ್ಲಿ ಸಂಜೆ ಸಾಂತಾಕ್ರೂಜ್‍ನ ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ರಚಿತ ನಾರಾಯಾಣ ಸಾಲ್ಯಾನ್ ಸ್ಮಾರಣಾರ್ಥ ವೇದಿಕೆಯಲ್ಲಿ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಆಚರಿಸಿದ ಅಮೃತಮಹೋತ್ಸವ ಸಮಾಪನ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿದ್ದು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಸಮಿತಿಯ ಸ್ಮರಣ ಸಂಚಿಕೆ ಬಿಡುಗಡೆÉಗೊಳಿಸಿ ಶ್ರೀನಿವಾಸ ಸಾಫಲ್ಯ ಮಾತನಾಡಿದರು.

ವೆಸ್ಟೆರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ಗೌರವಾಧ್ಯಕ್ಷ ಹರೀಶ್ ಜಿ.ಅವಿೂನ್ ಸಭಾಧ್ಯಕ್ಷತೆಯಲ್ಲಿ ನಡೆಸಲಾದ ಸಮಾರೋಪ ಕಾರ್ಯಕ್ರಮಕ್ಕೆ ವಾಸ್ತುತಜ್ಞ ಅಶೋಕ್ ಪುರೋಹಿತ ಆಶೀರ್ವದಿಸಿ ಶುಭಶಂಸನೆಗೈದರು. ಅತಿಥಿü ಅಭ್ಯಾಗತರುಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ, ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಸುಮಂಗಲ ಮೆಷಿನರೀಸ್ ಸಂಸ್ಥೆಯ ನಿರ್ದೇಶಕ ನಾರಾಯಣ ಆರ್.ಪೂ ಜಾರಿ, ಭಾರತ್ ಬ್ಯಾಂಕ್‍ನ ನಿರ್ದೇಶಕ ಭಾಸ್ಕರ ಎಂ.ಸಾಲ್ಯಾನ್, ಬಿಲ್ಲವರ ಅಸೋಸಿಯೇಶನ್ ಕಲ್ವಾ ಸ್ಥಳೀಯ ಸಮಿತಿ ಉಪ ಕಾರ್ಯಾಧ್ಯಕ್ಷ ಹರೀಶ ಸಾಲ್ಯಾನ್ ಬಜಗೋಳಿ, ಮಕಾನಿ ರೋಯಲ್ ಇಂಡಿಯನ್ ಆರೋಮಾ ದುಬಾಯಿ ಕಾರ್ಯಾಧ್ಯಕ್ಷ ನವೀನ್ ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಲ್ವಾ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಸುವರ್ಣ, ಅಮೃತ ಮಹೋತ್ಸವ ಸ್ಮರಣ ಸಂಚಿಕೆಯ ಕಾರ್ಯಾಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಅತಿಥಿüಗಳು ಸಂದರ್ಭೋಚಿತವಾಗಿ ಮಾತನಾಡಿ ಸಮಿತಿಯ ಸೇವೆಯನ್ನು ಶ್ಲಾಘಿಸಿ ಶುಭಾರೈಸಿದರು.

ಚಂದ್ರಶೇಖರ್ ಪೂಜಾರಿ ಮಾತನಾಡಿ ಪ್ರತಿಯೊಬ್ಬ ಮನುಜನು ಯಾವದೇವರನ್ನೂ ಸದಾ ನೆನಪಿಸಿ ಕೊಳ್ಳದಿದ್ದರೂ ಶನಿದೇವರನ್ನು ಕ್ಷಣಕ್ಷಣಕ್ಕೂ ಪಠಿಸುವುದು ಧರ್ಮವಾಗಿಸಿರುತ್ತಾನೆ. ಕಾರಣ ಶನೈೀಶ್ವನ ಶಕ್ತಿಯೇ ಅಷ್ಟು ಪ್ರಭಾವಿತವಾಗಿದ್ದು. ಆದರೆ ಶನಿ ಅಂದಾಕ್ಷಣ ಹೆದರುವ, ಬೆಚ್ಚಿಬೀಳುವ ಅವಶ್ಯವಿಲ್ಲ. ಅನಾಚಾರಮುಕ್ತ ಬದುಕು ರೂಪಿಸಿಕೊಳ್ಳಲು ಶನೈೀಶ್ವನಲ್ಲಿ ಭಕ್ತಿ, ಶ್ರದ್ಧೆ ರೂಢಿಸಿದ್ದಲ್ಲಿ ಎಲ್ಲವೂ ಶನಿಮುಕ್ತವಾಗಿವುದು. ಇದನ್ನೇ ಈ ಸಮಿತಿ ಸಾರ್ವಜನಿಕವಾಗಿ ಜನರಲ್ಲಿ ರೂಪಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಲಜ ನಾರಾಯಾಣ ಸಾಲ್ಯಾನ್ ಮತ್ತು ಶಾರದಾ ಕೃಷ್ಣಪ್ಪ ಕೋಟ್ಯಾನ್, ಸಮಿತಿ ಅಧ್ಯಕ್ಷ ಜಗದೀಶ್ ಜೆ.ಕೋಟ್ಯಾನ್ ಮತ್ತು ಗುಲಾಬಿ ಜಗದೀಶ್, ಗೌರವಾಧ್ಯಕ್ಷ ಹರೀಶ್ ಅವಿೂನ್ ಮತ್ತು ಮೊನಿತಾ ಹರೀಶ್ ಅವರಿಗೆ ಸನ್ಮಾನಿಸಲಾಯಿತು. ಹಾಗೂ ಉಪಸ್ಥಿತ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಬೋಜ ಕೋಟ್ಯಾನ್, ಸತೀಶ ಕೋಟ್ಯಾನ್, ವಿಶ್ವನಾಥ ಕೋಟ್ಯಾನ್, ಸದಾನಂದ ಸುವರ್ಣ, ಕಾರ್ಯಾಕಾರಿ ಸಮಿತಿ ಸದಸ್ಯರು ಹಾಗೂ ಹಿರಿಯ ಸದಸ್ಯರು, ಗ್ರಂಥ ಪಾರಾಯಣ ವಾಚಕ ಮತ್ತು ಅರ್ಥಧಾರಿಗಳಿಗೆ, ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರಿಗೆ, ಕಲಾವಿದರಿಗೆ ಗೌರವಿಸಿ ಅಭಿವಂದಿಸಿದರು.

ಸಮಾರಂಭದ ಆದಿಯಲ್ಲಿ ಭವನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುಪೂಜೆಗೈದು ಶ್ರೀ ಶನೈಶ್ವರ ದೇವರಿಗೆ ಪೂಜೆಗೈದು ಪ್ರಾರ್ಥನೆ ನೆರವೇರಿಸಿದರು. ಭುವಾಜಿ ಜಗದೀಶ್ ನಿಟ್ಟೆ ಪ್ರಾರ್ಥನೆಯನ್ನಾಡಿದರು. ಸೇವಾ ಸಮಿತಿ ಅಧ್ಯಕ್ಷ ಜಗದೀಶ್ ಜೆ.ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಸೇವಾ ಸಮಿತಿ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ, ಕೋಶಾಧಿಕಾರಿ ಶರತ್ ಪೂಜಾರಿ, ಅಶೋಕ್ ಪುರೋಹಿತ್, ಹರೀಶ್ ಶೆಟ್ಟಿ, ಮೋಹನ್ ಪೂಜಾರಿ, ರವಿ ಬಂಗೇರ, ಜರ್ನಾದನ ಶೆಟ್ಟಿ, ವಾಸು ಸಾಲ್ಯಾನ್, ರಾಜೇಶ್ ಕೋಟ್ಯಾನ್, ಆಕಾಶ್ ಸುವರ್ಣ, ಪ್ರಶಾಂತ್ ಕೋಟ್ಯಾನ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ವಸಂತ್ ಎನ್.ಸುವರ್ಣ ಕಾರ್ಯಕ್ರಮ ನಿರ್ವಾಹಿಸಿ ಕೃತಜ್ಞತೆ ಸಮರ್ಪಿಸಿದರು.

ಮಧ್ಯಾಂತರದಲ್ಲಿ ಹೇಮರಾಜ್ ಕರ್ಕೇರ ಮತ್ತು ವಾಣಿಪ್ರಸಾದ್ ಕರ್ಕೇರ ನಿರ್ಮಿತ ಅಮೃತಮಹೋತ್ಸವ ವರ್ಷದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ನಿರ್ದೇಶನದಲ್ಲಿ ಕೃಷ್ಣ ವೈಭವಂ ನೃತ್ಯ ರೂಪಕ, ದಿನೇಶ್ ಪೂಜಾರಿ ನಿರ್ದೇಶನದಲ್ಲಿ ಯಕ್ಷನೃತ್ಯ, ಬಿಲ್ಲವರ ಅಸೋಸಿಯೇಶನ್ ಅಂಧೇರಿ ಸ್ಥಳೀಯ ಸಮಿತಿಯ ಕಲಾವಿದರು `ದೇಯಕ್ಕೆನ ದೈವದಿಲ್ಲ್' ತುಳು ನಾಟಕ ಪ್ರದರ್ಶಿಸಿದರು. ಹರೀಶ್ ಶಾಂತಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here