ಡಿ.17: ಉಡುಪಿಯಲ್ಲಿ ವಿಶ್ವ ಬಹುಭಾಷಾ ಕವಿ ಸಾಹಿತ್ಯ ಸಮ್ಮೇಳನ
ಮುಂಬಯಿ, ಡಿ.13: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಪಲಿಮಾರು ಶ್ರೀ ವಿದ್ಯಾಧೀಶ ಶ್ರೀಪಾದಂಗಳವರ ಆಶ್ರಯದಲ್ಲಿ ಪುತ್ತೂರು ಸಾಹಿತ್ಯ ವೇದಿಕೆ, ಟೈಮ್ಸ್ ಆಫ್ ಕುಡ್ಲ, ಹಾಗೂ ಕಥಾಬಿಂದು ಪ್ರಕಾಶನ ಮಂಗಳೂರು ಸಹೋಗದೊಂದಿಗೆ ಇದೇ ಡಿ.17ನೇ ಮಂಗಳವಾರ ಉಡುಪಿ ಇಲ್ಲಿನ ಮಧ್ವ ಮಂಟಪದಲ್ಲಿ ಮುಂಬಯಿ ಕನ್ನಡ ಸಂಘದ ಕಾರ್ಯಧ್ಯಕ್ಷೆ, ಸಮಾಜ ಸೇವಕಿ ಡಾ| ರಜನಿ ವಿ.ಪೈ ಅವರ ಸರ್ವಾಧ್ಯಕ್ಷತೆಯಲ್ಲಿ ವಿಶ್ವ ಬಹುಭಾಷಾ ಕವಿ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಶ್ರೀ ವಿದ್ಯಾಧೀಶ ಶ್ರೀಪಾದಂಗಳವರು ದೀಪೆÇೀಜ್ವಲನ ಗೊಳಿಸಲಿದ್ದು, ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಪ್ರಾಸ್ತಾವನೆಗೈಯಲಿದ್ದು, ಧಾರವಾಡದ ಹೈಕೋರ್ಟ್ ನ್ಯಾಯಾಧೀಶ ಡಾ| ರೇವಣ್ಣ ಬಳ್ಳಾರಿ ಡಾ. ಆಕಾಶ್ ರಾಜ್ ಅಳುಪ ರಾಜವಂಶಸ್ಥರು ತುಳು ಸಾಹಿತ್ಯ ಅಕಾಡೆಮಿ ಸದಸ್ಯರು. ವಿಜೆ. ಶೆಟ್ಟಿ ಅಧ್ಯಕ್ಷರು ತುಳು ಸಾಹಿತ್ಯಕೂಟ ಉಡುಪಿ, ತಾರಾ ಆಚಾರ್ಯ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ. ಹಫೀಜ್ ರೆಹಮಾನ್ ನಿರ್ದೇಶಕರು ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ, ರಾಮಕೃಷ್ಣ ನಾಯಕ್ ಗೀತಾಂಜಲಿ ಸಿಲ್ಕ್ಸ್ ಉಡುಪಿ, ದಿವಾಕರ್ ಸನಿಲ್ ಸ್ಮರಣಿಕ ಉಡುಪಿ, ಡಾ| ರಾಜೇಶ್ ಆಳ್ವ ಬದಿಯಡ್ಕ ಅಧ್ಯಕ್ಷರು ತುಳುವರ್ಲ್ಡ್ ಪ್ರಧಾನ ಅತಿಥಿüಗಳಾಗಿರುತ್ತಾರೆ.
ವಿವಿಧ ಸಾಂಸ್ಕøತಿಕ ವೈವಿಧ್ಯ ಕಾರ್ಯಕ್ರಮಗಳು, ಬಹುಭಾಷಾ ಕವಿಗೋಷ್ಠಿ, ತುಳು ವಿಚಾರ ಗೋಷ್ಠಿ, ಕಾದಂಬರಿ ಸಂವಾದ, ಕಥಾ ರೂಪಕ, ಯಕ್ಷರೂಪಕ, ಸನ್ಮಾನ ಪ್ರಶಸ್ತಿ ಪ್ರದಾನ, ಕಾರ್ಯಕ್ರಮಗಳು ನಡೆಯಲಿವೆ. ಡಾ| ವಂಸತ್ ಕುಮಾರ್ ಪೆರ್ಲ ಕನ್ನಡ ಕವಿಗೋಷ್ಠಿಯ ಅಧ್ಯಕ್ಷರಾಗಿಯೂ ಶ್ರೀ ಗಂಗಾಧರ ಕಿದಿಯೂರು ತುಳು ಕವಿಗೋಷ್ಠಿಯ ಅಧ್ಯಕ್ಷರಾಗಿ ಮತ್ತು ವೀಣಾ ಯಸ್ ಶೆಟ್ಟಿ ಮುಖ್ಯ ಅತಿಥಿüಗಳಾಗಿರುತ್ತಾರೆ. ಶಾಂತ ಕುಂಟಿನಿ ಬಹುಭಾಷಾ ಕವಿಗೋಷ್ಠಿಯ ವಹಿಸಲಿದ್ದಾರೆ.
ತುಳು ವಿಚಾರಗೋಷ್ಠಿಯಲ್ಲಿ ಕುದಿ ವಸಂತ ಶೆಟ್ಟಿಯವರು ಅಧ್ಯಕ್ಷರಾಗಿದ್ದು ಬಿ.ಜಯಕರ ಶೆಟ್ಟಿ ಇಂದ್ರಾಳಿ, ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ, ಅರ್ಪಿತಾ ಶೆಟ್ಟಿ, ಯಾದವ್ ವಿ., ಸಂಜಯ್ ಸಾಂತೂರು ಹಾಗೂ ಡಾ| ನಿಕೇತನಾ ಪಾಲ್ಗೊಳ್ಳಲಿದ್ದಾರೆ. ಕಾದಂಬರಿ ಸಂವಾದದಲ್ಲಿ ಖ್ಯಾತ ಕಾದಂಬರಿಕಾರರಾದ ಕೌಂಡಿನ್ಯ ಅವರಿಂದ ವಿಜ್ಞಾನ ಮತ್ತು ವಾಮಾಚಾರ, ಖ್ಯಾತ ಕಾದಂಬರಿಕಾರ ವಿವೇಕನಂದ ಕಾಮತ್ ರವರಿಂದ ಸಾಮಾಜಿಕ ಚಿಂತನೆ, ಹಾಗೂ ಖ್ಯಾತ ಕಾದಂಬರಿಕಾರರಾದ ಪಿ.ವಿ ಪ್ರದೀಪ್ ಕುಮಾರ್ ಅವರಿಂದ ರೋಚಕತೆಯಲ್ಲಿ ವಾಸ್ತಕವಿಕ ತಳಹದಿ ಎನ್ನುವ ವಿಚಾರದಲ್ಲಿ ಕಾದಂಬರಿ ಸಂವಾದ ನಡೆಯಲಿದೆ.
ಅಪರಾಹ್ನ 3.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 9 ಮಂದಿಗೆ ಪರ್ಯಾಯ ಶ್ರೀ ಪಲಿಮಾರು ಶ್ರೀ ವಿದ್ಯಾಧೀಶ ಶ್ರೀ ಪಾದಂಗಳವರು ಪ್ರಶಸ್ತಿ ಪ್ರದಾನ ಮಾಡಲಿದ್ದು ಧರ್ಮದರ್ಶಿ ಹರಿಕೃಷ್ಣ ಪುನರೂರು ಉಡುಪಿ ಶಾಸಕ ಕೆ.ರಘುಪತಿ ಭಟ್, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಯಸ್. ಪ್ರದೀಪ್ ಕುಮಾರ್ ಕಲ್ಕೂರ, ಡಾ| ರೇವಣ್ಣ ಬಳ್ಳಾರಿ ಹೈಕೋರ್ಟ್ ನ್ಯಾಯವಾದಿಗಳು ದಾರವಾಡ, ಶ್ರೀಮತಿ ರಜನಿ ಅಶೋಕ ಜೀರಿಗಿಹಾಳ, ಸಿರಿಗನ್ನಡ ವೇದಿಕೆ ರಾಜ್ಯ ಉಪಾಧ್ಯಕ್ಷ-ಸಾಹಿತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ರೈ ಕತ್ತಲ್‍ಸಾರ್, ಪುತ್ತೂರು ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು ಅಪರಾದ ಪತ್ತೆದಳ ಮಂಗಳೂರು ಪ್ರಶಾಂತ್ ರೈ ಮರವಂಜ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಪ್ರಧಾನ ಸಂಪಾದಕ ಯಸ್.ಆರ್ ಬಂಡಿಮಾರ್, ಕಹಳೆ ನ್ಯೂಸ್ನ ನಿರ್ದೇಶಕ ಶ್ಯಾಮ್ ಸುದರ್ಶನ ಹೊಸಮೂಲೆ ಪ್ರದಾನ ಅತಿಥಿüಗಳಾಗಿರುವರು.
ಕಾದಂಬರಿಕಾರ ಶ್ರೀ ಕೌಡಿನ್ಯ ರವರಿಗೆ ಸಾಹಿತ್ಯ ರತ್ನ, ಕು| ಆರಾಧನಾ ಭಟ್ ನಿಡ್ಡೋಡಿ ಅವರಿಗೆ ಸೇವಾರತ್ನ, ಕು| ಅಧ್ವಿತಾ ಶೆಟ್ಟಿ ಸುರತ್ಕಲ್ ಅವರಿಗೆ ಕಲಾರತ್ನ ಕು| ಅಯನಾ ಪೆರ್ಲ ಅವರಿಗೆ ನೃತ್ಯ ಕೌಸ್ತುಭ, ಕು| ಸಮೃದ್ಧಿ ಯಸ್ ಭಟ್ ಶಿವಮೊಗ್ಗ ಅವರಿಗೆ ಕಲಾಶ್ರೀ, ಖ್ಯಾತ ಕಾದಂಬರಿಕಾರಾದ ಶ್ರೀ ವಿವೇಕನಂದ ಕಾಮತ್ ಅವರಿಗೆ ಸಾಹಿತ್ಯ ಶ್ರೀ, ನಿರ್ಮಲಾ ಹೆಗಡೆ ಗೋಳಿಕೊಪ್ಪ ಅವರಿಗೆ ನಾಟ್ಯ ಶಾರದೆ, ವೀಣಾ ಜೋಷಿ ಅವರಿಗೆ ಕಲಾ ಸರಸ್ವತಿ, ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಯಶೋದ ಕೇಶವ್ ಮತ್ತು ಪ್ರಯಾ ಹರೀಶ್ ನಿರೂಪಿಸಿ ಡಾ| ಶ್ರೀ ಕೃಷ್ಣ ಶಾಸ್ತ್ರೀ ಪುತ್ತೂರು ಉಪಸ್ಥಿತರಿರುವರು ಎಂದು ಪಿ. ವಿ. ಪ್ರದೀಪ್ ಕುಮಾರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.