ಮುಂಬಯಿ, ಡಿ.13: ಮಹಾನಗರದಲ್ಲಿನ ಪ್ರಸಿದ್ಧ ಭಜನಾ ಮಂಡಳಿ ಎಂದೆಣಿಸಿದ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಜರಿಮರಿ ಇವರು ಸತತ 6ನೇ ಬಾರಿ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಬುವಾಜಿ ರವೀಂದ್ರ ಶಾಂತಿ ಯವರ ನೇತೃತ್ವದಲ್ಲಿ 2 ದಿನಗಳ ಭಜನಾ ಕಾರ್ಯಕ್ರಮ ನಡೆಸಿದರು.
ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯ ಯೋಜನೆಯಲ್ಲಿ ಒಟ್ಟು 25 ಭಜಕರ ತಂಡ 2ದಿನಗಳ ನಿತ್ಯೋತ್ಸವ ಮತ್ತು ಗರುಡೋತ್ಸವ ಕಾರ್ಯಕ್ರಮದಲ್ಲೊ ಪಾಲ್ಗೊಂಡು ಹರಿನಾಮ ಸಂಕಿರ್ತನೆ ಮಾಡಿ ನೆರೆದ ಭಕ್ತರನ್ನು ಭಕ್ತಿ ಲಹರಿಯಲ್ಲಿ ತೇಲಿಸಿದರು.
ಮುಂಜಾನೆ ಸೂರ್ಯೋದಯಕ್ಕೆ ನಗರ ಭಜನೆ. ನಂತರ ಹಿಂದೂ ಧರ್ಮ ಪ್ರಚಾರ ಪರಿಸತ್ ಸಭಗೃಹದಲ್ಲಿ ಹರಿನಾಮ ಸಂಕೀರ್ತನೆ, ಸಂಜೆ ದೀಪಾಲಂಕಾರ ಪೂಜೆ, ಮೆರವಣಿಗೆಯಲ್ಲಿ ಗೋವಿಂದ ನಾಮ ಸ್ಮರಣೆಯೊಂದಿಗೆ ಭಜನ ಕಾರ್ಯಕ್ರಮ ನೀಡಿತು. ಶ್ರೀ ಉಮಾ ಮಹೇಶ್ವರಿ ಭಜನ ಮಂಡಳಿಯು ಮುಂಬಯಿ ನಗರ ಮಾತ್ರವಲ್ಲದೆ ದೇಶದ ವಿವಿಧ ಕಡೆಗಳಲ್ಲಿ ಭಜನಾ ಕಾರ್ಯಕ್ರಮ ನೀಡಿ, ಸರ್ವ ಸದಸ್ಯ ಸದಸ್ಯೆಯರ ಸಹಕಾರ ದೊಂದಿಗೆ ಸತತ 6 ವರ್ಷ ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿ ಭಜನ ಕಾರ್ಯಕ್ರಮ ನೀಡಿದ ಕೀರ್ತಿಗೆ ಪಾತ್ರವಾಯಿತು.