Saturday 10th, May 2025
canara news

ಕೇಂದ್ರ ಕಾರಾಗೃಹಕ್ಕೆ ಎಮ್.ಐ ಬಳ್ಳಾರಿ ಘಟಕದ ವತಿಯಿಂದ ಕ್ರಿಸ್ ಮಸ್ ಹಾಗೂ ಹೊಸವರ್ಷದ ಅಂಗವಾಗಿ ಕಾರ್ಯಕ್ರಮ

Published On : 18 Dec 2019   |  Reported By : Fr. Ivan Pinto


ಬಳ್ಳಾರಿ ಡಿಸೆಂಬರ್ 17 ಮಂಗಳವಾರ, ಪಟ್ಟಣದ ಕೇಂದ್ರ ಕಾರಾಗೃಹಕ್ಕೆ ಪ್ರಿಸನ್ ಮಿನಿಸ್ಟ್ರಿ ಒಫ್ ಇಂಡಿಯಾ (ಪಿ.ಎಮ್.ಐ) ಬಳ್ಳಾರಿ ಘಟಕದ ವತಿಯಿಂದ ಕ್ರಿಸ್ ಮಸ್ ಹಾಗೂ ಹೊಸವರ್ಷದ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪರಮಪೂಜ್ಯ ಹೆನ್ರಿ ಡಿಸೋಜರವರು ಉಪಸ್ಥಿತರಿದ್ದು, ಜೈಲಿನ ಸಹೋದರರನ್ನು ಉದ್ದೇಶಿಸಿ ತಮ್ಮ ಸಂದೇಶದಲ್ಲಿ ಉತ್ತಮ ವ್ಯಕ್ತಿಗಳಾಗಲು ಹಲವಾರು ಅವಕಾಶಗಳಿವೆ ತಿಳಿದು, ತಿಳಿಯದೆಯೇ ಮಾಡಿದ ತಪ್ಪನ್ನು ತಿದ್ದಿಕೊಂಡು, ಉತ್ತಮ ವ್ಯಕ್ತಿಗಳಾಗಬೇಕೆಂದು ತಿಳಿಸಿದರು. ಮನಸಿನಲ್ಲಿ ಶಾಂತಿ, ಕಣ್ಣಲ್ಲಿ ಕರುಣೆ, ಮುಖದಲ್ಲಿ ಕಲೆ, ಬಾಯಲ್ಲಿ ಸತ್ಯ, ಹೃದಯದಲ್ಲಿ ಪ್ರೀತಿ ಹಾಗೂ ಕೈಕಾಲುಗಳಲ್ಲಿ ಸೇವೆ ಇದೆ ಕ್ರಿಸ್‍ಮಸ್. ಜೈಲಿನಲ್ಲಿರುವ ಸಹೋದರ ಬಂಧುಗಳಿಗೆ, ಮತ್ತು ಅವರ ಕುಟುಂಬಕ್ಕೆ ದೇವರು ಎಲ್ಲಾರೀತಿಯ ಆಶೀರ್ವಾದ ನೀಡುತ್ತಾರೆ ಎಂದು ತಿಳಿಸಿ ಶುಭಹಾರೈಸಿದರು.

ವಿಜಯ ಮೇರಿ ಶಾಲಾವತಿಯಿಂದ “ದಿವ್ಯಜ್ಯೋತಿ” ಎಂಬ ನಾಟಕ ಮಾಡಿ ಅದರಲ್ಲಿ ತಂದೆಯೊಬ್ಬರು ಕಣ್ಣು ಇಲ್ಲದ ಮಗನಿಗೆ ತನ್ನ ಕಣ್ಣನ್ನು ನೀಡಿ ಕುರುಡರಾದ ತ್ಯಾಗದ ಪ್ರೀತಿಯ ಸಂದೇಶ ನೀಡುವ ನಾಟಕ ಮಾಡಿ ಪ್ರಭು ಯೇಸುವಿನ ಜನನದ ಪ್ರಕರಣದ ಕಾರ್ಯಕ್ರಮ ಜನ ಮೆಚ್ಚುಗೆ ಗಳಿಸಿತು.

ಹೋಲಿಕ್ರಾಸ್ ಲಕ್ಷ್ಮಿ ನಗರ್ ಶಾಲಾ ವತಿಯಿಂದ ವಿವಿಧ ನೃತ್ಯಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸೆಂಟ್ರಲ್ ಜೈಲ್ ಉಪಸೂಪರಿಡೆಂಟ್ ಶ್ರೀ ಪ್ರಸನ್ನ, ಫಾದರ್ ಐವನ್ ಪಿಂಟೊ (ಪಿ.ಆರ್.ಓ), ಸಿಸ್ಟರ್ಸ್ ಕ್ಯಾಥರಿನ್, ಅಗ್ನೇಸ್ ಅನಿತ, ಸ್ಟೆಲ್ಲಾ, ಮೇರಿ ರಾಜ್, ಶಿಕ್ಷಕರು ಭಾಗವಹಿಸಿದ್ದರು. ಫಾದರ್.ಪೊನ್ನು ಸ್ವಾಮಿಯವರು ಪಿ.ಎಮ್.ಐ ನಿಯೋಗದ ಕಾರ್ಯದರ್ಶಿಯವರು ವಂದನಾರ್ಪಣೆ ಮಾಡಿ ಶುಭಕೋರಿದರು. ಜೈಲಿನ ಸಿಬ್ಬಂದಿ ಹಾಗೂ ಜೈಲಿನ ಸಹೋದರರು, ಖುಷಿ, ಸಂತೋಷದಿಂದ ಕಾರ್ಯಕ್ರಮವನ್ನು ವೀಕ್ಷಿಸಿದರು ತದನಂತರ ಸಿಹಿಯನ್ನು ಹಂಚಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here