Saturday 10th, May 2025
canara news

ಬೆಳ್ತಂಗಡಿ ಜೈನ್ ಮಿಲನ್ ಪ್ರಾಯೋಜಕತ್ವದಲ್ಲಿ ಮಂಗಳೂರು ವಿಭಾಗದ ಜಿನ ಭಜನಾ ಸ್ಪರ್ಧೆ

Published On : 18 Dec 2019   |  Reported By : Rons Bantwal


ಭಜನೆಯಿಂದ ಮಾನಸಿಕ ಪರಿವರ್ತನೆ. ಶ್ರದ್ಧೆ ಮತ್ತು ಸ್ಪರ್ಧೆಯಿಂದ ಸಾಮಾಜಿಕ ಸುಧಾರಣೆ

ಉಜಿರೆ: ದ್ರವ್ಯ ಲೇಷ್ಯೆ ಮತ್ತು ಭಾವ ಲೇಷ್ಯೆಯಿಂದ ದೇಹ ಮತ್ತು ಮನಸ್ಸು ಪರಿಶುದ್ಧವಾಗುತ್ತದೆ. ದೇಹವನ್ನು ಸುಗಂಧ ದ್ರವ್ಯಗಳಿಂದ ಪರಿಶುದ್ಧಗೊಳಿಸಬಹುದು. ದೇಹವನ್ನು ಸುಗಂಧ ದ್ರವ್ಯಗಳಿಂದ ಪರಿಶುದ್ಧಗೊಳಿಸಿದರೆ ಜಪ, ತಪ, ಧ್ಯಾನ, ಸತ್ಸಂಗ, ಭಜನೆ, ಪೂಜೆ ಮೊದಲಾದ ಕ್ರಿಯೆಗಳಿಂದ ನಮ್ಮ ಭಾವನೆಗಳು ಪರಿಶುದ್ಧವಾಗಿ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಭಜನೆಯಿಂದ ಮಾನಸಿಕ ಪರಿವರ್ತನೆ ಆಗುತ್ತದೆ. ಹಾಗೂ ಶ್ರದ್ಧೆ ಮತ್ತು ಸ್ಪರ್ಧೆಯಿಂದ ಸಾಮಾಜಿಕ ಸುಧಾರಣೆಯಾಗುತ್ತದೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.

ಬೆಳ್ತಂಗಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಬೆಳ್ತಂಗಡಿ ಜೈನ್ ಮಿಲನ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ ಮಂಗಳೂರು ವಿಭಾಗದ ಜಿನ ಭಜನಾ ಸ್ಪರ್ಧೆಯನ್ನು ಅವರು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಬಸದಿಗೆ ಹೋದಾಗ ಎಲ್ಲರೂ ದರ್ಶನ ಸ್ತುತಿಯನ್ನು ಹಾಡಬೇಕು. ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ, ಶ್ಲೋಕಗಳನ್ನು, ಅಷ್ಟಕಗಳನ್ನು ಹೇಳಬೇಕು. ಜಾತಿ ಜೈನರು ನೀತಿ ಜೈನರೂ ಆಗಬೇಕು ಎಂದು ಅವರು ಸಲಹೆ ನೀಡಿದರು.

ಜೈನರು ಕಡ್ಡಾಯವಾಗಿ ಮದ್ಯ, ಮಧು ಮತ್ತು ಮಾಂಸ ತ್ಯಜಿಸಬೇಕು. ಲೌಕಿಕ ವ್ಯವಹಾರದ ಜೊತೆಗೆ ನಾವು ಪಾರಮಾರ್ಥಿಕದ ಬಗ್ಯೆಯೂ ಚಿಂತನ-ಮಂಥನ ಮಾಡಿ ಸಮನ್ವಯದೊಂದಿಗೆ ಆಧ್ಯಾತ್ಮಿಕ ಜಾಗೃತಿ ಮೂಡಿಸಿಕೊಳ್ಳಬೇಕು. ದಿನನಿತ್ಯವೂ ದೇವರ ದರ್ಶನ, ಅಷ್ಟವಿಧಾರ್ಚನೆ ಪೂಜೆ, ಜಪ,ತಪ, ಧ್ಯಾನದೊಂದಿಗೆ ಕರ್ಮಗಳ ಕ್ಷಯ ಮಾಡಿ ಪುಣ್ಯ ಸಂಚಯಮಾಡಿಕೊಳ್ಳಬೇಕು. ಪುರಾಣಗಳು, ಗ್ರಂಥಗಳನ್ನು ಓದದಿದ್ದರೂ ಕನಿಷ್ಠ ಪಂಚನಮಸ್ಕಾರ ಮಂತ್ರ ಪಠಣ ಹಾಗೂ ಜಿನ ಭಜನೆ ಮಾಡಿ ಶ್ರಾವಕರ ಪಟ್ಕರ್ಮಗಳನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಪ್ರತಿ ಮನೆಯಲ್ಲಿಯೂ ಭಜನೆಯಿಂದ ಸಾಮಾಜಿಕ ಪರಿವರ್ತನೆಯಾಗುತ್ತದೆ. ಭಜನಾ ಸಂಸ್ಕøತಿಯನ್ನು ಮುಂದಿನ ಜನಾಂಗಕ್ಕೂ ನಾವು ಹಸ್ತಾಂತರಿಸಿ ಆರೋಗ್ಯಪೂರ್ಣ , ಸುಸಂಸ್ಕøತ ಸಮಾಜ ರೂಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಅಲ್ಪಸಂಖ್ಯಾತರಾದ ಜೈನರು ತಮ್ಮ ಪರಿಶುದ್ಧ ಆಚಾರ-ವಿಚಾರ, ನಡೆ-ನುಡಿ ಹಾಗೂ ವ್ರತ-ನಿಯಮಗಳ ಪಾಲನೆಯೊಂದಿಗೆ ಸಮಾಜಕ್ಕೆ ಮಾರ್ಗದರ್ಶಕರಾಗಬೇಕು ಎಂದು ಅವರು ಸಲಹೆ ನೀಡಿದರು.

25 ದೀಪಗಳನ್ನು ಏಕಕಾಲದಲ್ಲಿ ಬೆಳಗಿಸುವುದರೊಂದಿಗೆ ಹೇಮಾವತಿ ವೀ. ಹೆಗ್ಗಡೆಯವರು ಬೆಳ್ತಂಗಡಿ ಜೈನ್ ಮಿಲನ್ ರಜತ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು.

ನೆರೆ ಸಂತ್ರಸ್ತರಾದ ನೇಮಿರಾಜ್ ಜೈನ್ ಮತ್ತು ಕಡಿರುದ್ಯಾವರದ ಉದಯ ಕುಮಾರ್ ಜೈನ್‍ರಿಗೆ ತಲಾ 25,000 ರೂ. ನೆರವು ನೀಡಲಾಯಿತು.

ಭಾರತೀಯ ಜೈನ್ ಮಿಲನ್‍ನ ಮಂಗಳೂರು ವಲಯದ ಅಧ್ಯಕ್ಷ ಪುಷ್ಪರಾಜ ಜೈನ್ ಶುಭಾಶಂಸನೆ ಮಾಡಿ, ರಾಜ್ಯದಲ್ಲಿ 350 ತಂಡಗಳ ಹತ್ತುಸಾವಿರ ಮಂದಿ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಯುವ ಜನತೆ ಭಜನೆಯಲ್ಲಿ ಆಸಕ್ತಿ ಮತ್ತು ಉತ್ಸಾಹದಿಂದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

2020ರ ಜನವರಿ 4 ಮತ್ತು 5 ರಂದು ಧಾರವಾಡದಲ್ಲಿ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ನಡೆಯಲಿದೆ ಎಂದು ಅವರು ಪ್ರಕಟಿಸಿದರು. ಬೆಳ್ತಂಗಡಿ ಜೈನ್ ಮಿಲನ್ ಸ್ಥಾಪಕಾಧ್ಯಕ್ಷ ಪಡಂಗಡಿ ಭೋಜರಾಜ ಹೆಗ್ಡೆ ಮತ್ತು ನಿರ್ದೇಶಕರುಗಳು ಉಪಸ್ಥಿತರಿದ್ದರು.

ಉಜಿರೆಯ ಡಾ. ಬಿ. ಯಶೋವರ್ಮ ಸ್ವಾಗತಿಸಿದರು. ಬಂಟ್ವಾಳದ ಸುದರ್ಶನ ಜೈನ್ ಧನ್ಯವಾದವಿತ್ತರು.

ಡಾ. ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಜೈನ್ ಮಿಲನ್‍ನ ಎಲ್ಲಾ ನಿರ್ದೇಶಕರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಂಗಳೂರು ವಿಭಾಗ ಮಟ್ಟದ ಸ್ಪರ್ಧೆಯಲ್ಲಿ 107 ತಂಡಗಳ 600 ಮಂದಿ ಸದಸ್ಯರು ಭಾಗವಹಿಸಿದರು.

ಮುಖ್ಯಾಂಶಗಳು:
• ನೃತ್ಯ ಭಜನೆಯೊಂದಿಗೆ ಸಭಾ ಕಾರ್ಯಕ್ರಮದ ಪ್ರಾರಂಭ
• ವೇದಿಕೆ, ಸಭಾಂಗಣ ಹಾಗೂ ಭೋಜನಾಲಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ.
• ಸ್ವಚ್ಛತೆ ಕಾಪಾಡಲು ಆದ್ಯತೆ
• ವಿಭಾಗ ಮಟ್ಟದಲ್ಲಿ ಆಯ್ಕೆಯಾದ ಹಿರಿಯ 7 ತಂಡಗಳು ಹಾಗೂ ಕಿರಿಯರ 5 ತಂಡಗಳಿಗೆ ಧಾರವಾಡದಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ.
• ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರತಿ ದಿನ ಅಷ್ಟವಿಧಾರ್ಚನೆ ಪೂಜೆ ಮಾಡಿ ಬೆಳಿಗ್ಯೆ, ಮಧ್ಯಾಹ್ನ ಮತ್ತು ರಾತ್ರಿ- ಮೂರು ಬಾರಿ ಸ್ನಾನ ಮಾಡಿ ಮಡಿಯಲ್ಲಿ ದೇವಸ್ಥಾನಕ್ಕೆ ಹೋಗುತ್ತಾರೆ ಎಂದು ಹೇಮಾವತಿ ಹೆಗ್ಗಡೆಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಆದುದರಿಂದ ಜಪ-ತಪ, ಧ್ಯಾನಕ್ಕೆ “ಪುರುಸೊತ್ತಿಲ”್ಲ ಎಂಬ ಕಾರಣ ಸಲ್ಲದು ಎಂದು ಅವರು ಹೇಳಿದರು.
• ಪ್ರತಿಯೊಬ್ಬರೂ ಒಂದು ದಿನ “ನೆಟ್ ಫಾಸ್ಟಿಂಗ್” ಮಾಡಬೇಕು ಎಂದು ಹೇಮಾವತಿ ವೀ. ಹೆಗ್ಗಡೆಯವರು ಸಲಹೆ ನೀಡಿದರು.

ಸ್.ಡಿ.ಎಂ. ಕಾಲೇಜಿಗೆ ಸ್ಟಾರ್ ಕಾಲೇಜು ಮಾನ್ಯತೆ 

ಉಜಿರೆ: ವಿಜ್ಞಾನ ವಿಭಾಗಗಳನ್ನು ಬಲಪಡಿಸುವುದಕ್ಕಾಗಿ ಕೇಂದ್ರ ಸರ್ಕಾರ ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿಗೆ ಸ್ಟಾರ್ ಕಾಲೇಜು ಮಾನ್ಯತೆ ನೀಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ ತಿಳಿಸಿದ್ದಾರೆ.

ಕಾಲೇಜಿನ ಬೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ 82 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here