ಪೂರ್ವಜರ ದೂರದೃಷ್ಠಿ ಹೃದಯಶ್ರೀಮಂತಿಕೆವುಳ್ಳದ್ದು : ಗ್ರೇಗೋರಿ ಅಲ್ಮೇಡಾ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.15: ನೂರಾರು ವರ್ಷಗಳ ಹಿಂದೆ ಅವರೇ ಹೊಟ್ಟೆಪಾಡನ್ನು ಹರಸಿ ಮುಂಬಯಿ ಸೇರಿದ್ದರೂ ಸ್ವಂತಿಕೆಯ ನೆಲೆಯಿಲ್ಲದೆ ಸಾಂಘಿಕವಾದ ಬದುಕ್ಕು ಕಟ್ಟಿಕೊಂಡಿದ್ದರು. ತಮ್ಮ ಕಷ್ಟಗಳು ನಮ್ಮ ಪೀಳಿಗೆಗೆ ಬಾರದಿರಲಿ ಅಂದು ಕಷ್ಟಪಟ್ಟು ಶ್ರಮಿಸಿ ಭಾವೀ ಜನಾಂಗದ ಬಗ್ಗೆ ಮುಂದಾಲೋಚನೆ ಇರಿಸಿ ಉಳಕೊಳ್ಳಲು ವಾಸ್ತವ್ಯಗೃಹಗಳನ್ನು ರೂಪಿಸಿದ್ದರು. ಈ ಮೂಲಕ ಇಂತಹ ಸಂಸ್ಥೆಗಳು ನಮ್ಮ ಸಾವಿರಾರು ಯುವಕರಿಗೆ ಜೀವನಾಶ್ರಯ ತಾಣಗಳಾಗಿದ್ದು ಇಂದು ಶತಮಾನದತ್ತ ಹೆಜ್ಜೆಯನ್ನಿರಿಸುತ್ತಿರುವುದು ಸ್ತುತ್ಯಾರ್ಹ ಎಂದು ಮಹಾನಗರದ ಹಿರಿಯ ಉದ್ಯಮಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿ ಸದಸ್ಯ ಗ್ರೇಗೋರಿ ಡಿ ಅಲ್ಮೇಡಾ ತಿಳಿಸಿದರು.
ಬೃಹನ್ಮುಂಬಯಿಯ ಫೆÇೀರ್ಟ್ ಲಯನ್ ಗೇಟ್ ಇಲ್ಲಿ ಕಳೆದ ಸುಮಾರು ಏಳುವರೆ ದಶಕಗಳಿಂದ ಸೇವಾನಿರತ ಸೈಂಟ್ ಪಾವ್ಲ್'ಸ್ ಕಥೊಲಿಕ್ ಅಸೋಸಿಯೇಶನ್ ಮುಂಬಯಿ ಸಂಸ್ಥೆ ತನ್ನ್ 77ನೇ ಸಂಸ್ಥಾಪನಾ ದಿನಾಚರಣೆ ಮತ್ತು ವಾರ್ಷಿಕೋತ್ಸವ ಇಂದಿಲ್ಲಿ ರವಿವಾರ ಸಂಭ್ರಮಿಸಿದ್ದು, ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಅಲ್ಮೇಡಾ ದೀಪ ಬೆಳಗಿಸಿ ಸಂಭ್ರಮಕ್ಕೆ ಚಾಲನೆಯನ್ನೀಡಿ ಮಾತನಾಡಿದರು.
ಸೈಂಟ್ ಪಾವ್ಲ್ ಸಭಾಗೃಹದÀಲ್ಲಿ ಅಸೋಸಿಯೇಶನ್ ಅಧ್ಯಕ್ಷ ಸ್ಟೇನಿ ಫೆರ್ನಾಂಡಿಸ್ ಅಧ್ಯಕ್ಷತೆಯಲ್ಲಿ ಸಂಸ್ಥಾಪನಾ ದಿನಾಚರಣೆ ಹಾಗೂ ಅಮೃತಮಹೋತ್ಸವ ಸಮಾರೋಪ ಸಮಾರಂಭ ನಡೆಸಿದ್ದು ಆದಾಯ ತೆರಿಗೆ ಇಲಾಖೆಯ ನಿವೃತ್ತ ಉನ್ನತಾಧಿಕಾರಿ ವಲೇರಿಯನ್ ಡೆಸಾ, ಫ್ರಾನ್ಸಿಸ್ ಮಥಾಯಸ್, ರೋನಾಲ್ಡ್ ಡಿಸೋಜಾ ದುಬಾಯಿ, ಮಾರ್ಕ್ ಮಿನೇಜಸ್ ಮತ್ತು ಮಾಜಿ ಅಧ್ಯಕ್ಷ ಆಲ್ವಿನ್ ಕುಟಿನ್ಹೋ ಗೌರವ ಅತಿಥಿüಗಳಾಗಿ ವೇದಿಕೆಯಲ್ಲಿದ್ದು ಪ್ಲಾನೆಟ್ ಟೂರ್ಸ್ ಎಂಡ್ ಟ್ರಾವೆಲ್ಸ್‍ನ ಮಾಲೀಕ ಸ್ಟೀವನ್ ಡಿಮೆಲ್ಲೊ ಅಮೃತಮಹೋತ್ಸವ ಸ್ಮರಣಿಕೆ ಬಿಡುಗಡೆಗೊಳಿಸಿದರು ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಶುಭಾರೈಸಿದರು.
ಅಂದು ಕರ್ಮಭೂಮಿಗೆ ಬಂದವರಿಗೆ ವಾಸ್ತವ್ಯ ಮತ್ತು ಕೆಲಸಗಳನ್ನು ಒದಗಿಸಿ ಕೊಡುವ ಉದ್ದೇಶವೇ ಇಂತಹ ಸಂಸ್ಥೆಗಳದ್ದಾಗಿತ್ತು. ಇದರಿಂದ ಸ್ಥಾಪಕರ ಕನಸು ನನಸಾಗಿ ಅನೇಕರ ಬದುಕು ಸಫಲತೆ ಪಡೆದಿದೆ. ನನ್ನಂತವರ ಪಾಲಿಗೆ ಇದೇ ಮೊದಲ ಮನೆಯಾಗಿದೆ. ಇಂದು ನಾನು ಏನಾದರೂ ಸಾಧಿಸಿದ್ದೇ ಆದರೆ ಇದರ ಸಿದ್ಧಿ ಈ ಸಂಸ್ಥೆಗೆ ಸಲ್ಲುತ್ತದೆ ಎಂದು ಸ್ಟೀವನ್ ಡಿಮೆಲ್ಲೊ ತಿಳಿಸಿದರು.
ವಲೇರಿಯನ್ ಡೆಸಾ ಮಾತನಾಡಿ ಇದೊಂದು ದಾನಶೀಲ (ಚಾರಿಟೇಬಲ್) ಸಂಸ್ಥೆಯಾಗಿ ಈ ತನಕ ಮುನ್ನಡೆದಿದೆ. ಯುವಜನತೆಗೆ ಆಶ್ರಯ ಮತ್ತು ಬದುಕು ಕಟ್ಟಿಕೊಟ್ಟದ್ದೇ ಇದರ ಲಾಭಾಂಶ. ಇಲ್ಲಿ ಮನೆಮಂದಿಯಂತೆಯೇ ಪ್ರೀತಿವಾತ್ಸಲ್ಯ ಸಿಗುತ್ತಿದ್ದು ಸಾಮರಸ್ಯದ ಬಾಳನ್ನು ಕಟ್ಟಿಕೊಳ್ಳಲು ಅನುಕೂಲಕರ ವಾತಾವರಣ ಇಲ್ಲಿದೆ ಎಂದರು.
ಗೌರವ ಕಾರ್ಯದರ್ಶಿ ರಿಚಾರ್ಡ್ ಡಿಸೋಜಾ ಸ್ವಾಗತಿಸಿ ಪ್ರಸ್ತಾವನೆಗೈದು ಸಂಸ್ಥೆಯ ಸಂಸ್ಥಾಪಕರ ನೆನಹುಗೈದು ಎಪ್ಪತ್ತೇಳÀರ ನಡೆ, ಸೇವಾಸಾಧನೆ, ಕಾರ್ಯವೈಖರಿ ಬಣ್ಣಿಸಿ ಸಹೋದರತ್ವದ ಬಾಳಿಗೆ ಈ ಸಂಸ್ಥೆ ಮಾದರಿ. ಇಲ್ಲಿ ನೆಲೆಯಾಗಿ ವಿಶ್ವದಾದ್ಯಂತ ಪಸರಿಸಿದ ಸದಸ್ಯರು ಬದುಕನ್ನು ಕಟ್ಟಿಕೊಂಡು ಮಾನ್ಯರೆಣಿಸಿದ್ದಾರೆ. ಸದ್ಯ ಸದಸ್ಯರ ಕೊರತೆಯಿದ್ದರೂ ಸಂಸ್ಥೆಯನ್ನು ಭಾವೀ ಜನಾಂಗಕ್ಕೆ ವರವಾಗಿಸುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ ಎಂದರು.
ಮಿಲಿಯನ್ ಡಿಸೋಜಾ, ಅನಿತಾ ಪೆರಿಸ್, ದುಲ್ಸ್ಸಿನ್ ಕಾರ್ಡೋಜಾ, ಹರಿಟಾ ಸ್ವಾಮಿ ಹಾಗೂ ಸಂಸ್ಥೆಯ ಮಾರ್ಕ್ ಮಿನೇಜಸ್, ಸಿಲ್ವೆಸ್ಟರ್ ಪೆರಿಸ್, ಡೆನಿಸ್ ಕಾರ್ಡೋಜಾ, ರಾಯನ್ ಕಾಸ್ತೆಲಿನೋ, ಪ್ರಸಾದ್ ನಜ್ರೆತ್, ಶೆಲ್ಟನ್ ಡಿಮೆಲ್ಲೊ ಸೇರಿದಂತೆ ಅನೇಕ ಹಿರಿಕಿರಿಯ ಸದಸ್ಯರು ಮತ್ತು ಅವರ ಪರಿವಾರ, ಬಂಧುಗಳು ಉಪಸ್ಥಿತರಿದ್ದು ಅತಿಥಿüಗಳು ಸಂದರ್ಭೋಚಿತವಾಗಿ ಮಾತನಾಡಿ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಹಬ್ಬದ ಶುಭಾಶಯ ಹಾರೈಸಿದರು.
ವಾರ್ಷಿಕೋತ್ಸವ ಪ್ರಯುಕ್ತ ಬೆಳಿಗ್ಗೆ ವುಡ್‍ಹೌಸ್ ಹೊಲಿನೇಮ್ ಕಾಥೆದ್ರಾಲ್ ಕೊಲಬಾ ಇಲ್ಲಿ ಕೃತಜ್ಞತಾ ಪೂಜೆ ಸಮರ್ಪಿಸಲಾಗಿದ್ದು, ರೆ| ಫಾ| ಆವಿನ್ ಫೆನಾಂಡಿಸ್ (ಚಿಕ್ಕಮಂಗಳೂರು) ಪೂಜೆ ನೆರವೇರಿಸಿ ಪ್ರಸಂಗವನ್ನಿತ್ತು ಹರಸಿದರು. ಐವಾನ್ ಫೆರ್ನಾಂಡಿಸ್ ಮತ್ತು ಸಂಗಡಿಗರು ಭಕ್ತಿಗೀತೆಗಳನ್ನಾಡಿದ್ದು, ಆಲ್ವಿನ್ ಡಿಮೆಲ್ಲೊ ಮತ್ತು ವಿವಿಯನ್ ಮಚಾದೋ ಬೈಬಲ್ ವಾಚಿಸಿದರು.
ಉಪಾಧ್ಯಕ್ಷ ರೋಶನ್ ಡಿಸೋಜಾ, ಗೌರವ ಕೋಶಾಧಿಕಾರಿ ಮೈಕಲ್ ಲೊಬೋ, ಗೌರವ ಜೊತೆ ಕಾರ್ಯದರ್ಶಿ ಜೋವಿನ್ ಡಿ.ನಜ್ರೇತ್, ಗೌರವ ಜೊತೆ ಕೋಶಾಧಿಕಾರಿ ಸಂಜೀವ್ ಲೋಪೆಸ್ ಉಪಸ್ಥಿತರಿದ್ದು, ಪದಾಧಿಕಾರಿಗಳು ಉಪಸ್ಥಿತ ಅತಿಥಿüಗಳಿಗೆ, ಹಿರಿಯ ಸದಸ್ಯರುಗಳಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ವಿವಿಯನ್ ಮಚಾದೋ ಕಾರ್ಯಕ್ರಮ ನಿರೂಪಿಸಿದರು. ರಿಚಾರ್ಡ್ ಡಿಸೋಜಾ ಅಭಾರ ಮನ್ನಿಸಿದರು. ಐವಾನ್ ಫೆರ್ನಾಂಡಿಸ್ ಸಾಂತಕ್ಲೋಸ್ ವೇಷಧಾರಿಯಾಗಿ ನೆರೆದ ಸರ್ವರನ್ನೂ ಮನೋರಂಜಿಸಿದರು.