Saturday 10th, May 2025
canara news

ಶಾಲೆಗಳಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣ ಹೆಮ್ಮೆದಾಯಕ

Published On : 19 Dec 2019   |  Reported By : Rons Bantwal


ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿನ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಡಾ| ಕಿರಣ್ ಬೇಡಿ

ಮುಂಬಯಿ (ಬಂಟ್ವಾಳ), ಡಿ.15: ಶ್ರೀರಾಮವಿದ್ಯಾಕೇಂದ್ರದ ವಿದ್ಯಾಥಿರ್üಗಳ ಸಾಮೂಹಿಕ ಪ್ರದರ್ಶನ ದೆಹಲಿಯ ಗಣರಾಜ್ಯೋತ್ಸವದಲ್ಲಿ ಪ್ರದರ್ಶನಗೊಳ್ಳುವುದರ ಮೂಲಕ ಭಾರತೀಯ ಸಂಸ್ಕೃತಿ ರಾಷ್ಟ್ರಮಟ್ಟದಲ್ಲಿ ಅನಾವರಣಗೊಳ್ಳಬೇಕು ಎಂದು ಪುದುಚೇರಿಯ ಲಿಪ್ಟಿನೆಂಟ್ ಗವರ್ನರ್ ಡಾ| ಕಿರಣ್ ಬೇಡಿ ಆಶಯ ವ್ಯಕ್ತಪಡಿಸಿದರು.

ಬಂಟ್ವಾಳ ತಾಲೂಕುನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ಸಂಜೆ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಪ್ರಧಾನ ಅತಿಥಿüಯಾಗಿ ಭಾಗವಹಿಸಿ ಮಾತನಾಡಿದ ಡಾ| ಕಿರಣ್ ಬೇಡಿ ಇದೊಂದು ಅದ್ಬುತ ಹೆಣ್ಣು ಮತ್ತು ಗಂಡು ಜೊತೆಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮಾದರಿಯಾಗಿದೆ ಎಂದ ಅವರು ಈ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರುವ ಹೆತ್ತವರಿಗೂ ವಿಶೇಷ ಅಭಿನಂದನೆ ಸಲ್ಲಿಸುವೆ. ಈ ಶಾಲೆಯ ಸಂಸ್ಥಾಪಕರು, ಶಿಕ್ಷಕರು ಅಭಿನಂದನಾರ್ಹರು ಭಾರತೀಯ ಸಂಸ್ಕೃತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಇಂತಹ ಕಾರ್ಯಕ್ರಮ ದೇಶದ ಎಲ್ಲಾ ಶಾಲೆಗಳಲ್ಲಿಯು ಅನುಷ್ಠಾನಗೊಳ್ಳಬೇಕೆ ಎಂದೂ ತಿಳಿಸಿದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಓಂಪ್ರಕಾಶ್ ಜಾರ್ಖಂಡ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೇತ್ರತಜ್ಞ ಡಾ| ಕೃಷ್ಣ ಪ್ರಸಾದ್, ಗುಜರಾತ್‍ನ ಉದ್ಯಮಿ ಶಶಿಧರ ಬಿ.ಶೆಟ್ಟಿ ಬರೋಡಾ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ರಹೀಂ ಉಚ್ಚಿಲ್, ಸಿನಿಮಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಳ್ಳಾರಿ, ರಾಜಶೇಖರ ಮುಲಾನಿ, ವಿಹಿಪಂ ನ ಶ್ರೀಧರ್ ನಾಡಿಗರ್, ರಾಘವೇಂದ್ರ ಸರ್ವಂ, ಶಾಸಕ ಹರೀಶ್ ಪೂಂಜಾ ಉಪಸ್ಥಿತರಿದ್ದು
ಕಾರ್ಯಕ್ರಮವನ್ನು ಶ್ಲಾಘಿಸಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆಯಲ್ಲಿ ಜರುಗಿದ ಭವ್ಯ ಕಾರ್ಯಕ್ರಮದಲ್ಲಿ ಕೇಂದ್ರದ ಸಚಿವ ಡಿ.ವಿ ಸದಾನಂದ ಗೌಡ, ರಾಜ್ಯ ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ಉಮೇಶ್ ಜಾದವ್, ಕೆ.ಸಿ.ರಾಮಮೂರ್ತಿ, ಶಾಸಕರುಗಳಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಉಮಾನಾಥ ಕೋಟ್ಯಾನ್, ಅರವಿಂದ ಬೆಲ್ಲದ, ಪಿ.ರಾಜೀವ್, ಪೂರ್ಣಿಮಾ ಅಮೃತ ದೇಸಾಯಿ, ಅವಿನಾಶ್ ಜಾದವ್, ಎಸ್.ಎಲ್ ಬೋಜೇಗೌಡ, ಅರುಣ್ ಜೋಶಿ, ಡಿಜಿಪಿ ಮೋಹನ್ ಪ್ರಸಾದ್, ಭ್ರಷ್ಟಾಚಾರ ನಿಗ್ರಹದಳದ ಐಜಿ ಚಂದ್ರಶೇಖರ್, ಜಿಲ್ಲಾ ಎಸ್ಪಿ ಲಕ್ಷಿ ್ಮೀಪ್ರಸಾದ್ , ಸಿನೆಮಾ ನಟಿ ಪ್ರಣೀತಾ ಸುಭಾಷ್, ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ, ಕೃಷ್ಣ ಜೆ.ಪಾಲೇಮಾರ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕ್ಯಾ.ಗಣೇಶ್ ಕಾರ್ಣಿಕ್ , ರಾಷ್ಟ್ರ ಸೇವಿಕಾ ಸಂಸ್ಥೆಯ ಕೆ.ಸೀತಕ್ಕ. ಆರ್‍ಎಸ್‍ಎಸ್ ಮುಖಂಡ ಶ್ರೀಧರ್ ನಾಡಿಗರ್, ನಿವೃತ್ತ ಪೆÇಲೀಸ್ ಅಧಿಕಾರಿ ಜಯಂತ ಶೆಟ್ಟಿ, ಕಮಲಾ ಪ್ರಭಾಕರ ಭಟ್, ಟಿ.ಜಿ ರಾಜಾರಾಮ ಭಟ್, ಸುರೇಶ್ ಶೆಟ್ಟಿ ಗುರ್ಮೆ, ಎ.ಎಂ ಖಾನ್, ಎ.ವಿ ರವಿ, ಪ್ರಕಾಶ್ ದಾಸನೂರು, ಭರತ್ ಜೈನ್, ಮಂಜುನಾಥ್ ಜಾರ್ಖಂಡ್, ಪ್ರದೀಪ್ ಕುಮಾರ್ ಕಲ್ಕೂರ, ಜಗದೀಶ್ ಶೇಣವ, ಪ್ರಭಾಕರ ಪ್ರಭು, ಪ್ರಸಾದ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಈ ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದರು.

ಶಾಲಾ ಸಂಚಾಲಕ ವಸಂತ ಮಾಧವ ಸ್ವಾಗತಿಸಿ ಪ್ರಸ್ತಾವನೆಗೈದರು. ವಿದ್ಯಾಕೇಂದ್ರ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಹ ಸಂಚಾಲಕ ರಮೇಶ್, ಪದವಿ ಕಾಲೇಜು ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‍ಕಟ್ಟೆ ಮತ್ತಿತರರು ಉಪಸ್ಥಿತರಿದ್ದು, ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ವಿಶೇಷ ಆಕರ್ಷಣೆಗಳು:
ಚಂದ್ರಯಾನ 2 ಉಡಾವಣೆ, ಮಾಜಿ ಉಪಪ್ರದಾನಿ ಎಲ್.ಕೆ.ಆಡ್ವಾಣಿ ಅವರ ಆಯೋಧ್ಯಾ ರಥಯಾತ್ರೆ, ಆಯೋಧ್ಯೆಯಲ್ಲಿ ಕರಸೇವಕರು ನಡೆಸಿರುವ ಹೋರಾಟ ಮತ್ತು ರಾಮಮಂದಿರದ ಚಿತ್ರಣಗಳು ಭಾನುವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ವಿದ್ಯಾಥಿರ್üಗಳು ಸಾಮೂಹಿಕ ಪ್ರದರ್ಶನದಲ್ಲಿ ಸಾದರ ಪಡಿಸುವ ಮೂಲಕ ನೆರದ ಜನಸ್ತೋಮ ಹಾಗೂ ಗಣ್ಯಾತಿಗಣ್ಯರನ್ನು ಬೆರಗುಗೊಳಿಸಿದರು. ಆರಂಭದಲ್ಲಿ ಸಮವಸ್ತ್ರಧಾರಿ ವಿದ್ಯಾಥಿರ್üಗಳಿಂದ ಘೋಷ ತಾಳಕ್ಕೆ ಸರಿಯಾಗಿ ಆಕರ್ಷಕ ಪಥ ಸಂಚಲನದ ಬಳಿಕ ಕೋವಿ ಸಮತಾ ಪ್ರದರ್ಶನ, ಶಿಶುನೃತ್ಯ, ಘೋಷ್ ಪ್ರದರ್ಶನ, ಜಡೆಕೋಲಾಟ, ನಿಯುದ್ಧ, ಯೋಗಾಸನ,ತುಳು ಹಾಡಿಗೆ ಪ್ರಾಥಮಿಕ ಶಾಲಾವಿದ್ಯಾಥಿರ್üಗಳಿಂದ ಆಕರ್ಷಕ ಚಿತ್ತಾರ ಮೂಡಿಸುವ ವಿವಿಧರಚನೆಯ ಸಾಮೂಹಿಕ ನೃತ್ಯ ಪ್ರದರ್ಶನ ಕಣ್ಮನ ಸೆಳೆಯಿತು. ತದನಂತರ ಕಾಲೇಜ್ ವಿದ್ಯಾಥಿರ್üಗಳಿಂದ ಕೊಲ್ಮಿಂಚು ಪ್ರದರ್ಶನ, ತುಳು, ಕನ್ನಡ, ಹಿಂದಿ ಭಾಷೆಯ ಭಜನೆಗೆ ನೃತ್ಯ ಭಜನೆ, ಪ್ರೌಢಶಾಲಾ ವಿದ್ಯಾಥಿರ್üಗಳಿಂದ ದೀಪಧಾರಿಗಳಾಗಿ ವಿವಿಧ ರಚನೆ ಮಲ್ಲಕಂಬ, ತಿರುಗುವ ಮಲ್ಲಕಂಬದಲ್ಲಿ ವಿಶೇಷ ಯೋಗಾಸನ ಪ್ರದರ್ಶನ, ಘೋಷ್ ಟಿಕ್‍ಟಿಕ್ ಪ್ರದರ್ಶನ, ಚಕ್ರ ಸಮತೋಲನ, ಬೆಂಕಿಯಲ್ಲಿ ಸಾಹಸ, ನೃತ್ಯವೈವಿಧ್ಯ, ಕೇರಳದ ಚೆಂಡೆ ವಾದನ, ಕಾಲ್ಷಕ್ರ, ಕೂಪಿಕ ಸಮತೋಲನ, ಸ್ಥರಘೋಷ್ ಪ್ರದರ್ಶನ ಗಣ್ಯಾತಿಗಣ್ಯರನ್ನು ಮತ್ತು ನೆರೆದ ಜನಸ್ತೋಮವನ್ನು ಮಂತ್ರಮುಗ್ದರನ್ನಾಗಿಸಿತು.

ಸಂಸ್ಥೆಯ ಶಿಶುಮಂದಿರದಿಂದ ಹಿಡಿದು ಪದವಿ ವಿದ್ಯಾಥಿರ್üಗಳವರೆಗೆ 3399 ಪ್ರತಿಭೆಗಳು ಹೊನಲು ಬೆಳಕಿನ ಈ ಬೃಹತ್ ಸಂಗಮದಲ್ಲಿ ಭಾಗವಹಿಸಿದ್ದರು, ಇವರಲ್ಲಿ ಸುಮಾರು 40ರಷ್ಟು ಮಂದಿ ವಿಶೇಷಚೇತನ ಮಕ್ಕಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸುಮಾರು 3 ತಾಸುಗಳ ಕಾಲ ನಿರಂತರವಾಗಿ ನಡೆದ ಈ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳಿಂದ ಒಟ್ಟು 20 ವಿವಿಧ ಪ್ರದರ್ಶನಗಳು ಅನಾವರಣಗೊಂಡಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here