ಮುಂಬಯಿ, ಡಿ.19: ವಿಜಯಾ ಬ್ಯಾಂಕ್‍ನ ಮಾಜಿ ಉದ್ಯಮಿ ದಿವಂಗತ ನಾರಾಯಣ ಶೆಟ್ಟಿ ಅವರ ಧರ್ಮಪತ್ನಿ ಯಶೋಧ ಎನ್.ಶೆಟ್ಟಿ (63.) ಕಳೆದ ಶನಿವಾರ (ಡಿ.14) ಮುಂಜಾನೆ ಅಲ್ಪ ಕಾಲದ ಅನಾರೋಗ್ಯದಿಂದ ಅಂಧೇರಿ ಪೂರ್ವದ ಖಾಸಾಗಿ ಆಸ್ಪತ್ರೆಯಲ್ಲ್ಲಿ ನಿಧನರಾದರು.
ಮುಂಡ್ಕೂರು (ಬೆಳ್ಮಣ್) ಉಳೆಪಾಡಿ ಮೂಲತಃ ಮೃತರು ಸಾಕಿನಾಕ ಚಾಂದಿವಿಲಿಯಲ್ಲಿದ್ದು ಸದ್ಯ ಸುಪುತ್ರನ ಕಾಂದಿವಿಲಿ ಠಾಕೂರ್ ವಿಲೇಜ್‍ನ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದರು. ಮೃತರು ಒಂದು ಹೆಣ್ಣು, ಎರಡು ಗಂಡು ಸೇರಿದಂತೆ ಬಂಧು ಬಳಗ ಆಗಲಿದ್ದಾರೆ.