ನಿಸ್ವಾರ್ಥ ಸೇವೆಯಿಂದ ಸಮಾಜೋದ್ಧಾರ ಸಾಧ್ಯ-ಕುತ್ಪಾಡಿ ರಾಮಚಂದ್ರ ಗಾಣಿಗ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.15: ಮಹಾನಗರ ಹಾಗೂ ಉಪನಗರಗಳಲ್ಲಿ ನೆಲೆಸಿರುವ ಗಾಣಿಗ ಸಮುದಾಯದಲ್ಲಿ ಉತ್ಸಾಹದಾಯಕ ಸಾಂಘಿಕತೆ ಎದ್ದು ಕಾಣುತ್ತಿದೆ. ಇದು ನಮ್ಮ ಸಮಾಜದ ಭವಿಷ್ಯವನ್ನು ರೂಪಿಸುವಂತಿದೆ. ಈ ಮೂಲಕ ನಮ್ಮ ಸಮಾಜದಲ್ಲಿನ ಯುವ ಪ್ರತಿಭೆಗಳನ್ನು, ಉದಯೋನ್ಮುಖ ಧುರೀಣರನ್ನು ಗುರುತಿಸುವ ಕಾಲ ಸನ್ನಿಹಿತವಾಗಿದೆ. ಯಾವುದೇ ಸಮಾಜ ಸುಧಾರಕರಲ್ಲಿ ದುರಾಸೆ ಸಲ್ಲದು. ನಿಜವಾದ ಸಾಮಾಜಿಕ ಕಳಕಳಿಯುಳ್ಳವರಿಂದ ಮತ್ತು ನಿಸ್ವಾರ್ಥ ಸೇವಕರಿಂದ ಮಾತ್ರ ಸಮಾಜೋದ್ಧಾರ ಸಾಧ್ಯವಾಗುವುದು. ಆದುದರಿಂದ ಎಲ್ಲರೂ ಸ್ವಾರ್ಥ ಮರೆತು ಭಗವತ್ವಜ್ಞೆ ಸದಾಚಾರವಾಗಿರಿಸಿ ಸ್ವಸಮಾಜದ ಶ್ರೇಯೋಭಿವೃದ್ಧಿಗೆ ಬದ್ದರಾಗೋಣ. ಆ ಮೂಲಕ ಗಾಣಿಗ ಜನತೆಯ ಬದುಕು ಭಾರತೀಯರ ಜನಮಾನಸದಲ್ಲಿ ರೂಪಿಸೋಣ ಎಂದು ಗಾಣಿಗ ಸಮಾಜ ಮುಂಬಯಿ (ರಿ.) ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ನುಡಿದರು.
ಸಾಂತಾಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಗಾಣಿಗ ಸಮಾಜ ಮುಂಬಯಿ (ರಿ.) ತನ್ನ 22ನೇ ವಾರ್ಷಿಕ ಮಹಾಸಭೆಯನ್ನು ಆಯೋಜಿಸಿದ್ದು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆಯನ್ನೀಡಿ ಅಧ್ಯಕ್ಷತೆ ವಹಿಸಿ ರಾಮಚಂದ್ರ ಗಾಣಿಗ ತಿಳಿಸಿದರು.
ಸಂಸ್ಥೆಯ ಸ್ಥಾಪಕ ನಾಗೇಶ್ ಬಳಿಮನೆ, ಗೌರವಾಧ್ಯಕ್ಷ ಜಗನ್ನಾಥ ಎಂ.ಗಾಣಿಗ, ಉಪಾಧ್ಯಕ್ಷರುಗಳಾದ ಭಾಸ್ಕರ ಎಂ.ಗಾಣಿಗ ಮತ್ತು ಬಿ.ವಿ ರಾವ್, ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ, ಗೌ| ಕೋಶಾಧಿಕಾರಿ ಜಯಂತ ಪದ್ಮನಾಭ ಗಾಣಿಗ, ಜೊತೆ ಕಾರ್ಯದರ್ಶಿ ಜಗದೀಶ್ ಗಾಣಿಗ, ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ ವಿಜಯೇಂದ್ರ ಗಾಣಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾರಾ ಎನ್.ಭಟ್ಕಳ್, ಯುವ ವಿಭಾಗ ಕಾರ್ಯಾಧ್ಯಕ್ಷ ಗಣೀಶ್ ಆರ್.ಕುತ್ಪಾಡಿ ವೇದಿಕೆಯಲ್ಲಿದ್ದರು.
ನಾಗೇಶ್ ಬಳಿಮನೆ ಮಾತನಾಡಿ ಅಂದು ಸಮಾನಮನಸ್ಕರಾದ ನಾವುಗಳು ಗಾಣಿಗರ ಹಿತದೃಷ್ಟಿಯನ್ನಿರಿಸಿ ಈ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದೇವು. ಆದರೆ ಈಗಿನ ಯುವಜನತೆ ಸಂಘಸಂಸ್ಥೆಗಳ ಸಹವಾಸದಿಂದ ದೂರ ಉಳಿಯುತ್ತಿರುವುದು ಸರಿಯಲ್ಲ. ಬುದ್ಧಿಜೀವಿಯಾದ ಮಾನವ ತನ್ನ ಆಯುಷ್ಯದಲ್ಲಿ ಸೇವೆಯನ್ನು ಮೈಗೂಡಿಸಿ ಕನಿಷ್ಟ ತನ್ನ ಸ್ವಸಮಾಜದ ಸೇವೆಗೈಯುವ ಮನೋಭಾವ ಬೆಳೆಸಿಕೊಳ್ಳಬೇಕು. ಆವಾಗಲೇ ಮನುಕುಲದ ಜೀವನ ಸಾರ್ಥಕವಾಗಬಲ್ಲದು. ಇದಕ್ಕಾಗಿ ನಮ್ಮವರು ಮತ್ತು ಯುವಪೀಳಿಗೆ ಇನ್ನಾದರೂ ಸಂಸ್ಥೆಯಲ್ಲಿ ಸಕ್ರೀಯರಾಗಿ ಸಮಾಜೋದ್ಧಾರಕ್ಕೆ ಕೈಜೋಡಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ ಗತ ಮಹಾಸಭೆಯ ಹಾಗೂ ವಾರ್ಷಿಕ ಕಾರ್ಯ ಚಟುವಟಿಕೆಗಳ ವರದಿ ತಿಳಿಸಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಬಳಿಕ 2019-2021ರ ಸಾಲಿಗೆ ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆ ನಡೆಸಿ ಗತ ಸಾಲಿನಲ್ಲಿ ಸರ್ವೋತ್ಕೃಷ್ಟ ಅಂಕಗಳಿಂದ ತೇರ್ಗಡೆ ಹೊಂದಿದ ಸ್ವಸಮಾಜದ ವಿದ್ಯಾಥಿರ್üಗಳಿಗೆ ಮಧ್ಯಾಂತರದಲ್ಲಿ ಪದಾಧಿಕಾರಿಗಳು ವಿದ್ಯಾಥಿರ್ü ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.
ಕಾರ್ಯಕಾರಿ ಸಮಿತಿಯ ಸದಸ್ಯರಾದ ಯು.ಬಾಲಚಂದ್ರ ಕಟಪಾಡಿ, ಸದಾನಂದ ಕಲ್ಯಾಣ್ಪುರ, ಮಮತಾ ದೇವೆಂದ್ರ ರಾವ್ ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಂಸ್ಥೆಯ ಮೂಲಕ ಸಮಾಜವನ್ನು ಇನ್ನಷ್ಟು ಬಲಪಡಿಸಲು ಸರ್ವರೂ ಸಹಕರಿಸುವಂತೆ ಕೋರಿದರು.
ಸಂಸ್ಥೆಯ ಸದಸ್ಯರನೇಕರು ಸೇರಿದಂತೆ ಮಹಾನಗರದಲ್ಲಿನ ಹೆಚ್ಚಿನ ಗಾಣಿಗ ಬಾಂಧವರು ಉಪಸ್ಥಿತರಿದ್ದು, ಬೆಳಿಗ್ಗೆ ಶ್ರೀ ಸತ್ಯನಾರಾಯಣ ಮಹಾಪೂಜೆ ಆಯೋಜಿಸಲಾಗಿತ್ತು. ಪೇಜಾವರ ಮಠದ ವಿದ್ವಾನ್ ಪವನ್ ಆಚಾರ್ಯ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು. ಮುಕುಂದ ಬೈತಮಂಗಳ್ಕರ್ ಪೂಜೆಗೆ ಸಹಕರಿಸಿದ್ದು, ಶಮಂತಕ ರವಿ ಸಿ.ಗಾಣಿಗ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ಬಳಿಕ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾರಾ ಎನ್.ಭಟ್ಕಳ್ ಮುಂದಾಳುತ್ವದಲ್ಲಿ ಹಳದಿ ಕುಂಕುಮ ಧಾರ್ಮಿಕ ಕಾರ್ಯಕ್ರಮ ನಡೆಸಲ್ಪಟ್ಟಿತು.
ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ತೋನ್ಸೆ ಬಾಲಕೃಷ್ಣ, ಕೆ.ಶಾಂತಾರಾಮ ಮೂರ್ತಿ, ರಾಜೇಶ್ ಕುತ್ಪಾಡಿ, ವೀಣಾ ದಿನೇಶ್ ಗಾಣಿಗ, ಆಶಾ ಹರೀಶ್ ತೋನ್ಸೆ, ದಿನೇಶ್ ರಾವ್ ಟಿ.ಎಸ್, ನರೇಂದ್ರ ರಾವ್, ಗೋಪಾಲಕೃಷ್ಣ ಗೋವಿಂದ ಗಾಣಿಗ ವಿನಾಯಕ ಭಟ್ಕಳ, ದಿನೇಶ್ ಗಾಣಿಗ ಭಯಂದರ್, ರಮೇಶ್ ಎನ್.ಗಾಣಿಗ, ಕಾಳಿಂಗ ರಾವ್, ಗಂಗಾಧರ ಎನ್.ಗಾಣಿಗ, ಮೋಹನ್ ಎನ್.ಆರ್ ರಾವ್, ಕಚೇರಿ ಉಸ್ತುವರಿ ಪದ್ಮನಾಭ ಎನ್. ಗಾಣಿಗ, ಸಂಸ್ಥೆಯ ಮಾಜಿ-ಹಾಲಿ ಪದಾಧಿಕಾರಿಗಳÀು ಹಾಜರಿದ್ದು ಉಪಾಧ್ಯಕ್ಷ ಬಿ.ವಿ.ರಾವ್ ಪ್ರಾರ್ಥನೆಯನ್ನಾಡಿ ಸ್ವಾಗತಿಸುತ್ತಾ ಸಭಾ ಕಲಾಪ ನಡೆಸಿದರು. ಚಂದ್ರಶೇಖರ್ ಆರ್.ಗಾಣಿಗ ಧನ್ಯವದಿಸಿದರು.