ಬಂಟರ ಸಂಘಗಳ ಕ್ಕೂಟಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರಿಗೆ ಸನ್ಮಾನ
ಮುಂಬಯಿ, ಡಿ.24: ಥಾಣೆ ಭಿವಂಡಿಯ ಹೆಸರಾಂತ ಉದ್ಯಮಿ, ವಿಶ್ವಾಮೃತ ಟೌನ್‍ಶಿಪ್ ಮುರ್ಬಾಡ್ ನಿರ್ದೇಶಕ, ಬಂಟರ ಸಂಘ ಮುಂಬಯಿ ಇದರ ಭಿವಂಡಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷ ಮೂಡುಶೆಡ್ಡೆ ವಿಶ್ವನಾಥ ಎಸ್.ಶೆಟ್ಟಿ ತನ್ನ ಮಂಗಳೂರು ಇಲ್ಲಿನ ಮೂಡುಶೆಡ್ಡೆಯ ಶ್ರೀ ದುರ್ಗಾ ಪರಮೇಶ್ವರಿ ಕೃಪಾ ಗೃಹದಲ್ಲಿ ಇತ್ತೀಚೆಗೆ (ಡಿ.20) ನಡೆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿü ಆಗಿ ಭಾಗವಹಿಸಿದ್ದ ಫೆಡರೇಶನ್ ಆಫ್ ವರ್ಲ್ಡ್ ಬಂಟ್'ಸ್ ಅಸೋಸಿಯೇಶನ್'ಸ್ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಹೊಸಲಕ್ಕೆ ದೇವತಿ ಸಂಜೀವ ಶೆಟ್ಟಿ ಅವರನ್ನೊಳಗೊಂಡು ವಿಶ್ವನಾಥ ಶೆಟ್ಟಿ ಮತ್ತು ರೇವತಿ ವಿಶ್ವನಾಥ್ ದಂಪತಿ ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ಆರತಿ ನೆರವೇರಿಸಿದರು. ಬಳಿಕ ಹರೀಶ್ ಶೆಟ್ಟಿ ಅವರನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಈ ಸಂದರ್ಭದಲ್ಲಿ ಕರುಣಾಕರ ಎಸ್.ಶೆಟ್ಟಿ, ನ್ಯಾಯವಾದಿ ಉಮೇಶ್ ಎಸ್.ಶೆಟ್ಟಿ, ದಿನೇಶ್ ಎಸ್.ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು, ಹಾಗೂ ಬಂಧು-ಮಿತ್ರರು ಉಪಸ್ಥಿತರಿದ್ದರು. ರಾತ್ರಿ ಶ್ರೀ ಕಟೀಲು ದುರ್ಗಾ ದಶಾವತಾರ ಯಕ್ಷಗಾನ ಮಂಡಳಿದ್ದು ಮೂಡುಶೆಡ್ಡೆ ಇಲ್ಲಿನ ಶ್ರೀ ದೇವಿ ಭಜನಾ ಮಂಡಳಿಯ ವಠಾರದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಸೇವೆಯಾಟ ಪ್ರದರ್ಶಿಸಿದರು. ಚೌಕಿ ಪೂಜೆಯ ಬಳಿಕ ಮಹಾ ಅನ್ನಸಂತಾರ್ಪಣೆ ನಡೆಸಲ್ಪಟ್ಟಿತು.