Saturday 10th, May 2025
canara news

ಸಾಮಾಜಿಕ ಮಾಧ್ಯಮಾಭ್ಯಾಸಗಳು ಮಾನವನನ್ನು ನಿಷ್ಕ್ರೀಯಗೊಳಿಸುತ್ತದೆ

Published On : 24 Dec 2019   |  Reported By : Rons Bantwal


ಚೆಂಬೂರು ಕರ್ನಾಟಕ ಸಂಘದ `ಸಾಹಿತ್ಯ ಸಹವಾಸ' ಸಂಭ್ರಮದಲ್ಲಿ ಡಾ| ಗೋವಿಂದರಾಜ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.22. ಹೊರನಾಡ ಕನ್ನಡಿಗರಿಗೆ ಕರ್ನಾಟಕ ಸರಕಾರವು ವಿಶೇಷವಾದ ಸೌಲಭ್ಯಗಳನ್ನು ನೀಡುತ್ತಿದೆ. ಅದರಲ್ಲೂ ಶೈಕ್ಷಣಿಕ ಸೇವೆಗಳಲ್ಲಿ ಮಹತ್ತರವಾದ ಸೌಲಭ್ಯಗಳನ್ನು ಕಲ್ಪಿಸಿವೆ ಇದನ್ನು ಹೊರನಾಡ ಕನ್ನಡಿಗರು ಸದುಪಯೋಗ ಪಡೆದುಕೊಳ್ಳಬೇಕು. ನಾವು ಉದರಪೆÇೀಷಣೆಗಾಗಿ ನಾಡನ್ನು ಬಿಟ್ಟರೂ ಹೊರನಾಡಲ್ಲಿ ಕನ್ನಡವನ್ನು ಪಸರಿಸಿ ಕೊಂಡಿರುವುದು ಅಭಿನಂದನೀಯ. ಯುವಜನಾಂಗವು ಸ್ಮಾರ್ಟ್‍ಫೆÇೀನ್, ವಾಟ್ಸಪ್‍ನಿಂದ ದೂರವಿದ್ದು ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮಗ್ನರಾಗಬೇಕು. ಸಾಮಾಜಿಕ ಮಾಧ್ಯಮ ಮುಕ್ತತೆಗೆ ಹೆಚ್ಚೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇಂತಹ ಅಭ್ಯಾಸಗಳು ಮಾನವನನ್ನು ನಿಷ್ಕ್ರೀಯ ಗೊಳಿಸುತ್ತದೆ. ಸಾಮಾಜಿಕ ಮಾಧ್ಯಮಗಳ ಅಭ್ಯಾಸಗಳು ಮಾನವನನ್ನು ನಿಷ್ಕ್ರೀಯಗೊಳಿಸುತ್ತದೆ ಎಂದು ಮಹಾರಾಷ್ಟ್ರ ಸರಕಾರದ ಸಹಕಾರ, ಮಾರುಕಟ್ಟೆ ಮತ್ತು ಜವಳಿ ಇಲಾಖೆಯ ಕಾರ್ಯದರ್ಶಿ ಡಾ| ಕೆ.ಹೆಚ್ ಗೋವಿಂದರಾಜ್ ತಿಳಿಸಿದರು.

ಚೆಂಬೂರು ಇಲ್ಲಿನ ಫೈನ್ ಆರ್ಟ್ಸ್ ಸೊಸೈಟಿ ಇದರ ಶಿವಸ್ವಾಮಿ ಸಭಾಗೃಹದಲ್ಲಿ ಇಂದಿಲ್ಲಿ ಭಾನುವಾರ ಸಂಜೆ ಚೆಂಬೂರು ಕರ್ನಾಟಕ ಸಂಘ ತನ್ನ 16ನೇ ವಾರ್ಷಿಕ `ಸಾಹಿತ್ಯ ಸಹವಾಸ-2019-20'ನ್ನು ಸಂಭ್ರಮಿಸಿದ್ದು, ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿದ್ದು ಸಮಾರಂಭ ಉದ್ಘಾಟಿಸಿ ಡಾ| ಗೋವಿಂದರಾಜ್ ಮಾತನಾಡಿದರು.

ಸಂಘದ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ಅರಾಟೆ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಸಂಘದ ವಾರ್ಷಿಕ ಪ್ರತಿಷ್ಠಿತ `ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ-2019'ನ್ನು ಭಾರತೀಯ ಆಡಳಿತ ನಿವೃತ್ತ ಸೇವಾಧಿಕಾರಿ, ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಧಾವಿ ಡಾ| ಸಿ.ಸೋಮಶೇಖರ್ (ಐಎಎಸ್) ಬೆಂಗಳೂರು ಅವರಿಗೆ ಪ್ರದಾನಿಸಿ ಗೌರವಿಸಿದರು ಹಾಗೂ ಸಂಘದ `ದಿ| ವೈ.ಜಿ ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ'ಯನ್ನು ನಿವೃತ್ತ ಶಿಕ್ಷಕ ಸಿ.ಎಸ್ ರವೀಂದ್ರ ಅವರಿಗೆ, `ಸುಬ್ಬಯ್ಯ ಶೆಟ್ಟಿ ದತ್ತಿ' ಪುರಸ್ಕಾರವನ್ನು ಇಶ್ಯೂಸ್ ಎಂಡ್ ಕನ್ಸರ್ನ್ಸ್ ಸಂಪಾದಕ ಜಯರಾಮ್ ಶ್ರೀಯಾನ್ ಅವರಿಗೆ ಮತ್ತು ತುಳುವ ಕನ್ನಡಿಗರಿಗಾಗಿ ನೀಡುವ ಮೇರು ಪುರಸ್ಕಾರ `ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಣಾರ್ಥ' ಪ್ರಶಸ್ತಿಯನ್ನು ಗುಜರಾತ್‍ನ ಹಿರಿಯ ಉದ್ಯಮಿ, ಸಂಘಟಕ, ಸಮಾಜ ಸೇವಕ ಜಯರಾಮ ಶೆಟ್ಟಿ ಬರೋಡ ಅವರಿಗೆ ಪ್ರದಾನಿಸಿ ಅಭಿನಂದಿಸಿದರು.

ಸಂಘದ ಉಪಾಧ್ಯಕ್ಷ ಪ್ರಭಾಕರ ಬಿ.ಬೋಳಾರ್, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಕೆ.ಶೆಟ್ಟಿಗಾರ್, ಗೌರವ ಕೋಶಾಧಿಕಾರಿ ಟಿ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಸುಧಾಕರ ಹೆಚ್.ಅಂಚನ್, ಜತೆ ಕೋಶಾಧಿಕಾರಿ ಸುಂದರ್ ಎನ್.ಕೋಟ್ಯಾನ್ ವೇದಿಕೆಯಲ್ಲಿದ್ದು ಪುರಸ್ಕೃತರು ಸಂದರ್ಭೋಚಿತವಾಗಿ ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿ ಗೌರವಕ್ಕಾಗಿ ಅಭಿವಂದಿಸಿದರು.

ಡಾ| ಸೋಮಶೇಖರ್ ಮಾತನಾಡಿ ಶರಣರು ಕೊಟ್ಟ ಈ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಯಾವ ಸಮಾಜ, ಕಾಲ, ಧರ್ಮ ಎಲ್ಲಕ್ಕೂ ಹೊಂದುವ ಸಂವಿಧಾನವನ್ನು ಕೊಟ್ಟವರೇ ಕನ್ನಡದ ಶರಣರು. ಇಡೀ ವಿಶ್ವವೇ ಯಾವುದೇ ಸಂದರ್ಭಕ್ಕೂ ತಿರಸ್ಕಾರ ಮಾಡಲಸಾಧ್ಯವಾದ ಮಾನವೀಯ ಮೌಲ್ಯಗಳನ್ನು ತಂದೊದಗಿಸಿಕೊಟ್ಟವರೇ ಶರಣರು. ಕನ್ನಡದ ಭವ್ಯ ಕನಸನ್ನು ಕಂಡವರೇ ಶರಣರು. ಶರಣ ಸಾಹಿತ್ಯ, ದಾಸ ಸಾಹಿತ್ಯವು ನಮ್ಮ ಕನ್ನಡ ನಾಡಿನ ಸಂಸ್ಕೃತಿಯನ್ನು ಸಂಪದ್ಭರಿತ ಗೊಳಿಸಿದೆ. ಆದುದರಿಂದಲೇ ಕನ್ನಡದ ಪ್ರಜ್ಞೆಯೆಂದರೆ ಸಾಹಿತ್ಯದ ಪ್ರಜ್ಞೆ. ಕನ್ನಡವೇ ಮಾನವೀಯತೆ ಮತ್ತು ಧರ್ಮವಾಗಿದೆ. ಇಂತಹ ಕನ್ನಡದ ಢಿಂಢಿಮವನ್ನು ಬಾರಿಸಿದ ರಾಷ್ಟ್ರಕವಿಯ ಆಶಯದಂತೆ ಚೆಂಬೂರು ಕರ್ನಾಟಕ ಸಂಘ ಮುಂಬಯಿನಲ್ಲಿ ಕನ್ನಡದ ಢಿಂಢಿಮವನ್ನು ಬಾರಿಸುತ್ತಾ ಕನ್ನಡ ಕಟ್ಟುವ ಕಾಯಕದಲ್ಲಿ ತೊಡಗಿರಿಸಿರುವುದು ಅಭಿಮಾನ ತಂದಿದೆ ಎಂದರು.

ಶಿಕ್ಷಕರ ಸಾಧನಾಸಿದ್ಧಿ ಹಿಂದೆ ವಿದ್ಯಾಥಿರ್sಗಳ ಪಾತ್ರ ಮಹತ್ತರವಾದದ್ದು. ಇದನ್ನು ನಾನು ಈ ಸಂಸ್ಥೆಯಲ್ಲಿ ಅನುಭವಿಸಿರುವೆ. ಚೆಂಬೂರು ಕರ್ನಾಟಕ ಸಂಘ ನನ್ನ ಪಾಲಿನ ಮಾತೃಸಂಸ್ಥೆ. ಆದುದರಿಂದ ಮಾತೃಸಂಸ್ಥೆಯ ಗೌರವ ಅಭಿಮಾನದ್ದು ಏಕೆಂದರೆ ಇದು ಮನೆಮಂದಿಯ ಗೌರವವಾಗಿದೆ ಎಂದು ಸನ್ಮಾನಕ್ಕೆ ಉತ್ತರಿಸಿ ಸಿ.ಎಸ್ ರವೀಂದ್ರ ನುಡಿದರು.

ಶ್ರೀಯಾನ್ ಮಾತನಾಡಿ ಭಾರತೀಯರಿಗೆ ಇತಿಹಾಸ ಪ್ರಜ್ಞೆ ಕಡಿಮೆ. ಬರೇ ಮಾತು ಜಾಸ್ತಿ ದುಡಿಮೆ ಕಡಿಮೆಯಾಗಿದೆ. ಆದುದರಿಂದ ವ್ಯವಹಾರಿಕ ವ್ಯವಸ್ಥೆ ಅವ್ಯವಸ್ಥೆಯಾಗಿದೆ. ಆದರೆ 65ರ ಚೆಂಬೂರು ಕರ್ನಾಟಕ ಸಂಘದ ತೆರೆಮರೆಯ ಕಾಯಕವೇ ಹೆಚ್ಚಿದೆ. ಇದು ನಾವು ಗಮನಿಸಿಯೂ ಮರೆಮಾಚಿಸಿದ್ದೇವೆ. ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಸದಾ ಹೊಗಳುವಂತಹದ್ದು. ಮಾಡಿದ ಕೆಲಸ ಗುರುತಿಸಿ ಕೊಂಡಾಗಲೇ ಅಸ್ತಿತ್ವ ಅಜರಾಮರವಾಗುತ್ತದೆ.ನಿಜಾರ್ಥದಲ್ಲಿ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರಕ್ಕೆ ಅರ್ಹವಾದ ಸಂಸ್ಥೆಯಾಗಿದೆ ಎಂದರು.

ಜಯರಾಮ ಶೆಟ್ಟಿ ಮಾತನಾಡಿ ನಾವು ನಮ್ಮಿಂದಾದ ತ್ಯಾಗದಿಂದ ಮಾತೃಭಾಷೆಗಳ ಸಂಸ್ಥೆಗಳನ್ನು ರೂಪಿಸಿ ಭವಿಷ್ಯತ್ತಿನ ಪೀಳಿಗೆಗೆ ಆಸ್ತಿಯಾಗಿಸಿದ್ದೇವೆ. ಆದರೆ ಯುವ ಜನಾಂಗ ಮಾತೃಸಂಸ್ಕೃತಿಯಿಂದಲೇ ದೂರ ಉಳಿಯುತ್ತಿರುವುದು ಬೇಸರವೆಣಿಸುತ್ತಿದೆ. ಇನ್ನಾದರೂ ನಾವು ಕನ್ನದದ ಕಂಪನ್ನು ಸಂರಕ್ಷಿಸಿ ನಮ್ಮತನ ಉಳಿಸಿ ಒಂದಾಗಿ ಬಾಳೋಣ ಎಂದು ಆಶಯ ವ್ಯಕ್ತ ಪಡಿಸಿದರು.

ಬದುಕನ್ನರಸಿ ವಲಸೆ ಬಂದು ಮುಂಬಯಿನಲ್ಲಿ ನೆಲೆಸಿದ ಕನ್ನಡಿಗರು ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿ ಸಾಂಘಿಕ ಬಾಳಿಗೆ ಪ್ರೇರಕರಾಗಿದ್ದಾರೆ. ಆ ಸಂಸ್ಥೆಗಳ ಪೈಕಿ ಚೆಂಬೂರು ಕರ್ನಾಟಕ ಸಂಘವೂ ಒಂದಾಗಿದೆ. ಇಂತಹ ದೂರದೃಷ್ಠಿತ್ವದ ಸಂಸ್ಥೆಗಳನ್ನು ಸ್ಥಾಪಿತ ನಮ್ಮ ಹಿರಿಯರು, ಸ್ಥಾಪಕರನ್ನು ನಾವು ಸ್ಮರಿಸಿ ಅವರ ಧ್ಯೇಯೋದ್ದೇಶಗಳನ್ನು ಮುನ್ನಡೆಸಿ ಅನುಗ್ರಹಸ್ಥರಾಗಬೇಕು. ಅಂದು ಸ್ಥಾಪಿತ ಈ ಸಂಸ್ಥೆ ಇಂದು ಆಲದಮರವಾಗಿ ಹೆಮ್ಮರವಾಗಿ ಬೆಳೆದಿದೆ. ಸ್ಥಾಪಕರ ನಿಸ್ವಾರ್ಥ ಸೇವೆ ನಮಗೆ ಮಾದರಿಯಾಗಿದೆ. ಕಳೆದ ಒಂದುವರೆ ದಶಕದಿಂದ ಸಾಹಿತಿಕವಾಗಿ ಪೂರ್ಣಪ್ರಮಾಣದಲ್ಲಿ ಸಕ್ರೀಯವಾದ ಈ ಸಂಸ್ಥೆ ಐದು ವರ್ಷಗಳಿಂದ ಶೈಕ್ಷಣಿಕ ಕ್ರಾಂತಿಯಾಗಿದೆ ಎಂದÀು ಅಧ್ಯಕ್ಷೀಯ ಭಾಷಣದಲ್ಲಿ ಸುಧಾಕರ್ ಅರಾಟೆ ತಿಳಿಸಿದರು.


ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವನಾಥ ಎಸ್.ಶೇಣವ, ಗುಣಾಕರ ಹೆಚ್.ಹೆಗ್ಡೆ, ಯೋಗೇಶ್ ವಿ.ಗುಜರನ್, ಮಧುಕರ್ ಜಿ.ಬೈಲೂರು, ರಾಮ ಪೂಜಾರಿ, ಮೋಹನ್ ಕೆ.ಕಾಂಚನ್, ಚಂದ್ರಶೇಖರ ಎ. ಅಂಚನ್, ಅಶೋಕ್ ಸಾಲ್ಯಾನ್, ಕೆ.ಜಯ ಎಂ.ಶೆಟ್ಟಿ, ಸುಧೀರ್ ವಿ.ಪುತ್ರನ್, ಜಯಂತಿ ಆರ್.ಮೊೈಲಿ, ಶಬರಿ ಕೆ.ಶೆಟ್ಟಿ, ಅರುಣ್‍ಕುಮಾರ್ ಶೆಟ್ಟಿ ಸೇರಿದಂತೆ ಸಂಘದ ವಿವಿಧ ಶಿಕ್ಷಣಾಲಯಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾಥಿರ್üಗಳು, ಕನ್ನಡ ಶಿಕ್ಷಣಾಭಿಮಾನಿಗಳು ಹಾಜರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚೆಂಬೂರು ಕರ್ನಾಟಕ ವಿದ್ಯಾಲಯದ ವಿದ್ಯಾಥಿರ್sಗಳು, ಸಂಘದ ಮಹಿಳಾ ವಿಭಾಗ, ತಿಲಕನಗರ್ ಪೆಸ್ತಂ ನಗರ್ ಸಂಸ್ಥೆಯ ಹಾಗೂ ಇನ್ನಿತರ ಕಲಾವಿದರು ವೈವಿಧ್ಯಮಯ ನೃತ್ಯಾವಳಿ, ನಾದ ನಿನಾದ ಸಂಗೀತ ವೈಭವವನ್ನು ಮತ್ತು ವಿದ್ಯಾಥಿರ್sಗಳು ಪ್ರಶಸ್ತಿ ವಿಜೇತ `ಹಕ್ಕಿ ಹಾಡು' ನಾಟಕ ಪ್ರದರ್ಶಿಸಿದರು. ಅನಿತಾ ಶೆಟ್ಟಿ ಮತ್ತು ವಿಜೇತ ಸುವರ್ಣ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಭರತ್ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಸಮಾರಂಭ ಆದಿಗೊಂಡಿತು. ಸಂಘದ ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ದಯಾಸಾಗರ ಚೌಟ ಸ್ವಾಗತಿಸಿ ಪುರಸ್ಕೃತರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ದೇವದಾಸ್ ಕೆ.ಶೆಟ್ಟಿಗಾರ್ ಉಪಕಾರ ಸ್ಮರಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here