(ಚಿತ್ರ / ವರದಿ: ರೊನಿಡಾ ಮುಂಬಯಿ)
ಮುಂಬಯಿ, ಡಿ.23: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅವರನ್ನೊಳಗೊಂಡ ನಿಯೋಗವು ಇಂದಿಲ್ಲಿ ಉಡುಪಿ ಜಿಲಾಧಿಕಾರಿ ಜಿ.ಜಗದೀಶ್ ಅವರನ್ನು ಭೇಟಿ ನೀಡಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ, ಶ್ರೀ ನಾರಾಯಣ ಗುರು ಪ್ರೌಢ ಶಾಲಾ ಆಡಳಿತ ಮಂಡಳಿ ಸದಸ್ಯ ಶಂಕರ ದಿ.ಪೂಜಾರಿ, ಆಡಳಿತಾಧಿಕಾರಿ ಜ್ಯೋತಿ ಪ್ರಮಲ್ ಕುಮಾರ್ ಉಪಸ್ಥಿತರಿದ್ದು ಉಡುಪಿ ಪಡುಬೆಳ್ಳೆ ಇಲ್ಲಿ ಅಸೋಸಿಯೇಶನ್ ತನ್ನ ಸಂಚಾಲಕತ್ವದಲ್ಲಿ ನಡೆಸುತ್ತಿರ್ವ ಶ್ರೀ ಗುರು ನಾರಾಯಣ ವಿದ್ಯಾ ಸಂಕುಲದ ಶೈಕ್ಷಣಿಕ ಸೇವೆಗಳು ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿಯನ್ನಿತ್ತರು.