Saturday 10th, May 2025
canara news

ಮೂಡುಬಿದಿರೆ ಪ್ರೆಸ್‍ಕ್ಲಬ್ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಮೂಡುಬಿದಿರೆ

Published On : 25 Dec 2019   |  Reported By : Rons Bantwal


ಸಹಯೋಗದಲ್ಲಿ ಅನಿತಾ ಪಿ.ಪೂಜಾರಿ ರಚಿತ `ಮೋಹನ ತರಂಗ' ಕೃತಿ ಬಿಡುಗಡೆ

ಮುಂಬಯಿ, ಡಿ.24: ಅನಿತಾ ಪಿ ಪೂಜಾರಿ ತಾಕೊಡೆ ಅವರು ಬರೆದಿರುವ ಐದನೆಯ ಕೃತಿ ಮೋಹನ ತರಂಗ ಕೃತಿ ಡಿ.30ರ ಸೋಮವಾರ ಸಾಯಂಕಾಲ 4.00 ಗಂಟೆಗೆ ಮೂಡುಬಿದಿರೆ ಇಲ್ಲಿನ ಸಮಾಜ ಮಂದಿರ ಸಭಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಮಾಜಿ ಸಚಿವ ಹಾಗೂ ಸಮಾಜ ಮಂದಿರ ಸಭಾ ಮೂಡುಬಿದಿರೆ ಇದರ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅವರ ಅಧ್ಯಕ್ಷತೆ, ಮುಖ್ಯ ಅತಿಥಿüಯಾಗಿ ಕರ್ನಾಟಕ ರಾಜ್ಯದ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಗೌರವ ಅತಿಥಿüಯಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಮಾಜಿ ಸದಸ್ಯೆ, ಉಡಲ್ ತುಳು ಮಾಸಿಕದ ಸಂಪಾದಕಿ ಜಯಂತಿ ಎಸ್.ಬಂಗೇರ ಆಗಮಿಸಲಿದ್ದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಇದರ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ ಕೃತಿ ಬಿಡುಗಡೆ ಗೊಳಿಸಲಿದ್ದಾರೆ.

ಕರ್ನಾಟಕ ಸರಕಾರದ ರಂಗ ಸಮಾಜ ಸದಸ್ಯ ಜೀವನ್ ರಾಂ ಸುಳ್ಯ ಶುಭಶಂಸÀನೆ ಗೈಯಲಿದ್ದು ಪ್ರಸಿದ್ಧ ಉರಗತಜ್ಞ ಸಾಹಿತಿ ಗುರುರಾಜ್ ಸನಿಲ್ ಕೃತಿ ಪರಿಚಯಿಸಲಿದ್ದಾರೆ. ಕರ್ನಾಟಕ ಸಂಘ ಮುಂಬಯಿ ಪ್ರಕಾಶನದ ಮೂಲಕ ಪ್ರಕಟಗೊಂಡ ಈ ಕೃತಿ, ಎಂ.ಎ ಪದವಿಗೆ ಡಾ| ಜಿ.ಎನ್ ಉಪಾಧ್ಯ ಅವರ ಮಾರ್ಗದರ್ಶನದಿಂದ ಸಿದ್ಧಪಡಿಸಿದ, ಮುಂಬಯಿಯ ಹೆಸರಾಂತ ರಂಗನಟ ಮೋಹನ್ ಮಾರ್ನಾಡ್ ಅವರ ಜೀವನ ಸಾಧನೆಯ ಹಿನ್ನೆಲೆಯಲ್ಲಿ ರಚಿಸಿದ ಸಂಪ್ರಬಂಧ ಇದಾಗಿದೆ.

ಮೂಡುಬಿದಿರೆ ಪ್ರೆಸ್‍ಕ್ಲಬ್‍ನ ಅಧ್ಯಕ್ಷ ವೇಣುಗೋಪಾಲ್, ಮೋಹನ್ ಮಾರ್ನಾಡ್ , ಅನಿತಾ ಪಿ.ತಾಕೊಡೆ ಉಪಸ್ಥಿತರಿದ್ದು, ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಕಾರ್ಯಕ್ರಮದ ನಿರ್ವಹಿಸಲಿದ್ದಾರೆ. ಸಂತ ಅಲೋಶಿಯಸ್ ಪ.ಪೂ ಕಾಲೇಜು, ಮಂಗಳೂರು ಇದರ ಉಪನ್ಯಾಸಕ ದೀವಿತ್ ಎಸ್. ಕೆ. ಪೆರಾಡಿ ಅವರು `ಏಕವ್ಯಕ್ತಿ ಯಕ್ಷ ಪ್ರಯೋಗ' ಪ್ರಸ್ತುತಪಡಿಸಲಿದ್ದಾರೆ ಎಂದು ಸುರೇಂದ್ರಕುಮಾರ್ ಮಾರ್ನಾಡ್ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘಟಕರು ಈ ಮೂಲಕ ವಿನಂತಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here