Saturday 10th, May 2025
canara news

ಕುಂದಾಪುರದಲ್ಲಿ ಕ್ರಿಸ್ಮಸ್ ಸಂಭ್ರಮ ‘ಕ್ರಿಸ್ಮಸ್ ಅಂದರೆ, ದೇವರು ಮಾನವನಾಗಿ ನಮ್ಮ ಜೊತೆ ಜೀವಿಸಲು ಬಂದದ್ದು ಫಾ|ವಿಜಯ್

Published On : 26 Dec 2019   |  Reported By : media release


ಕುಂದಾಪುರ, ಡಿ,25: ‘ಕ್ರಿಸ್ಮಸ್ ಎಂದರೆ ನಮಗೆ ಸಂತೋಷ, ಆನಂದ, ಗಮ್ಮತ್ತು ಮಾಡುವುದು ನಮ್ಮ ಇಂದಿನ ಆಚರಣೆಯಾಗಿದೆ. ಇಂತಹ ಆಚರಣೆ ಯೇಸು ಮೆಚ್ಚುವುದಿಲ್ಲಾ, ಕ್ರಿಸ್ಮಸ್ ಅಂದರೆ, ದೇವರು ಮಾನವನಾಗಿ ನಮ್ಮ ಜೊತೆ ಜೀವಿಸಲು ಬಂದದ್ದು, ಅದಕ್ಕಾಗಿ ಯೇಸುವಿಗೆ ಇಮಾನ್ಯೂವೆಲ್ ಅಂದು ಹೇಳುತ್ತಾರೆ. ಇಮಾನ್ಯೂವೆಲ್ ಅಂದರೆ ದೇವರು ನಮ್ಮ ಜೊತೆ ಇದ್ದಾರೆಂದು. ನಾವು ಗೋದಲಿ ಮಾಡಿ ಬಾಲ ಯೇಸುವಿನ ಮೂರ್ತಿ ಇಟ್ಟಕೂಡಲೆ ಅಲ್ಲಿ ಯೇಸು ಜೀವಿಸುವುದಿಲ್ಲಾ, ಯೇಸು ಯಾವುದೇ ದೊಡ್ಡ ಮಾಲ್‍ಗಳಲ್ಲಿ ಕಟ್ಟಡಗಳಲ್ಲಿ ಸಿಗುವುದಿಲ್ಲಾ, ಯೇಸು ಭಿಕ್ಷುಕನ ರೂಪದಲ್ಲಿ, ರೋಗಿಗಳಲ್ಲಿ, ಅನಾಥರಲ್ಲಿ, ಕಷ್ಟ ಪಡುವರಲ್ಲಿ ಕಾಣಸಿಗುತ್ತಾನೆ, ಅತೋರಬೇಕು, ಅವರಲ್ಲಿ ನಾವು ಕರುಣೆ ತೋರಬೇಕು, ಅವರಿಗೆ ನಮ್ಮ ಸಹಾಯಹಸ್ತ ನೀಡಬೇಕು, ನೊಂದವರಿಗೆ ಪ್ರೀತಿ ಸಾಂತ್ವಾನ ನೀಡಬೇಕು, ಹೀಗೆ ನಾವು ಪರಿವರ್ತನೆಗೊಳ್ಳ ಬೇಕು’ ಎಂದು ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ನುಡಿದರು . ಅವರು ಉಡುಪಿ ಧರ್ಮಪ್ರಾಂತ್ಯದ ಅತಿ ಹಿರಿಯ ಇಗರ್ಜಿ 450 ನೇ ಸಂಭ್ರಮದಲ್ಲಿರುವ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪ್ರವಚನ ನೀಡಿದರು.

ಪ್ರಾಂಶುಪಾಲ ಧರ್ಮಗುರು ವಂ| ಪ್ರವೀಣ್ ಅಮ್ರತ್ ಮಾರ್ಟಿಸ್ ಪ್ರಧಾನ ಯಾಜಕರಾಗಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು. ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಕ್ರಿಸ್ಮಸ್ ಸಂಭ್ರಮದ ದಿವ್ಯ ಬಲಿ ಪೂಜೆಯಲ್ಲಿ ಪಾಲುಗೊಂಡು ಕ್ರಿಸ್ಮಸ್ ಶುಭಾಷಯವನ್ನು ಕೋರಿದರು. ಬಲಿ ಪೂಜೆಯ ಮೊದಲು ಗಾಯನ ಮಂಡಳಿ ಕೆರೊಲ್ ಗೀತೆಗಳನ್ನು ಹಾಡಿತು.

ಪೂಜೆಯ ನಂತರ ಐ.ಸಿ.ವೈ.ಎಮ್ ಸಂಘಟನೆ ಚರ್ಚ್ ವಾಳೆಗಳ ಅದ್ರಷ್ಟ ಕುಟುಂಬಗಳ ಡ್ರಾ ವಿಜೇತರಿಗೆ, ಹೌಸಿ ಹೌಸಿ ಆಟದ ವಿಜೇತರಿಗೆ ಹಾಗೂ ಚರ್ಚ್ ಮಟ್ಟದಲ್ಲಿ ಗೋದಲಿಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಹಂಚಲಾಯಿತು. ಈ ಕ್ರಿಸ್ಮಸ್ ಹಬ್ಬದ ಬಲಿ ಪೂಜೆಯಲ್ಲಿ ಹಲವಾರು ಧರ್ಮ ಭಗಿನಿಯರು ಹಾಗೇ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here