ಯುವಜನತೆಯಿಂದ ಸಮುದಾಯದ ಸುಭದ್ರತೆ ಸಾಧ್ಯ : ಸುಂದರ್ ಜಿ.ಭಂಡಾರಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.25: ವಯಸ್ಸಿನ ಮಟ್ಟ ನೋಡುವುದಾದರೆ ಭಂಡಾರಿ ಸೇವಾ ಸಮಿತಿ ಸದ್ಯ ಅಜ್ಜನಾಗಿ ಬೆಳೆದಂತಿದೆÉ. 66 ವರ್ಷದ ಈ ಸಂಸ್ಥೆ ಬೆಳೆದು ಪ್ರತಿಷ್ಠಿತ, ಹೆಸರಾಂತ ಸಂಸ್ಥೆಯಾಗಿ ಮಾನ್ಯತೆಗೆ ಪಾತ್ರವಾಗಿರುವುದು ಅಭಿನಂದನೀಯ. ಆದರೆ ಮುನ್ನಡೆಸಿ ಬೆಳೆಸಲು ಇದೀಗ ಮೊಮ್ಮಕ್ಕಲೆÉೀ ಮಾಯವಾಗುತ್ತಿರುವುದು ಬೇಸರವೆಣಿಸುತ್ತಿದೆ. ಅಂದರೆ ಸಂಸ್ಥೆಯನ್ನು ಭಾವೀ ಜನಾಂಗಕ್ಕೆ ಮುನ್ನಡೆಸಲು ಯುವಜನತೆಯ ಅವಶ್ಯವಿದೆ. ಆರೋಗ್ಯ ಮತ್ತು ಶೈಕ್ಷಣಿಕ ಪೆÇ್ರೀತ್ಸಾಹಕ್ಕಾಗಿ ನಮ್ಮ ಹಿರಿಯರು ಈ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದು ಅವರ ದೂರದೃಷ್ಠಿತ್ವದ ಆರೋಗ್ಯನಿಧಿ ಮತ್ತು ವಿದ್ಯಾನಿಧಿಯನ್ನು ನಾವು ಸುಭದ್ರಗೊಳಿಸಿ ಯುವಜನತೆಯನ್ನು ಪ್ರೇರೆಪಿಸಬೇಕು. ಇವೆರÀಡ ಅಗತ್ಯಗಳನ್ನು ಮೊದಲಾಗಿ ನಾವು ರೂಪಿಸಬೇಕು. ಹಣದ ಕೊರತೆಯಿಂದ ನಮ್ಮವರು ಶಿಕ್ಷಣದಿಂದ ವಂಚಿತರಾಗಬಾರದು. ಆದುದರಿಂದ ಯುವಜನತೆಯೂ ನಮ್ಮದೇ ಆದ ವಂಶಪಾರಂಪರ್ಯ ಕುಲಕಸುಬನ್ನು ಅವಲಂಬಿಸಿ ಕುಲವೃತ್ತಿಗೆ ಒತ್ತುನೀಡಬೇಕು ಎಂದು ಭಂಡಾರಿ ಆ್ಯಂಡ್ ಭಂಡಾರಿ ಅಡ್ವಕೇಟ್ ಸೊಲಿಸೀಟರ್ಸ್‍ನ ಮುಖ್ಯಸ್ಥ ಮತ್ತು ಭಂಡಾರಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ನ್ಯಾಯವಾದಿ ಸುಂದರ್ ಜಿ.ಭಂಡಾರಿ ತಿಳಿಸಿದರು.
ಇಂದಿಲ್ಲಿ ಬುಧವಾರ ಮುಲುಂಡ್ ಪಶ್ಚಿಮದ ಶ್ರೀ ಕುಛ್ ದೇಶಿಯಾ ಸರಸ್ವತಿ ಸಂಸ್ಥಾನ್ ಟ್ರಸ್ಟ್ ಸಭಾಗೃಹ ದಲ್ಲಿ ಭಂಡಾರಿ ಸೇವಾ ಸಮಿತಿ ತನ್ನ 2019ನೇ ವಾರ್ಷಿಕ ಸಮ್ಮಿಲನ ಜರುಗಿಸಿದ್ದು ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ದೀಪ ಪ್ರಜಲಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಸುಂದರ್ ಭಂಡಾರಿ ಮಾತನಾಡಿದರು.
ಕ್ಯಾಬಿನೆಟ್ ಸಿಸ್ಟಮ್ಸ್ ಆ್ಯಂಡ್ ಕಂಟ್ರೋಲ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಮತ್ತು ಭಂಡಾರಿ ಸಮಿತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಪುತ್ತೂರು (ಪುಣೆ), ಹೆಸರಾಂತ ಸಮಾಜ ಸೇವಕ ಹೆಬ್ರಿ ರಮೇಶ್ ಭಂಡಾರಿ (ಕಲ್ಯಾಣ್), ಕರ್ನಾಟಕ ಬ್ಯಾಂಕ್‍ನ ಹಿರಿಯ ಪ್ರಬಂಧಕ ಸದಾನಂದ ಕುಮಾರ್ ಬೆಂಗಳೂರು ಮತ್ತು ಚಲನಚಿತ್ರ ನಟ ಸೌರಭ್ ಎಸ್.ಭಂಡಾರಿ ಕಡಂದಲೆ ಗೌರವ ಅತಿಥಿüಗಳಾಗಿ, ಸಮಿತಿಯ ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್.ಭಂಡಾರಿ (ಸಲಹಾ ಸಮಿತಿ ಕಾರ್ಯಾಧ್ಯಕ್ಷ), ಗೌರವ ಕೋಶಾಧಿಕಾರಿ ಕರುಣಾಕರ ಎಸ್.ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಆರ್.ಭಂಡಾರಿ ವೇದಿಕೆಯಲ್ಲಿದ್ದು ಶಿವಾ'ಸ್ ಹೇರ್ ಡಿಝೈನರ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಅವರ `ಸ್ಟೈಲಿಂಗ್ ಅಟ್ ದ ಟಾಪ್' ಕನ್ನಡ ಕೃತಿಯನ್ನು ಸುಂದರ್ ಭಂಡಾರಿ ಬಿಡುಗಡೆ ಗೊಳಿಸಿದರು.
ನಮ್ಮವರ್ಯಾರೂ ಶಿಕ್ಷಣ ವಂಚಿತರಾಗಬಾರದು. ಸುಶಿಕ್ಷಿತರಾದ ಬಳಿಕ ನೌಕರಿ ಹುಡುಕಲು ಪ್ರಯತ್ನಿಸದೆ ಸ್ವಯಂ ಉದ್ಯಮಿಗಳಾಗುವ ಪ್ರಯತ್ನ ಮಾಡಿ. ಎಂದೂ ಕ್ಷಣಾರ್ಥದ ಲಾಭಕ್ಕೆ ಮರುಳಾಗದೆ ಹೆಜ್ಜೆಹೆಜ್ಜೆಯ ಸಾಧನೆಯ ಮೂಲಕ ಉದ್ಯಮಶೀಲರಾಗಿ ಬದುಕು ರೂಪಿಸಿರಿ ಎಂದು ಬಾಲಕೃಷ್ಣ ಪುಣೆ ಸಲಹಿದರು.
ಸ್ವಸಮಾಜದ ಸಂಸ್ಥೆಗಳ ಸಹಯೋಗದಿಂದ ಇಂದು ಭಂಡಾರಿ ಸಮಾಜ ಈ ಮಟ್ಟಕ್ಕೆ ಬೆಳೆದಿದೆ. ಎಲ್ಲರೂ ಇಂತಹ ಸಂಸ್ಥೆಗಳಲ್ಲಿ ಸಕ್ರೀಯರಾಗಿ ತಮ್ಮಿಂದ ಆಗುವಷ್ಟು ಸಹಕಾರ ನೀಡಬೇಕು. ನಮ್ಮದು ಚಿಕ್ಕ ಸಮುದಾಯವಾದರೂ ಸಾಂಘಿಕತೆಯಲ್ಲಿ ಬಲಯುತವಾಗಿದೆ ಎಂದು ಸದಾನಂದಕುಮಾರ್ ಅಭಿಪ್ರಾಯಪಟ್ಟರು.
ನಟ ಸೌರಭ್ ಮಾತನಾಡಿ ನಾವೆಲ್ಲರೂ ಸಮುದಾಯದ ಏಕತೆಯೊಂದಿಗೆ ಇಲ್ಲಿ ಸೇರಿದ್ದೇವೆ. ಆದರೆ ನಮ್ಮ ಮಕ್ಕಳ, ಯುವಜನತೆಯ ಸಂಖ್ಯೆ ಸಾಲದು. ಇನ್ನಾದರೂ ಆದಷ್ಟು ಮಕ್ಕಳು, ಯುವ ಜನತೆಯನ್ನು ಒಗ್ಗೂಡಿಸುವ ಪ್ರಯತ್ನ ನಡೆಯಬೇಕು. ನಮ್ಮೆಲ್ಲರಿಗೂ ಸ್ವಜಾತಿಯ ಮೇಲಿನ ಅಭಿಮಾನ ಇರಬೇಕು. ಜನ ಸಂಪಾದನೆಯೇ ಸಮಾಜದ ಇತಿಹಾಸ ಸೃಷ್ಟಿಸಲು ಮುಖ್ಯವಾಗಿದೆ. ಸ್ವಸಮಾಜಕ್ಕೆ ನಾವು ಎಷ್ಟು ಕೊಡುತ್ತೇವೆಯೇ ಅದರಿಂದ ಸಮಾಜ ಬಲಯುತವಾಗಿ ಯೌವನತ್ವ ಕಾಣುವುದು ಎಂದರು.
ಸಂಸ್ಥೆಗಳ ಸಮುದಾಯದ ಅಸ್ಮಿತೆಯನ್ನು ಪ್ರದರ್ಶಿಸುವ ಕೇಂದ್ರಗಳಾಗಿದ್ದು ಸಂಸ್ಥೆಗಳಲ್ಲಿ ಸಕ್ರೀಯರಾದಾಗ ನಮ್ಮ ಸಮಾಜವು ತನ್ನಷ್ಟಕ್ಕೆನೇ ಬೆಳೆಯುತ್ತದೆ. ಈ ಮೂಲಕ ನಮ್ಮತನ, ನಮ್ಮ ಆಚಾರ ವಿಚಾರ, ಸಂಸ್ಕೃತಿಗಳ ಜೊತೆಗೆ ನಮ್ಮಲ್ಲಿನ ಪ್ರತಿಭೆಗಳು ಗುರುತಿಸಲ್ಪಡುತ್ತವೆ. ಆದುದರಿಂದ ಎಲ್ಲರೂ ಸಹೋದರತ್ವದ ಬಾಂಧವ್ಯವನ್ನು ಮೈಗೂಡಿಸಿ ಸಂಂಘಿಕತೆಯಿಂದ ಮುನ್ನಡೆಯೋಣ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಆರ್.ಎಂ ಭಂಡಾರಿ ಕರೆಯಿತ್ತರು.
ಇದೇ ಶುಭಾವಸರದಲ್ಲಿ ಯುವ ವಿಭಾಗದ ಮುಖ್ಯಸ್ಥ ನಿಶಾಂತ್ ಹರಿ ಭಂಡಾರಿ ರಚಿಸಿದ ಭಂಡಾರಿ ಸೇವಾ ಸಮಿತಿ ಮುಂಬಯಿ ವೆಬ್‍ಸೈಟ್ ಮತ್ತು ಭಂಡಾರಿ ಸೇವಾ ಸಮಿತಿ ಮುಂಬಯಿ ಯುವ ವಿಭಾಗಕ್ಕೆ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಸ್ವಸಮಾಜದ ಮಹಾನೀಯರಾದ ಡಾ| ಶಿವರಾಮ ಕೆ.ಭಂಡಾರಿ ಮತ್ತು ಅನುಶ್ರೀ ಶಿವರಾಮ್, ಜಯ ಪಿ.ಭಂಡಾರಿ ಮತ್ತು ಶಶಿ ಭಂಡಾರಿ ದಹಿಸರ್ ದಂಪತಿಗಳನ್ನು, ಕೇಶವ ಟಿ.ಭಂಡಾರಿ (ಮಾತೃಶ್ರೀ ಕಿಟ್ಟಿ ಭಂಡಾರಿ ಜೊತೆ) ಅತಿಥಿüಗಳು ಸನ್ಮಾನಿಸಿದರು ಅಂತೆಯೇ ಸ್ಪರ್ಧಾ ವಿಜೇತರಿಗೆ ಬಹುಮಾನ, ಪ್ರತಿಭಾ ಪುರಸ್ಕಾರಗಳನ್ನು ಹಾಗೂ ದಿ| ಮಹಾಲಿಂಗ ಭಂಡಾರಿ ಮತ್ತು ದಿ| ಸುಶೀಲಾ ಅಚಣ್ಣ ಭಂಡಾರಿ ಸ್ಮಾರಣಾರ್ಥ ಸುಲೋಚನಾ ಬಾಲಕೃಷ್ಣ ಪ್ರಾಯೋಜಕತ್ವದ ವಿದ್ಯಾಥಿರ್ü ವೇತನವನ್ನು ಪ್ರದಾನಿಸಿ ಅಭಿನಂದಿಸಿದರು.
ಸಮಿತಿಯ ಉಪಾಧ್ಯಕ್ಷ ಪುರುಷೋತ್ತಮ ಜಿ.ಭಂಡಾರಿ, ಜೊತೆ ಕಾರ್ಯದರ್ಶಿಗಳಾದ ನ್ಯಾ| ಶಾಂತರಾಜ್ ಡಿ.ಭಂಡಾ ರಿ ಮತ್ತು ರಂಜಿತ್ ಎಸ್.ಭಂಡಾರಿ, ಜೊತೆ ಕೋಶಾಧಿಕಾರಿಗಳಾದ ಪ್ರಕಾಶ್ ಕೆ.ಭಂಡಾರಿ ಮತ್ತು ಸುಭಾಷ್ ಜಿ.ಭಂಡಾರಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಪಿ.ಭಂಡಾರಿ, ಮಾಜಿ ಕಾರ್ಯಾಧ್ಯಕ್ಷೆಯರಾದ ರುಕ್ಮಿಣಿ ಭಂಡಾರಿ, ಲಲಿತಾ ವಿ.ಭಂಡಾರಿ, ಶೋಭಾ ಸುರೇಶ್ ಭಂ ಡಾರಿ, ವಿಶ್ವನಾಥ ಭಂಡಾರಿ, ಗಂಗಾಧರ ಭಂಡಾ ರಿ ದುಬಾಯಿ, ನಾರಾಯಣ ಭಂಡಾರಿ ಥಾಣೆ, ರಾಕೇಶ್ ಭಂಡಾರಿ, ಸಂತೋಷ್ ಭಂಡಾರಿ, ಶಾಲಿನಿ ರಮೇಶ್ ಭಂಡಾರಿ, ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರನೇಕರು, ಅಪಾರ ಸಂಖ್ಯೆಯ ಭಂಡಾರಿ ಬಾಂಧವರು ಹಾಜರಿದ್ದು, ಶ್ರೀ ಕಚ್ಚೂರು ನಾಗೇಶ್ವರ ದೇವರನ್ನು ಸ್ತುತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸದಸ್ಯರ ಭಜನೆಯೊಂದಿಗೆ ದಿನಪೂರ್ತಿ ಯಾಗಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಸಮಿತಿಯ ಪರಿವಾರವು ವೈವಿಧ್ಯಮಯ ನೃತ್ಯಾವಳಿ, ಮನೋರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಸಚಿನ್ ಭಂಡಾರಿ ತನ್ನ ರಾಷ್ಟ್ರದ ತಂಪಾದ ನಾಡು `ನಮ್ಮ ಊರು' ಕಾರ್ಯಕ್ರಮ ಸಾದರ ಪಡಿಸಿದÀರು. ಜಯಶೀಲ ಯು.ಭಂಡಾರಿ ಬಳಗ `ಸುಂದರ ರಾವಣ' ಜಾನಪದ ಯಕ್ಷಗಾನ ಪ್ರದರ್ಶಿಸಿತು.
ಕು| ಗಾಯತ್ರಿ ಎನ್.ಭಂಡಾರಿ ಪ್ರಾರ್ಥನೆಯನ್ನಾಡಿದರು. ಸಮಿತಿಯ ಉಪಾಧ್ಯಕ್ಷ ಪ್ರಭಾಕರ್ ಪಿ.ಭಂಡಾರಿ ಸ್ವಾಗತಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ, ಪಲ್ಲವಿ ರಂಜಿತ್ ಭಂಡಾರಿ, ಅತಿಥಿüಗಳನ್ನು ಮತ್ತು ಶಿಲ್ಪಾ ಭಂಡಾರಿ, ಕಾರ್ತಿಕ್ ಭಂಡಾರಿ ಸನ್ಮಾನಿತರನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನೀಡಿ ಗೌರವಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಶಶಿಧರ ಡಿ.ಭಂಡಾರಿ ಪ್ರಸ್ತಾವಿಕ ನುಡಿಗಳನ್ನಾಡಿ, ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕು| ಕ್ಷಮಾ ಆರ್.ಭಂಡಾರಿ, ಕು| ಶ್ರೇಯಲ್ ಯು.ಭಂಡಾರಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಸರಿತಾ ಭಂಡಾರಿ ವಂದಿಸಿದರು.