Saturday 10th, May 2025
canara news

ಬಿಲ್ಲವರ `ಕೋಟಿ ಚೆನ್ನಯ 2019' ಕ್ರೀಡೋತ್ಸವ ಸಮಾರೋಪ-ಬಹುಮಾನ ವಿತರಣೆ

Published On : 30 Dec 2019


ಅವಕಾಶ ಸದುಪಯೋಗಯಿಂದ ಪ್ರತಿಭಾನ್ವೇಷನೆ ಸಾಧ್ಯ : ಗಣೇಶ್ ಪೂಜಾರಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.26: ಬಿಲ್ಲವರ ಅಸೋಸಿಯೇಶನ್ ನಾಟಕೋತ್ಸವ, ಕ್ರೀಡೋತ್ಸವವನ್ನು ಹಮ್ಮಿಕೊಂಡು ಸಮಾಜದಲ್ಲಿನ ಬಚ್ಚಿಡಲ್ಪಟ್ಟ ಕಲೆ, ಕ್ರೀಡಾ ಪ್ರತಿಭೆಗಳ ಪ್ರತಿಭಾನ್ವೇಷನೆ ಕೆಲಸ ಮಾಡುತ್ತಾ ಪೆÇ್ರೀತ್ಸಾಹಿಸುತ್ತಿದೆ. ನಮ್ಮಲ್ಲಿನ ಕ್ರೀಡಾ ಪ್ರತಿಭೆ ಪ್ರಕಾಶಮಾನಿಸಲು ಅಸೋಸಿಯೇಶನ್ ಕೋಟಿ ಚೆನ್ನಯ ಕ್ರೀಡಾಕೂಟದ ಮುಖೇನ ಅವಕಾಶ ಒದಗಿಸುತ್ತಿರುವುದು ಅಭಿನಂದನೀಯ. ಸಮಾಜದ ಎಲ್ಲ ಸ್ತರದ ಪ್ರತಿಭೆಗಳೂ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸÀಬೇಕು. ಇಂತಹ ಅವಕಾಶಗಳ ಸದುಪಯೋಗ ಪಡಕೊಳ್ಳಬೇಕು. ಪಾಲ್ಗೊಳ್ಳುವಿಕೆಯಿಂದಲೇ ಉತ್ತಮ ಕ್ರೀಡಾ ಪಟುಗಳಾಗಿ ಬೆಳೆದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯವಾಗುತ್ತದೆ ಎಂದು ಏಷ್ಯಾಟಿಕ್ ಕ್ರೇನ್ ಸರ್ವೀಸಸ್ ಸಂಸ್ಥೆಯ ಮಾಲೀಕ, ಥಾಣೆ ಅಲ್ಲಿನ ಹೆಸರಾಂತ ಸಮಾಜ ಸೇವಕ ಗಣೇಶ್ ಪೂಜಾರಿ ಕಟ್ಟೀಂಗೇರಿ (ಪಡುಬೆಳ್ಳೆ) ಅಭಿಪ್ರಾಯ ಪಟ್ಟರು.

 

 

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವಾಭ್ಯದಯ ಸಮಿತಿ ಆಯೋಜಿಸಿದ್ದ ವಾರ್ಷಿಕ `ಕೋಟಿ ಚೆನ್ನಯ-2019' ಕ್ರೀಡಾಕೂಟದÀ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ಸ್ವರ್ಧಾ ವಿಜೇತರಿಗೆ ಪಾರಿತೋಷಕಗಳನ್ನು ಪ್ರದಾನಿಸಿ ಕ್ರೀಡಾಭಿಮಾನಿಗಳನ್ನು ಉದ್ದೇಶಿಸಿ ಗಣೇಶ್ ಪೂಜಾರಿ ಮಾತನಾಡಿದರು.

ಮರೇನ್‍ಲೈನ್ಸ್ ಪಶ್ಚಿಮದಲ್ಲಿನ ಮುಂಬಯಿ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿದ ಕ್ರೀಡೋತ್ಸವ ಸಮಾರೋಪದಲ್ಲಿ ಏಷ್ಯಾಟಿಕ್ ಕ್ರೇನ್ ಸರ್ವೀಸಸ್ ಸಂಸ್ಥೆಯ ಮಾಲೀಕ ಗಣೇಶ್ ಪೂಜಾರಿ, ಸಮಾಜ ಸೇವಕ, ಕೊಡುಗೈದಾನಿಗಳಾದ ದಯಾನಂದ ವೈ. ಪೂಜಾರಿ ಇನ್ನ, ಹರೀಶ್ ಡಿ.ಸಾಲ್ಯಾನ್ ಬಜೆಗೋಳಿ, ಭಾರತ್ ಬ್ಯಾಂಕ್‍ನ ನಿರ್ದೇಶಕ ಗಂಗಾಧರ್ ಜೆ.ಪೂಜಾರಿ, ಅಂತರಾಷ್ಟ್ರೀಯ ಕ್ರೀಡಾಪಟು ದಯಾನಂದ್ ಕುಮಾರ್, ಸಾಯಿಕೇರ್ ಲಾಜಿಸ್ಟಿಕ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಸುರೇಂದ್ರ ಎ.ಪೂಜಾರಿ ಗೌರವ ಅತಿಥಿüಗಳಾಗಿದ್ದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಹರೀಶ್ ಜಿ.ಅವಿೂನ್, ದಯಾನಂದ್ ಆರ್. ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ಸಂಯೋಜಕ ಸದಾಶಿವ ಎ.ಕರ್ಕೇರ ವೇದಿಕೆಯಲ್ಲಿ ಆಸೀನರಾಗಿದ್ದು ಅತಿಥಿüಗಳು ಸ್ವರ್ಧಾಳುಗಳಿಗೆ ಪಾರಿತೋಷಕಗಳನ್ನು ವಿತರಿಸಿ ಅಭಿನಂದಿಸಿದರು.

ದಯಾನಂದ್ ಕುಮಾರ್ ಮಾತನಾಡಿ ಸಮಾಜದ ಮಕ್ಕಳು ಕೇವಲ ಸ್ವಸಮಾಜದ ಕ್ರೀಡಾಕೂಟದಲ್ಲಿ ಭಾಗವಹಿಸಿದರೆ ಸಾಲದು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲೂ ಸಕ್ರೀಯರಾಗಬೇಕು. ಕ್ರೀಡೆಯಲ್ಲಿ ಸಾಧಕರೆಣಿಸಲು ಕಠಿಣ ಶ್ರಮ, ಅವಿರತ ಅಭ್ಯಾಸ ಅಗತ್ಯವಾಗಿದ್ದು, ಸತತ ಅಭ್ಯಾಸವಿಲ್ಲದೆ ಕ್ರೀಡೆಯಲ್ಲಿ ಸಾಧನೆಗೈಯಲು ಅಸಾಧ್ಯ. ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿದರೆ ಶಿಕ್ಷಣ ವಂಚಿತರಾಗುತ್ತಾರೆ ಎಂಬ ಪಾಲಕರ ತಪ್ಪು ಕಲ್ಪನೆ ಸಲ್ಲದು. ಕ್ರೀಡೆಯಿಂದ ಮಕ್ಕಳ ವಿದ್ಯಾರ್ಜನೆಯಲ್ಲಿ ಯಾವುದೇ ಅಡ್ಡಿಯಾಗದು ಬದಲಾಗಿ ಮಕ್ಕಳ ಭವಿಷ್ಯ ರೂಪಿಸಲು ಕ್ರೀಡೆ ಪೂರಕವಾಗುವುದು ಎಂದರು.

ಬಿಲ್ಲವ ಸಮಾಜದ ಸರ್ವೋನ್ನತಿಯ ಸರದಾರ ಜಯ ಸಿ.ಸುವರ್ಣ ಅವರ ಮಾರ್ಗದರ್ಶನದಲ್ಲಿ ವರ್ಷಂಪ್ರತಿ ನಡೆಸಲ್ಪಡುವ ಕ್ರೀಡಾಕೂಟ ಸಮುದಾಯದಲ್ಲಿನ ಕ್ರೀಡಾ ಪ್ರತಿಭೆಗಳನ್ನು ಪ್ರಕಾಶಿಸುವಲ್ಲಿ ಯಶಕಂಡಿದೆ. ಸಮಾಜ ಬಾಂಧವರ ಸಾಂಘಿಕತೆಗೂ ಪ್ರೇರಕಶಕ್ತಿಯಾಗಿದೆ. ಪಡುಬೆಳ್ಳೆಯಲ್ಲಿ ಅಸೋಸಿಯೇಶನ್ ಪ್ರಾಯೋಜಿತ ಶ್ರೀ ನಾರಾಯಣ ಗುರು ಪ್ರೌಢ ಶಾಲಾ 15 ಎಕ್ರೆ ಜಾಗವನ್ನು ಕ್ರೀಡಾಂಗಣವಾಗಿ ರೂಪಿಸಿ ಅಲ್ಲಿಯೂ ಕೋಟಿ-ಚೆನ್ನಯ ಕ್ರೀಡಾಕೂಟ ಆಯೋಜಿಸುವ ಯೋಜನೆ, ಚಿಂತನೆ ನಡೆಸಿದ್ದೇವೆ. ಅಸೋಸಿಯೇಶನ್ ಹಮ್ಮಿಕೊಳ್ಳುವ ಎಲ್ಲಾ ಸಮಾಜಪರ ಚಟುವಟಿಕೆಗಳಲ್ಲಿ ಸಹಕರಿಸಿ ಸಮುದಾಯವನ್ನು ಮತ್ತಷ್ಟು ಬಲಿಷ್ಠಗೊಳಿಸುವಲ್ಲಿ ಸಮಾಜ ಬಾಂಧವರೆಲ್ಲರೂ ಕೈ ಜೋಡಿಸಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಚಂದ್ರಶೇಖರ ಪೂಜಾರಿ ಕರೆಯಿತ್ತರು.

ಅತಿಥಿüಗಳನ್ನು, ಕ್ರೀಡಾಪಟುಗಳಾದ ಹರಿಶ್ಚಂದ್ರ ಕೆ.ಪೂಜಾರಿ, ಶರತ್ ಪೂಜಾರಿ ಬ್ರಹ್ಮವಾರ, ಅಂಜಲಿ ಎಂ. ಕೋಟ್ಯಾನ್, ಸುಶಾಂತ್ ಪೂಜಾರಿ, ಪವನ್ ಅವಿೂನ್, ಸಾಯಿ ನಿಶಾಂತ್ ಸಾಲಿಯಾನ್, ಕ್ರೀಡೋತ್ಸವದ ಪ್ರಾಯೋಜಕರು, ಪೆÇ್ರೀತ್ಸಹಕರು, ಸಂಘಟಕರು ಮತ್ತು ಸಂಯೋಜಕರಿಗೆ ಅಧ್ಯಕ್ಷರು ಸ್ಮರಣಿಗಳನ್ನಿತ್ತು ಗೌರವಿಸಿದರು.

ಅಸೋಸಿಯೇಶನ್‍ನ ಕೇಂದ್ರ ಸಮಿತಿ, ಮಹಿಳಾ ವಿಭಾಗ, ಯುವಾಭ್ಯುದಯ, ಸೇವಾದಳ, ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ, ಭಾರತ್ ಬ್ಯಾಂಕ್, ಅಕ್ಷಯ ಮಾಸಿಕ, ಗುರು ನಾರಾಯಣ ರಾತ್ರಿ ಶಾಲಾ ವೃಂದ ಸೇರಿದಂತೆ ಅಸೋಸಿಯೇಶನ್‍ನ ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಸದಸ್ಯರನೇಕರು ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದು ಅಂತರಾಷ್ಟ್ರೀಯ ಕ್ರೀಡಾ ಸಂಯೋಜಕರಾದ ದಯಾನಂದ್ ಕುಮಾರ್, ವಿಜಯ್ ಶೆಟ್ಟಿ ಮತ್ತು ತಂಡವು ಸ್ಪರ್ಧೆಗಳ ನಿರ್ಣಾಯಕರಾಗಿದ್ದು, ಅನುಷಾ ಪೂಜಾರಿ ಗೋರೆಗಾಂ, ರಿಖಿತಾ ಜಿತೇಶ್ ಅವಿೂನ್, ಶ್ವೇತಾ ಸುವರ್ಣ, ಅನುಷಾ ಪೂಜಾರಿ ವಿಕ್ರೋಲಿ ಕ್ರೀಡಾ ನಿರ್ವಹಣೆಗೈದರು.

ಯುವಾಭ್ಯದಯದ ಹರೀಶ್ ಜಿ.ಸಾಲ್ಯಾನ್, ರಜಿತ್ ಎಲ್.ಸುವರ್ಣ, ಅಶೋಕ್ ಕೆ.ಸಸಿಹಿತ್ಲು, ಅಕ್ಷಯ್ ಎ. ಪೂಜಾರಿ, ಬಬಿತಾ ಜೆ.ಕೋಟ್ಯಾನ್, ಸಂತೋಷ್ ಪೂಜಾರಿ, ಸಂಜೀವ ಪೂಜಾರಿ ತೋನ್ಸೆ, ಗಣೇಶ್ ಕೆ.ಅಂಚನ್, ನವೀನ್ ಎಲ್.ಬಂಗೇರ, ರೀತಮ್ ಸಾಲ್ಯಾನ್, ವಿನಯ್ ಅಂಚನ್, ಗಾಯತ್ರಿ ಅಂಚನ್, ಆದಿತ್ಯ ಬಂಗೇರ, ಶ್ವೇತಾ ಸುವರ್ಣ, ನ್ಯಾ| ಸೌಮ್ಯ ಪೂಜಾರಿ, ಗಣೇಶ್ ಹೆಚ್.ಬಂಗೇರಾ ಸಹಯೋಗದಿಂದ ಜರುಗಿದ ಕೋಟಿ-ಚೆನ್ನಯ 2019ರ ಕ್ರೀಡಾಕೂಟದÀ ಚಾಂಪಿಯನ್‍ಶಿಪ್ ಪ್ರಥಮ ಟ್ರೋಫಿಯನ್ನು ಬೋರಿವಿಲಿ-ದಹಿಸರ್ ಸಮಿತಿ ತನ್ನದಾಗಿಸಿದ್ದು ವಸಾಯಿ ಸಮಿತಿ ದ್ವಿತೀಯ ಸ್ಥಾನಕ್ಕೆ ಪಾತ್ರವಾಯಿತು. ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ ಸ್ವಾಗತಿಸಿ ಪ್ರಸ್ತಾವನೆಗೈದರು. ರವಿ ಸನಿಲ್ ಡೊಂಬಿವಿಲಿ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಎ.ಕರ್ಕೇರ ಉಪಕಾರ ಸ್ಮರಿಸಿದರು. ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಕ್ರೀಡೋತ್ಸವ ಸಮಾಪನ ಗೊಂಡಿತು.

 

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here