ಮುಂಬಯಿ (ಮಂಗಳೂರು), ಡಿ.31: ನಗರದ ನೆಹರು ಮೈದಾನದಲ್ಲಿ ಜ.19ರಂದು ಆಯೋಜಿಸಿರುವ ಸಂಗೀತ ಲೋಕದ ದಂತಕತೆ ಎಸ್.ಪಿ ಬಾಲಸುಬ್ರಮಣ್ಯಂ ಅವರ ಸಂಗೀತ ಸಂಜೆಯ ಲೈವ್ ಕಾರ್ಯಕ್ರಮದಲ್ಲಿ ಹಾಡಲು ಸ್ಥಳೀಯ ಪ್ರತಿಭೆಗಳ ಧ್ವನಿಪರೀಕ್ಷೆ (ಆಡಿಶನ್) ನಗರದ ಪುರಭವನದಲ್ಲಿ ಶನಿವಾರ ನಡೆಯಿತು.
ಜ.19ರಂದು ಸಂಗೀತ ಸಂಜೆ ಮಂಗಳೂರು ನೆಹರೂ ಮೈದಾನದಲ್ಲಿ ಜ.19ರಂದು ಸಾಯಂಕಾಲ 6.00 ರಿಂದ ಎಸ್.ಪಿ ಬಾಲಸುಬ್ರಮಣ್ಯಂ ಸಂಗೀತ ಸಂಜೆ ನಡೆಯಲಿದೆ. ಎಸ್‍ಪಿಬಿ ಪಂಚ ಭಾಷೆಗಳಲ್ಲಿ ಹಾಡಲಿದ್ದು, ಗಾಯಕಿ ದಿವ್ಯಾ ರಾಘವಾನ್ ಹಾಡುಗಳಲ್ಲಿ ಸಾಥ್ ನೀಡಲಿದ್ದಾರೆ. ಕರ್ನಾಟಕ ನೆರೆ ಸಂತ್ರಸ್ತರ ಸಹಾಯಾರ್ಥ ನಡೆಯಲಿರುವ ಸಂಗೀತ ಸಂಜೆಯ ಧ್ವನಿ ಪರೀಕ್ಷೆಯ ಕಾರ್ಯಕ್ರಮವನ್ನು ಎಸ್.ಕೆ ಮುಸ್ಸಿಪ್ ಎಂಪ್ಲಾಯ್ಸ್ ಯೂನಿಯನ್ ಮತ್ತು ಸ್ವಾಮಿ ಎಂಟರ್‍ಪ್ರೈಸಸ್ ಜಂಟಿಯಾಗಿ ಆಯೋಜಿಸಿದ್ದೆವು.
ಮಂಗಳೂರು ವಿಭಾಗದ ಲೋಕಾಯುಕ್ತ ಎಸ್ಪಿ ಭಾಸ್ಕರ್ ದೀಪ ಬೆಳಗಿಸಿ ಉದ್ಘಾಟಿಸಿ ಎಸ್.ಪಿ ಬಾಲಸುಬ್ಯಮಣ್ಯಂ ಅವರು ಸಂಗೀತ ಕ್ಷೇತ್ರದ ಮೇರು ವ್ಯಕ್ತಿ ಅವರ ತಂಡದ ಸಂಗೀತ ಸಂಜೆ ಹಲವು ವರ್ಷಗಳ ನಂತರ ಮಂಗಳೂರಿನ ನೆಹರೂ ಮೈದಾನದಲ್ಲಿ ಮತ್ತೆ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಈ ಸಮಾರಂಭ ಅತ್ಯಂತ ಯಶಸ್ವಿಯಾಗಲಿ ಎಂದು ಶುಭಕೋರಿದರು. ಪೆÇೀಲೀಸ್ ಇನ್ಸ್‍ಪೆಕ್ಟರ್ ಶ್ರೀಮತಿ ಭಾರತಿಯವರು ಮಾತನಾಡಿ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡವರು ಕ್ರೈಂ ಚಟುವಟಿಕೆಗಳಿಂದ ದೂರವಿರುತ್ತಾರೆ. ಹಾಗಾಗಿ ನಾವು ಮಕ್ಕಳಿಗೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿ ಸಬೇಕು ಎಂದರು.
ಹೃದಯವಾಹಿನಿ ಕರ್ನಾಟಕ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್ ಮಾತನಾಡಿ ಎಸ್ಪಿ ಬಿ ಸಂಗೀತ ಸಂಜೆಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿರುವುದು ಇದೇ ಮೊದಲು ಈ ಸುಸಂದರ್ಭವನ್ನು ಉದಯೋನ್ಮುಖ ಸಂಗೀತಗಾರರು ಸಮರ್ಥವಾಗಿ ಬಳಿಸಿಕೊಳ್ಳಬೇಕು ಎಂದರು.
ಎಸ್.ಕೆ ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಬಾಲು, ಮಂಗಳೂರು ಮಹಾನಗರ ಪಾಲಿಕೆ ಸಹಾಯಕ ನಗರ ಯೋಜನಾಧಿಕಾರಿ ಶಿವರಾಜ್ ಪಾಂಡೇಶ್ವರ, ಸಹಾಯಕ ನಗರ ಯೋಜನಾಧಿಕಾರಿ ದಿಲೀಪ್ ಗಧ್ಯಾಳ್, ದಕ್ಷಿಣ ಕನ್ನಡ ಕಲಾವಿದರ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ಒಮೆಗಾ ಆಸ್ಪತ್ರೆ ಆಡಳಿತಾಧಿಕಾರಿ ಎಸ್.ಎಲ್ ಭಾರದ್ವಜ್ ಮತ್ತು ಗೋ.ನಾ ಸ್ವಾಮಿ ಅತಿಥಿüಗಳಾಗಿದ್ದು ಶುಭ ಹಾರೈಸಿದರು.