ವಿದ್ಯಾಥಿರ್üಗಳಿಗೆ ರಸಪ್ರಶ್ನೆ-ನೃತ್ಯ-ಭಾಷಣ-ಕವನ ರಚನೆಗಳ ಕಮ್ಮಟ
ಮುಂಬಯಿ, ಡಿ.31: ಚೆಂಬೂರು ಕರ್ನಾಟಕ ಸಂಘ ಸಂಚಾಲಿತ ಚೆಂಬೂರು ಕರ್ನಾಟಕ ಶಾಲೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾಥಿರ್üಗಳಿಗಾಗಿ ಮೂರು ದಿನಗಳ ನಾಗರಿಕ ಶಿಬಿರವನ್ನು ಕಳೆದ ಡಿ.26-28ರ ಮೂರು ದಿನಗಳಲ್ಲಿ ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು. ಸಂಘದ ಅಧ್ಯಕ್ಷ ಅಡ್ವೋಕೇಟ್ ಎಚ್.ಕೆ ಸುಧಾಕರ ಹಾಗೂ ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಶಿಬಿರ ಉದ್ಘಾಟಿಸಿದರು.
ನಿವೃತ್ತ ಶಿಕ್ಷಕ ಸದಾಶಿವ ಶೆಟ್ಟಿ ಅವರು ಶಿಬಿರದ ಮುಖ್ಯ ಉದ್ದೇಶ ಹಾಗೂ ಶಿಬಿರದಿಂದ ದೊರೆಯುವ ಲಾಭವನ್ನು ವಿದ್ಯಾಥಿರ್üಗಳೆಲ್ಲರೂ ಪಡೆದು ಕೊಳ್ಳಬೇಕೆಂಬ ಅಭಿಪ್ರಾಯ ನೀಡಿದರು.
ಶಿಬಿರದ ಮೊದಲನೇ ದಿನ ಶಿಕ್ಷಕರು ವಿದ್ಯಾಥಿರ್üಗಳಿಗೆ ರಸಪ್ರಶ್ನೆ, ನಿರುಪಯುಕ್ತ ವಸ್ತುಗಳಿಂದ ಉಪಯುಕ್ತ ವಸ್ತುಗಳ ತಯಾರಿಕೆ ಮುಂತಾದ ಚಟುವಟಿಕೆಗಳನ್ನು ಮಾಡಿದರು. ನಿವೃತ್ತ ಶಿಕ್ಷಕಿ ಪ್ರತಿಭಾ ವೈದ್ಯ ಅವರು ವಿದ್ಯಾಥಿರ್üಗಳಿಗೆ ಒಂದೊಂದು ವಿಷಯಗಳನ್ನು ನೀಡಿ, ಆ ವಿಷಯಕ್ಕೆ ಸಂಬಂದಪಟ್ಟ ನೃತ್ಯ, ಭಾಷಣ, ಕವನ ರಚನೆ ಮುಂತಾದ ಚಟುವಟಿಕೆಗಳನ್ನು ಮಾಡಿಸಿ ವಿದ್ಯಾಥಿರ್üಗಳನ್ನು ರಂಜಿಸಿದರು.
ಶಿಬಿರದಲ್ಲಿ ವಿಶೇಷವೆಂದರೆ ಮಹಾರಾಷ್ಟ್ರ ಸರಕಾರದ ಮಾರುಕಟ್ಟೆ ಹಾಗೂ ಜವಳಿ ಇಲಾಖೆಯ ಕಾರ್ಯದರ್ಶಿ ಕೆ ಎಚ್ ಗೋವಿಂದರಾಜ್ (ಐಎಎಸ್) ಶಿಬಿರಕ್ಕೆ ಆಗಮಿಸಿ ಕನ್ನಡದ ಕವಿಗಳ ಕವಿತೆಯ ಸಾಲುಗಳನ್ನು ವಿವರಿಸಿ ಕನ್ನಡಾಭಿಮಾನವನ್ನು ತಾವೆಲ್ಲರೂ ಬೆಳೆಸಬೇಕೆಂದು ವಿದ್ಯಾಥಿರ್üಗಳಿಗೆ ಕರೆ ನೀಡಿದರು.
ಶಿಬಿರದ ಎರಡನೇ ದಿನ ಸಂಘದ ಮಾಜಿ ಪದಾಧಿಕಾರಿ ವಿಶ್ವನಾಥ ಶೇಣವ ಅವರು ವಿದ್ಯಾಥಿರ್üಗಳಿಗೆ ಯೋಗದ ಮಹತ್ವ, ಲಾಭ ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟು ಯೋಗ್ಯಭ್ಯಾಸ ಮಾಡಿಸಿ, ಒತ್ತಡದ ಬದುಕಿಗೆ ಯೋಗ ಒಳ್ಳೆಯ ಔಷಧಿ ಎಂದು ತಿಳಿಸಿ ಯೋಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಿ ಬಹುಮಾನಗಳನ್ನಿತ್ತು ಪೆÇ್ರೀತ್ಸಾಹಿಸಿದರು.
ನಂತರ ಗ್ರಹ ಹಾಗೂ ಆಕಾಶಕಾಯಗಳ ಬಗ್ಗೆ ದೃಶ್ಯ ಮಾಧ್ಯಮದ ಮೂಲಕ ವಿದ್ಯಾಥಿರ್üಗಳಿಗೆ ಮಾಹಿತಿ ನೀಡಿ ಟೆಲಿಸ್ಕೋಪ್‍ನಿಂದ ಆಕಾಶ ವೀಕ್ಷಣೆ ಮಾಡಿ ನಕ್ಷತ್ರಗಳ ಮಾಹಿತಿಯನ್ನು ನೀಡಲಾಯಿತು. ಶಿಬಿರದಲ್ಲಿ ನೃತ್ಯ, ನಾಟಕ ಹಾಗೂ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾಥಿರ್üಗಳ ಪ್ರತಿಭೆಗಳನ್ನು ತೋರಿಸುವ ವೇದಿಕೆಯನ್ನು ನಿರ್ಮಾಣ ಮಾಡಲಾಯಿತು.
ಶಾಲೆಯ ನಿವೃತ ಶಿಕ್ಷಕರಾದ ರವೀಂದ್ರ, ಅಂಜಲಿ ಶಿಧೋರೆ ಹಾಗೂ ವಿಪಿಎಂ ಶಾಲೆಯ ನಿವೃತ ಶಿಕ್ಷಕಿ ದಾಕ್ಷಾಯಿಣಿ ಅವರು ಕಥೆ, ಕವನ ,ರಸಪ್ರಶ್ನೆ ಮುಂತಾದ ಚಟುವಟಿಕೆಗಳನ್ನು ಮಾಡಿ ವಿದ್ಯಾಥಿರ್üಗಳನ್ನು ಪೆÇ್ರೀತ್ಸಾಹಿಸಿದರು. ಶಿಕ್ಷಕಿಯರಾದ ನಸೀಮ ಶೇಕ್ ಹಾಗೂ ಚರಣ್ ಜೀತ್ ಕೌರ್ ಶಿಬಿರಾಗ್ನಿಯನ್ನು ಪ್ರಜ್ವಲಿಸಿ ಶಿಬಿರಗೀತೆಯನ್ನಾಡಿ ಶಿಬಿರಾಗ್ನಿಯ ಮಹತ್ವವನ್ನು ವಿದ್ಯಾಥಿರ್üಗಳಿಗೆ ತಿಳಿಸಿದರು.
ಶಾಲೆಯ ಹಳೆ ವಿದ್ಯಾಥಿರ್üಗಳಾದ ಅನಿಲ್ ಶೆಟ್ಟಿ ಹಾಗೂ ಪ್ರಮೋದ ಶೆಟ್ಟಿ ಅವರು ಶಿಬಿರಕ್ಕೆ ಆಗಮಿಸಿ ವಿದ್ಯಾಥಿರ್üಗಳಿಗೆ ಕೆಲವು ಚಟುವಟಿಕೆಗಳನ್ನು ಮಾಡಿಸಿ, ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದೇವೆ ಎಂಬ ಕೀಳರಿಮೆ ಬೇಡ ನಾವೆಲ್ಲ ಕನ್ನಡ ಮಾಧ್ಯಮದಲ್ಲೇ ಕಲಿತು ಇಂದು ಉನ್ನತ ಹುದ್ದೆಯಲ್ಲಿದ್ದೇವೆ ಎಂಬ ಪೆÇ್ರೀತ್ಸಾಹದಾಯಕ ಮಾತುಗಳನ್ನಾಡಿದರು. ಶಿಬಿರದ ಕೊನೆಯ ದಿನ ಯೋಗಾಭ್ಯಾಸ ಹಾಗೂ ಸರ್ವಧರ್ಮ ಪ್ರಾರ್ಥನೆಯ ನಂತರ ಕವಿ ಗೋಪಾಲ ತ್ರಾಸಿ ಅವರು ಕಥೆ ,ಕವನ ಹಾಗೂ ಹಿತನುಡಿಗಳನ್ನು ಹೇಳಿ ವಿದ್ಯಾಥಿರ್üಗಳ ಮನ ಗೆದ್ದರು. ನಿವೃತ ಶಿಕ್ಷಕ ಸದಾಶಿವ ಶೆಟ್ಟಿ ಅವರು ಮೂರು ದಿನಗಳ ಕಾಲ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಯಶಸ್ಸಿಗಾಗಿ ಶ್ರಮಿಸಿದರು.
ಸಂಘದ ಉಪಾಧ್ಯಕ್ಷ ಪ್ರಭಾಕರ್ ಬೋಳಾರ್ ವಿದ್ಯಾಥಿರ್üಗಳಿಗೆ ಕವನ ರಚನೆ ಸ್ಪರ್ಧೆ ಏರ್ಪಡಿಸಿ ಬಹುಮಾನಗಳನ್ನಿತ್ತು ಪೆÇ್ರೀತ್ಸಾಹಿಸಿದರು ಹಾಗೂ ತಾವು ರಚಿಸಿದ ನೆನಪು ಕವನ ವಾಚಿಸಿದರು. ಸಮಾರೋಪ ಸಮಾರಂಭದಲ್ಲಿ ಸಂಘದ ಹೆಚ್ಚಿನ ಪದಾಧಿಕಾರಿಗಳು ಪಾಲ್ಗೊಂಡು ವಿದ್ಯಾಥಿರ್üಗಳಿಗೆ ಹಿತವಚನ ನೀಡಿದರು.
ಕನ್ನಡ ಮಾಧ್ಯಮ ಹಾಗೂ ಕನ್ನಡಭಾಷೆಯನ್ನು ಉಳಿಸಲು ಚೆಂಬೂರು ಕರ್ನಾಟಕ ಸಂಘವು ಸತತವಾಗಿ ಪ್ರಯತ್ನ ಪಡುತ್ತಿದ್ದು ಸುಮಾರು 10 ವರ್ಷಗಳಿಂದ ಕನ್ನಡ ಮಾಧ್ಯಮದ ವಿದ್ಯಾಥಿರ್üಗಳಿಗಾಗಿ ಈ ನಾಗರಿಕ ಶಿಬಿರ ಆಯೋಜಿಸುತ್ತ ಬಂದಿದೆ. ಸಂಘದ ಅಧ್ಯಕ್ಷ ಅಡ್ವೋಕೇಟ್ ಹೆಚ್.ಕೆ ಸುಧಾಕರ, ಉಪಾಧ್ಯಕ್ಷ ಪ್ರಭಾಕರ ಬೋಳಾರ್, ಗೌ| ಪ್ರಧಾನ ಕಾರ್ಯದರ್ಶಿ ದೇವದಾಸ್ ಕೆ ಶೆಟ್ಟಿಗಾರ್, ಗೌ| ಕೋಶಾಧಿಕಾರಿ ಟಿ.ಆರ್‍ಶೆಟ್ಟಿ, ಜತೆ ಕಾರ್ಯದರ್ಶಿ ಸುಧಾಕರ್ ಅಂಚನ್, ಜತೆ ಕೋಶಾಧಿಕಾರಿ ಸುಂದರ್ ಕೋಟ್ಯಾನ್ ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಯೋಗೇಶ್ ಗುಜರನ್, ರಾಮ ಪೂಜಾರಿ, ದಯಾಸಾಗರ ಚೌಟ, ವಿಶ್ವನಾಥ ಶೇಣವ, ಅಶೋಕ್ ಸಾಲಿಯನ್, ಗುಣಾಕರ ಹೆಗಡೆ, ಶಾಲೆಯ ಮುಖ್ಯೋಪಾಧ್ಯಾಯಿನಿ ರಾಜಿ ರಮೇಶ್, ಉಪ ಮುಖ್ಯೋಪಾದ್ಯಾಯಿನಿ ಗೀತಾಂಜಲಿ ಎಲ್.ಸಾಲಿಯನ್, ಶ್ಯಾಮಲಾ ಉಚ್ಚ್ಚಿಲ್, ಜಯಲಕ್ಷ್ಮಿ ಪೂಜಾರಿ, ಶೈಲೇಶ್ ಹಾಗೂ ಶಿಕ್ಷಕೇತರ ಸಿಬಂದಿಗಳಾದ ಭಾರತಿ ಶೆಟ್ಟಿ, ಮೋಹನ್ ಅಂಚನ್, ಸುರೇಂದ್ರ ಆಚಾರ್ಯ, ಎಸ್.ಪ್ರೀತಂ ಶಿಬಿರದ ಯಶಸ್ಸಿಗಾಗಿ ಶ್ರಮಿಸಿದ್ದರು.
ಶಿಬಿರದಲ್ಲಿ ಸರ್ವಧರ್ಮಗಳ ಪ್ರಾರ್ಥನೆಯನ್ನು ಮಾಡುವುದರ ಮೂಲಕ ದೇವನೊಬ್ಬ ನಾಮ ಹಲವುಎಂಬ ಸತ್ಯವನ್ನು ವಿದ್ಯಾಥಿರ್üಗಳು ತಿಳಿದು ಕೊಂಡರು. ಮುಂಬಯಿಯ ನ್ಯೂಸ್‍ನ ವಾಣಿ ಪ್ರಸಾದ್ ಉಪಸ್ಥಿತರಿದ್ದು, ಶಿಕ್ಷಕಿ ವಿಜೇತಾ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ಯಾಮಲಾ ಉಚ್ಚಿಲ್ ಬಹುಮಾನ ವಿಜೇತರ ಯಾದಿ ವಾಚಿಸಿದರು ಶಿಕ್ಷಕಿ ಅಕ್ಷತ ರಾವ್ ಅವರು ವಂದಿಸಿದರು.