ಪೇಜಾವರ ಮಠ ಮುಂಬಯಿ ಇಲ್ಲಿ ಶ್ರದ್ಧಾಂಜಲಿ ಮತ್ತು ಸಂಸ್ಮರಣಾ ಸಭೆ
ಮುಂಬಯಿ, ಜ.01: ಆಧ್ಯಾತ್ಮಿಕ ಲೋಕದ ತತ್ವಜ್ಞಾನಿಯಾಗಿ ರಾಷ್ಟ್ರಕಂಡ ಸಾಧು ಸಂತರಲ್ಲಿ ಸರ್ವಶ್ರೇಷ್ಠರೆಣಿಸಿ ವಿಶ್ವಕ್ಕೆ ಮಾರ್ಗದರ್ಶಕರಾಗಿ ದೈವಸ್ವರೂಪಿ ಯತಿವರೇಣ್ಯರಾಗಿದ್ದು ಇತ್ತೀಚೆಗೆ ಪರಂಧಾಮಗೈದು ಶ್ರೀ ಕೃಷ್ಣೈಕ್ಯರಾದ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಮತ್ತು ಸಂಸ್ಮರಣಾ ಸಭೆಯನ್ನು ಇದೇ ಜ.05ನೇ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಶ್ರೀ ವಿಶ್ವೇಶ ತೀರ್ಥ ಸಭಾಗೃಹ, ಪೇಜಾವರ ಮಠ, ಮಧ್ವ ಭವನ, ಪ್ರಭಾತ್ ಕಾಲೊನಿ, ಸಾಂತಾಕ್ರೂಜ್ ಪೂರ್ವ, ಮುಂಬಯಿ ಇಲ್ಲಿ ಆಯೋಜಿಸಲಾಗಿದೆ.
ಶ್ರೀ ಪೇಜಾವರ ಮಠ ಸಾಂತಕ್ರೂಜ್ ಮುಂಬಯಿ, ಶ್ರೀ ಅದಮಾರು ಮಠ ಇರ್ಲಾ-ಅಂಧೇರಿ ಮುಂಬಯಿ, ಶ್ರೀ ಪಲಿಮಾರು ಮಠ ವಿೂರಾರೋಡ್ ಮುಂಬಯಿ, ಶ್ರೀ ಸುಬ್ರಹ್ಮಣ್ಯ ಮಠ ಚೆಂಬೂರು-ಮುಂಬಯಿ, ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್'ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ-ಗೋಕುಲ), ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ (ಪೇಜಾವರ ಮಠ) ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ಸಂಸ್ಮರಣಾ ಸಭೆ ನಡೆಸಲಾಗುತ್ತಿದೆ. ಆ ನಿಮಿತ್ತ ಅಂದು ಬೆಳಿಗ್ಗೆ 9.00 ಗಂಟೆಯಿಂದ ಹರಿನಾಮ ಸ್ಮರಣೆ, ಭಜನೆ, 10.30 ಗಂಟೆಯಿಂದ ವಿಷ್ಣು ಸಹಸ್ರನಾಮ,11.00 ಗಂಟೆಗೆÀ ಶ್ರೀ ವಿಶ್ವೇಶತೀರ್ಥ ಯತಿಗಳ ನಡೆನುಡಿ, ಸುಖಾಂತ್ಯ ಮತ್ತು ಬೃಂದಾವನದ ಸಾಕ್ಷ್ಯಚಿತ್ರ ಪ್ರದರ್ಶನ, 11.15 ಗಂಟೆಯಿಂದ ಶ್ರೀಗಳಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಗಿ ಉಪಸ್ಥಿತ ವಿದ್ವಾಂಸರು ಶ್ರೀಪಾದಂಗಳರ ಗುಣಗಾನಗೈದು ಅವರ ಜೀವನಾದರ್ಶಗಳ ಬಗ್ಗೆ ತಿಳಿಸಲಿದ್ದಾರೆ ಮತ್ತು ಕೊನೆಯಲ್ಲಿ ಪ್ರೀತಿಭೋಜನ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮಹಾನಗರದಲ್ಲಿನ ಎಲ್ಲಾ ತುಳು-ಕನ್ನಡಿಗ, ಮಠ-ಮಂದಿರ, ಧಾರ್ಮಿಕÀ ಸಂಘ ಸಂಸ್ಥೆಗಳ ಪದಾಧಿಕಾರಿ, ಸದಸ್ಯರು ಪಾಲ್ಗೊಂಡು ಸಭೆಯ ಯಶಸ್ಸಿಗೆ ಸಹಕರಿಸುವಂತೆ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ (ಪೇಜಾವರ ಮಠ ಮುಂಬಯಿ) ಇದರ ಗೌರವಾಧ್ಯಕ್ಷ ಡಾ| ಎ.ಎಸ್ ರಾವ್, ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ, ಪುರೋಹಿತ ವೃಂದ, ಶ್ರೀ ಗುರುಗಳ ಭಕ್ತ ಬಳಗ, ಸಕಲ ಶಿಷ್ಯವೃಂದ ಈ ಮೂಲಕ ತಿಳಿಸಿದ್ದಾರೆ.