Saturday 10th, May 2025
canara news

ಜ.04: ಬಂಟರ ಸಂಘ ಬಂಟವಾಳ ತಾಲೂಕು ಇದರ ವಾರ್ಷಿಕೋತ್ಸವ

Published On : 03 Jan 2020   |  Reported By : Rons Bantwal


ಡಾ| ಲಕ್ಷ್ಮೀ ನಾರಾಯಣ ಆಳ್ವ ಸ್ಮಾರಣಾರ್ಥ ಏರ್ಯ ಸ್ಮೃತಿ ಪ್ರಶಸ್ತಿ-2019 ಪ್ರದಾನ

ಮುಂಬಯಿ (ಬಂಟ್ವಾಳ), ಜ.01: ಬಂಟರ ಸಂಘ ಬಂಟವಾಳ ತಾಲೂಕು ಇದರ ವಾರ್ಷಿಕೋತ್ಸವ ಹಾಗೂ ಹಿರಿಯ ಸಾಹಿತಿ ದಿ| ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಸ್ಮಾರಣಾರ್ಥ ನೀಡಲಾಗುವ ಏರ್ಯ ಸ್ಮೃತಿ ಪ್ರಶಸ್ತಿ-2019 ಪ್ರದಾನ ಸಮಾರಂಭ ಜ.04ರ ಶನಿವಾರ ದಿನಪೂರ್ತಿಯಾಗಿಸಿ ತುಂಬೆ ವಳವೂರು ಇಲ್ಲಿನ ಬೋಳಂತೂರುಗುತ್ತು ಗಂಗಾಧರ ರೈ ಕಾಂಪ್ಲೆಕ್ಸ್‍ನ ಬಂಟ್ವಾಳದ ಬಂಟರ ಭವನದ ಬೆಳ್ಳೂರು ಪರಾರಿ ಆರ್.ಎನ್ ಶೆಟ್ಟಿ ಸಭಾಗೃಹದಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 7.00 ಗಂಟೆ ವರೆಗೆ ನಡೆಯಲಿರುವ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ನಡೆಯಲಿದೆ. ಸಂಜೆ 4.00 ಗಂಟೆಗೆ ಬಂಟರ ಸಂಘ ಬಂಟವಾಳ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಕರ್ನಾಟಕದ ನಿವೃತ್ತ ಲೋಕಾಯುಕ್ತ ಜಸ್ಟಿಸ್ ಎನ್.ಸಂತೋಷ್ ಹೆಗ್ಡೆ ಮುಖ್ಯಅತಿಥಿüಯಾಗಿ ಮತ್ತು ಮುಂಬಯಿ ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಶಶಿಕಿರಣ್ ಶೆಟ್ಟಿ ಮುಖ್ಯ ಅತಿಥಿü ಅಭ್ಯಾಗತರಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬಂಟರ ಸಂಘದ ವಿದ್ಯಾಥಿರ್ü ವೇತನಕ್ಕೆ ಸಹಕಾರ ನೀಡುವ ಆಲ್ ಕಾರ್ಗೋ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಆರತಿ ಶಶಿಕಿರಣ್ ಶೆಟ್ಟಿ ಇವರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಗುತ್ತದೆ. ಸಂಗೀತ ನಿರ್ದೇಶಕ ಗುರುಕಿರಣ್ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರ್ರಹಾಸ ಡಿ.ಶೆಟ್ಟಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಇರಾಗುತ್ತು, ಜೊತೆ ಕಾರ್ಯದರ್ಶಿ ನವೀನ್‍ಚಂದ್ರ ಶೆಟ್ಟಿ ಮುಂಡಜೆಗುತ್ತು, ಮಹಿಳಾ ವಿಭಾಗಧ್ಯಕ್ಷೆ ಆಶಾ ಪ್ರಸಾದ್ ರೈ, ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಹೆಚ್.ಸಂಕಪ್ಪ ಶೆಟ್ಟಿ ತಿಳಿಸಿದ್ದಾರೆ.

   

 Arya Laxminarayana Alva.                       Shashikiran Shetty.

Nagriguttu Vivek Shetty

ಏರ್ಯ ಸ್ಮೃತಿ ಪ್ರಶಸ್ತಿ:
ಬಂಟ್ವಾಳ ಬಂಟರ ಸಂಘದ ಅಭಿವೃದ್ಧಿಗೆ ಹಿರಿಯ ಸಾಹಿತಿ ದಿ| ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಸ್ಮರಣೀಯ ಕೊಡುಗೆ ನೀಡಿದ್ದು, ಈ ನಿಟ್ಟಿನಲ್ಲಿ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ತಾಲೂಕಿನ ಬಂಟ ಸಮುದಾಯ ಸಾಧಕರಿಗೆ ತಲಾ ಒಬ್ಬರಂತೆ ಪ್ರತಿವರ್ಷ ಏರ್ಯ ಸ್ಮೃತಿ ಪ್ರಶಸ್ತಿ ನೀಡಿ ಗೌರವಿಸುವ ನಿರ್ಧಾರಕ್ಕೆ ಬರಲಾಗಿದ್ದು, ಈ ಬಾರಿ ಸಾಹಿತಿ ವಿಜಯಾ ಶೆಟ್ಟಿ ಸಾಲೆತ್ತೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬೆಂಗಳೂರಿನ ಉದ್ಯಮಿ ಬಾಲಕೃಷ್ಣ ಹೆಗ್ಡೆ ಅವರು ಭಾಗವಹಿಸಲಿದ್ದಾರೆ ಎಂದು ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು ಪ್ರಟನೆಯಲ್ಲಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here