ಜಯರಾಮ ಶೆಟ್ಟಿ ಅಭಿನಂದನಾ ಕಾರ್ಯಕ್ರಮ-ತುಳು ರತ್ನ ಪ್ರಶಸ್ತಿ ಪ್ರದಾನ
ಮುಂಬಯಿ, ಜ.04: ತುಳು ಸಂಘ ಬರೋಡಾ ತನ್ನ ವಾರ್ಷಿಕೋತ್ಸವವನ್ನು ಇಂದಿಲ್ಲಿ ರವಿವಾರ (ಜ.05) ಮಧ್ಯಾಹ್ನ 2.30 ಗಂಟೆಯಿಂದ ವಡೋದರಾದ ಗುಜರಾತ್ ರಿಫೈನರಿ ಟೌನ್ ಶಿಪ್‍ನಲ್ಲಿರುವ ಗುಜರಾತ್ ರಿಫೈನರಿ ಕಮ್ಯುನಿಟಿ ಸಭಾಂಗಣದಲ್ಲಿ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಅಧ್ಯಕ್ಷತೆಯಲ್ಲಿ ನೇರವೇರಲಿದೆ. ಇದೇ ಶುಭಾವಸರದಲ್ಲಿ ಗುಜರಾತ್‍ನ ಹಿರಿಯ ಉದ್ಯಮಿ, ಸಂಘಟಕ, ಸಮಾಜ ಸೇವಕ ಜಯರಾಮ ಶೆಟ್ಟಿ ಇವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ತುಳುರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿಸಲಾಗುವುದು ಎಂದು ಸಂಘದ ವಕ್ತಾರರು ತಿಳಿಸಿದ್ದಾರೆ.
Jayarama Shetty. Shashidhar B.Shetty Mohan C Poojary
ಸಮಾರಂಭದಲ್ಲಿ ಅತಿಥಿs ಅಭ್ಯಾಗತರಾಗಿ ತುಳು ಸಂಘ ಅಹ್ಮದಾಬಾದ್ ಗೌರವ ಅಧ್ಯಕ್ಷ ಮೋಹನ್ ಸಿ.ಪೂಜಾರಿ, ತುಳುನಾಡ ಐಸಿರಿ ವಾಪಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ದಿನೇಶ್ ಶೆಟ್ಟಿ, ಗೌರವಾನ್ವಿತ ಅತಿಥಿsಗಳಾಗಿ ಸೂರತ್‍ನ ಉದ್ಯಮಿ, ಸಮಾಜ ಕಾರ್ಯಕರ್ತ ರಾಧಾಕೃಷ್ಣ ಶೆಟ್ಟಿ, ತುಳು ಸಂಘ ಅಂಕಲೇಶ್ವರ ಗೌರವ ಅಧ್ಯಕ್ಷ ರವಿನಾಥ್ ಶೆಟ್ಟಿ, ತುಳು ಸಂಘ ಅಹ್ಮದಾಬಾದ್ ಅಧ್ಯಕ್ಷ ಅಪ್ಪು ಶೆಟ್ಟಿ, ಪಟ್ಲ ಫೌಂಡೇಶನ್ ಗುಜರಾತ್ ಘಟಕದ ಅಧ್ಯಕ್ಷ ಅಜಿತ್ ಶೆಟ್ಟಿ, ತುಳು ಸಂಘ, ಅಂಕ್ಲೇಶ್ವರ ಅಧ್ಯಕ್ಷ ಶಂಕರ್ ಶೆಟ್ಟಿ, ಬಂಟರ ಸಂಘ ಅಹ್ಮದಾಬಾದ್ ಅಧ್ಯಕ್ಷ ನಿತೇಶ್ ಶೆಟ್ಟಿ, ಬಿಲ್ಲವ ಸಂಘ ಗುಜರಾತ್ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ಮತ್ತು ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಬೇಡರ ಕಣ್ಣಪ್ಪ ಯಕ್ಷಗಾನ ಪ್ರದರ್ಶಿಸಿಸಲಿದ್ದಾರೆ ಆ ಪ್ರಯುಕ್ತ ಗುಜರಾತ್ ವಾಸಿ ಎಲ್ಲಾ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವರೇ ತುಳು ಸಂಘ ಬರೋಡಾ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ವಾಸು ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಡಾ| ಶರ್ಮಿಳಾ ಜೈನ್, ಕಾರ್ಯದರ್ಶಿ ಮಂಜುಳಾ ಗೌಡ ಮತ್ತು ಸರ್ವ ಪದಾಧಿಕಾರಿಗಳು ತಿಳಿಸಿದ್ದಾರೆ.