ಮಕ್ಕಳಲ್ಲಿ ಮಾತೃಭಾಷೆ-ಸಂಸ್ಕೃತಿ ಮೈಗೂಡಿಸಿದಾಗ ಸಮುದಾಯದ ಉನ್ನತೀಕರಣ ಸಾಧ್ಯ : ರಾಜ್‍ಕುಮಾರ್ ಕಾರ್ನಾಡ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಜ.05: ಸ್ವಸಮಾಜದತ್ತ ಯುವ ಜನಾಂಗ ಆಕರ್ಷಿತರಾಗುವಲ್ಲಿ ಮಕ್ಕಳಲ್ಲಿ ಮಾತೃ ಸಂಸ್ಕೃತಿ ಮತ್ತು ಮಾತೃಭಾಷೆಯನ್ನು ನಿರ್ಬಂಧಕವಾಗಿ ರೂಢಿಸುವಲ್ಲಿ ಪಾಲಕರು ಯತ್ನಿಸಬೇಕು. ಆವಾಗಲೇ ಸಮಾಜದ ಉನ್ನತೀಕರಣ ಸಾಧ್ಯ. ಈ ಸಂಸ್ಥೆಯೂ76ರ ಮುನ್ನಡೆಯಲ್ಲಿದ್ದು ಇದು ಮುಂದುವರಿಯಲು ಯುವ ಜನತೆ ಸಕ್ರೀಯರಾಗಬೇಕು. ಇವೆಲ್ಲವನ್ನೂ ಸುಲಭವಾಗಿಸಲು ಸಮಾಜದ ಸ್ವಂತಃ ಕಚೇರಿ, ಸಮುದಾಯ ಭವನ ನಿರ್ಮಾಣದ ಅತ್ಯವಶಕತೆಯಿದೆ. ಶೀಘ್ರವೇ ನಮ್ಮ ಸಮುದಾಯ ಭವನದ ನಿರ್ಮಾಣ ನಮ್ಮೆಲ್ಲರ ಆಶಯವಾಗಿ ದೆ ಎಂದು ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‍ಕುಮಾರ್ ಕಾರ್ನಾಡ್ ತಿಳಿಸಿದರು.
ಸಯನ್‍ನ ಜಿಎಸ್‍ಬಿ ಸೇವಾ ಮಂಡಲದ ಶ್ರೀ ಸುದೀಂದ್ರ ಸಭಾಗೃಹದಲ್ಲಿ ಇಂದಿಲ್ಲಿ ರವಿವಾರ ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಸಂಸ್ಥೆಯ 76ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ರಾಜ್‍ಕುಮಾರ್ ಮಾತನಾಡಿದರು.
ಉಪಾಧ್ಯಕ್ಷ ಎನ್.ರವೀಂದ್ರನಾಥ್ ರಾವ್, ಜೊತೆ ಕಾರ್ಯದರ್ಶಿಗಳಾದ ರಿತೇಶ್ ಆರ್.ರಾವ್ ಮತ್ತು ನಿತ್ಯಾನಂದ ಸಿ.ರಾವ್, ಜೊತೆ ಕೋಶಾಧಿಕಾರಿ ರೂಪೇಶ್ ಆರ್.ರಾವ್, ಮಹಿಳಾಧ್ಯಕ್ಷೆ ಶ್ರೇಯಾ ಎಸ್.ರಾವ್, ಮಹಿಳಾ ಕಾರ್ಯದರ್ಶಿ ಆರತಿ ಎನ್.ರಾವ್, ಕೋಶಾಧಿಕಾರಿ ಕವಿತಾ ಆರ್.ರಾವ್ ವೇದಿಕೆಯಲ್ಲಿ ಆಸೀನರಾಗಿ ದ್ದು ಸಂಸ್ಥೆಯ ಗೌ| ಪ್ರ| ಕಾರ್ಯದರ್ಶಿ ಕೇದರ್‍ನಾಥ ಆರ್.ಬೋಳಾರ್, ಸ್ವಾಗತಿಸಿ ವಾರ್ಷಿಕ ಚಟುವಟಿಕೆಗಳ ಮಾಹಿತಿ ಹಾಗೂ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ನವೀನ್ ಎಸ್.ರಾವ್ ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು.
ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೇಂದ್ರ ಆರ್.ರಾವ್, ಸಂತೋಷ್ ಕುಮಾರ್ ಆರ್.ರಾವ್, ಧನಂಜಯ ಎನ್. ಶೇರ್ವೆಗಾರ್, ಸುಹಾಸ್ ಎಸ್.ರಾವ್, ಆಶ್ವಿನ್ ಕೆ.ರಾವ್, ಕೆ.ಎಂ ಅಶಿತ್ ರಾಜ್, ಹರಿಚಂದ್ರ ಆರ್ ರಾವ್, ಮನೋಜ್ ಸಿ.ರಾವ್, ದಿವೀತ್ ಡಿ.ರಾವ್, ಜಯಕರ ಎಸ್.ರಾವ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದು, ಗತ ವಾರ್ಷಿಕ ಸಾಲಿನಲ್ಲಿ ಅಗಲಿದ ಸಂಸ್ಥೆಯ ಸದಸ್ಯರು, ಸಮಾಜ ಬಂಧುಗಳು, ಗಣ್ಯರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕ ಸ್ನೇಹಮಿಲನ ನಡೆಸಲಾಗಿದ್ದು ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಸದಸ್ಯರಾದ ರತ್ನಾಕರ್ ರಾವ್ ಮತ್ತು ಲೀಲಾವತಿ ರತ್ನಾಕರ್ ದಂಪತಿಗೆ, ಲಕ್ಷಿ ್ಮೀಶ ಕಾಪು, ಕಾವೇರಿ ರಾವ್ ಹಾಗೂ ಸಾಧಕ ಪ್ರತಿಭೆ ಶ್ರೇಯಸ್ ಎಸ್.ರಾವ್ ಇವರಿಗೆ ಪದಾಧಿಕಾರಿಗಳು ಸತ್ಕರಿಸಿ ಅಭಿನಂದಿಸಿದರು ಹಾಗೂ ಸಮಾಜ ಬಾಂಧವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾಥಿರ್s ವೇತನ ವಿತರಿಸಿ ಶುಭಾರೈಸಿದರು.
ಮಂಗಳೂರುನ ಹೆಸರಾಂತ ಪುರೋಹಿತ ಡಾ| ಸತ್ಯಕೃಷ್ಣ ಭಟ್ ಸಂಪನ್ಮೂಲವ್ಯಕ್ತಿಯಾಗಿದ್ದು ಮಾತನಾಡಿ ರಾಮರಾಜ ಕ್ಷತ್ರಿಯ ಸಮುದಾಯಕ್ಕೆ ತನ್ನದೇ ಆದ ಶ್ರೇಷ್ಠತೆಯ ಮಿಂಚಿನ ಶಕ್ತಿಯಿದೆ. ಆದರೆ ಸ್ವಸಮಾಜದ ಹಿನ್ನಲೆ, ಇತಿಹಾಸ ಜ್ಞಾನದ ಕೊರತೆ ನಮಗಿದೆ. ಇಂದು ಮನುಕುಲಕ್ಕೆ ಧರ್ಮ, ಸಂಸ್ಕೃತಿಯ ಅರಿವಿನ ಅಗತ್ಯವಿದೆ. ಆದರೆ ಕ್ಷಿಣಿಸುತ್ತಿರುವ ಧರ್ಮದ ಅರಿವಿನಿಂದಾಗಿ ಯುವಪೀಳಿಗೆ ಸಂಬಂಧಗಳಿಂದ ದೂರವಾಗುತ್ತಿದ್ದಾರೆ. ಜೀವನದಲ್ಲಿ ಅಭ್ಯುದಯ ಕೊಡುವುದೇ ಧರ್ಮ. ಭೋಗದ ಜೊತೆಗೆ ಜ್ಞಾನ ಕ್ರೋಢಿಕರಿಸುವುದೇ ಧರ್ಮ. ನಾವು ಇಂತಹ ಕಾರ್ಯಕ್ರಮಗ ಳನ್ನು ಹಮ್ಮಿಕೊಂಡು ಜೊತೆಸೇರಿ ಬರೇ ಮನೋರಂಜನಾ ಕಾರ್ಯಕ್ರಮಗಳನ್ನಿರಿಸಿ ಸಂತೋಷ ಪಟ್ಟರೆ ಸಾಲದು. ಜೊತೆಗೆ ಧಾರ್ಮಿಕ ವಿಚಾರಗಳÀು, ಸಂಸ್ಕಾರ, ಸಂಪ್ರದಾಯಗಳನ್ನೂ ತಿಳಿಹೇಳಿದಾಗ ಸಂಬಂಧಗಳು ಮತ್ತಷ್ಟು ಬಲಪಟ್ಟು ಸಂಸ್ಕಾರಯುತ ಜೀವನ ಸಾಧ್ಯವಾಗುವುದು. ಇದೇ ರೀತಿ ನಿಮ್ಮೆಲ್ಲರ ಬಾಳು ಜೇನು ತುಪ್ಪದ ಹಾಗೆ ಮುಂದುವರಿಯಲಿ ಎಂದÀು ಕ್ಷತ್ರಿಯ ವಂಶದ ರೀತಿ ರಿವಾಜು, ಕುಲ ಗೋತ್ರ, ಆಚಾರ ವಿಚಾರ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಿದರು.
ರವಿ ರಾವ್, ಕೆ.ವಿ ರಾವ್ ವೇದಿಕೆಯಲ್ಲಿದ್ದು ಮನೋಜ್ ಸಿ.ರಾವ್ ಆಚಾರ ವಿಚಾರ ಕಾರ್ಯಕ್ರಮ ನಿರ್ವಾಹಿಸಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ವಿದ್ವಾನ್ ಕೆ.ರಾಮಚಂದ್ರ ಉಪಾದ್ಯಾಯ ಗೋಕರ್ಣ ಅವರು ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದವನ್ನೀಡಿ ಹರಸಿದರು. ವಿನೋದ ರವೀಂದ್ರನಾಥ್ ರಾವ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಮಹಿಳಾ ಸದಸ್ಯೆಯರು ಭಜನೆಯನ್ನಾಡಿದರು ಹಾಗೂ ಅರಸಿನ ಕುಂಕುಮ ಕಾರ್ಯಕ್ರಮ ನಡೆಸಿದರು. ಮಹಿಳಾ ಸದಸ್ಯೆಯರು ಪ್ರಾರ್ಥನೆಯನ್ನಾಡಿದರು. ಗೌ| ಪ್ರ| ಕಾರ್ಯದರ್ಶಿ ಕೇದರ್‍ನಾಥ ಆರ್.ಬೋಳಾರ್ ಸಭಾ ಕಲಾಪ ನಡೆಸಿ, ಆಭಾರ ಮನ್ನಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಮತ್ತು ಯುವ ವಿಭಾಗದ ಸದಸ್ಯರು ಮತ್ತು ಅಧಿಕ ಸಂಖ್ಯೆಯ ಸಮಾಜ ಬಾಂಧವರು ಹಾಜರಿದ್ದರು. ಸದಸ್ಯರು ಮತ್ತು ಮಕ್ಕಳು ವಿವಿಧ ಸಾಂಸ್ಕೃತಿಕ, ಮನೋರಂಜನಾ ಮತ್ತು ವಿನೋದಾವಳಿ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಹಾಗೂ ರಾಜ್‍ಕುಮಾರ್ ಕಾರ್ನಾಡ್ ರಚಿಸಿ ನಿರ್ದೇಶಿಸಿದ `ಟೈಮ್ ಬಂದಾಗ' ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶಿಸಿದರು.