ವಿಶ್ವೇಶತೀರ್ಥರು ವಿಶ್ವಕ್ಕೆÉೀ ವಿಶ್ವದಾರ್ಶಿಕ ಸಂತರು : ರಾಮ ವಿಠಲ ಆಚಾರ್ಯ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.05: ಮನುಷ್ಯ ಜನ್ಮ ಸಿಕ್ಕಿದರೆ ಉಳಿಯುವುದು ಕಷ್ಟ. ಆದರೆ ಎಲ್ಲರಲ್ಲೂ ಭಗವಂತನನ್ನು ಕಾಣಿಸಿ ಮಾನವನಾಗಿ ಸಮಾಜೋದ್ಧಾರಕರಾಗಿ ಬಾಳಿದ ಪೇಜಾವರಶ್ರೀಗಳ ದೈವೈಕ್ಯತೆ ಮರೆಯುವುದು ಅದಕ್ಕಿಂತಲೂ ಕಷ್ಟ. ಕಾರಣ ಎಲ್ಲರೂ ನಮ್ಮವರು ಅನ್ನುವ ಔದಾರ್ಯವುಳ್ಳ ಶ್ರೀಗಳು ಬರೇ ಬ್ರಾಹ್ಮಣರ, ಮಧ್ವರ ಸ್ವಾಮೀಜಿ ಆಗಿರಲಿಲ್ಲ ಬದಲಾಗಿ ಸರ್ವ ಧರ್ಮೀಯರ ಪ್ರಭಾವ ವಿಸ್ತರಿಸಿಕೊಂಡ ಕ್ರಾಂತಿಕಾರ ಸಂತರಾಗಿದ್ದರು. ಆದುದರಿಂದಲೇ ವಿಶ್ವೇಶತೀರ್ಥರು ವಿಶ್ವಕ್ಕೆÉೀ ವಿಶ್ವದಾರ್ಶಿಕ ಸಂತರು ಎಂದು ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಬೆಂಗಳೂರು ಇದರ ಸಂಸ್ಕೃತ, ವೇದಂತ ವಿದ್ವಾಂಸ ರಾಮ ವಿಠಲ ಆಚಾರ್ಯ ತಿಳಿಸಿದರು.
ಇತ್ತೀಚೆಗೆ ಶ್ರೀ ಕೃಷ್ಣೈಕ್ಯರಾದ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಬೃಹನ್ಮುಂಬಯಿ ಅಲ್ಲಿನ ಪೇಜಾವರ ಯತಿವರೇಣ್ಯರ ಶಿಷ್ಯವೃಂದವು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಆಯೋಜಿಸಿದ್ದ ಸಂಸ್ಮರಣಾ ಸಭೆ, ಆರಾಧನೋತ್ಸವ, ಸಾರ್ವಜನಿಕ ನುಡಿ ನಮನ ಕಾರ್ಯಕ್ರಮವನ್ನುದ್ದೇಶಿಸಿ ರಾಮ ವಿಠಲರು ಶ್ರೀಗಳು ಬಹಳ ಮೃದುವಾದ ಮನಸ್ಸುವುಳ್ಳವರಾಗಿದ್ದು ಮುಗ್ಧತೆಯ ಮಗುವಿನ ಮನೋಭಾವವುಳ್ಳವರು ಎಂದು ಶ್ರೀಗಳ ಜೊತೆಗಿನ ಸಮಾಜಮುಖಿ ಬಾಂಧವ್ಯತೆಯನ್ನು ಕವನ ರೂಪದಲ್ಲಿ ಬಣ್ಣಿಸಿ ಪೇಜಾವರಶ್ರೀಗಳ ಆದರ್ಶ ಸಂದೇಶ, ಮಾರ್ಗದರ್ಶನ ಬದುಕಿನ ರೀತಿ ನೀತಿ ಅರ್ಥೈಸಿ ಬಾಳೋಣ ಎಂದು ಸಲಹಿ ಸಮಗ್ರ ಮುಂಬಯಿ ಜನತೆಯ ಪರವಾಗಿ ಶ್ರೀಪಾದರಿಗೆ ಭಕ್ತಿಪೂರ್ವಕ ಕುಸುಮಾಂಜಲಿ ಅರ್ಪಿಸಿದರು.
ಬಾಲಾಜಿ ಮಂದಿರ ಮುಲುಂಡ್ ಇದರ ವಿದ್ವಾನ್ ಪ್ರಹ್ಲದಾಚಾರ್ಯ ನಾಗರಹಳ್ಳಿ ಮಾತನಾಡಿ ಪೇಜಾವರಶ್ರೀಗಳು. ಭಗವಂತನ ಸಾಕ್ಷತ್ ಸ್ವರೂಪತಾ ವಿಶ್ವೇಶರು. ಮಹಾಮಹಿಮಾ ರೂಪವಾಗಿ ಜಗತ್ತಿಗೆ ಬಂದ ಮಹಾನ್ ಸನ್ಯಾಸಿ. ಜೀವನದದ್ದಕ್ಕೂ ದೀನದಲಿತರ ಉದ್ಧಾರಕ್ಕಾಗಿ ದುಡಿದು ಸಮಾನತೆಯ ಬಾಳಿಗೆ ಎಲ್ಲರಿಗೂ ಅಭಯವನ್ನು ಕೊಟ್ಟ ಏಕೈಕ ಪೀಠಾಧಿಪತಿ. ಸಾಂಪ್ರದಾಯಿಕ ನಿಯಮಗಳೊಂದಿಗೆ ಸಾಮಾಜಿಕ ಜೀವನಕ್ಕೂ ಮಹತ್ವವನ್ನಿತ್ತು ಎಲ್ಲವನ್ನೂ ಸಾಮರಸ್ಯತ್ವದಲ್ಲೇ ನಿಭಾಯಿಸಿದ ಎಲ್ಲಾ ಧರ್ಮಗಳಿಗೂ ಬೇಕಾದ ಅದ್ಭುತ ಸಂತ. ಯಾರಲ್ಲೂ ಮೇಲುಕೀಳುಗಳ ಭಾವನೆ ಇರಿಸದೆ ಅಖಂಡ ಸಮಾಜವನ್ನು ನಿರ್ವಿಘ್ನಗೊಳಿಸಿ ವಿಶ್ವಕಂಡ ನಿಜಾರ್ಥದ ಹಿಂದೂ ಹೃದಯ ಸಾಮ್ರಾಟ ಅಂದರೆ ಪೇಜಾವರಶ್ರೀಗಳು ಎಂದರು.
ಶ್ರೀಗಳ ಹಿಂದೂ ಧರ್ಮೋದ್ಧಾರದ ಆಶಯ ದೂರದೃಷ್ಟಿ ಅದ್ವೈತವಾದದ್ದು. ಬದುಕನ್ನೇ ಹಿಂದೂ ಸಮಾಜದ ಏಕೈತೆಗೆ ಮುಡುಪಾಗಿಸಿ ಅನ್ಯೋನತಾ ಬದುಕೇ ಧರ್ಮವಾಗಿಸಿದ ತಪಸ್ವಿ. ಇಂತಹ ಯತಿಶ್ರೀಗಳನ್ನು ಕಂಡ ನಾವೆಲ್ಲರೂ ಭಾಗ್ಯಶಾಲಿಗಳು ಎಂದು ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ (ಪೇಜಾವರ ಮಠ ಮುಂಬಯಿ) ಗೌರವಾಧ್ಯಕ್ಷ ಡಾ| ಎ.ಎಸ್ ರಾವ್ ತಿಳಿಸಿ ಆದರಾಜಂಲಿ ಕೋರಿದರು.
ಕಾರ್ಯಕ್ರಮದ ಪ್ರಧಾನರೂ, ಬಿಎಸ್‍ಕೆಬಿ ಅಸೋಸಿಯೇಶನ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮಾತನಾಡಿ ನಮ್ಮ ಶ್ರೀಗಳು ಎಷ್ಟು ಪೂಜ್ಯನೀಯರು ಅನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಇಲ್ಲಿನ ಮೂರು ಮಹಡಿಗಳ ಸ್ಥಳವೂ ತುಂಬಿ ತುಳುಕುತ್ತಿದೆ. ಉಡುಪಿಯ ಅಷ್ಠ ಮಠಗಳ ಮತ್ತು ಗೋಕುಲದ ಸಂಬಂಧ ತೀರಾ ಪಾವಿತ್ರ್ಯತೆವುಳ್ಳದ್ದು. ಸದ್ಯ ನಿರ್ಮಾಣ ಹಂತದಲ್ಲಿರುವ ಗೋಕುಲದ ಸಾರÀಥ್ಯ ವಹಿಸಿದವರೇ ಶ್ರೀಗಳು. ಆದರೆ ನಮ್ಮ ಸಾರಥಿsಯನ್ನೇ ಕಳಕೊಂಡ ನಾವು ತಬ್ಬಲಿಗಳಾಗಿದ್ದೇವೆ. ಗೋಕುಲ ತರುವಲಿಯಾಗಿದೆ. ಇಂತಹ ಯತಿಶ್ರೇಷ್ಠರÀನ್ನು ಮರೆಯುವುದು ಸುಲಭಸಾಧ್ಯವಲ್ಲ. ತನ್ನ ಆಯುಷ್ಯದೊಳಗೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಮತ್ತು ಮುಂಬಯಿನಲ್ಲಿ (ಗೋಕುಲ) ಶ್ರೀ ಕೃಷ್ಣ ಮಠ ಆಗಬೇಕು ಅನ್ನುವ ಕನಸು ನನಸಾಗಿಲ್ಲ. ಆದರೆ ಶ್ರೀಗಳ ಸÀದ್ಗುಣಗಳನ್ನು ನಮ್ಮ ಜೀವನದಲ್ಲಿ ರೂಢಿಸಿ ನಮ್ಮ ಜೀವನವನ್ನೂ ಬದಲಾಯಿಸಿ ಜೊತೆಗೆ ಅವರ ಮಹತ್ವದ ಎರಡು ಯೋಜನೆಗಳನ್ನು ನನಸಾಗಿಸೋಣ. ಅದೇ ಅವರಿಗೆ ಸಲ್ಲುವ ನಿಜಾರ್ಥದ ಚರಮಾಂಜಲಿ ಎಂದರು.
ವಿಶ್ವೇಶತೀರ್ಥದ ಕೀರ್ತಿ, ಕಾರ್ಯಸಿದ್ಧಿಗೆ ಪರ್ಯಾಯರಾದ ಸಂತ ಸದ್ಯ ಈ ನಾಡಲಿಲ್ಲ. ಅವರ ಯೋಜನೆ, ಯೋಜನೆಗಳೇ ಆಕಾಶದಷ್ಟು ವಿಶಾಲವಾದವು. ಹಿಂದೂ ಧರ್ಮೋದ್ಧಾರದ ಕೀರ್ತಿ ಕಲಶವಾಗಿ ಕರುನಾಡ ಯತಿಸಿಂಹರಾಗಿ, ವಿಶ್ವಗುರುವಾಗಿ ಮೆರೆದು ತಪೆÇೀಧಸರಾದ ಶ್ರೀಗಳ ಮರೆವು ಎಂದೂ ಆಸಾಧ್ಯ. ಪೌರೋಹಿತ್ಯದ ದೊಡ್ಡ ಬಳಗ ಸೃಷ್ಟಿಸಿದ ಶ್ರೀಗಳೇ ನಮ್ಮೆಲ್ಲರ ಪ್ರಸಿದ್ಧಿಗೆ ಶ್ರೀಗಳೇ ಕಾರಣ ಎಂದು ಪೇಜಾವರಶ್ರೀಗಳ ಜೊತೆ ಸುಮಾರು ಐದು ದಶಕಗಳ ನಿಕಟವರ್ತಿ, ಪರಮಶಿಷ್ಯರಾಗಿದ್ದ ಕೆ.ಕೃಷ್ಣರಾಜ್ ತಂತ್ರಿ ಬೋರಿವಿಲಿ ತಿಳಿಸಿ ಕಂಬನಿ ಮಿಡಿದರು.
ಐಕಳ ಹರೀಶ್ ಶೆಟ್ಟಿ, ಪದ್ಮನಾಭ ಎಸ್.ಪಯ್ಯಡೆ, ಚಂದ್ರಶೇಖರ ಎಸ್.ಪೂಜಾರಿ, ಜಯಕೃಷ್ಣ ಎ.ಶೆಟ್ಟಿ, ಯೋಗ ಇನ್‍ಸ್ಟಿಟ್ಯೂನ್ಟ್‍ನ ಕೆ.ಹಂಸ, ವಿಶ್ವ ಹಿಂದೂ ಪರಿಷತ್‍ನ ನರೇಶ್ ಪಾಟೇಲ್, ಸುರೇಂದ್ರ ಕುಮಾರ್ ಹೆಗ್ಡೆ, ಪ್ರಕಾಶ್ ಪಿ.ಭಂಡಾರಿ, ಧರ್ಮಪಾಲ ಯು.ದೇವಾಡಿಗ, ಕೈರಬೆಟ್ಟು ವಿಶ್ವನಾಥ್ ಭಟ್, ಚಂದ್ರಶೇಖರ ಪಾಲೆತ್ತಾಡಿ ಮತ್ತಿತರರು ಮಾತನಾಡಿ ಪ್ರಾತಃಸ್ಮರಣೀಯರಾದ ಶ್ರೀಪಾದಂಗಳರ ಗುಣಗಾನ, ಜೀವನಾದ್ರಶನ ಗೈದು ಅವರ ಜೀವನಾದರ್ಶಗಳ ಬಗ್ಗೆ ತಿಳಿಸಿ ಸದ್ಗತಿ ಕೋರಿದರು.
ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್, ವಾಗ್ದೇವಿ ಭಜನಾ ಮಂಡಳಿ ಬೋರಿವಿಲಿ, ಗೋಪಾಲಕೃಷ್ಣ ಭಜನಾ ಮಂಡಳಿ ಅಂಧೇರಿ, ವಿಠಲ ಭಜನಾ ಮಂಡಳಿ ವಿೂರಾರೋಡ್, ಗೋಕುಲ ಭಜನಾ ಮಂಡಳಿ ಸಯಾನ್, ಶ್ರೀಕೃಷ್ಣ ಭಜನಾ ಮಂಡಳಿ ಮುಲುಂಡ್, ಸ್ಕಂದ ಭಜನಾ ಮಂಡಳಿ (ಸುಬ್ರಹ್ಮಣ್ಯ ಮಠ) ಮತ್ತು ಚಿಣ್ಣರ ಬಿಂಬದ ಮಕ್ಕಳು ಭಜನೆಗೈದರು. ಬಳಿಕ ಶ್ರೀ ಪೇಜಾವರ ಮಠದ ಹರಿ ಭಟ್ ಪುತ್ತಿಗೆ, ಪ್ರಕಾಶ ಆಚಾರ್ಯ ರಾಮಕುಂಜ, ನಿರಂಜನ್ ಗೋಗ್ಟೆ ಹಾಗೂ ಮುಂಬಯಿನ ಪುರೋಹಿತ ವರ್ಗವು ವಿಷ್ಣು ಸಹಸ್ರನಾಮ ಧಾರ್ಮಿಕ ಕಾರ್ಯಕ್ರಮ ನಡೆಸಿತು. ಬಳಿಕ ಸಾಕ್ಷ್ಯಚಿತ್ರ ಮೂಲಕ ವಿಶ್ವೇಶತೀರ್ಥ ಯತಿವರ್ಯರ ಜೀವನ ವೈಶಿಷ್ಟ ್ಯ ಮತ್ತು ಬೃಂದಾವನದ ಚಿತ್ರಣ ಪ್ರದರ್ಶಿಸಿ ಅನುದಿನವೂ ಶ್ರೀಗಳನ್ನು ಹೃನ್ಮಗಳಲ್ಲಿ ಜೀವಾಳ ಉಳಿಸುವಂತೆ ಬಿಂಬಿಸಲಾಯಿತು.
ಪಲಿಮಾರು ಮಠ ವಿೂರಾರೋಡ್ ರಾಧಾಕೃಷ್ಣ ಶ್ರೀಪತಿ ಭಟ್ ಕಲ್ಲಂಜೆ, ಅದಮಾರು ಮಠ ಮುಂಬಯಿ ಇದರ ಪಡುಬಿದ್ರಿ ವಿ.ರಾಜೇಶ್ ರಾವ್, ಕೆ. ಗೋವಿಂದಾಚಾರ್ಯ, ಸುಬ್ರಹ್ಮಣ್ಯ ಮಠ ಚೆಂಬೂರು ಮುಂಬಯಿ ಇದರ ವಿಷ್ಣು ಕಾರಂತ್ ಉದ್ದಬೆಟ್ಟು, ಹಿರಿಯ ವಿದ್ವಾನ್ ವಾಸುದೇವ ಉಡುಪ, ಡಾ| ಎಂ.ಸೀತರಾಮ ಆಳ್ವ, ಎಸ್.ಎನ್ ಉಡುಪ, ಬಡನಿಡಿಯೂರು ರಮಾನಂದ ರಾವ್, ವಿಜಯಲಕ್ಷ್ಮೀ ಸುರೇಶ್ ರಾವ್, ಕೃಷ್ಣ ಯಾದವ ಆಚಾರ್ಯ, ಅವಿನಾಶ್ ಶಾಸ್ತ್ರಿ, ಬಿ.ಆರ್ ಗುರುಮೂರ್ತಿ, ಅರವಿಂದ ಬನ್ನಿಂತ್ತಾಯ, ಆರ್.ಎಲ್ ಭಟ್ ಪೂಜಾ ಧಿಗಳಲ್ಲಿ ಪಾಲ್ಗೊಂಡÀÀು ಹರಿನಾಮ ಸ್ಮರಣೆ ನೆರವೇರಿಸಿದರು.
ಬಿಎಸ್‍ಕೆಬಿ ಅಸೋಸಿಯೇಶನ್‍ನ ಪರವಾಗಿ ಉಪಾಧ್ಯಕ್ಷ ವಾಮನ ಹೊಳ್ಳ ಅವರು ಸಂಸ್ಮರಣಾಪತ್ರವನ್ನು ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರಿಗೆ ಹಸ್ತಾಂತರಿಸಿ ಬಾಷ್ಪಾಂಜಲಿ ಕೋರಿದರು. ಗಾಂವ್‍ದೇವಿ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ ವಿದ್ಯಾವಿಹಾರ್ ಇದರ ಪ್ರಧಾನ ಅರ್ಚಕ ಪೆರ್ಣಂಕಿಲ ಹರಿದಾಸ ಭಟ್ ಮತ್ತು ರಾಮದಾಸ ಉಪಾಧ್ಯಾಯ ಅವರು ಸಂಸ್ಮರಣಾ ಸಭಾ ನಿರ್ವಹಿಸಿದರು.
ರಘುರಾಮ ಕೆ.ಶೆಟ್ಟಿ ಬೋಳ, ಡಾ| ಮನೋಜ್ ಹುನ್ನೂರು, ಡಾ| ವಿರಾರ್ ಶಂಕರ ಶೆಟ್ಟಿ, ಸುಬ್ಬಯ್ಯ ವಿ.ಶೆಟ್ಟಿ, ಸುಧಾಕರ ಎಸ್.ಹೆಗ್ಡೆ, ಶಿವರಾಮ ಜಿ.ಶೆಟ್ಟಿ, ಡಾ| ಆರ್.ಕೆ ಶೆಟ್ಟಿ, ಎಂ.ನರೇಂದ್ರ, ಬಿ.ಆರ್ ಶೆಟ್ಟಿ, ನಿತ್ಯಾನಂದ ಡಿ. ಕೋಟ್ಯಾನ್, ದೇವದಾಸ್ ಎಲ್.ಕುಲಾಲ್, ಹೆಚ್.ಬಿ.ಎಲ್ ರಾವ್, ಸುರೇಶ್ ಆರ್.ಕಾಂಚನ್, ಡಾ| ಎಸ್.ಕೆ ಭವಾನಿ, ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಕೆ.ಎಲ್ ಬಂಗೇರ, ವಿಕ್ರಾಂತ್ ಉರ್ವಾಲ್, ಎಲ್.ವಿ ಅವಿೂನ್, ಸಿಎ| ಸುಧೀರ್ ಆರ್.ಎಲ್ ಶೆಟ್ಟಿ, ಸತೀಶ್ ಎಸ್.ಸಾಲ್ಯಾನ್ (ರಜಕ), ತೋನ್ಸೆ ಸಂಜೀವ ಪೂಜಾರಿ, ಡಾ| ಶಿವ ಮೂಡಿಗೆರೆ, ಹರಿ ಭಟ್ ಮುಂಡ್ಕೂರು, ಡಾ| ಭರತ್ ಸಿಂಗ್ ಸೇರಿದಂತೆ ಪುರೋಹಿತ ಹಾಗೂ ಶಿಷ್ಯವೃಂದ, ಸಾವಿರಾರು ಮಂದಿ ಭಕ್ತ ಬಳಗ, ಮುಂಬಯಿ ಅಲ್ಲಿನ ವಿವಿಧ ಮಠ-ಮಂದಿರ, ಧಾರ್ಮಿಕÀ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡು ಸದ್ಗತಿ ಕೋರಿದರು.
ಮುಂಜಾನೆಯಿಂದಲೇ ಆಗಮಿಸಲಾರಂಭಿಸಿದ ಭಕ್ತಸಮೂಹವು ಮಠದ ಪ್ರಧಾನ ಸಭಾಂಗಣಕ್ಕೆ ಒಳನುಗ್ಗಲೂ ಸಾಧ್ಯವಾಗದೆ ಮಠದ ಇತರ ಮೂರ್ನಾಲ್ಕು ಮುನ್ನಂಗಳಲ್ಲಿ ಮಾತುಗಳನ್ನು ಮೌನವಾಗಿಸಿ ಕುಳಿತು ಶ್ರೀಗಳ ವಿಶ್ವಾಸಾಭಿಮಾನÀಕ್ಕೆ ಸಾಕ್ಷಿಯಾದರು. ವೇದಿಕೆಯಲ್ಲಿ ಪುಷ್ಪಾಲಂಕಾರದಿಂದ ರಾರಾಜಿಸುತ್ತಿದ್ದ ಶ್ರೀಗಳ ಬೃಹತ್ ಭಾವಚಿತ್ರದ ಮುಂಭಾಗ ಶ್ರೀಗಳು ಬಳಸಿ ಮುಂಬಯಿನಲ್ಲೇ ಉಳಿಸಿಹೋದ ಪಾದುಕಗಳನ್ನು ಇರಿಸಲಾಗಿ ಈ ಬಗ್ಗೆ ಶ್ರೀಗಳು ತನ್ನಲ್ಲಿ ತಿಳಿಹೇಳಿದ ಒತ್ತಾಸೆಯ ಬಗ್ಗೆ ಪೆರ್ಣಂಕಿಲ ಹರಿದಾಸರು ಸಭೆಗೆ ತಿಳಿಸಿದರು. ಶ್ರೀ ಪೇಜಾವರ ಮಠದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಶ್ರೀಗಳ ಅಂತಿಮವಾದ ಚರಣಗೀತೆ (ಶ್ಲೋಕ) ಪಠಿಸಿದರು. ಮಡುಗಟ್ಟಿದ ಮೌನದಲ್ಲೇ ನೆರೆದ ಭಕ್ತರೆಲ್ಲರೂ ನಿಲುವುಸ್ಥಾನದೊಂದಿಗೆ ಶ್ಲೋಕವನ್ನು ತ್ರಿಘೋಷವಾಗಿ ಉದ್ಗರಿಸಿ ಶ್ರೀಗಳನ್ನು ಸ್ಮರಿಸಿದರು.