ಪೆÇವಾಯಿನಲ್ಲಿ ಜ.12: ಸಿಲ್ಕ್ ಆ್ಯಂಡ್ ಡೈಮಂಡ್ಸ್ ಪ್ರದರ್ಶನ-ಮಾರಾಟ
ಮುಂಬಯಿ, ಜ.07: ಬಂಟ್ಸ್ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಸಂಘದ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಮತ್ತು ಪದಾಧಿಕಾರಿಗಳ ಸಹಕಾರದೊಂದಿಗೆ ಇದೇ ಬರುವ ಭಾನುವಾರ (ಜ.12) ಬೆಳಿಗ್ಗೆ ಗಂಟೆ 10.00 ಗಂಟೆಯಿಂದ ಸಂಜೆ 6.00 ಗಂಟೆ ವರೆಗೆ ಪೆÇವಾಯಿಇಲ್ಲಿನ ಎಸ್.ಎಂ ಶೆಟ್ಟಿ ವಿದ್ಯಾಲಯದ ಸಭಾಗೃಹದಲ್ಲಿ ರೇಷ್ಮೆ ಸೀರೆ, ಬಟ್ಟೆಬರೆಗಳು ಮತ್ತು ವಜ್ರಾಭರಣಗಳ (ಸಿಲ್ಕ್ ಆ್ಯಂಡ್ ಡೈಮಂಡ್ಸ್) ಪ್ರದರ್ಶನ ಮತ್ತು ಮಾರಾಟ ಆಯೋಜಿಸಿದೆ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂಡಾ ತಿಳಿಸಿದ್ದಾರೆ.
Padmanabh S Payyade Ranjani S.Hegde.
Dr. R.K Shetty Vanita Nonda
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ ಹಾಗೂ ಪದಾಧಿಕಾರಿಗಳು ಆಗಮಿಸಿ ಪ್ರದರ್ಶನಕ್ಕೆ ಚಾಲನೆಯನ್ನೀಡಲಿದ್ದಾರೆ. ಮಹಿಳೆಯರಿಗೆ ಆಕರ್ಷಣೆ ನೀಡುವಂತಹ ಸರ್ವೋತ್ಕೃಷ್ಟ ಗುಣಮಟ್ಟ ಮತ್ತು ವೈವಿಧ್ಯಮಯ ರೇಷ್ಮೆ ಮತ್ತು ಹತ್ತಿ (ಕಾಟನ್) ಸೀರೆಗಳು ಹಾಗೂ ಆಧುನಿಕ ಮಾದರಿ ಮತ್ತು ಕಲ್ಪನೆಯ ವಿಶೇಷ ವಜ್ರಾ ಆಭರಣಗಳನ್ನು ಪ್ರದರ್ಶಿಸಲಾಗುವುದು ಅಂತೆಯೇ ಉತ್ತಮ ದರದಲ್ಲಿ ಮಾರಾಟ ಮಾಡಲಾಗುವುದು. ಆ ಪ್ರಯುಕ್ತ ಬಂಟ್ಸ್ ಸಂಘದ ಎಲ್ಲಾ ಮಹಿಳೆಯರು ಮತ್ತು ಆಸಕ್ತರು ಆಗಮಿಸಿ ಇದರ ಸದುಪಯೋಗ ಪಡೆಯಬೇಕೆಂದು ಪ್ರಾದೇಶಿಕ ಸಮಿತಿಯ ಮಹಿಳಾ ಉಪಾಧ್ಯಕ್ಷೆ ಡಾ| ಪೂರ್ಣಿಮಾ ಎಸ್.ಶೆಟ್ಟಿ, ಕಾರ್ಯದರ್ಶಿ ವಜ್ರಾ ಪೂಂಜ, ಕೋಶಾಧಿಕಾರಿ ಪ್ರೇಮಾ ಶೆಟ್ಟಿ, ಜತೆ ಕಾರ್ಯದರ್ಶಿ ಜ್ಯೋತಿ ಆರ್.ಜಿ ಶೆಟ್ಟಿ, ಜತೆ ಕೋಶಾಧಿಕಾರಿ ಉಷಾ ವಿ.ಶೆಟ್ಟಿ ಮಹಿಳಾ ಸಮಿತಿ ಪರವಾಗಿ ತಿಳಿಸಿದ್ದಾರೆ.