Thursday 24th, September 2020
canara news

ನಲ್ಲಸೋಫರಾದಲ್ಲಿ ಏಳನೇ ವಾರ್ಷಿಕ ಶ್ರೀನಿವಾಸ ಮಂಗಲ ಮಹೋತ್ಸವ ಪೂರ್ವಭಾವೀ ಸಭೆ

Published On : 12 Jan 2020   |  Reported By : Rons Bantwal


ಜವಾಬ್ದಾರಿ ನಿರ್ವಹಿಸಿ ಶ್ರೀನಿವಾಸ ಕಲ್ಯಾಣೋತ್ಸವ ಯಶಸ್ವಿ ಗೊಳಿಸಿ-ವಿರಾರ್ ಶಂಕರ್ ಶೆಟ್ಟಿ

ಮುಂಬಯಿ, ಜ.24: ತಿರುಪತಿ ತಿರುಮಲ ದೇವಸ್ಥಾನ (ಟಿ.ಟಿ.ಡಿ) ಇವರ ಪೌರೋಹಿತ್ಯದಲ್ಲಿ ಹಾಗೂ ಸರ್ವ ತುಳು ಕನ್ನಡಿಗರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಬಾರಿಯೂ ಶ್ರೀನಿವಾಸ ಮಂಗಲ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಮೂರು ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಇದೀಗಲೇ ಎಲ್ಲ ತರದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಆದ್ದರಿಂದ ಇದರ ಯಶಸ್ಸಿಗೆ ತಮ್ಮೆಲ್ಲರಿಗೆ ನೀಡುವ ಜವಾಬ್ದಾರಿ ಉತ್ತಮ ರೀತಿಯಲ್ಲಿ ನಿರ್ವಹಿಸಿ ಸಹಕರಿಸಬೇಕು. ಎಂದು ಮಹೋತ್ಸವದ ಪ್ರಧಾನ ಸಂಘಟಕ, ಧಾರ್ಮಿಕ ಚಿಂತಕ, ಸೌತ್ ಇಂಡಿಯನ್ ಫೆಡರೇಶನ್ ವಸಾಯಿ ತಾಲೂಕ ಇದರ ಅಧ್ಯಕ್ಷ ಡಾ| ವಿರಾರ್ ಶಂಕರ್ ಬಿ.ಶೆಟ್ಟಿ ಕರೆಯಿತ್ತರು.

ನಲ್ಲಸೋಫರಾ ಪೂರ್ವದ ಎಸ್‍ಫೆÇೀರ್ ಹೊಟೇಲು ಸಭಾಗೃಹದಲ್ಲಿ ಕಳೆದ ಸೋಮವಾರ ನ್‍ಡೆಸಲಾದ ಏಳನೇ ವಾರ್ಷಿಕ ಶ್ರೀನಿವಾಸ ಮಂಗಲ ಮಹೋತ್ಸವದ ಪೂರ್ವಭಾವೀ ಸಿದ್ಧತಾ ಸಭೆಯನ್ನುದ್ದೇಶಿಸಿ ವಿರಾರ್ ಶಂಕರ್ ಮಾತನಾಡಿ ಇದೇ ಜ.18ನೇ ಶನಿವಾರ ವಿರಾರ್‍ನ ಓಂ ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್ ಯಶವಂತ್ ವಿವಾ ಟೌನ್‍ಶಿಪ್ ಮೈದಾನ, ವಿವಿಸಿಎಂಸಿ ಫೈರ್ ಬ್ರಿಗೇಡ್ ಹೌಸ್, ಅಲ್ಕಾಪುರಿ ನಲ್ಲಸೋಫರಾ ಪಶ್ಚಿಮ ಇಲ್ಲಿ ಆಯೋಜಿಸಿರುವ ಮಂಗಲ ಮಹೋತ್ಸವದ ಕಾರ್ಯಕ್ರಮದಲ್ಲಿ ವಿೂರಾರೋಡ್‍ನಿಂದ ಡಹಾಣು ವರೆಗಿನ ಸರ್ವ ತುಳು ಕನ್ನಡಿಗರು ಮತ್ತು ಮುಂಬಯಿ ಮತ್ತು ಉಪನಗರಗಳ ಸಂಘಸಂಸ್ಥೆಗಳ ಸದಸ್ಯರು ಸಕ್ರೀಯರಾಗಿ ಕಾರ್ಯನಿರತರಾಗಬೇಕು. ಇಲ್ಲಿನ ಸರ್ವ ತುಳು ಕನ್ನಡಿಗರ ಸಂಘ ಸಂಸ್ಥೆಗಳ ಪೆÇ್ರ್ರೀತ್ಸಾಹ ಹಾಗೂ ಸಹಕಾರದಿಂದ ಈ ವರೆಗಿನ ಈ ಪವಿತ್ರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದ್ದು, ಈ ಬಾರಿಯ ಮಂಗಲೋತ್ಸವದಲ್ಲೂ ಪಾಲ್ಗೊಳ್ಳುವ ಭಕ್ತರಿಗೆ ಹಲವಾರು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ವಿರಾರ್ ಶಂಕರ್ ತಿಳಿಸಿದರು.

ಮೌಳಿ ಸಮಾಜದ ಧುರೀಣ ಚಂದ್ರಮೌಳಿ ಅವರು ಮಾತನಾಡುತ್ತಾ, ಸಂಘಟಕರು ನಮಗೆ ನೀಡಿರುವ ಜವಾಬ್ದಾರಿಗಳನ್ನು ನಿಷ್ಠೆಯಿಂದ ದೇವರ ಸೇವೆಯೆಂದು ನಿರ್ವಹಿಸಿ ಶ್ರೀನಿವಾಸ ಕಲ್ಯಾಣ ಮಹೋತ್ಸವದಲ್ಲಿ ನಾವೆಲ್ಲರೂ ಉತ್ಸಾಹದಿಂದ ಭಾಗಿಗಳಾಗೋಣ. ಈ ಬಾರಿಯ ಯಶಸ್ಸಿನ ಬಳಿಕ ಪ್ರತಿವರ್ಷವೂ ಇಂತಹ ಪುಣ್ಯಾಧಿ ಕಾರ್ಯಕ್ರಮಗಳು ನಡೆಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಲ್ಲಸೋಫರಾ ತುಳು ಕೂಟದ ಗೌರವಾಧ್ಯಕ್ಷ ಶಶಿಧರ ಕೆ.ಶೆಟ್ಟಿ ಮಾತನಾಡಿ ಈ ಮಂಗಲ ಮಹೋತ್ಸವವು ಯಶಸ್ವಿಯಾಗಿ ನೇರವೇರಲು ಸರ್ವರ ಉಪಸ್ಥಿತಿ ಮತ್ತು ಸಹಕಾರ ಅಗತ್ಯ ಎಂದರು. ಕಳೆದ ಬಾರಿಯೂ ಕಾರ್ಯಕರ್ತರಿಗೆ ಐ.ಡಿ ಕಾರ್ಡ್‍ಗಳನ್ನು ನೀಡಿದ್ದೇವೆ. ಈ ಬಾರಿಯೂ ಸೇವಕ ಕಾರ್ಯಕರ್ತರಿಗೆ 1000 ಗುರುತುಪತ್ರಗಳನ್ನು ಮಾಡುವ ಜವಾಬ್ದಾರಿ ನನ್ನದು ಎಂದರು.

ನಾನು ಪ್ರತಿವರ್ಷ ತಿರುಪತಿಗೆ ವೆಂಕಟ್ರಮಣ ದೇವರ ದರ್ಶನಕ್ಕೆ ಹೋಗುತ್ತೇನೆ. ಆದರೆ ಅಲ್ಲಿ ಸುಪ್ರಭಾತಂ ನೋಡುವ ಅವಕಾಶ ನನಗೆ ಸಿಕ್ಕಿರಲಿಲ್ಲ. ಆದರೆ ಇಲ್ಲಿ ನಡೆಸಲ್ಪಟ್ಟ ಶ್ರೀನಿವಾಸ ಮಂಗಲ ಮಹೋತ್ಸವದಲ್ಲಿ ಬೆಳಿಗ್ಗೆ ಸುಪ್ರಭಾತಂ ನೋಡುವ ಭಾಗ್ಯ ನನಗೆ ಮತ್ತು ಎಲ್ಲರಿಗೂ ಲಭಿಸಿರಿವುದು ನಮ್ಮ ಪುಣ್ಯದ ಫಲವಾಗಿದೆ. ಈ ಮಹೋತ್ಸವದಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಭಾಷಿಕರು ಭಾಗವಹಿಸಿ, ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾಗುವಂತೆ ಲ| ಡಾ| ಶಂಕರ್ ಕೆ.ಟಿ ವಿನಂತಿಸಿ ಕೊಂಡರು.

ಸಭೆಯ ವೇದಿಕೆಯಲ್ಲಿ ಎಸ್‍ಐಎಫ್ ವಸಾಯಿ ಮೋಹನ್ ಟಿ., ಜೊತೆ ಕಾರ್ಯದರ್ಶಿ ಡಾಯನ್ ಡಿಸೋಜಾ ಆಸೀನರಾಗಿದ್ದರು. ಸಭೆಯಲ್ಲಿ ದಕ್ಷಿಣ ಭಾರತೀಯ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಪಾಂಡಿಚೇರಿ ಮತ್ತು ಕೊಂಕಣದ ಗೋವಾ ಹಾಗೂ ಮಹಾರಾಷ್ಟ್ರದ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು. ಗೌ| ಪ್ರ. ಕಾರ್ಯದರ್ಶಿ ನರೇಂದ್ರ ಪ್ರಭು ಸ್ವಾಗತಿಸಿ ಸಭೆಗೆ ಆಗಮಿಸಿದ ಸರ್ವರಿಗೂ ವಂದಿಸಿದರು.

 
More News

ಸಾದೇವಿ ಸೂರಪ್ಪ ಪೂಜಾರಿ ನಿಧನ
ಸಾದೇವಿ ಸೂರಪ್ಪ ಪೂಜಾರಿ ನಿಧನ
ರಾಜು ಪರಮೇಶ್ವರ ಶೆಟ್ಟಿ   ನಿಧನ
ರಾಜು ಪರಮೇಶ್ವರ ಶೆಟ್ಟಿ ನಿಧನ
ಮಲಾರ್ ಸಾಧಕರಿಗೆ ಸನ್ಮಾನ.......
ಮಲಾರ್ ಸಾಧಕರಿಗೆ ಸನ್ಮಾನ.......

Comment Here