Saturday 10th, May 2025
canara news

59ನೇ ವಾರ್ಷಿಕೋತ್ಸವ ಸಂಭ್ರಮಿಸಿದ ಬಿಲ್ಲವರ ಗುರುನಾರಾಯಣ ನೈಟ್ ಹೈಸ್ಕೂಲು

Published On : 15 Jan 2020   |  Reported By : Rons Bantwal


ಮಕ್ಕಳ ಭವಿಷ್ಯ ಸ್ವರ್ಣಮಯ ಗೊಳಿಸುವುದೇ ವಿದ್ಯಾಕ್ಷೇತ್ರದ ಹೊಣೆ-ಎಂ.ಬಿ ಕುಕ್ಯಾನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.11: ಬಿಲ್ಲವರ ಅಸೋಸಿಯೇಶನ್‍ನ ಸಂಚಾಲಕತ್ವದ ಗುರುನಾರಾಯಣ ರಾತ್ರಿ ಶಾಲಾ ಸಾಕ್ಷರಸ್ಥ ವಿದ್ಯಾಥಿರ್üಗಳನ್ನು ಮುಖತಃ ಭೇಟಿಯಾಗಿ ಕಾಣಲೆಂದೇ ನಾನು ಇಲ್ಲಿಗೆ ಬಂದಿರುವೆ. ರಾಷ್ಟ್ರದ ಭಾವೀ ಪ್ರಜೆಗಳ ಭವಿಷ್ಯವನ್ನು ಸ್ವರ್ಣಮಯ ಗೊಳಿಸುವುದೇ ಶೈಕ್ಷಣಿಕ ಕ್ಷೇತ್ರದ ಜವಾಬ್ದಾರಿಯಾಗಿದೆ. ಅಂತಹ ಮಕ್ಕಳನ್ನು ಪೆÇ್ರೀತ್ಸಹಿಸುವ ಹೊಣೆಗಾರಿಕೆ ಸಂಘ-ಸಂಸ್ಥೆಯದ್ದಾಗಿದೆ. ಸಂಸ್ಥೆಗಳನ್ನು ಪ್ರೇರೆಪಿಸುವ ಕರ್ತವ್ಯ ನಮ್ಮದಾಗಿದೆ. ಆದುದರಿಂದ ಮಕ್ಕಳೆಲ್ಲರೂ ಸುಶಿಕ್ಷಿತರಾಗಿ ಸ್ವಯಂ ಬದುಕನ್ನು ರೂಪಿಸಿ ಭವ್ಯ ಭಾರತದ ನಿರ್ಮಾಣಕ್ಕೆ ಬದ್ಧರಾಗಬೇಕು ಎಂದು ನಾಡಿನ ಹಿರಿಯ ಸಾಹಿತಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಖವಾಣಿ ಅಕ್ಷಯ ಮಾಸಿಕದ ಗೌರವ ಸಂಪಾದಕ ಎಂ.ಬಿ ಕುಕ್ಯಾನ್ ನುಡಿದರು.

ಸಾಂತಾಕ್ರೂಜ್‍ನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರÀ ಸಂಜೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಗುರುನಾರಾಯಣ ರಾತ್ರಿ ಪ್ರೌಢಶಾಲೆ ತನ್ನ 59ನೇ ವಾರ್ಷಿಕೋತ್ಸವ ಸಂಭ್ರಮಿಸಿದ್ದು ಎಂ.ಬಿ ಕುಕ್ಯಾನ್ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಮುಂಬಯಿನ ಹೆಸರಾಂತ ಲೆಕ್ಕಪರಿಶೋಧಕ ಪ್ರಕಾಶ್ ಶೆಟ್ಟಿ, ಗೌರವ ಅತಿಥಿüಗಳಾಗಿ ಕನ್ನಡ ಸಂಘ ಸಾಂತಾಕ್ರೂಜ್ ಇದರ ಶಿಕ್ಷಣ ಸಮಿತಿ ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ, ಯುವೋದ್ಯಮಿ ಸುರೇಶ್ ಆಚಾರ್ಯ ಕಲ್ಮನೆ ಉಪಸ್ಥಿತರಿದ್ದು ಸ್ಪರ್ಧಾ ವಿಜೇತ ವಿದ್ಯಾಥಿರ್üಗಳಿಗೆ ವಾರ್ಷಿಕ ಬಹುಮಾನ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.

ಗತ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ ಶಾಲಾ ಸರ್ವೋತ್ಕೃಷ್ಟ ಶ್ರೇಣಿಯಲ್ಲಿ ಪಾಸಾದ ವಿದ್ಯಾಥಿರ್üಗೆ ವಾರ್ಷಿಕವಾಗಿ ಕೊಡಮಾಡುವ ಎಂ.ಬಿ ಕುಕ್ಯಾನ್ ಪ್ರಾಯೋಜಕತ್ವದ ಸ್ವರ್ಣ ಪದಕವನ್ನು ಈ ಬಾರಿ ಮಹಾರಾಷ್ಟ್ರ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದ ವಿದ್ಯಾಥಿರ್üನಿ ಕು| ಪೂಜಾ ಚವ್ಹಾಣ್ ಅವರಿಗೆ ಕುಕ್ಯಾನ್ ಸ್ವತಃ ಪ್ರದಾನಿಸಿ ಅಭಿನಂದಿಸಿದರು. ಹಾಗೂ ಉತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಎಲ್ಲಾ ವಿದ್ಯಾಥಿರ್üಗಳಿಗೆ ಮತ್ತು ಶಿಕ್ಷಕ ವೃಂದಕ್ಕೆ ಬೆಳ್ಳಿಯ ನಾಣ್ಯಗಳನ್ನು ಕೊಡಮಾಡಿದರು. ಅಸೋಸಿಯೇಶನ್‍ನ ಉಪಾಧ್ಯಕ್ಷ ಶಂಕರ ಡಿ.ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ವೇದಿಕೆಯಲ್ಲಿದ್ದು ಉತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾಥಿರ್üಗಳಿಗೆ ಬೆಳ್ಳಿಯ ನಾಣ್ಯ, ಬಹುಮಾನ ನೀಡಿ ಅಭಿನಂದಿಸಿದರು

ಅಸೋಸಿಯೇಶನ್ ವಿದ್ಯೆಗಾಗಿ ಕೊಡುವ ಮಹತ್ವ ಶ್ಲಾಘನೀಯ. ವಿದ್ಯಾಥಿರ್sಗಳು ಪರೀಕ್ಷಾ ಸಮಯದಲ್ಲಿ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಬೇಕು. ಈ ಸಮಯದಲ್ಲಿ ವಿದ್ಯಾಥಿರ್sಗಳು ಗುರು ಹಿರಿಯರ ಮಾರ್ಗದರ್ಶನ ಪಡೆಯಬೇಕು. ಮಾತ ಪಿತರ ಸೇವೆ ನಿಮ್ಮದಾಗಲಿ ಎಂದು ಮುಂಬಯಿನ ಹೆಸರಾಂತ ಲೆಕ್ಕಪರಿಶೋಧಕ ಸಿಎ| ಪ್ರಕಾಶ್ ಎಸ್.ಶೆಟ್ಟಿ ನುಡಿದರು.

ಶಕೀಲಾ ಶೆಟ್ಟಿ ಮಾತನಾಡಿ ವಿದ್ಯಾಥಿರ್sಗಳು ಜೀವನದಲ್ಲಿ ಸಫಲತೆಯನ್ನು ಪಡೆಯಬೇಕು. ಅಸೋಸಿಯೇಶನ್ ವಿದ್ಯಾಥಿರ್sಗಳಿಗಾಗಿ ಪರಿಶ್ರಮ ವಹಿಸಿದೆ. ಅದರ ಸದುಪಯೋಗ ಪಡೆಯಬೇಕು ಎಂದು ಮಕ್ಕಳಿಗೆ ಸಲಹಿದರು.

ಸದಾ ಸಮರಸ ಬಾಳ್ವೆಗೆ ಪ್ರೇರಕವಾಗಿ ಮಕ್ಕಳಲ್ಲಿ ಮಾಧುರ್ಯತೆ, ಕಲಾಸಕ್ತರಲ್ಲಿ ಸೃಜನಶೀಲತೆ ಮೂಡಿಸುವ ಅಸೋಸಿಯೇಶನ್‍ನ ಎಲ್ಲಾ ಸ್ತರಗಳ ಸೇವೆ ಶ್ಲಾಘನೀಯ. ಮಕ್ಕಳು ಆಧುನಿಕ ವೈಜ್ಞಾನಿಕ ಯುಗದ ಕೆಟ್ಟಾಭ್ಯಾಸಗಳ ಗುಲಾಮರಾಗದೆ ಭವಿಷ್ಯತ್ಕಾಲದ ಚಿಂತಕರಾಗಬೇಕು. ಇದು ವಿದ್ಯಾಥಿರ್ü ಜೀವನದಲ್ಲಿ ಮಾತ್ರ ಸಾಧ್ಯವಾಗುವುದು. ಅನ್ನುತ್ತಾ ಎರಡು ಕಥೆಗಳ ಮೂಲಕ ಹುರಿದುಂಬಿಸಿ ಶೈಕ್ಷಣಿಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಸುರೇಶ್ ಆಚಾರ್ಯ ವಿದ್ಯಾಥಿರ್sಗಳಿಗೆ ಮನವರಿಸಿದರು.

ವಿದ್ಯಾಥಿರ್sಗಳು ಜೀವನದಲ್ಲಿ ಶಿಸ್ತು ಪಾಲಿಸಬೇಕು. ಮಕ್ಕಳನ್ನು ತಿದ್ಧಿ ಅವರನ್ನು ಶಿಲೆ ಮೂರ್ತಿಯಾಗಿ ಪರಿವರ್ತನೆ ಮಾಡುವ ಶಿಲ್ಫಿಗಳು ಶಿಕ್ಷಕರು. ಅವರ ಮಾರ್ಗದರ್ಶನ ಹಿರಿಯರ ಮಾರ್ಗದರ್ಶನದಂತೆ ನಡೆದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು.ವಿದ್ಯಾವಂತರಾಗಿ ಶಾಲೆಗೆ ಹಾಗೂ ಸಂಘಕ್ಕೆ ಕೀರ್ತಿ ತರುವತಾಗಬೇಕು ಹಾಗೂ ದೇಶದ ಒಳ್ಳೆಯ ಪ್ರಜೆಗಳಾಗಿ ಬಾಳಬೇಕು ಎಂದÀು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಚಂದ್ರಶೇಖರ್ ಪೂಜಾರಿ ತಿಳಿಸಿದರು.

ವಿದ್ಯಾಥಿರ್üನಿ ಬಳಗದ ಪ್ರಾರ್ಥನೆಯೊಂದಿಗೆ ಸಮಾರಂಭ ಆದಿಗೊಂಡಿತು. ಶಾಲಾ ಉಪ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರಯ್ಯ ಸಿ. ವಾರ್ಷಿಕ ವರದಿ ವಾಚಿಸಿದರು. ಅಸೋಸಿಯೇಶನ್‍ನ ಗೌ| ಜೊತೆ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್ ಅತಿಥಿü ಪರಿಚಯಗೈದರು. ಶಿಕ್ಷಕರಾದ ದಶಮಣಿ ಎಸ್.ಡಿ, ಹೇಮಾ ಗೌಡ ಪುರಸ್ಕೃತರ ಯಾದಿ ಪ್ರಕಟಿಸಿದರು. ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಶಾಂತಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಮಲ್ಲಿಕಾರ್ಜುನ ಐ.ಬಡಿಗೇರಾ ವಂದಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಶಿವಾನಂದ ಪಾಟೀಲ, ಸುನೀಲ್ ಕಾಂಬ್ಳೆ, ಮೋಹಿನಿ ಪೂಜಾರಿ, ವಿಮಲಾ ಪೂಜಾರಿ, ಶಿಕ್ಷಕೇತರ ಸಿಬ್ಬಂದಿಗಳಾದ ನವಿತಾ ಎಸ್.ಸುವರ್ಣ, ಸುನೀಲ್ ಪಾಟೀಲ್, ವಿದ್ಯಾಥಿರ್s ಪ್ರತಿನಿಧಿ ಐಶ್ವರ್ಯ ಆರ್.ಪೂಜಾರಿ, ಹಳೆ ವಿದ್ಯಾಥಿರ್sಗಳು ಸೇರಿದಂತೆ ನೂರಾರು ವಿದ್ಯಾಥಿರ್üಗಳು, ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದರು. ವಿದ್ಯಾಥಿರ್üಗಳು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು. ಧರ್ಮೇಶ್ ಎಸ್.ಸಾಲ್ಯಾನ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here