Saturday 29th, February 2020
canara news

ಬಿಎಸ್‍ಎಂ ಅಂಧೇರಿ ಬಾಂದ್ರಾ ಸಮಿತಿಯಿಂದ ಸಿಲ್ಕ್ ಆ್ಯಂಡ್ ಡೈಮಂಡ್ಸ್ ಪ್ರದರ್ಶನ

Published On : 16 Jan 2020   |  Reported By : Ronida Mumbai


ಭಾರತೀಯ ಸ್ತ್ರೀಯರಿಗೆ ಸೀರೆಗಳೇ ಭೂಷಣ : ರಂಜನಿ ಸುಧಾಕರ್ ಹೆಗ್ಡೆ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜ.12: ಜಾಗತಿಕ ಬೆಳವಣಿಗೆಯ ಈ ಕಾಲಘಟ್ಟದಲ್ಲಿ ಉಡುಪು ಧರಿಸುವಿಕೆಯÀುಲ್ಲಿ ಭಾರೀ ಪ್ರಮಾಣದ ಬದಲಾವಣೆಯಾದರೂ ನಮ್ಮೂರ ಮಹಿಳೆಯರು, ಭಾರತೀಯ ಸ್ತ್ರೀಯರಿಗೆ ಸೀರೆಗಳೇ ಭೂಷಣ. ನಮ್ಮ ರಾಷ್ಟ್ರದ ಮಹಿಳೆಯರ ಸಾಂಪ್ರದಾಯಿಕ ಉಡುಪು ಸೀರೆ ಆಗಿದೆ. ಈ ಜೊತೆಗೆ ನಮ್ಮಲ್ಲಿನ ಆಭರಣಗಳು ಮಹಿಳೆಯರ ಸೌಂದರ್ಯ ಇಮ್ಮಡಿಗೊಳಿಸುತ್ತವೆ. ಇದಕ್ಕೆ ಮೆರಗು ನೀಡಲು ಬಂಟರ ಸಂಘದ ಪೆÇ್ರೀತ್ಸಹ ಪ್ರಧಾನವಾಗಿದ್ದು, ಸಂಘದ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಶ್ರಮವೂ ಅಭಿನಂದನೀಯ ಎಂದು ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ ತಿಳಿಸಿದರು.

ಬಂಟ್ಸ್ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಪೆÇವಾಯಿ ಇಲ್ಲಿನ ಎಸ್.ಎಂ ಶೆಟ್ಟಿ ವಿದ್ಯಾಲಯದ ಸಭಾಗೃಹದಲ್ಲಿ ಕಳೆದ ಆದಿತ್ಯವಾರ ಆಯೋಜಿಸಿದ್ದ ರೇಷ್ಮೆ ಸೀರೆ, ಬಟ್ಟೆಬರೆಗಳು ಮತ್ತು ವಜ್ರಾಭರಣಗಳ (ಸಿಲ್ಕ್ ಆ್ಯಂಡ್ ಡೈಮಂಡ್ಸ್) ಮಾರಾಟ ಮತ್ತು ಪ್ರದರ್ಶನವನ್ನು ಉದ್ಘಾಟಿಸಿ ರಂಜನಿ ಹೆಗ್ಡೆ ತಿಳಿಸಿದರು.

ಬಂಟ್ಸ್ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಮಾತನಾಡಿ ಎಲ್ಲರ ಸಹಕಾರ ಮತ್ತು ಪೆÇ್ರೀತ್ಸಾಹದಿಂದ ನಮ್ಮ ಸಮಿತಿ ಉತ್ತಮ ಸೇವಾಕಾರ್ಯಕ್ರಮಗಳನ್ನು ನಡೆಸಲು ಸಶಕ್ತವಾಗಿದೆ. ಇದಕ್ಕೆ ಮಹಿಳಾ ವಿಭಾಗದಿಂದ ಇಂದು ಆಯೋಜಿಸಿರುವ ಈ ಕಾರ್ಯಕ್ರಮವೂ ಪೂರಕ. ನಮ್ಮ ಇತ್ತೀಚೆಗೆ ಯೋಜಿಸಿರುವ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ನಿರೀಕ್ಷೆಗೂ ಮೀರಿದ ಭಕ್ತÀರು ಸಹಕರಿಸಿದ್ದು, ಸರ್ವರಿಗೂ ಒಳಿತಾಗಲಿ ಸಹಕರಿಸಿದ ಎಲ್ಲರಿಗೂ ಅಭಾರಿಯಾಗಿದ್ಡೇವೆ ಎಂದÀು ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಹಯೋಗವಿತ್ತ ಇಲ್ಲಿ ಉಪಸ್ಥಿತ ಭಕ್ತಮಹಾನೀಯರಿಗೆ ಶ್ರೀ ವೆಂಕಟೇಶ್ವರ ದೇವರ ಭಾವಚಿತ್ರ, ಪ್ರಸಾದವನ್ನಿತ್ತು ಗೌರವಿಸಿದರು.

ಉದ್ಘಟನಾ ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಜೊತೆ ಕೋಶಾಧಿಕಾರಿ ರತ್ನಾ ಶೆಟ್ಟಿ ಸಾಂದರ್ಭಿಕವಾಗಿ ಮಾತನಾಡಿ ಶುಭಾರೈಸಿದರು. ಬಂಟರ ಸಂಘದ ಅಂಧೇರಿ ಬಾಂದ್ರಾ ಸಮಿತಿ ಸಂಚಾಲಕ ಡಿ.ಕೆ ಶೆಟ್ಟಿ ಪೆÇವಾಯಿ, ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್.ಜಿ ಶೆಟ್ಟಿ, ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ, ಕೋಶಾಧಿಕಾರಿ ಕರುಣಾಕರ್ ವಿ.ಶೆಟ್ಟಿ, ಜತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರು, ಜೊತೆ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ, ಮಹಿಳಾ ಉಪಾಧ್ಯಕ್ಷೆ ಡಾ| ಪೂರ್ಣಿಮಾ ಎಸ್.ಶೆಟ್ಟಿ, ಕಾರ್ಯದರ್ಶಿ ವಜ್ರಾ ಪೂಂಜ, ಕೋಶಾಧಿಕಾರಿ ಪ್ರೇಮಾ ಶೆಟ್ಟಿ, ಜತೆ ಕಾರ್ಯದರ್ಶಿ ಜ್ಯೋತಿ ಆರ್.ಶೆಟ್ಟಿ, ಜತೆ ಕೋಶಾಧಿಕಾರಿ ಉಷಾ ವಿ.ಶೆಟ್ಟಿ, ಅಂಧೇರಿ ಬಾಂದ್ರಾ ಸಮಿತಿಯ ಉಪ ಸಮಿತಿಗಳ ಮುಖ್ಯಸ್ಥರು, ಸದಸ್ಯರನೇಕರು ಉಪಸ್ಥಿತರಿದ್ದರು.

ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂಡಾ ಸ್ವಾಗತಿಸಿ ಪ್ರಸ್ತಾವನೆಗೈದರು. ಸ್ಥಾನೀಯ ಆಸಕ್ತರು ಆಗಮಿಸಿ ಸದುಪಯೋಗ ಪಡೆದು ಕೊಂಡರು.
More News

ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ

Comment Here