Saturday 10th, May 2025
canara news

ಭಾಂಡೂಪ್‍ನಲ್ಲಿ ಸ್ವರ್ಗೀಯ ಚಂದ್ರಶೇಖರ ರಾವ್ ಸಂಸ್ಮರಣಾ ಕಾರ್ಯಕ್ರಮ

Published On : 17 Jan 2020   |  Reported By : Rons Bantwal


ಪ್ರತಿಭಾವಂತರಿಗೆ ಪೆÇ್ರೀತ್ಸಾಹ ನೀಡುವುದೆ ಟ್ರಸ್ಟ್ ಉದ್ದೇಶ : ಜಯಂತಿ ಸಿ.ರಾವ್

ಮುಂಬಯಿ, ಜ.13: ದಿ. ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ಮತ್ತು ಮುಂಬಯಿ ಚುಕ್ಕಿ ಸಂಕುಲ ಸಹಕಾರದೊಂದಿಗೆ ಸ್ವರ್ಗೀಯ ಚಂದ್ರಶೇಖರ ರಾವ್ ಸಂಸ್ಮರಣಾ ಕಾರ್ಯಕ್ರಮ ಕಳೆದ ಗುರುವಾರ (ಜ.9) ಭಾಂಡೂಪ್‍ನಲ್ಲಿ ಹಮ್ಮಿಕೊಳ್ಳಲಾಯಿತು.

ಜಯಂತಿ ಸಿ.ರಾವ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಚಂದ್ರಶೇಖರ ರಾವ್ ಅವರ ಆಶಯದಂತೆ ಈ ಟ್ರಸ್ಟ್ ರಚಿಸಲಾಗಿದ್ದು, ಮಕ್ಕಳ ಪ್ರತಿಭೆ ಪುರಸ್ಕಾರ, ಅಸಹಾಯಕರಿಗೆ ನೆರವು ಮತ್ತು ಅವರ ಆಸಕ್ತಿಯ ಕ್ಷೇತ್ರವಾದ ಸಾಹಿತ್ಯದಲ್ಲಿ ತೆರೆಮರೆಯಲ್ಲಿರುವ ಪ್ರತಿಭಾವಂತರಿಗೆ ಪೆÇ್ರೀತ್ಸಾಹ ನೀಡುವುದೆ ಉದ್ದೇಶವಾಗಿದೆ. ತಮ್ಮೆಲ್ಲರ ಸಹಕಾರದಿಂದ ಈ ಹಿನ್ನೆಲೆಯಲ್ಲಿ ಮುಂದುವರಿಯುವ ಇಚ್ಛೆ ಇದೆ. ಇದೆಲ್ಲವನ್ನು ಸಾಧ್ಯವಾಗಿಸಲು ಸದಾ ಬೆನ್ನೆಲುಬಾಗಿರುವ ಚುಕ್ಕಿ ಸಂಕುಲದ ಕವಿ, ಸಾಹಿತಿ, ಕಲಾವಿದರಾದ, ರಾವ್ ಅವರ ನಿಕಟವರ್ತಿಗಳೂ ಆಗಿರುವ ಸಾ.ದಯ ಮತ್ತು ಗೋಪಾಲ ತ್ರಾಸಿ ಇವರ ಸಹಕಾರ ಅನುಪಮವಾದುದು ಎಂದರು.

ಈ ಸಂದರ್ಭದಲ್ಲಿ ನೆರೆದ ಕವಿಗಳಾದ ಶಾರದಾ ಅಂಬೆಸಂಗೆ, ಡಾ| ರಜನಿ ವಿ.ಪೈ. ಡಾ| ದಾಕ್ಷಾಯಣಿ ಯಡಹಳ್ಳಿ, ಸರೋಜ ಅಮಾತಿ, ಕುಮುದಾ ಶೆಟ್ಟಿ ಕಾವ್ಯ ವಾಚನ ಮಾಡಿದರು. ಅರುಣ್ ಶೇಠ್ ಮತ್ತು ಎಸ್.ಶೆಣೈ ಸಂದರ್ಭೋಚಿತವಾಗಿ ಮಾತಾಡಿದರು.

ಕಾರ್ಯಕ್ರಮದಲ್ಲಿ ಬಡ ವಿದ್ಯಾಥಿರ್üಗಳಿಗೆ ನೆರವು ನೀಡಲಾಯಿತು. ರಾವ್ ಅವರ ಹಿತೈಷಿಗಳು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ, ಮಕ್ಕಳ ಹಾಡು, ನೃತ್ಯ ಮತ್ತು ಕಾವ್ಯ ವಾಚನ ಗೈದರು. ಹೋಪ್ ಫೌಂಡೇಶನ್ ಧಾರಾವಿ ಇದರ ಅನಿಲ ಬೊಡಲ್, ಭೀಮರಾಯ ಚಿಲ್ಕಾ ಮತ್ತಿತರರು ಉಪಸ್ಥಿತರಿದ್ದು ಕವಿ, ಕಥೆಗಾರ ಗೋಪಾಲ ತ್ರಾಸಿ ಸ್ವಾಗತಿಸಿ ಪ್ರಸ್ತಾವಿಕ ಮಾತಾಡಿ, ಚಂದ್ರಶೇಖರ ರಾವ್ ಅವರ ಕವನ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.
ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿ ಕಂಡಿತು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here