Thursday 10th, July 2025
canara news

ಬಿಸಿಸಿಐ ಮಂಗಳೂರು ಘಟಕದ ಅಧ್ಯಕ್ಷರಾಗಿ ಗಣೇಶ ಬಂಗೇರ ಆಯ್ಕೆ

Published On : 17 Jan 2020   |  Reported By : Rons Bantwal


ಮುಂಬಯಿ, ಜ.14: ಮಂಗಳೂರುನ ಪ್ರತಿಷ್ಠಿತ ಉದ್ಯಮಿ, ಹೆಸರಾಂತ ಕೊಡುಗೈದಾನಿ ಗಣೇಶ ಬಂಗೇರ ಅವರು ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ) ಇದರ ಮಂಗಳೂರು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಳೆದ ಸೋಮವಾರ ಮಂಗಳೂರು ಇಲ್ಲಿನ ದೀಪಾ ಕಂಫರ್ಟ್ಸ್ ಹೊಟೇಲು ಸಭಾಗೃಹದಲ್ಲಿ ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿದ ಘಟಕದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು, ಪ್ರಧಾನ ಕಾರ್ಯದರ್ಶಿ ಆಗಿ ರವಿ ಪೂಜಾರಿ ಚಿಲಿಂಬಿ, ಗೌರವ ಸಲಹೆಗಾರರಾಗಿ ನವೀನ್ಚಂದ್ರ ಡಿ.ಸುವರ್ಣ ಮಂಗಳೂರು ಹಾಗೂ ಪಿತಾಂಬರ ಹೇರಾಜೆ ಬೆಳ್ತಂಗಡಿಯ ಇವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು.

ಉಪಾಧ್ಯಕ್ಷರುಗಳಾಗಿ ಜಯಂತ ನಡುಬೈಲ್ ಮತ್ತು ಚಂದ್ರಶೇಖರ ನಾನಿಲ್ ಹಾಗೂ ಜತೆ ಕಾರ್ಯದರ್ಶಿ ಆಗಿ ಸತೀಶ ಬೋಳಾರ್, ಕೋಶಾಧಿಕಾರಿ ಆಗಿ ಕು| ಯಶಸ್ವಿನಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಎಂ.ಡಿ ಪೂಜಾರಿ, ಸಂಪತ್ ಸುವರ್ಣ, ಕಿರಣ್‍ರಾಜ್, ಪದ್ಮರಾಜ್, ನವೀನ್ ಸುವರ್ಣ, ಸಂತೋಷ್ ಕುಮಾರ್, ಅಶೋಕ್ ಕುಮಾರ್, ಭಾಸ್ಕರ್ ಸಾಲಿಯಾನ್, ಪ್ರಶಾಂತ್ ಸನಿಲ್ ಆಯ್ಕೆಯಾದರು.

ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಾತನಾಡಿ ಬಿಸಿಸಿಐ ಸಂಸ್ಥೆಯ ಧ್ಯೇಯೋದ್ದೇಶವನ್ನು ಸ್ಥೂಲವಾಗಿ ತಿಳಿಸಿದರು.

ಸಭೆಯಲ್ಲಿ ಬಿಸಿಸಿಐ ಉಪಾಧ್ಯಕ್ಷ ಹರೀಶ್ ಜಿ.ಅಮೀನ್, ಡಾ| ಶ್ರೇಯಸ್, ಡಾ| ವಿಶಾಲ ಅಮೀನ್, ಡಾ| ವಿವೇಕ್ ಅಮೀನ್, ಸಖಾರಾಮ್ ಕಿರೋಡಿಯನ್ ಮುಂತಾದ ಗಣ್ಯರು ಹಾಜರಿದ್ದರು. ಅರುಣ್ ಕಿರೋಡಿಯನ್ ಸ್ವಾಗತಿಸಿ ಜಿಲ್ಲೆಯಲ್ಲಿನ ಉದ್ಯಮಿಗಳು ಸದಸ್ಯತ್ವ ಪಡೆದು ಈ ಸಂಸ್ಥೆಯ ಸದುಪಯೋಗ ಪಡೆಯಲು ತಿಳಿಸಿದರು.

ನಿರ್ಗಮನ ಅಧ್ಯಕ್ಷ ಅರುಣ್ ಕಿರೋಡಿಯನ್ ಅವರು ನೂತನ ಅಧ್ಯಕ್ಷ ಗಣೇಶ ಬಂಗೇರ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿ ಶುಭಾರೈಸಿದರು. ಮೋಹನ್ ಅಮೀನ್ ಸಭಾ ಕಲಾಪ ನಡೆಸಿದರು. ರವಿ ಪೂಜಾರಿ ಚಿಲಿಂಬಿ ವಂದಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here