Saturday 10th, May 2025
canara news

ಒತ್ತಡದ ಜೀವನದಿಂದ ಅನಾರೋಗ್ಯ- ಮಂಜುನಾಥ್ ಸಾಗರ್

Published On : 21 Jan 2020   |  Reported By : Rons Bantwal


ಮಂಗಳೂರು : "ಆಧುನಿಕ ಕಾಲದಲ್ಲಿ ನಿರಂತರ ಒತ್ತಡದಿಂದಾಗಿ ನಾವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಸಕ್ಕರೆ ಕಾಯಿಲೆ ತೀರಾ ಸಾಮಾನ್ಯವೆನ್ನುವಂತೆ ಎಲ್ಲರನ್ನೂ ಕಾಡುತ್ತಿದೆ. ನೇತ್ರ ತಪಾಸಣೆಯನ್ನು ಕ್ಲಪ್ತ ಸಮಯದಲ್ಲಿ ಮಾಡುವುದರಿಂದ ಮುಂದೊದಗ ಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ಶಿಬಿರಾರ್ಥಿಗಳು ಈ ಶಿಬಿರದ ಪೂರ್ಣ ಪ್ರಯೋಜನ ಪಡೆದುಕೊಂಡಿರುವುದು ಸಂಘಟಕರಿಗೆ ಸಮಾಧಾನವನ್ನುಂಟು ಮಾಡಿದೆ ಹಾಗೂ ಈ ಸಂದರ್ಭದಲ್ಲಿ ನೇತ್ರ ಪರೀಕ್ಷೆಗೊಳಪಟ್ಟ 120 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಿರುವುದು ಶ್ಲಾಘನೀಯ ವಿಷಯ ಎಂದು ಇಂ. ಕೆ.ಪಿ. ಮಂಜುನಾಥ ಸಾಗರ್ ಅಭಿಪ್ರಾಯಪಟ್ಟರು.

ಅವರು ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಜರ್ಸ್ ಲಿಮಿಟೆಡ್, ಪಣಂಬೂರು, ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಎಸ್.ಕೆ.ಮುನಿಸಿಪಲ್ ಎಂಪ್ಲಾಯೀಸ್ ಯೂನಿಯನ್ (ರಿ) ಮನಪಾ ಮಂಗಳೂರು ಹಾಗೂ ಯೂತ್ ರೆಡ್ ಕ್ರಾಸ್ ಯೂನಿಟ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬ್ಯುಸಿನೆಸ್ ಮೆನೇಜ್‍ಮೆಂಟ್ ಮಂಗಳೂರು ಇವರ ಸಹಯೋಗದಲ್ಲಿ ದ.ಕ.ಜಿ.ಪ.ಸ. ಹಿರಿಯ ಪ್ರಾಥಮಿಕ ಶಾಲೆ, ಪಾಂಡೇಶ್ವರದಲ್ಲಿ ಇತ್ತೀಚೆಗೆ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬಂದರು ಕಾರ್ಪೊರೇಟರ್ ಅಬ್ದುಲ್ ಲತೀಫ್ ಅಧ್ಯಕ್ಷತೆ ವಹಿಸಿದ್ದರು. ಅತ್ತಾವರ ಕಾರ್ಪೊರೇಟರ್ ದಿವಾಕರ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ, ಮುಖ್ಯ ಶಿಕ್ಷಕಿ ಶ್ರೀಮತಿ ಶಾಲಿನಿ, ಮುನೀರ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ವೀಣಾ ಪ್ರಾರ್ಥನೆಗೈದರು. ದಿನೇಶ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.


ಶಿಬಿರಾರ್ಥಿಗಳಿಗೆ ತಜ್ಞರಿಂದ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಸಲಹೆ, ಅವಶ್ಯಕತೆಯಿದ್ದವರಿಗೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ, ಸಕ್ಕರೆ ಕಾಯಿಲೆಗೆ ಉಚಿತ ರಕ್ತಪರೀಕ್ಷೆ, ಉಚಿತ ರಕ್ತದೊತ್ತಡ ಪರೀಕ್ಷೆ ನಡೆಸಲಾಯಿತಲ್ಲದೆ ಉಚಿತ ಕನ್ನಡಕಗಳನ್ನೂ ನೀಡಲಾಯಿತು. ಅನೇಕರು ಈ ಶಿಬಿರದ ಸದುಪಯೋಗ ಪಡೆದುಕೊಂಡರು.

ಈ ಕಾರ್ಯಕ್ರಮದ ಯಶಸ್ಸಿಗೆ ಸ್ಥಳೀಯ ಸಂಘಸಂಸ್ಥೆಗಳಾದ ಕರ್ನಾಟಕ ಶಿವ ಸೇವಾ ಸಮಿತಿ (ರಿ.) ಪಾಂಡೇಶ್ವರ, ಮಂಗಳೂರು, ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) ಪಾಂಡೇಶ್ವರ, ಮಂಗಳೂರು,ಯಂಗ್ ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್, ಪಾಂಡೇಶ್ವರ, ರೈಸಿಂಗ್ ಸ್ಟಾರ್ ಫ್ರೆಂಡ್ಸ್ ಕ್ಲಬ್, ಮಂಕಿಸ್ಟ್ಯಾಂಡ್, ಬಾಬಾ ಫ್ರೆಂಡ್ಸ್, ಪೆÇಲೀಸ್ ಲೈನ್, ಪಾಂಡೇಶ್ವರ ಸಹಕಾರ ನೀಡಿದವು.

ತಾ.12-1-2020ರಂದು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ದ.ಕ.ಜಿ.ಪ.ಸ. ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ, ಮಂಗಳೂರು ಅಲ್ಲಿ ಜರಗಿತು. ಕಾರ್ಯಕ್ರಮದ ಮುಖ್ಯ ರೂವಾರಿ ಶಿವರಾಜ್ ಪಾಂಡೇಶ್ವರ ಅವರು ಸರ್ವರಿಗೂ ಧನ್ಯವಾದ ಸಮರ್ಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here