Saturday 10th, May 2025
canara news

`ಧ್ವನಿ ಶ್ರೀರಂಗ' ಅಂತಾರಾಷ್ಟ್ರೀಯ ಪ್ರಶಸ್ತಿಗೆ ಡಾ| ಹೆಚ್.ಎಸ್.ವಿ ಆಯ್ಕೆ

Published On : 21 Jan 2020   |  Reported By : Rons Bantwal


ಧ್ವನಿ ಪ್ರತಿಷ್ಠಾನದ 35ನೇ ವಾರ್ಷಿಕೋತ್ಸವ `ರಂಗಸಿರಿ ಉತ್ಸವ 2020'ದಲ್ಲಿ ಪ್ರದಾನ

ಮುಂಬಯಿ (ದುಬಾಯಿ), ಜ.14: ಧ್ವನಿ ಪ್ರತಿಷ್ಠಾನ ಕನ್ನಡ ರಂಗಭೂಮಿಯಲ್ಲಿ ವಿಶೇಷ ಸೇವೆಗೈದವರನ್ನು ಗುರುತಿಸಿ ಕಳೆದ ಹನ್ನೆರಡು ವರ್ಷಗಳಿಂದ ನೀಡುತ್ತಾ ಬರುತ್ತಿರುವ `ಧ್ವನಿ ಶ್ರೀರಂಗ' ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಡಾ| ಹೆಚ್.ಎಸ್ ವೆಂಕಟೇಶ ಮೂರ್ತಿ ಅವರು ಅಯ್ಕೆ ಗೊಂಡಿರುವರು. ಇವರು ಕನ್ನಡ ರಂಗ ಕ್ಷೇತ್ರಕ್ಕೆ ತಮ್ಮ ವಿಭಿನ್ನ ನಾಟಕಗಳ ಮುಖಾಂತರ ಹೊಸತನವನ್ನು ಮೂಡಿಸಿರುವುದಲ್ಲದೆ ಕವಿಯಾಗಿಯು ಅಗ್ರಗಣ್ಯರಾಗಿರುವರು.

ಅಧುನಿಕ ನಾಟಕಗಳ ಬ್ರಹ್ಮ ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಅಂತಾರಾಷ್ಟ್ರೀಯ ನೆಲೆಯಲ್ಲಿ ಕೊಡಮಾಡುವ ಈ ರಂಗ ಪ್ರಶಸ್ತಿ ದುಬೈಯ ಪ್ರಯಾಣ, ಮೂರುದಿನಗಳ ವಸತಿ ವೆಛ್ಚ ಹಾಗೂ 25,000/- ನಗದು ಮತ್ತು ಸ್ಮರಣಿಕೆಯನ್ನು ಹೊಂದಿದೆ. (ಈ ತನಕ ಬಿ.ಜಯಶ್ರೀ, ಟಿ.ಎಸ್.ನಾಗಭರಣ, ಶ್ರೀನಿವಾಸ ಕಪ್ಪಣ್ಣ, ಮುಖ್ಯಮಂತ್ರಿ ಚಂದ್ರು,ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಡಾ| ಹೆಚ್.ಎಸ್ ಶಿವಪ್ರಕಾಶ್, ಶ್ರೀಮತಿ ಉಮಾಶ್ರೀ, ಡಾ| ನಾ.ದಾ ಶೆಟ್ಟಿ, ಗಿರಿಜಾ ಲೋಕೇಶ್, ಸಿ.ಕೆ.ಗುಂಡಣ್ಣ ಮುಂತಾದವರು ಭಾಜಕರಾಗಿರುವರು). ಪ್ರಶಸ್ತಿಯನ್ನು ದುಬಾಯಿಯ ಏಮಿರೇಟ್ಸ್ ಥಿüಯೇಟರ್‍ನಲ್ಲಿ ತಾ.14.02.2020ರ ಶುಕ್ರವಾರ ಸಂಜೆ ನಡೆಯಲಿರುವ ಧ್ವನಿ ಪ್ರತಿಷ್ಠಾನದ ಮೂವತ್ತೈದನೇ ವಾರ್ಷಿಕೋತ್ಸವ ಸಮಾರಂಭ ರಂಗಸಿರಿ ಉತ್ಸವ 2020' ದಲ್ಲಿ ಪ್ರದಾನಿಸಲಾಗುವುದು.

ಇದೇ ಸಂದರ್ಭದಲ್ಲಿ ಗಿರೀಶ್ ಕಾರ್ನಾಡ್ ಅವರ `ಮದುವೆಯ ಆಲ್ಬಮ್' ನಾಟಕವನ್ನು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ನಿರ್ದೇಶನದಲ್ಲಿ ರಂಗವೇರಿಸಲಾಗುವುದು. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here