Saturday 10th, May 2025
canara news

ಕುಮಾರ ಕ್ಷತ್ರಿಯ ಸಂಘ ಮುಂಬಯಿ ಸಂಸ್ಥ್ಥೆಯ ವಾರ್ಷಿಕ ಸ್ನೇಹಮಿಲನ

Published On : 21 Jan 2020   |  Reported By : Rons Bantwal


ಸಮುದಾಯಿಕ ಸಾಂಗತ್ಯದಿಂದ ಸಂಸ್ಕಾರಯುತ ಬದುಕು ಸಾಧ್ಯ : ಎಂ.ಡಿ ರಾವ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.19: ಕುಮಾರ ಕ್ಷತ್ರಿಯ ಸಂಘ ಮುಂಬಯಿ ಸಂಸ್ಥ್ಥೆಯು ತನ್ನ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ಸ್ನೇಹಮಿಲನ, ಸಾಂಸ್ಕೃತಿಕ ಕಾರ್ಯಕ್ರಮ ಇಂದಿಲ್ಲಿ ಭಾನುವಾರ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಆಯೋಜಿಸಿತ್ತು. ಶ್ರೀ ಪೇಜಾವರ ಮಠದ ವಿದ್ವಾನ್ ಹರಿ ಭಟ್ ಪುತ್ತಿಗೆ ತನ್ನ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿಸಿ ಮಂಗಳಾರತಿಗೈದರು. ಮುಕುಂದ ಬೈತಮಂಗಳ್ಕರ್ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಅನಿತಾ ಸುಜೀತ್ ಕುಮಾರ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಮಧ್ಯಾಹ್ನ ಕುಮಾರ ಕ್ಷತ್ರಿಯ ಸಂಘ ಮುಂಬಯಿ ಅಧ್ಯಕ್ಷ ಎಂ.ಡಿ ರಾವ್ ಅಧ್ಯಕ್ಷತೆಯಲ್ಲಿ ಸಂಸ್ಥ್ಥೆಯ ವಾರ್ಷಿಕ ಮಹಾಸಭೆ ನಡೆಸಲ್ಪಟ್ಟಿತು. ಉಪಾಧ್ಯಕ್ಷ ರವಿ ಜಿ.ಚಂದ್ರಗಿರಿ, ಜೊತೆ ಕಾರ್ಯದರ್ಶಿ ಉಮಾನಾಥ್ ರಾವ್, ಸಲಹಾಗಾರ ಶಿವ ಬಿ.ರಾವ್, ಮಹಿಳಾ ವಿಭಾಗಧ್ಯಕ್ಷೆ ಶೈಲಿನಿ ಎಂ.ರಾವ್ ವೇದಿಕೆಯಲ್ಲಿದ್ದು, ಗೌರವ ಕಾರ್ಯದರ್ಶಿ ಶಂಕರ್ ಜಿ.ರಾವ್ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿ ಶಂಕರ್ ಜಿ.ರಾವ್ ವಂದಿಸಿದರು. ಗೌ| ಪ್ರ| ಕೋಶಾಧಿಕಾರಿ ಶಾಂತರಾಮ ಜೆ.ಮಂಘಡ್ ಗತ ಲೆಕ್ಕಪತ್ರಗಳ ವಿವರ ಮಂಡಿಸಿದರು. ಬಳಿಕ ಗತ ಶೈಕ್ಷಣಿಕ ಪರೀಕ್ಷೆಗಳಲ್ಲಿ ಸರ್ವೋತ್ಕೃಷ್ಟ ಶ್ರೇಣಿಯಲ್ಲಿ ಪಾಸಾದ ಸ್ವಸಮಾಜದ ವಿದ್ಯಾಥಿರ್üಗಳಿಗೆ ವಾರ್ಷಿಕ ಪಾರಿತೋಷಕಗಳ ನ್ನು ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.

ಸಮುದಾಯಿಕ ಸಾಂಗತ್ಯದಿಂದ ಸಂಸ್ಕಾರಯುತ ಬದುಕು ಸಾಧ್ಯ. ಆದ್ದರಿಂದ ನಾವು ನಮ್ಮ ಪರಂಪರಗತ, ಪೂರ್ವಿಕರಿಂದ ಬಳುವಳಿಕೆಯಾಗಿ ಬಂದ ಸಂಸ್ಕಾರ, ಸಂಪ್ರದಾಯಗಳನ್ನು ನಮ್ಮ ಭಾವೀ ಜನಾಂಗಕ್ಕೆ ನೀಡುವುದು ನಮ್ಮ ಪರಮ ಕರ್ತವ್ಯವಾಗಿದೆ. ಇದರಿಂದ ನಮ್ಮ ಸಮುದಾಯದ ಮುನ್ನಡೆ ಸುಲಲಿತವಾಗುವುದು ಎಂದÀು ಅಧ್ಯಕ್ಷೀಯ ಭಾಷಣದಲ್ಲಿ ಎಂ.ಡಿ ರಾವ್ ನುಡಿದರು.

ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ.ಎಂ ರಾವ್, ರವಿ ಎಸ್.ಕಾಲ್ನಾಡ್, ವಿವೇಕ್ ಜಿ.ರಾವ್, ಸಾಗರ್ ಪಿ.ರಾವ್, ಅನಿಲ್ ಜಿ.ರಾವ್, ಸುರೇಂದ್ರ ಹೆ.ಎ., ಮಹಿಳಾ ಉಪÀ ಕಾರ್ಯಧ್ಯಕ್ಷೆ ಉಮಾ ಎಸ್.ರಾವ್, ಕಾರ್ಯದರ್ಶಿ ಕವಿತಾ ರೋಹನ್, ಜೊತೆ ಕಾರ್ಯದರ್ಶಿ ಕಲ್ಪನಾ ಎಸ್.ರಾವ್, ಕೋಶಾಧಿಕಾರಿ ದಿವ್ಯಾ ಕಾಲ್ನಾಡ್, ಸಲಹಾಗಾರ್ತಿ ಪ್ರಭಾ ಎಂ.ರಾವ್ ಸೇರಿದಂತೆ ಕುಮಾರ ಕ್ಷತ್ರಿಯ ಬಂಧುಗಳು ಉಪಸ್ಥಿತರಿದ್ದರು. ಗತಸಾಲಿನಲ್ಲಿ ಅಗಲಿದ ಸದಸ್ಯರು, ಸಮಾಜ ಬಾಂಧವರು ಮತ್ತು ಪೇಜಾವರಶ್ರೀಗಳಿಗೂ ಸಭೆಯ ಆದಿಯಲ್ಲಿ ಶ್ರದ್ಧಾಂಜಲಿ ಸಲ್ಲಿಲಾಯಿತು.

ಎಸ್‍ಆರ್‍ವಿ ಹಾಸ್ಪಿಟಲ್ ಗೋರೆಗಾಂವ್ ಇದರ ಡಾ| ರವೀಂದ್ರ ಯಾದವ್ ಮತ್ತು ತಂಡವು ವೈದ್ಯಕೀಯ ಶಿಬಿರ ನಡೆಸಿದ್ದು, ಸ್ಟಾರ್‍ಹೆಲ್ತ್‍ನ ವಿೂನಾಕ್ಷಿ ದಳ್ವಿ ಜೀವವಿಮೆ ಅಗತ್ಯವನ್ನು ತಿಳಿಸಿದರು. ಅಪರಾಹ್ನ ನಡೆಸಲ್ಪಟ್ಟ ವಾರ್ಷಿಕ ಸ್ನೇಹಮಿಲನದಲ್ಲಿ ಅಂಗವಾಗಿ ಸದಸ್ಯರು ಮತ್ತು ಮಕ್ಕಳು ಮನೋರಂಜನಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here