Saturday 10th, May 2025
canara news

ಮುಂಬಯಿ ಪೆÇಯಿಸರ್‍ನ ಸಪ್ತಾಹ ಮೈದಾನದಲ್ಲಿ ರಂಗೇರಿದ ವಿಶ್ವ ತುಳು ಸಮ್ಮೇಳನ

Published On : 23 Jan 2020   |  Reported By : Rons Bantwal


ತೌಳತ್ವದ ಮಹತ್ವ ಸಾರುವ ಸಮ್ಮೇಳನ : ಡಾ| ಸುನೀತಾ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.18: ಮುಂಬಯಿಯಲ್ಲಿ ಸದ್ಯ ನಾನೇ ಹಿರಿಯಳು ಎಂದು ಭಾವಿಸಿದ್ದೇನೆ ಅದಕ್ಕಾಗಿಯೇ ನನ್ನ ಮೇಲಿನ ಪ್ರೀತಿ, ವಿಶ್ವಾಸ, ಗೌರವದ ಧ್ಯೋತಕವಾಗಿ ಈ ಸ್ಥಾನಮಾನಕ್ಕೆ ಪಾತ್ರಳಾಗಿರುವೆ ಅಂದುಕೊಂಡಿದ್ದೇನೆ. ತುಳುವರು ಯಾವೊತ್ತೂ ಸಮರಸ ಬಾಳಿಗೆ ಪ್ರೇರಕರಾಗಿದ್ದು ಅದೇ ತುಳು ಸಂಸ್ಕೃತಿಯಾಗಿದೆÉ. ಇದನ್ನೇ ಆಸ್ತಿಯಾಗಿಸಿ ಮುಂದೆಯೂ ಸಾಮರಸ್ಯದ ಬದುಕಿನೊಂದಿಗೆ ಸ್ನೇಹದ ಸಾಗರದಲ್ಲಿ ಸಹೋದರತ್ವ ದೋಣಿಯಲ್ಲಿ ಸಾಗೋಣ. ಸದಾ ಒಲವಿನೊಂದಿಗೆ ಬಾಳಿ ಭಾವೀ ತುಳು ಜನಾಂಗಕ್ಕೆ ನಾವು ದಾರಿದೀಪಲೇ ಇಂತಹ ತೌಳತ್ವದ ಮಹತ್ವ ಸಾರುವ ಸಮ್ಮೇಳನ ಫಲಪ್ರದವಾಗುವುದು ಎಂದು ನಾಡಿನ ಹಿರಿಯ ಸಾಹಿತಿ, ಕವಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು.

ವಿಶ್ವ ಮಾನ್ಯತೆಯ ಕಲಾಜಗತ್ತು (ರಿ.) ಮುಂಬಯಿ ಸಂಸ್ಥೆ ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿನಲ್ಲಿ ಆಯೋಜಿಸಿದ್ದ ದ್ವಿದಿನಗಳ ವಿಶ್ವಮಟ್ಟದ ತುಳು ಸಮ್ಮೇಳನ (ಬೊಂಬಾಯಿಡ್ ತುಳುನಾಡು) ಉದ್ಘಾಟಿಸಿ ಸಮ್ಮೇಳನಾಧ್ಯಕ್ಷತೆಯನ್ನು ಉದ್ದೇಶಿಸಿ ಓ.. ಬೇಲೆ ಓ.. ಬೇಲೆ ಹಾಡನ್ನು ಹಾಡಿ ಸುನೀತಾ ಶೆಟ್ಟಿ ತಿಳಿಸಿದರು. ಗಣ್ಯರ ಸಮಾಕ್ಷಮದಲ್ಲಿ ಜಾನಪದ ವೈಭವಗಳ ದಿಬ್ಬಣದೊಂದಿಗೆ ಸಮ್ಮೇಳನಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ ಅವರನ್ನು ವೇದಿಕೆಗೆ ಬರಮಾಡಿ ಕೊಳ್ಳಲಾಯಿತು.

ಇಂದಿಲ್ಲಿ ಬೆಳಿಗ್ಗೆ ಉಪನಗರದ ಕಾಂದಿವಲಿ ಪೆÇಯಿಸರ್ ಇಲ್ಲಿನ ಸಪ್ತಾಹ ಮೈದಾನದಲ್ಲಿ ಆಯೋಜಿಸಲ್ಪಟ್ಟ ಸಮ್ಮೇಳನ ಸಭಾಂಗಣದಲ್ಲಿ ನಿರ್ಮಿತ ಬೀಡು ಮನೆತನದ ಅಂಗಳದಲ್ಲಿ ತೌಳವ ಸಂಸ್ಕೃತಿಯ ಮೆರಗುನೊಂದಿಗೆ ಉತ್ತರ ಮುಂಬಯಿ ಲೋಕಸಭಾ ಸಂಸದ ಗೋಪಾಲ ಸಿ.ಶೆಟ್ಟಿ ಧ್ವಜಾರೋಹಣಗೈದು (ಕೊಡಿ ಏರಿಸುವುದು), ಹಾಗೂ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತುಳುರಥದ ತೇರನ್ನು ಎಳೆದು ಮತ್ತು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಸಾಂಪ್ರ್ರದಾಯಿಕವಾಗಿ ತೆನೆ ಕಟ್ಟಿಕೊಂಡು ಸಾಂಕೇತಿಕವಾಗಿ ಮತ್ತು ಚೌತಿ, ಯುಗಾದಿ ಹಬ್ಬಗಳ ಸಡಗರದೊಂದಿಗೆ ಬೆಳಿಗ್ಗೆ ದ್ವಿದಿನಗಳ ವಿಶ್ವಮಟ್ಟದ ತುಳು ಸಮ್ಮೇಳನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ರವೀಂದ್ರ ಎಸ್.ಶಾಂತಿ ಪೂಜೆಗಳನ್ನು ನೇರವೇರಿಸಿದರು.

ಇದೊಂದು ಸಾಧನೆಯ ಸಮ್ಮೇಳನವಾಗಿದೆ. ಪರುಶುರಾಮನ ಸೃಷ್ಠಿಯ ತುಳುನಾಡ ಸಂಸ್ಕೃತಿ ಬಿಂಬಿಸುವ, ತುಳುವರ ಏಕತೆ ಸಾರುವ ಸಮಾವೇಶವೂ ಹೌದು. ಸಂಘಟಕರ ಉದ್ದೇಶ ಫಲವತ್ತಾಗಿ ಭವಿಷ್ಯತ್ತಿನ ಜನಾಂಗಕ್ಕೆ ತುಳು ಪರಂಪರೆ ಪರಿಚಯಿಸುವಲ್ಲಿ ಈ ಸಮ್ಮೇಳನ ಪೂರಕವಾಗಲಿ ಎಂದು ಐಕಳ ಹರೀಶ್ ಆಶಯ ವ್ಯಕ್ತಪಡಿಸಿದರು.


ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್ ಎಲ್.ಬಂಗೇರ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‍ಬೆಟ್ಟು, ಉಷಾ ಗೋಪಾಲ ಶೆಟ್ಟಿ, ಸಮಾಜ ಸೇವಕಿ ಶಮೀನಾ ಆಳ್ವ ಮೂಲ್ಕಿ, ನಾರಾಯಣ ಶೆಟ್ಟಿ ಪುಣೆ, ವಾಸ್ತುತಜ್ಞ, ಅಶೋಕ ಪುರೋಹಿತ್, ಜಯ ಶೆಟ್ಟಿ (ಚಲನಚಿತ್ರ ನಟ), ಉದ್ಯಮಿಗಳಾದ ಮನ್ಮಥ್ ಶೆಟ್ಟಿ ದಹಿಸರ್, ಎರ್ಮಾಳ್ ವಿಶ್ವನಾಥ ಶೆಟ್ಟಿ, ಡಾ| ರವಿರಾಜ್ ಸುವರ್ಣ ಅತಿಥಿü ಅಭ್ಯಾಗತರುಗಳಾಗಿದ್ದು ವಸ್ತು ಪ್ರದರ್ಶನ, ಸಾಂಪ್ರ್ರದಾಯಿಕ ಆಟೋಟಗಳು ಮತ್ತು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಶುಭಾರೈಸಿದರು.

ವೇದಿಕೆಯಲ್ಲಿ ಬೊಂಬಾಯಿಡ್ ತುಳುನಾಡ್ ಸಮಿತಿ ಕಾರ್ಯಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ಸಂಚಾಲಕ ಶ್ಯಾಮ ಎನ್.ಶೆಟ್ಟಿ ಕಲಾಜಗತ್ತು ಮುಂಬಯಿ ಅಧ್ಯಕ್ಷ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಉಪ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಜೊತೆ ಕಾರ್ಯದರ್ಶಿಗಳಾದ ಚಂದ್ರಾವತಿ ದೇವಾಡಿಗ ಮತ್ತು ಲತೇಶ್ ಎಂ.ಪೂಜಾರಿ, ಕೋಶಾಧಿಕಾರಿ ಜಗದೀಶ ರಾವ್, ಜೊತೆ ಕೋಶಾಧಿಕಾರಿಗಳಾದ ಎನ್.ಪೃಥ್ವಿರಾಜ್ ಮುಂಡ್ಕೂರು ಮತ್ತು ಅಶೋಕ್ ಶೆಟ್ಟಿ ಪಾಂಗಾಳ, ಗಂಗಾಧರ್ ಜೆ.ಪೂಜಾರಿ ಉಪಸ್ಥಿತರಿದ್ದು, ಇದೇ ಸಂದರ್ಭದಲ್ಲಿ ಜಯ ಪ್ರಕಾಶ್ ಪೂಜಾರಿ, ಪುರಂದರ ಶೆಟ್ಟಿ, ಮುಂಡಪ್ಪ ಎಸ್.ಪಯ್ಯಡೆ ಇವರನ್ನು ಸತ್ಕರಿಸಲಾಯಿತು ಹಾಗೂ ತುಳುವಿಗೆ ಅನುಪಮ ಸೇವೆಗೈದು ಸ್ವರ್ಗೀಯರಾದ ಗಣ್ಯರ ಸಂಸ್ಮರಣೆ ನಡೆಸಿ ಅವರವರ ಸ್ಮಾರಣಾರ್ಥ ಸಂಸ್ಮರಣಾ ಪ್ರಶಸ್ತಿ ಹಾಗೂ ಗಣ್ಯರನೇಕರಿಗೆ ತೌಳವ ಸಿರಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.

ತೋನ್ಸೆ ವಿಜಯಕುಮಾರ್ ಶೆಟ್ಟಿ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿದರು. ನವೀನ್ ಶೆಟ್ಟಿ ಯೆಡ್ಮೆಮಾರ್ (ನಮ್ಮ ಟಿವಿ) ಮತ್ತು ಸುರೇಂದ್ರ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ತುಳು ಸಮಿತಿ ಮುಖ್ಯಸ್ಥ ಜಯಕರ ಡಿ.ಪೂಜಾರಿ, ಸಾಹಿತ್ಯ ಸಮಿತಿ ಮುಖ್ಯಸ್ಥೆ ಲತಾ ಸಂತೋಷ್ ಶೆಟ್ಟಿ, ಕಲಾ ಸಮಿತಿ ಮುಖ್ಯಸ್ಥ ಉತ್ತಮ್ ಶೆಟ್ಟಿಗಾರ್, ಸಂಘಟನಾ ಸಮಿತಿ ಮುಖ್ಯಸ್ಥ ಪ್ರೇಮನಾಥ ಪಿ.ಕೋಟ್ಯಾನ್, ಪ್ರೇಮನಾಥ್ ಶೆಟ್ಟಿ ಕೊಂಡಾಡಿ, ರಜಿತ್ ಎಂ.ಸುವರ್ಣ, ಕುಶಲ್ ಶೆಟ್ಟಿ, ಲಕ್ಷ್ಮಣ ಕಾಂಚನ್ ಮತ್ತು ಶ್ಯಾಮಸುಂದರ್ ಸಾಲ್ಯಾನ್, ಸ್ವಾಗತ ಸಮಿತಿ ಮುಖ್ಯಸ್ಥರುಗಳಾದ ಜೂಲಿಯೆಟ್ ಪಿರೇರಾ, ಸುಧಾ ಶೆಟ್ಟಿ, ರೂಪಾ ಮೂಲ್ಯ ಮತ್ತು ಜಯಾನಂದ ಶೆಟ್ಟಿ, ಕ್ಯಾಟರಿಂಗ್ ಸಮಿತಿ ಮುಖ್ಯಸ್ಥ ಅಶೋಕ್ ಶೆಟ್ಟಿ ಮುಂಡ್ಕೂರು ಅತಿಥಿüಗಳಿಗೆ ಸ್ಮರಣಿಕೆಗಳನ್ನೀಡಿ ಗೌರವಿಸಿದರು.ï

ಅಪರಾಹ್ನ ನಾಡಿನ ಹಿರಿಯ ಕವಿ ಶಿಮಂತೂರು ಚಂದ್ರಹಾಸ ಸುವರ್ಣ ಅಧ್ಯಕ್ಷತೆಯಲ್ಲಿ ತುಳು ಕವಿಗೋಷ್ಠಿ ನಡೆಸಲ್ಪಟ್ಟಿದ್ದು, ಅನೇಕ ತುಳು ಕವಿಗಳು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ಶಾರದಾ ಎ.ಅಂಚನ್ ಮತ್ತು ಅಶೋಕ ವಳದೂರು ಕವಿಗೋಷ್ಠಿ ನಿರೂಪಿಸಿದರು.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮೆರಗು ನೀಡಿದ ತುಳುನಾಡು ಸಮ್ಮೇಳನದಲ್ಲಿ ನೂರಾರು ತುಳು-ಕನ್ನಡಿಗರು ಸೇರಿದಂತೆ ಈ ಕಾರ್ಯಕ್ರಮದಲ್ಲಿ ದೇಶ ವಿದೇಶದಿಂದ ಅತಿಥಿs ಗಣ್ಯರು, ತುಳು ಕನ್ನಡಿಗರು ಉಪಸ್ಥಿತರಿದ್ದು ತಿರುಪತಿ ಬಾಲಾಜಿ ವಾಹನ ಸೇವೆಯನ್ನೂ ಅನುಭವಿಸಿದರು.

ಸಮ್ಮೇಳನದ ಅಂಗವಾಗಿ ಹಾಡುವ ಸ್ಪರ್ಧೆ, ಗಾಯತ್ರಿ ಪರಿವಾರದ ಕುಮಾರಿ ಶೆಟ್ಟಿ ಆಧ್ಯಾತ್ಮಿಕ ಪ್ರವಚನ ನೀಡಿದರು. ಪ್ರಾಪ್ತಿ ಶೆಟ್ಟಿ ಮತ್ತು ಬಳಗವು ವಾದ್ಯ ಸಂಗೀತ ಕಛೇರಿ, ಶ್ರೀ ಲತಾ ಬಳಗ, ಕಾಜಲ್ ಕುಂದರ್ ತಂಡ ಮತ್ತು ಪ್ರಿಯಾಂಜಲಿ ರಾವ್ ಬಳಗವು ನೃತ್ಯೋತ್ಸವ, ಲಕ್ಷಿ ್ಮೀ ದೇವಾಡಿಗ ಮತ್ತು ಸಂಜೀವ ಪಾಣಾರ ಬಳಗ ಉಡುಪಿ ಇವರು ತುಳು ಜಾನಪದ ನೃತ್ಯ ಹಾಗೂ ಪನ್ವೇಲ್ ಕೂಟದ ಕಲಾವಿರು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶೈಲಜಾ ಎ.ಶೆಟ್ಟಿ ಮತ್ತು ವಿಜಯ್ ಶೆಟ್ಟಿ ವಿೂರಾರೋಡ್ ಇವರ ಸಂಯೋಜನೆಯಲ್ಲಿ ಸಂಗೀತ ರಸಮಂಜರಿ ಪ್ರಸ್ತುತ ಪಡಿಸಿದರು. ಲತೇಶ್ ಎಂ.ಪೂಜಾರಿ ನಿರ್ದೇಶನದಲ್ಲಿ `ಮಣ್ಣಿ' ತುಳು ನಾಟಕ ಮತ್ತು ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ನಿರ್ದೇಶನದಲ್ಲಿ ಕಲಾಜಗತ್ತು ಕಲಾವಿದರು `ಮೋಕ್ಷ' ತುಳು ನಾಟಕ ಪ್ರದರ್ಶಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here