Saturday 10th, May 2025
canara news

ಹಿರಿಯ ಛಾಯಾಗ್ರಾಹಕ ಕಲಾವಿದ ಪದ್ಮನಾಭ ರಾವ್ ಅವರು ಛಾಯಾಗ್ರಾಹಣದ ಬದುಕಿಗೆ ವಿರಾಮ.

Published On : 24 Jan 2020   |  Reported By : Rons Bantwal


ಮುಂಬಯಿ (ಬಂಟ್ವಾಳ),ಜ.23: ಹಿರಿಯ ಛಾಯಾಗ್ರಾಹಕ ಕಲಾವಿದ ಪಲ್ಲವಿ ಸ್ಟುಡಿಯೋ ಮಾಲಕ ಪದ್ಮನಾಭ ರಾವ್ ಅವರು ಛಾಯಾಗ್ರಾಹಣದ ಬದುಕಿಗೆ ವಿರಾಮದ ಚುಕ್ಕಿ ಇಟ್ಟಿದ್ದಾರೆ.

ಸುಮಾರು (63) ವರ್ಷ ಪ್ರಾಯದ ಇವರು ಬಿಸಿರೋಡು ಪರಿಸರದಲ್ಲಿ ಪದ್ದಣ್ಣ ಎಂದೇ ಖ್ಯಾತಿ ಹೊಂದಿದ್ದರು.

ಇವರಿಗೆ ಕೆಲ ತಿಂಗಳಿನಿಂದ ಆರೋಗ್ಯ ದಲ್ಲಿ ಏರುಪೇರಾಗಿತ್ತು.

ಅನಾರೋಗ್ಯದ ಹಿನ್ನಲೆಯಲ್ಲಿ ಪತ್ನಿಯ ತಾಯಿಮನೆ ಗದಗಕ್ಕೆ ಕರೆದುಕೊಂಡು ಹೋಗಿದ್ದುದು ಇಂದು ರಾತ್ರಿ ವೇಳೆ ಅಸೌಖ್ಯದಿಂದ ಗದಗದಲ್ಲಿ ಕೊನೆಯುಸಿರೆಳೆದರು.

ಪಿ.ಯು.ಸಿ ವರಗೆ ವಿದ್ಯಾಭ್ಯಾಸ ಮಾಡಿದ ಪದ್ಮನಾಭ ರಾವ್ ಅವರು ಬ್ಯಾಂಕ್ ಉದ್ಯೋಗಿಯಾಗಿದ್ದರು.

ಉದ್ಯೋಗ ಕ್ಕೆ ರಿಸೈನ್ ನೀಡಿದ ಬಳಿಕ ಛಾಯಾಗ್ರಾಹಣ ಬದುಕನ್ನು ಮೆಚ್ಚಿಕೊಂಡರು.

1984 ರಲ್ಲಿ ಕಪ್ಪು ಬಿಳುಪು ಛಾಯಗ್ರಾಹಣದ ಮೂಲಕ ಛಾಯಾಗ್ರಾಹಣ ಬದುಕಿಗೆ ಪಾದಾರ್ಪಣೆ ಮಾಡಿದ ಇವರು ಬಳಿಕ ಛಾಯಾಗ್ರಹಣ ದ ಅನೇಕ ಏಳುಬೀಳುಗಳನ್ನು ಕಂಡವರು. ಬಂಟ್ವಾಳ ಪೋಟೋ ಗ್ರಾಫರ್ಸ್ ಸಂಘದ ಅಧ್ಯಕ್ಷರಾಗಿ ಹಾಗೂ ಅನೇಕ ಪದವಿಗಳನ್ನು ಅಲಂಕರಸಿದವರು ಇವರು.

ಸಾಮಾಜಿಕ ಚಟುವಟಿಕೆಗಳ ಮೂಲಕ ಇವರು ಎಲ್ಲರಿಗೂ ಚಿರಪರಿಚಿತ ರಾಗಿದ್ದರು.

ನಾಟಕ ಕಲಾವಿದರಾಗಿಯೂ ಅನೇಕ ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ.

ಪಲ್ಲವಿ ಸ್ಟುಡಿಯೋ ಎಂದರೆ ಅನೇಕ ಕಲಾವಿದರಿಗೆ, ರಾಜಕೀಯ ವ್ಯಕ್ತಿಗಳಿಗೆ ಆಶ್ರಯ ಕೂಡ ನೀಡಿತ್ತು.

ಅದೇಷ್ಟೂ ಛಾಯಾಗ್ರಾಹಕ ರಿಗೆ ವೃತ್ತಿ ಬದುಕು ನೀಡಿದೆ.

ಶಿಕ್ಷಕ ಕಾರ್ಯ ಕ್ರಮ ನಿರೂಪಕ ರಾಮಚಂದ್ರ ರಾವ್ ಅವರ ಅಣ್ಣ ನಾಗಿರುವ ಇವರು ಪತ್ನಿ ಹಾಗೂ ಒಂದು ಗಂಡು ಮತ್ತು ಹೆಣ್ಣು ಮಗಳನ್ನು ಅಗಲಿದ್ದಾರೆ.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಮೋಹನ್ ಬಿ, ಛಾಯಾಗ್ರಾಹಕ ಸಂಘದ ಜಿಲ್ಲಾಧ್ಯಕ್ಷ ಶ್ರೀದರ್ ಶೆಟ್ಟಿ ಗಾರ್ , ತಾಲೂಕು ಅದ್ಯಕ್ಷ ಕುಮಾರ ಸ್ವಾಮಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here