Saturday 10th, May 2025
canara news

ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗ ನೆರವೇರಿಸಿದ ಅರಸಿನ ಕುಂಕುಮ ಕಾರ್ಯಕ್ರಮ

Published On : 25 Jan 2020   |  Reported By : Rons Bantwal


ಮಾನವ ಸಂಸ್ಕಾರಗಳನ್ನು ಮರೆಯುತ್ತಿರುವುದು ಸರಿಯಲ್ಲ-ಡಾ| ಸುಚೇತ ಭಂಡಾರಿ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜ.21: ಧರ್ಮನಿಷ್ಠೆ ಮಾನವ ಬದುಕಿಗೆ ಪೂರಕವಾಗಿದೆ. ಆದರೆ ಆಧುನಿಕ ಜನತೆ ವೈಜ್ಞಾನಿಕತೆಗೆ ಮಾರುಹೋಗಿ ಸಂಸ್ಕಾರಗಳನ್ನು ಮರೆಯುತ್ತಿರುವುದು ಸರಿಯಲ್ಲ. ಸಂಸ್ಕೃತಿಗಳ ಪಾಲನೆಯಿಂದ ಮಾತ್ರ ಮಾನವ ಬದುಕು ಹಸನಾಗುವುದು ಎಂದು ಆರೋಗ್ಯದ ಕಾಳಜಿ ಮತ್ತು ಅರಸಿನ ಕುಂಕುಮ ಕಾರ್ಯಕ್ರಮ ಕಾರ್ಯಕ್ರಮದ ಮಹತ್ವವನ್ನು ತಿಳಿಸಿ ಮಹಾನಗರದ ಪ್ರಸಿದ್ದ ವೈದ್ಯಾಧಿಕಾರಿ ಡಾ| ಸುಚೇತ ನಾರಾಯಣ ಭಂಡಾರಿ ನುಡಿದರು.

ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗವು ಕಳೆದ ಆದಿತ್ಯವಾರ ಸಯಾನ್‍ನ ಮುಖ್ಯ ಅಧ್ಯಾಪಕ ಭವನದಲ್ಲಿನ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಆಯೋಜಿಸಿದ್ದ 2020ನೇ ವಾರ್ಷಿಕ ಮಕರ ಸಂಕ್ರಮಣ, ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಸುಚೇತ ಭಂಡಾರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ನ್ಯಾ| ಆರ್.ಎಂ ಭಂಡಾರಿ ಮಾರ್ಗದರ್ಶನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಭಂಡಾರಿ ಸಮಿತಿಯ ಮಾಜಿ ಮಹಿಳಾಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ ಅತಿಥಿü ಅಭ್ಯಾಗತರಾಗಿದ್ದು ಶುಭ ಕೋರಿದರು.

ಮಹಿಳಾ ವಿಭಾಗಧ್ಯಕ್ಷೆ ಶಾಲಿನಿ ರಮೇಶ್ ಭಂಡಾರಿ, ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ, ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ, ಮಾಜಿ ಕಾರ್ಯಾಧ್ಯಕ್ಷೆ ಲಲಿತಾ ವಿ.ಭಂಡಾರಿ ಉಪಸ್ಥಿತರಿದ್ದು ಅತಿಥಿüಗಳನ್ನು ಸತ್ಕರಿಸಿ ಗೌರವಿಸಿದರು.

ಧಾರ್ಮಿಕ ಆಚರಣೆಗಳು ಮನುಕುಲದ ಕಾಯಕಲ್ಪವಾಗಿವೆ. ಆದ್ದರಿಂದ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮಹತ್ವ ಅರಿತು ಪಾಲಿಸುವುದು ಅಗತ್ಯವಿದೆ. ಧಾರ್ಮಿಕ ವಿಧಿಗಳು ಬುದ್ಧಿಜೀವಿಗೆ ಸಂಸ್ಕಾರವನ್ನು ಕಲ್ಪಿಸುತ್ತದೆ. ಆದ್ದರಿಂದ ಮಹಿಳೆಯರು ಧಾರ್ಮಿಕ ಕಾರ್ಯಕ್ರಮಗಳಿಗೆ ಮಹತ್ವವನ್ನೀಡಬೇಕು ಎಂದು ಶೋಭಾ ಭಂಡಾರಿ ಸಲಹಿದರು.

ಯುವಜನತೆಯು ಈ ಸಂಸ್ಥೆಯಲ್ಲಿ ಮತು ಮಹಿಳಾ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಸಂಸ್ಥೆಯ ಆರೋಗ್ಯನಿಧಿ ಮತ್ತು ವಿದ್ಯಾನಿಧಿಯನ್ನು ಮತ್ತಷ್ಟು ವೃದ್ಧಿಸುತ್ತಾ ಸಮಾಜ ಸೇವೆಗೆ ಸ್ಪಂದಿಸಬೇಕು ಎಂದು ಶಾಲಿನಿ ಭಂಡಾರಿ ಕರೆಯಿತ್ತರು.

ಸಮಿತಿಯ ಗೌ| ಪ್ರ| ಕಾರ್ಯದರ್ಶಿ ಶಶಿಧರ ಡಿ.ಭಂಡಾರಿ, ಗೌರವ ಕೋಶಾಧಿಕಾರಿ ಕರುಣಾಕರ್ ಭಂಡಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳೆಯರನೇಕರು ಉಪಸ್ಥಿತರಿದ್ದರು. ಶ್ರೇಯಲ್ ಯು.ಭಂಡಾರಿ ಗೇಮ್ಸ್‍ಗಳನ್ನು ನಡೆಸಿದರು. ಅಂಕಿತಾ ಟಿ.ಭಂಡಾರಿ ಮತ್ತು ನಿರೀಕ್ಷಾ ಎನ್. ಭಂಡಾರಿ ನೃತ್ಯಗಳನ್ನು ಹಾಗೂ ಮಹಿಳಾ ಸದಸ್ಯೆಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಪಲ್ಲವಿ ರಂಜಿತ್ ಭಂಡಾರಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here