Saturday 5th, July 2025
canara news

ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷರಾಗಿ ಬಿ.ವಿ ರಾವ್ ಆಯ್ಕೆ

Published On : 26 Jan 2020   |  Reported By : Rons Bantwal


ಮುಂಬಯಿ, : ಗಾಣಿಗ ಸಮಾಜ ಮುಂಬಯಿ (ರಿ.) ಇದರ ಕಾರ್ಯಕಾರಿ ಸಮಿತಿ ಸಭೆಯು ಕಳೆದ ಭಾನುವಾರ ಕುರ್ಲಾದಲ್ಲಿನ ಗುಲ್‍ರಾಜ್ ಟವರ್‍ನಲ್ಲಿನ ಗಾಣಿಗ ಸಮಾಜ ಮುಂಬಯಿ ಕಛೇರಿಯಲ್ಲಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ಇವರ ಅಧ್ಯಕ್ಷತೆಯಲ್ಲಿ ಜರುಗಿದ್ದುÀ್ಸಭೆಯಲ್ಲಿ 2020-2022ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಸಲ್ಪಟ್ಟಿದ್ದು, ಸಂಸ್ಥೆಯ ನೂತನ ಅಧ್ಯಕ್ಷರಾಗಿ ಬೈಕಾಡಿ ವಾಸುದೇವ ರಾವ್ (ಬಿ.ವಿ ರಾವ್) ಇವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು.

ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ (ಗೌರವಾಧ್ಯಕ್ಷ), ವಿಜಯೇಂದ್ರ ವಿ.ಗಾಣಿಗ ಮತ್ತು ಭಾಸ್ಕರ ಎಂ.ಗಾಣಿಗ (ಉಪಾಧ್ಯಕ್ಷರು), ಚಂದ್ರಶೇಖರ್ ಆರ್.ಗಾಣಿಗ (ಗೌರವ ಪ್ರಧಾನ ಕಾರ್ಯದರ್ಶಿ), ಜಯಂತ ಪದ್ಮನಾಭ ಗಾಣಿಗ (ಗೌ| ಪ್ರ| ಕೋಶಾಧಿಕಾರಿ), ಜಗದೀಶ್ ಗಾಣಿಗ (ಜೊತೆ ಕಾರ್ಯದರ್ಶಿ), ಬಾಲಕೃಷ್ಣ ಗಾಣಿಗ ತೋನ್ಸೆ (ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ), ತಾರಾ ಎನ್.ಭಟ್ಕಳ್ (ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ), ಗಣೀಶ್ ಆರ್.ಕುತ್ಪಾಡಿ (ಯುವ ವಿಭಾಗ ಕಾರ್ಯಾಧ್ಯಕ್ಷ), ಪದ್ಮನಾಭ ಎನ್.ಗಾಣಿಗ (ಕಚೇರಿ ಉಸ್ತುವರಿ), ಜಗನ್ನಾಥ ಎಂ.ಗಾಣಿಗ, ಯು.ಬಾಲಚಂದ್ರ ರಾವ್ ಕಟಪಾಡಿ, ಸದಾನಂದ ಕಲ್ಯಾಣ್ಫುರ್, ರಮೇಶ್ ಎನ್.ಗಾಣಿಗ, ಜಿ.ಕಾಳಿಂಗ ರಾವ್, ಗಂಗಾಧರ ಎನ್.ಗಾಣಿಗ, ಸೀತರಾಮ ಮಾರಾಳಿ, ಮೋಹನ್ ಎನ್.ಆರ್ ರಾವ್, ರಾಜೇಶ್ ಕುತ್ಪಾಡಿ, ಟಿ.ಎಸ್.ಎನ್ ದಿನೇಶ್ ರಾವ್, ದಿನೇಶ್ ಗಾಣಿಗ ಭಯಂದರ್, ವಿನಾಯಕ ಭಟ್ಕಳ, ನರೇಂದ್ರ ರಾವ್, ವೀಣಾ ದಿನೇಶ್ ಗಾಣಿಗ, ಆರತಿ ಸತೀಶ್ ಗಾಣಿಗ, ಆಶಾ ಹರೀಶ್ ತೋನ್ಸೆ, ಮಮತಾ ದೇವೇಂದ್ರ ರಾವ್ (ಕಾರ್ಯಕಾರಿ ಸಮಿತಿಯ ಸದಸ್ಯರು) ಆಯ್ಕೆಗೊಂಡರು.

ನಿರ್ಗಮನ ರಾಮಚಂದ್ರ ಗಾಣಿಗ ಅವರು ಪುಷ್ಫಗುಪ್ಚವನ್ನಿತ್ತು ನೂತನ ಅಧ್ಯಕ್ಷ ಬಿ.ವಿ ರಾವ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭಾರೈಸಿದರು.

ಬೈಕಾಡಿ ವಾಸುದೇವ ರಾವ್:
ಉಡುಪಿ ಜಿಲ್ಲೆಯ ಬ್ರಹ್ಮಾವರ ಇಲ್ಲಿನ ಬೈಕಾಡಿ ಮೂಲತಃ ವಾಸುದೇವ ರಾವ್ ಮುಂಬಯಿನಲ್ಲಿ ಬಿ.ವಿ ರಾವ್ ಎಂದೇ ನಾಮಾಂಕಿತರು. ಗಾಣಿಗ ಸಮಾಜ ಮುಂಬಯಿ ಸಂಸ್ಥೆಯ ಆಸ್ತಿತ್ವದಿಂದಲೇ ಸಕ್ರೀಯ ಸದಸ್ಯರಾಗಿದ್ದು ಸಂಸ್ಥೆಯ ಹನ್ನೆರಡು ವರ್ಷಗಳಿಂದ ಗೌರವ ಪ್ರಧಾನ ಕಾರ್ಯದರ್ಶಿ ಆಗಿ, ಐದಾರು ವರ್ಷ ಉಪಾಧ್ಯಕ್ಷರಾಗಿ ಶ್ರಮಿಸಿರುವರು. ಸ್ಟಾರ್ ಎಲಿವೇಟರ್ಸ್ ಸಂಸ್ಥೆಯ ಪ್ರವರ್ತಕರಾಗಿ ಮುಂಬಯಿನ ಯಶಸ್ವಿ ಉದ್ಯಮಶೀಲರಾಗಿ ಪರಿಚಯಿತರಾಗಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here