Saturday 10th, May 2025
canara news

ದೇರಳಕಟ್ಟೆಯ ಫಾದರ್ ಮುಲ್ಲರ್ ಆಸ್ಪತೆಯಲ್ಲಿ ಪ್ರೇರಣ-2020 ಉದ್ಘಾಟಣೆ

Published On : 28 Jan 2020   |  Reported By : Rons Bantwal


 

 

ವಿದ್ಯಾಥಿರ್ü ಜೀವನವೇ ಬದುಕಿನ ಪ್ರೇರಣೆ : ಫಾ| ರಿಚರ್ಡ್ ಕುವೆಲ್ಲೊ

ಮುಂಬಯಿ (ಮಂಗಳೂರು), ಜ. 23: ವಿದ್ಯಾಥಿರ್ü ಜೀವನವೇ ಬದುಕಿನ ಪ್ರೇರಣೆ. ಆದುದರಿಂದ ಮಕ್ಕಳು ತಮ್ಮ ವಿದ್ಯಾಥಿರ್ü ಜೀವನವನ್ನು ಮಹತ್ವದ ಕಾಲಘಟ್ಟವನ್ನಾಗಿಸಿ ಜೀನವದ ಭದ್ರ ಬುನಾದಿಯನ್ನಾಗಿಸಬೇಕು ಎಂದು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ರೆ| ಫಾ| ರಿಚರ್ಡ್ ಅಲೋಶಿಯಸ್ ಕುವೆಲ್ಲೊ ತಿಳಿಸಿದರು.

ದೇರಳಕಟ್ಟೆ ಇಲ್ಲಿನ ಫಾದರ್ ಮುಲ್ಲರ್ ಹೋಮಿಯೋಪಥಿü ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತೆಯಲ್ಲಿ `ಪ್ರೇರಣ 2020' ಅಂತರಕಾಲೇಜು ಸಾಹಿತ್ಯ ಮತ್ತು ಸೃಜನಶೀಲತೆ ಉತ್ಸವ ಹಾಗೂ ಆರೋಗ್ಯ ಪ್ರದರ್ಶನವನ್ನು ಇಂದಿಲ್ಲಿ ಬೆಳಿಗ್ಗೆ ಉದ್ಘಾಟಿಸಲ್ಪಟ್ಟಿದ್ದು ಸಮಾರಂಭದ ಅಧ್ಯಕ್ಷತೆ ವಹಿಸಿ ರೆ| ಫಾ| ರಿಚರ್ಡ್ ಕುವೆಲ್ಲೊ ಮಾತನಾಡಿದರು. ಹಾಗೂ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಆಯೋಜಿಸಿದ ಆಯೋಜಕ ಮಂಡಳಿಯನ್ನು ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ 2018-19 ವಾರ್ಷಿಕ ಪದವಿ ಪರೀಕ್ಷೆಯಲ್ಲಿ 10ರಲ್ಲಿ 6 ರ್ಯಾಂಕ್ ಹಾಗೂ ಸ್ನಾತಕೋತ್ತರ ಪರೀಕ್ಷೆಯಲ್ಲಿ 8 ರ್ಯಾಂಕ್ ಗಳಿಸಿದ ನಮ್ಮ ಕಾಲೇಜಿನ ವಿದ್ಯಾಥಿರ್üಗಳನ್ನು ಅಭಿನಂದಿಸಿದರು.

ಮಂಗಳೂರು ವಿಧಾನ ಸಭೆಯ ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ಅವರು ಮುಖ್ಯ ಅತಿಥಿüಯಾಗಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹೋಮಿಯೋಪಥಿü ವೈದ್ಯಕೀಯ ಪದ್ಧತಿಯ ಪ್ರಗತಿಯನ್ನು ಶ್ಲಾಘಿಸುತ್ತಾ ಹೋಮಿಯೋಪಥಿüಯನ್ನು ತಮ್ಮ ವೃತ್ತಿಪರ ಶಿಕ್ಷಣವನ್ನಾಗಿ ಆಯ್ಕೆ ಮಾಡಿದ ವಿದ್ಯಾಥಿರ್üಗಳನ್ನು ಪ್ರಶಂಸಿದರು. ಎಲ್ಲಾ ವೈದ್ಯಕೀಯ ಪದ್ಧತಿಯ ಉನ್ನತಿಗೆ ಸಂಶೋಧನೆಯು ಮಹತ್ತರ ಪಾತ್ರವಹಿಸುವುದು, ಹಾಗೆಯೇ ಫಾದರ್ ಮುಲ್ಲರ್ ಹೋಮಿಯೋಪಥಿü ವೈದ್ಯಕೀಯ ಕಾಲೇಜು ಭಾರತವಷ್ಟೇ ಅಲ್ಲದೆ ಇಡೀ ಪ್ರಪಂಚದಲ್ಲೇ ಒಂದು ಉತ್ತಮ ಸ್ಥಾನಗಳಿಸಿದೆ ಎಂದು ಹೇಳುತ್ತಾ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗೌರವಾನ್ವಿತ ಅತಿಥಿಯಾಗಿದ್ದ ಸೈಂಟ್ ಆಗ್ನೆಸ್ ಕಾಲೇಜ್‍ನ ಪ್ರಾಂಶುಪಾಲೆ ಸಿಸ್ಟರ್ ಡಾ| ಎಂ. ಜೆಸ್ವಿನಾ (ಎಸಿ) ಮಾತನಾಡಿ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಏರಲು ಜವಾಬ್ದಾರಿ ಹಾಗೂ ಉತ್ತಮ ಮೌಲ್ಯಗಳು ಅಗತ್ಯ, ಇವು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿಹೊಂದಲು ಸಹಕರಿಸುತ್ತವೆ ಎಂದು ಹೇಳಿ ವಿದ್ಯಾಥಿರ್üಗಳನ್ನು ಹುರಿದುಂಬಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ನೈರ್ಮಲ್ಯ ರಾಯಭಾರಿಗಳಾದ ಶೀನ ಶೆಟ್ಟಿ ಮಾತನಾಡಿ ಸಂಸ್ಥೆಯೊಂದಿಗೆ ಅವರ ಒಡನಾಟವು ಸುಮಾರು 33 ವರ್ಷಗಳಿಂದ ಮುಂದುವರಿದಿದ್ದು, ಜಿಲ್ಲೆಯಲ್ಲಿ ಈ ಹೋಮಿಯೋಪಥಿü ಸಂಸ್ಥೆಯ ವಿಶೇಷ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಬದಲಾವಣೆಯ ಮೂಲಕ ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ನೀಡಬೇಕಾಗಿ ಕರೆ ನೀಡಿದರು.

ಡಾ| ಮೊಹಮ್ಮದ್ ಇಕ್ಬಾಲ್, ಜಿಲ್ಲಾ ಆಯುಷ್ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಫಾದರ್ ಮುಲ್ಲರ್ ಹೋಮಿಯೋಪಥಿü ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ರೆ| ಫಾ| ರೋಶನ್ ಕ್ರಾಸ್ತ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾಲೇಜ್ ಪ್ರಾಧ್ಯಾಪಕರುಗಳಾದ ಡಾ| ರೀಟಾ ಚಕ್ರವರ್ತಿ ಹಾಗೂ ಡಾ| ವಿಲ್ಮಾ ಡಿಸೋಜ ಅವರು ಬರೆದ ವೈದ್ಯಕೀಯ ಪುಸ್ತಕಗಳನ್ನು ಅತಿಥಿüಗಳು ಬಿಡುಗಡೆಗೊಳಿಸಿದರು.

ಕಾಲೇಜ್‍ನ ಪ್ರಾಂಶುಪಾಲ ಡಾ| ಶಿವಪ್ರಸಾದ್ ಕೆ. ಸ್ವಾಗತಿಸಿ ವಿವಿಧ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳಿಂದ ಸುಮಾರು 2000 ವಿದ್ಯಾಥಿರ್üಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮ ಸಂಯೋಜಕ ಡಾ| ದೀಪಾ ಪಾಯ್ಸ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here