Saturday 29th, February 2020
canara news

ಸಪ್ತದಶ ಹರುಷದ ಸಂಭ್ರಮದಲ್ಲಿ ಮಕ್ಕಳೋತ್ಸವ ಸಂಭ್ರಮಿಸಿದ ಚಿಣ್ಣರ ಬಿಂಬ

Published On : 29 Jan 2020   |  Reported By : Rons Bantwal


ಭವಿಷ್ಯದ ಭಾರತ ನಿರ್ಮಾಣಕ್ಕೆ ಚಿಣ್ಣರ ಬಿಂಬ ಮಾದರಿ : ಶಾಸಕ ಸುನೀಲ್ ಕುಮಾರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.25: ಮಕ್ಕಳಲ್ಲಿ ಸಂಸ್ಕೃತಿ, ಭಾಷಾ, ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವ ಮಕ್ಕಳೋತ್ಸವ ಒಳನಾಡಿನ ನಮ್ಮಂತವರಿಗೆ ಆಶ್ವರ್ಯಕರ ಸಂಗತಿ. ಸಮಾಜದಲ್ಲಿ ಸಂಸ್ಕೃತಿಗಳು ದೂರವಾಗುವ, ಮೂಲಭಾಷೆ ಮರೆಯುವಂತಹ ಈ ಕಲಘಟ್ಟದಲ್ಲಿ ಮುಂಬಯಿನಂತಹ ಮಹಾನಗರಿಯಲ್ಲಿ ಆಧುನಿಕತೆಯ ಸ್ಪರ್ಶದ ಮಧ್ಯೆಯೂ ಇಂತಹ ಸಂಸ್ಕೃತಿಯ ಅಪ್ಪುಗೆ ಸ್ವಾಗತರ್ಹ ಮತ್ತು ಸ್ತುತ್ಯಾರ್ಹ. ಭವಿಷ್ಯದ ಭಾರತ ನಿರ್ಮಾಣಕ್ಕೆ ಚಿಣ್ಣರ ಬಿಂಬ ಮಾದರಿಯಾಗಿದೆ ಎಂದು ಕಾರ್ಕಳ ಶಾಸಕ, ಕರ್ನಾಟಕ ವಿಧಾನ ಸಭಾ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ತಿಳಿಸಿದರು.

ಇಂದಿಲ್ಲಿ ಶನಿವಾರ ಮಧ್ಯಾಹ್ನ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರ ಸಹಯೋಗದಲ್ಲಿ ಮುಂಬಯಿನ ಮಕ್ಕಳ ಸಂಸ್ಥೆ ಚಿಣ್ಣರ ಬಿಂಬ ಸಂಭ್ರಮಿಸಿದ ಹದಿನೇಳÀನೇ ಮಕ್ಕಳ ಉತ್ಸವವನ್ನು ಉದ್ಘಾಟಿಸಿ ಶಾಸಕ ಸುನೀಲ್ ಮಾತನಾಡಿದರು.

ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆಯಲ್ಲಿ ನೆರವೇರಿದ ವಾರ್ಷಿಕ ಮಕ್ಕಳ ಉತ್ಸವದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಉದ್ಯಮಿಗಳಾದ ಕರುಣಾಕರ್ ಎಂ.ಶೆಟ್ಟಿ (ಮೆಕಾೈ), ಜೆ.ಪಿ ಶೆಟ್ಟಿ (ಪೆಸ್ಟ್‍ಮೊರ್ಟಂ), ದೇವದಾಸ್ ಸುವರ್ಣ (ಬೈನೈಟ್), ಬಂಟ್ಸ್ ಸಂಘ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಚಿಣ್ಣರ ಬಿಂಬದ ರೂವಾರಿ ಮತ್ತು ಪ್ರವರ್ತಕ ಪ್ರಕಾಶ್ ಬಿ.ಭಂಡಾರಿ, ಟ್ರಸ್ಟಿ ರೇಣುಕಾ ಪಿ.ಭಂಡಾರಿ, ಚಿಣ್ಣರ ಬಿಂಬದ ಸ್ಥಾಪಕ ಕಾರ್ಯಾಧ್ಯಕ್ಷೆ ಕು| ಪೂಜಾ ಪಿ. ಭಂಡಾರಿ, ಕಾರ್ಯಾಧ್ಯಕ್ಷೆ ಕು| ನೈನಾ ಪಿ.ಭಂಡಾರಿ ಉಪಸ್ಥಿತರಿದ್ದು ಚಿಣ್ಣರಬಿಂಬದ ಮಕ್ಕಳಿಗೆ ಶುಭಕೋರಿದರು.

ಸಮಾಜದಲ್ಲಿ ಕಳೆದ 17 ವರ್ಷಗಳ ಹಿಂದೆ ಕೇವಲ 50 ಮಕ್ಕಳಿಂದ ಆರಂಭವಾದ ಚಿಣ್ಣರ ಬಿಂಬ ಇವತ್ತು 6,000 ಮಕ್ಕಳ ಮನೆಮನೆಗಳಿಗೆ ಹೋಗಿ ಸಂಸ್ಕೃತಿಯನ್ನು ರೂಪಿಸಿ ಸಂಸ್ಕಾರವನ್ನು ರೂಢಿಸಿದೆ ಅಂದರೆ ಇದೊಂದು ತಪಸ್ಸಿನ ಕಾಯಕವಾಗಿದೆ. ಊರಿನಲ್ಲಿ ಮಕ್ಕಳಿಂದ ಇಂತಹ ಸಂಸ್ಕೃತಿ ಮತ್ತು ಭಜನೆ ಕೇಳಲು ಸಾಧ್ಯವಾಗದಿರುವುದು ಖೇದಕರ. ಚಿಣ್ಣರ ಬಿಂಬ ನಿಜಾರ್ಥದಲ್ಲಿ ಚಿಣ್ಣರ ಮೂಲಕ ಸಮಾಜಕ್ಕೆ ಶಕ್ತಿಯಾಗಿದೆ. ತಂತಜ್ಞಾನದ ಪ್ರಬಾಲ್ಯದಿಂದ ಬಲಿಷ್ಠವಾಗಿ ಬೆಳೆಯುತ್ತಿರುವ ಸಮಾಜದ ಮಧ್ಯೆಯೂ ಇಂತಹ ಸಂಸ್ಕೃತಿ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಚಿಣ್ಣರ ಬಿಂಬದ ಕಾರ್ಯ ಶ್ಲಾಘನೀಯ. ಜಾಗತೀಕರಣದ ಬದುಕಿನಲ್ಲೂ ಜೀವನ ಮೌಲ್ಯವನ್ನು ಬೆಳೆಸುವ ಚಿಣ್ಣರ ಬಿಂಬ ಮಕ್ಕಳಲ್ಲಿ ವಿಶ್ವಾಸ ಕಳಕೊಳ್ಳದೆ ಮಕ್ಕಳಲ್ಲಿ ಆತ್ಮವಿಶ್ವಾಸ, ಮೌಲ್ಯ, ಸಂಸ್ಕೃತಿ ಮೂಡಿಸುವ ಸೇವೆ ಪ್ರಶಂಸನೀಯ ಎಂದೂ ಸುನೀಲ್ ಕುಮಾರ್ ತಿಳಿಸಿದರು.

ಪಾಲೆತ್ತಾಡಿ ಮಾತನಾಡಿ ಹದಿನೇಳರ ಹರೆಯ ದಾಟಿ ಯೌವನದತ್ತ ಕಾಲೂರುತ್ತಿರು ಚಿಣ್ಣರಬಿಂಬ ಸಂಸ್ಕೃತಿ ರೂಪಿಸುವ ನಿಜಾರ್ಥದ ಕೇಂದ್ರವಾಗಿದೆ. ಇಲ್ಲಿ ಪರಿಣತÀ ಚಿಣ್ಣರು ಮತ್ತು ಅವರ ಪಾಲಕರೂ ಪ್ರತಿಷ್ಠೆಯ ಮಟ್ಟಕ್ಕೆ ಬೆಳೆದಿದ್ದಾರೆ. ಇಂದು ನಮ್ಮ ಮಕ್ಕಳು ಹಾಳಗುತ್ತಾರೆ ಅನ್ನುವ ಅಳುಕನ್ನು ಚಿಣ್ಣರ ಬಿಂಬ ದೂರಪಡಿಸಿ ಮಕ್ಕಳು ಭವ್ಯ ಬದುಕು ರೂಪಿಸುವಲ್ಲಿ ಯಶ ಕಂಡಿದೆ ಎಂದÀು ಸಿದ್ಧಿಸಿದ್ದಾರೆ ಎಂದರು.

ನಮ್ಮ ಸಂಸ್ಥೆ ನಮ್ಮ ಸಂಸ್ಕೃತಿ ಆಚಾರ ವಿಚಾರ ಸದಾ ನಮ್ಮೊಟ್ಟಿಗೆ ಜೊತೆಜೊತೆಯಾಗಿ ಸಾಗುತ್ತಿರಬೇಕು ಅನ್ನುವ ಉದ್ದೇಶವಾಗಿರಿಸಿದ ಪ್ರಕಾಶ್ ಭಂಡಾರಿ ಪರಿವಾರದ ಚಿಂತನೆ ಮೌಲ್ಯಭರಿತವಾದದ್ದು. ಇಂಗ್ಲೀಷ್ ಭಾಷೆಯಲ್ಲಿ ಕಲಿತ ನಮ್ಮ ಮಕ್ಕಳಲ್ಲಿ ನಮ್ಮ ಮಾತೃಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಿ ಮುನ್ನಡೆಯಿಸುವುದು ಅಭಿನಂದನೀಯ.
ಸಂಸ್ಕಾರ ಇದ್ದರೆ ಮಾತ್ರ ಮನುಷ್ಯ ಜೀವನ ಅರ್ಥಪೂರ್ಣವಾಗುವುದು. ಆಧುನಿಕ ವೈಜ್ಞಾನಿಕ ಯುಗದಲ್ಲಿ ಮಕ್ಕಳ ಮನಸ್ಸನ್ನು ಪರಿವರ್ತನೆ ಮಾಡಿ ಅವರಿಗೆ ಭಜನೆ, ಸಂಸ್ಕೃತಿ, ಕನ್ನಡ ಕಲಿಸುವುದು ಸಾಮಾನ್ಯ ವಿಷಯವಲ್ಲ. ಇದು ಸರಕಾರ, ವಿಶ್ವ ವಿದ್ಯಾಲಯಗಳು ಮಾಡುವಂತಹ ಕೆಲಸ ಆದರೆ ಚಿಣ್ಣರಬಿಂಬ ಮಾಡುತ್ತಿರುವುದು ಅಭಿನಂದನೀಯ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಪದ್ಮನಾಭ ಪಯ್ಯಡೆ ತಿಳಿದರು.

ಚಿಣ್ಣರ ಬಿಂಬದ ವಿಶ್ವಸ್ಥ ಸದಸ್ಯ ಡಾ| ಸುರೇಂದ್ರಕುಮಾರ್ ಹೆಗ್ಡೆ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಭಾರತೀಯ ಸಂಸ್ಕೃತಿಯ ಶಿಷ್ಟಾಚಾವನ್ನು ಭಾವೀ ಜನಾಂಗಕ್ಕೆ ಪರಿಚಯಿಸಿ ಉಳಿಸುವುದೇ ಚಿಣ್ಣರ ಬಿಂಬದ ಉದ್ದೇಶವಾಗಿದೆ. ಗತ 17 ವರ್ಷಗಳಲ್ಲಿ ಸಾಂಸ್ಕೃತಿಕ ವೃಕ್ಷ ಬೆಳೆಸಿ ಫಲ ನೀಡುವಲ್ಲಿ ಯಶಕಂಡ ಈ ಸಂಸ್ಥೆ ರಾಷ್ಟ್ರವ್ಯಾಪಿ ಮಾನ್ಯತೆ ಪಡೆದಿದೆ. ದೈವೈಕ್ಯ ಪೇಜಾವರ ಶ್ರೀಗಳ ಹಸ್ತದಿಂದ ಬೆಳಗಿಸಿಲ್ಪಟ್ಟ ಈ ಸಂಸ್ಥೆ ದಿನಾ ಬೆಳಗುತ್ತಾ ಅವರ ಆಶಯದಂತೆ ಮುನ್ನಡೆಯುತ್ತಿದೆ ಎಂದರು.

ವಿವಿಧ ಶಾಖೆಗಳ ಮುಖ್ಯಸ್ಥರಾದ ಗೀತಾ ಹೆರಳೆ, ಆಶಾಲತಾ ಕೊಟ್ಟಾರಿ, ಸುಮಿತ್ರಾ ದೇವಾಡಿಗ, ವನಿತಾ ವೈ.ನೋಂಡಾ, ಸಂಧ್ಯಾ ಮೋಹನ್, ತೋನ್ಸೆ ಸಂಜೀವ ಪೂಜಾರಿ, ರಾಜವರ್ಮ ಜೈನ್, ಅಶೋಕ್ ಶೆಟ್ಟಿ ಕಲ್ವಾ, ವಿನಯ ಶೆಟ್ಟಿ ಥಾಣೆ, ಸವಿತಾ ಶೆಟ್ಟಿ ಪೆÇವಾಯಿ ವೇದಿಕೆಯಲ್ಲಿದ್ದು ಕಾರ್ಯಕ್ರಮದ ಅಂಗವಾಗಿ ಚಿಣ್ಣರಿಗಾಗಿ ವಿವಿಧ ಸ್ಪರ್ಧೆಗಳು, ಭಜನೆ, ಶ್ಲೋಕ ಪಠನೆ, ಗೀತನೃತ್ಯ ಮೇಳ, ಮಾತುಕೂಟ (ಚರ್ಚೆ), ಜಾನಪದ ಗೀತಾ ಗುಂಜನ, ಜಾನಪದ ನೃತ, ಕಿರು ಅಭಿನಯ, ಪ್ರಹಸನ, ಯಕ್ಷಗಾನ, ಪ್ರತಿಭಾ ಸ್ಪರ್ಧೆ, ಪಾಲಕರಿಗೆ ಸಮೂಹ ಗಾಯನ, ಸಾಂಸ್ಕೃತಿಕ ಮೇಳೈಕೆಗಳೊಂದಿಗೆ ಮಕ್ಕಳೋತ್ಸವ ಸಂಭ್ರಮಿಸಲ್ಪಟ್ಟಿತು.

ಸಂಜೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಕರ್ನಾಟಕ ಇದರ ನಿರ್ದೇಶಕ ರಂಗಪ್ಪ,ಮಹಾರಾಷ್ಟ್ರ ರಾಜ್ಯದ ಶಾಸಕ ದಿಲೀಪ್ ಬಿ.ಲಾಂಡೆ (ಚಾಂದಿವಿಲಿ), ಚಲನಚಿತ್ರ ಅಭಿನೇತ್ರರಾದ ದಯಾ ಶೆಟ್ಟಿ, ಗುರುಕಿರಣ್, ಮತ್ತಿತರ ಗಣ್ಯರು ಉಪಸ್ಥಿತರಿದ್ದು ಚಿಣ್ಣರಬಿಂಬದ ಮಕ್ಕಳಿಗೆ ಶುಭಕೋರಿದರು. ಮತ್ತು ಇನ್ನಿತರ ಗಣ್ಯರು ಸೇರಿದಂತೆ ಚಿಣ್ಣರ ಬಿಂಬದ ಟ್ರಸ್ಟಿಗಳು, ಸದಸ್ಯರು, ನೂರಾರು ಚಿಣ್ಣರು, ಪೆÇೀಷಕರು ಉಪಸ್ಥಿತರಿ ಉಪಸ್ಥಿತಿಯಲ್ಲಿ ಗುರುವಂದನೆ, ಪ್ರತಿಭಾ ಪುರಸ್ಕಾರ ಪ್ರದಾನ ಮತ್ತು ಸಮಾರೋಪ ಸಮಾರಂಭದೊಂದಿಗೆ ಮಕ್ಕಳ ಉತ್ಸವ ಸಮಾಪನ ಗೊಂಡಿತು.

ಕಾಂದಿವಿಲಿ ಶಿಬಿರದ ಚಿಣ್ಣರ ಪ್ರಾರ್ಥನೆಯೊಂದಿಗೆ ಸಮಾರಂಭ ಆದಿಗೊಂಡಿತು. ಚಿಣ್ಣರ ಸಮೂಹವು ಶೋಕಗಳನ್ನು ಪರಿಸಿ, ಭಾವಾರ್ಥ ತಿಳಿ ಹೇಳಿದರು. ಕು| ದೃಶ್ಯ ಹೆಗ್ಡೆ, ಕು| ತ್ರೀಷಾ ಪೂಜಾರಿ, ಕು| ಶಿರ್ಷಿಕಾ ಶೆಟ್ಟಿ, ಮಾ| ಮನ್ಮಥ್ ಶೆಟ್ಟಿ, ಮಾ| ಪ್ರತೀಕ್ ಶೆಟ್ಟಿ, ಕು| ವೈಷ್ಣವಿ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿದರು. ವಿವಿಧ ಶಾಖೆಗಳ ಚಿಣ್ಣರ ಮುಖ್ಯಸ್ಥರು ಅತಿಥಿüಗಳಿಗೆ ಶಾಲು ಹೊದಿಸಿ ಪುಷ್ಫಗುಪ್ಚ, ಸ್ಮರಣಿಕೆ ನೀಡಿ ಗೌರವಿಸಿದರು. ಕು| ಸುಪ್ರಿಯಾ ಉಡುಪ, ಮಾ| ವಿಕ್ರಮ್ ಪಾಟ್ಕರ್, ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಕು| ಶ್ರೇಯಾ ಶೆಟ್ಟಿ ವಂದನಾರ್ಪಣೆಗೈದರು.

 
More News

ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ

Comment Here