Saturday 10th, May 2025
canara news

ಬೊರಿವಲಿ ಶ್ರೀ ಶನಿಮಹಾತ್ಮ ಪೂಜಾ ಮಿತ್ರ ಮಂಡಳಿ ಸಾವರ್‍ಪಾಡ ನೆರವೇರಿಸಿದ

Published On : 03 Feb 2020   |  Reported By : Rons Bantwal


45ನೇ ಶನಿಗ್ರಂಥ ಪಾರಾಯಣ-17ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.26: ಬೊರಿವಲಿ ಪೂರ್ವದ ಸಾವರ್‍ಪಾಡ ಇಲ್ಲಿನ ಶ್ರೀ ಶನಿಮಹಾತ್ಮ ಪೂಜಾ ಮಿತ್ರ ಮಂಡಳಿ ಸಂಚಾಲಕತ್ವದ ಶ್ರೀ ಶನಿ ಮಂದಿರದಲ್ಲಿ ಇಂದಿಲ್ಲಿ ಭಾನುವಾರ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 45ನೇ ಶನಿಗ್ರಂಥ ಪಾರಾಯಣ ಹಾಗೂ 17ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವವನ್ನು ಶ್ರದ್ಧಾಪೂರ್ವಕವಾಗಿ ನೆರವೇರಿತು.

ಶನೈಶ್ವರ ದೇವರ ಸನ್ನಿಧಿಯಲ್ಲಿ ಪರಿವಾರ ದೇವರಿಗೆ ಕಲಶ ಹೋಮ, ನವಗೃಹ ಶನಿಶಾಂತಿ, ರಂಗಪೂಜೆ, ಕಲಶಾಭಿಷೇಕ, ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಶನಿಶಾಂತಿ, ನವಕ ಕಲಶ, ಪ್ರಧಾನ ಹೋಮ, ನಾಗ ದೇವರಿಗೆ ಆಶ್ಲೇಷಾ ಬಲಿ, ಮಹಾ ಪೂಜೆ, ಮಂಗಳಾರತಿ ನೆರವೇರಿಸಲಾಯಿತು. ಮಂದಿರದ ಪ್ರಧಾನ ಅರ್ಚಕ ವಿಜಯ ಉಪಾಧ್ಯಾಯ ಪಕ್ಷಿಕೆರೆ ತನ್ನಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಪೂಜಾಜಾಧಿಗಳನ್ನು ನೆರವೇರಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು. ಪ್ರಸಾದ ವಿತರಿಸಿ ಹರಸಿದರು. ವಿದ್ವಾನ್ ಧರೆಗುಡ್ಡೆ ಶ್ರೀನಿವಾಸ ತಂತ್ರಿ ಹೋಮಾಧಿಗಳನ್ನು ನೆರವೇರಿಸಿದರು. ರವೀಂದ್ರ ಭಟ್, ಕೃಷ್ಣಪ್ರಸಾದ್ ಭಟ್, ರವೀಂದ್ರ ಭಟ್ ಮತ್ತಿತರ ಪುರೋಹಿತರು ಪೂಜಾಧಿಗಳನ್ನು ಹರಸಿದರು.

ಅಪರಾಹ್ನ ಶನಿ ದೇವರ ಕಲಶ ಪ್ರತಿಷ್ಠಾಪನೆ, ಪೂಜಾ ಮಿತ್ರ ಮಂಡಳಿಯ ಸದಸ್ಯರು ಭಜನೆ ಮತ್ತು ಸುಧಾಕರ್ ಸನಿಲ್ ಅವರ ವಾಚಕತ್ವ ಹಾಗೂ ಕೇಶವ ಅಂಚನ್ ಅರ್ಥಗಾರಿಕೆಯಲ್ಲಿ ಶನಿಗ್ರಂಥ ಪಾರಾಯಣ ನಡೆಸಿದರು. ಶನಿಗ್ರಂಥ ಪಾರಾಯಣ ನಡೆಸಿದರು. ಸಂಜೆ ನಡೆಸಲ್ಪಟ್ಟ ಸರಳ ಸಭಾಕಾರ್ಯಕ್ರಮದಲ್ಲಿ ಸ್ಥಾನೀಯ ಗಣ್ಯರು ಅತಿಥಿü ಅಭ್ಯಾಗತರಾಗಿದ್ದು, ಉಪಕಾರ ಸ್ಮರಣೆ ಕಾರ್ಯಕ್ರಮದಲ್ಲಿ ಮಂಡಳಿಯ ಹಿರಿಯ ಸದಸ್ಯರುಗಳಾದ ದಾಮೋದರ್ ಪುತ್ರನ್, ವಾಸುದೇವ ಕರ್ಕೇರ ಹಾಗೂ ಉಷಾ ಎಸ್.ಮೆಂಡನ್ ಇವರಿಗೆ ಮಿತ್ರ ಮಂಡಳಿಯ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು ಹಾಗೂ ಸ್ಥಾನೀಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದರು. ರಾತ್ರಿ ರಂಗಪೂಜೆ, ಮಹಾ ಮಂಗಳಾರತಿ, ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಗಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಸಂಪನ್ನ ಗೊಂಡಿತು.

ಈ ಸಂದರ್ಭದಲ್ಲಿ ಶ್ರೀ ಶನಿ ಮಹಾತ್ಮ ಪೂಜಾ ಮಿತ್ರ ಮಂಡಳಿ ಅಧ್ಯಕ್ಷ ಗೋವರ್ಧನ ಎ.ಸುವರ್ಣ, ಉಪಾಧ್ಯಕ್ಷ ಗಿರೀಶ್ ಜಿ.ಕರ್ಕೇರ (ಭುವಾಜಿ), ಗೌ| ಪ್ರ| ಕಾರ್ಯದರ್ಶಿ ನಿತ್ಯಾನಂದ ವಿ.ಶೆಟ್ಟಿ, ಗೌ| ಪ್ರ| ಕೋಶಾಧಿಕಾರಿ ಕೇಶವ ಹೆಚ್.ಕಾಂಚನ್, ಜೊತೆ ಕಾರ್ಯದರ್ಶಿ ಗಿರಿಧರ್ ಸುವರ್ಣ, ಜೊತೆ ಕೋಶಾಧಿಕಾರಿ ಸುಧಾಕರ್ ಸನಿಲ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದು ದಾನಿಗಳÀನ್ನು ಸತ್ಕರಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮಿತ್ರ ಮಂಡಳಿಯ ಸದಸ್ಯರನೇಕರು ಸೇರಿದಂತೆ ಮಹಾನಗರದಲ್ಲಿನ ಭಕ್ತರನೇಕರು ಉತ್ಸವದ ಲ್ಲಿ ಸಹಭಾಗಿಗಳಾಗಿ ಶ್ರೀಗಂಧ ತೀರ್ಥ ಪ್ರಸಾದ ಸ್ವೀಕರಿಸಿ ಮಹಾ ಮಹಿಮಾಪೂರ್ಣ ಮಹದನುಗ್ರಹಕ್ಕೆ ಪಾತ್ರರಾದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here