46ನೇ ವಾರ್ಷಿಕ (ಕೋಟಿ-ಚೆನ್ನಯರ) ಬ್ರಹ್ಮ ಬೈದರ್ಕಳ ನೇಮೋತ್ಸವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.25: ಬೋರಿವಿಲಿ ಪೂರ್ವದ ದೇವುಲಪಾಡಾದಲ್ಲಿ ತುಳುನಾಡ ವೀರರಾದ ಕೋಟಿ ಚೆನ್ನಯರನ್ನು ಒಳಗೂಡಿಕೊಂಡಿರುವ ಓಂ ಶ್ರೀ ಜಗದೀಶ್ವರಿ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಇಂದಿಲ್ಲಿ ಶುಕ್ರವಾರ ರಾತ್ರಿ 46ನೇ ವಾರ್ಷಿಕ ಬೈದರ್ಕಳ ನೇಮೋತ್ಸವ ಕ್ಷೇತ್ರÀದ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಶೇಖರ್ ಇಂದು ಸಾಲಿಯಾನ್ ಕಟಪಾಡಿ ಮುಂದಾಳುತ್ವದಲ್ಲಿ ನೆರವೇರಿತು.
ಆ ಪ್ರಯುಕ್ತ ಅಶ್ವತ್ತದಡಿ ಗರಡಿಯಲ್ಲಿ ಶುಕ್ರವಾರ ಅಪರಾಹ್ನ ಕಲಶ ಪ್ರತಿಷ್ಠೆಗೈದು ವಿಧಿವತ್ತಾಗಿ ವಾರ್ಷಿಕ ನೇಮೋತ್ಸಕ್ಕೆ ಚಾಲನೆ ನೀಡಲಾಯಿತು. ರಾತ್ರಿ ಅಗೆಲ ತಂಬಿಲ, ನಂತರ ಬೈದರ್ಕಳ ದರ್ಶನ ನಡೆಯಿತು. ಇಂದಿಲ್ಲಿ ಶನಿವಾರ ಪ್ರಾತಃಕಾಲ ಗಣಹೋಮ, ದುರ್ಗಾಪೂಜೆ ಮಧಾಹ್ನ ಅನ್ನಸಂತಾರ್ಪಣೆ, ರಾತ್ರಿ ಬೈದರ್ಕಳ ನೇಮ (ಕೋಲ) ತದನಂತರ ಜೋಗಿ ಪುರುಷರ ನೇಮೋತ್ಸವÀ ಮತ್ತು ಮಾಯಂದಳ್ ನೇಮ ನಡೆಸಲ್ಪಟ್ಟಿತು. ಸುಕುಮಾರ್ ಭಟ್ ಬೈಕಲ ತನ್ನ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿದ್ದು ಅರ್ಚಕ ರಾಕೇಶ್ ಶಾಂತಿ ಪೂಜಾಧಿಗಳನ್ನು ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ನೀಡಿ ಹರಸಿದರು. ಇಂದಿಲ್ಲಿ ಆದಿತ್ಯವಾರ ಮುಂಜಾನೆ ಮಂಗಳವನ್ನಾಡಿ ನೇಮೋತ್ಸ ಸಮಾಪನ ಗೊಂಡಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಪ್ರಧಾನ ಅಭ್ಯಾಗತರಾಗಿದ್ದು ಸೂಡಾ ಗರಡಿಯ ಕೋಟಿ ಪೂಜಾರಿ ಇವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಉಪಾಧ್ಯಕ್ಷ ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಭಾರತ್ ಬ್ಯಾಂಕ್‍ನ ನಿರ್ದೇಶಕ ಪ್ರೇಮನಾಥ್ ಪಿ.ಕೋಟ್ಯಾನ್, ಸ್ಥಳಿಯ ನಗರ ಸೇವಕ ಅಸ್ವಾರಿಪಾಟೀಲ್, ಶಿವಸೇನಾ ಧುರೀಣ ರಾಜಭಾಯ್ ಕದಂ, ಮಾಜಿ ನಗರ ಸೇವಕರುಗಳಾದ ಯೋಗೇಶ್ ಬೊಯಿರ್, ಚೇತನ್ ಕದಂ ಸೇರಿದಂತೆ ಮಹಾನಗರದ ಸಾವಿರಾರು ಭಕ್ತಾಭಿಮಾನಿಗಳು ಚಿತ್ತೈಸಿ ಮಾತೆ ಜಗದಿಶ್ವರಿ ಮತ್ತು ಬ್ರಹ್ಮ ಬೈದರ್ಕಳರ ಕೃಪೆಗೆ ಪಾತ್ರರಾದರು.
ಪ್ರಸಾದ್ ಕಲ್ಯ (ಮುಲುಂಡ್) ದೇವಿಪಾತ್ರಿಯಾಗಿ, ನರ್ಸಪ್ಪ ಕೆ.ಮಾರ್ನಾಡ್ ಮಧ್ಯಸ್ಥರಾಗಿ, ಸೂಡಾ ಗರಡಿಯ ಕೋಟಿ ಪೂಜಾರಿ ಮತ್ತು ಕಿದಿಯೂರು ಗರಡಿಯ ಹರಿ ಪೂಜಾರಿ ಬೈದರ್ಕಳರ ಪೂಜಾರಿಗಳಾಗಿದ್ದು ಬೂಬ ಪರವ, ನರಸಿಂಹ ಪರವ ಮತ್ತು ಗುಂಡು ಪರವ ಕೋಲ ನೇರವೇರಿಸಿದರು. ಹರೀಶ್ ಕೋಟ್ಯಾನ್ ಮತ್ತು ಹರಿಣಾಕ್ಷಿ ಬಳಗದ ವಾಲಗ, ವಾದ್ಯದೊಂದಿಗೆ ನೇಮೋತ್ಸವ ಜರುಗಿತು.
ಈ ಸಂದರ್ಭದಲ್ಲಿ ಜಗದೀಶ್ವರಿ ಸೇವಾ ಸಮಿತಿ ಉಪಾಧ್ಯಕ್ಷ ಲಕ್ಷ್ಮಣ ಬಿ.ಬೆಳುವಾಯಿ, ಗೌ| ಕಾರ್ಯದರ್ಶಿ ವಿಶ್ವನಾಥ ಬಿ.ಬಂಗೇರ, ಗೌ| ಪ್ರ| ಕೋಶಾಧಿಕಾರಿ ರಘು ಕೆ.ಕೋಟ್ಯಾನ್, ಜತೆ ಕಾರ್ಯದರ್ಶಿ ಸದಾಶಿವ ಡಿ.ಸಾಲ್ಯಾನ್, ಜತೆ ಕೋಶಾಧಿಕಾರಿ ದಿನೇಶ್ ಆರ್.ಶೆಟ್ಟಿ, ವಿಶ್ವಸ್ಥ ಸದಸ್ಯರುಗಳಾದ ನರ್ಸಪ್ಪ ಕೆ.ಮಾರ್ನಾಡ್, ವಾಸು ಕೆ.ಪೂಜಾರಿ, ಜಯರಾಮ ಎಸ್.ಪೂಜಾರಿ, ಆನಂದ್ ಜಿ.ಶೆಟ್ಟಿ, ದಿನಕರ್ ಜಿ.ಪವಾರ್, ಕಾರ್ಯಕಾರಿ ಸಮಿತಿ ಅಧ್ಯಕ್ಷ ದಯಾನಂದ ಪೂಜಾರಿ ವಾರಂಗ, ಕಾರ್ಯದರ್ಶಿಗಳಾದ ಜಯರಾಮ ಪೂಜಾರಿ ಮತ್ತು ಲಕ್ಷ್ಮಣ ಎಸ್.ಸಾಲ್ಯಾನ್, ಜತೆ ಕಾರ್ಯದರ್ಶಿ ವಿಠಲ ಹೆಚ್.ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸೇವಾದಳವು ದಳಪತಿ ಗಣೇಶ್ ಕೆ.ಪೂಜಾರಿ ನೇತೃತ್ವದಲ್ಲಿ ಸ್ವಯಂಸೇವೆಗೈಯಿತು. ಪದಾಧಿಕಾರಿಗಳು ಸುಖಾಗಮನ ಬಯಸಿ ಪುಷ್ಪಗುಪ್ಚ, ಪ್ರಸಾದ ವಿತರಿಸಿದರು.