ಸಂಸ್ಕಾರವೇ ಭಾರತದ ಪರಮ ವೈಭವವಾಗಿದೆ : ರಾಜ ಶೇಖರಾನಂದಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.26: ನಮನ ಅಂದರೆ ನಮಸ್ಕಾರ ಮತ್ತು ನಮ್ಮ ಎಂದರ್ಥ. ಉದರ ಪೆÇೀಷಣೆಗೆ ಮುಂಬಯಿಗೆ ಬಂದು ತನ್ನ ಕ್ಷುಧಾತರ್À ಪೂರೈಸುವ ಜೊತೆಗೆ ಇನ್ನಷ್ಟು ಜನರ ಹಸಿವು ನೀಗಿಸುವ ಕರ್ತವ್ಯ ಮೆರೆದ ಪ್ರಭಾಕರ್ ಸೇವೆ ಅನುಪಮವಾದುದು. ದೇವರು, ಧರ್ಮ ಮತ್ತು ದೇಶ ಈ ಮೂರು ಸೂತ್ರಗಳನ್ನು ಒಂದೇ ಸೂರಿನಡಿ ತಂದು ಬಾಳಿದಾಗÀ ಮಾನವ ಬಾಳು ಹಸನಾಗುವುದು. ಧರ್ಮದ ಅಧಿದೇವತೆಯೇ ಜನನಿದಾತೆಯಾಗಿದ್ದಾಳೆ. ಮಾತೆ ಯಾವಾಗ ಮಕ್ಕಳಿಗೆ ಧರ್ಮವನ್ನು ಬೋಧಿಸುವಲೋ ಆ ಮಗು ಜಗತ್ತಿನಲ್ಲೊಂದು ದೊಡ್ದ ಸಾನಿಧ್ಯ ಪಡೆಯಲು ಸಾಧ್ಯವಾಗುವುದು. ಅದನ್ನೇ ಪ್ರಭಾಕರ್ ಸಿದ್ಧಿಸಿದ್ದಾರೆ. ಸಂಸ್ಕಾರವೇ ಭಾರತದ ಪರಮ ವೈಭವವಾಗಿದ್ದು, ಭಾರತವು ಜ್ಞಾನಸಂಪನ್ನ ರಾಷ್ಟ್ರವಾಗಿರುವುದರಿಂದ ಇಲ್ಲಿನ ಕಾಸಿಗೆ ಬೆಲೆಯಿಲ್ಲ ಆದರೆ ಈ ದೇಶದ ಜ್ಞಾನಕ್ಕೆ ಮಹತ್ವವಿದೆ ಎಂದು ವಜ್ರದೇಹಿ ಮಠ ಗುರುಪುರ ಇದರ ಶ್ರೀ ರಾಜ ಶೇಖರಾನಂದ ಸ್ವಾಮೀಜಿ ತಿಳಿಸಿದರು.
.
ಇಂದಿಲ್ಲಿ ಭಾನುವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಿರ್ಮಿತ ಸ್ವಾತಂತ್ರ್ಯ ಹೋರಾಟಗಾರ ಬಡಎರ್ಮಾಳ್ ಗರಡಿಮನೆ ಸ್ವರ್ಗೀಯ ರಾಮ ಬಿ.ಸನಿಲ್ ಸ್ಮರಣಾರ್ಥ ವೇದಿಕೆಯಲ್ಲಿ ರಾಷ್ಟ್ರಪ್ರೇಮ, ಮಾತೃಪ್ರೇಮ, ಕಲಾಪ್ರೇಮ ಪರಿಕಲ್ಪನೆಯಡಿ ನಮನ ಫ್ರೆಂಡ್ಸ್ ಮುಂಬಯಿ ತನ್ನ15ನೇ ವಾರ್ಷಿಕೋತ್ಸವವನ್ನು ನಮನೋತ್ಸವ-2020 ಮತ್ತು ನಮನ ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಸಂಭ್ರಮಿಸಿದ್ದು ಸ್ವಾಮೀಜಿ ಅವರು ಆಶೀರ್ವಚನಗೈದು ಮಾತನಾಡಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಸಭಾಧ್ಯಕ್ಷತೆಯಲ್ಲಿ ಜರುಗಿದ ನಮನೋತ್ಸವ 2020 ಹಾಗೂ ನಮನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬೆಳುವಾಯಿ ಮಿತ್ತಬೆಟ್ಟು ಬರ್ಕೆಮನೆ ಗೋಪಿ ಬಾಬು ಪೂಜಾರ್ತಿ ದೀಪ ಬೆಳಗಿಸಿ ಚಾಲನೆ ನೀಡಿದರು. ವಾಸ್ತುತಜ್ಞರಾದ ಪಂಡಿತ್ ನವೀನ್‍ಚಂದ್ರ ಆರ್.ಸನಿಲ್, ಅಶೋಕ್ ಪುರೋಹಿತ್, ಹರೀಶ್ ಶಾಂತಿ ಹೆಜಮಾಡಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಸಮಾಜ ಸೇವಕರಾದ ರವೀಂದ್ರನಾಥ ಎಂ.ಭಂಡಾರಿ, ಚಿತ್ರಾಪು ಕೆ.ಎಂ ಕೋಟ್ಯಾನ್, ಅಶೋಕ್ ಕೆ.ಶೆಟ್ಟಿ ನಾಯ್ಗಾಂವ್, ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಸೋಮನಾಥ ಕೋಟ್ಯಾನ್ ಬೆಳುವಾಯಿ, ದಯಾನಂದ ಪೂಜಾರಿ ಇನ್ನಾ, ಹರೀಶ್ ಕೋಟ್ಯಾನ್ ಪಡುಇನ್ನಾ ಅತಿಥಿs ಅಭ್ಯಾಗತರುಗಳಾಗಿ ವೇದಿಕೆಯಲ್ಲಿ ಆಸೀನರಾಗಿದ್ದರು.
ಸಮಾರಂಭದಲ್ಲಿ ವೀರಯೋಧ ನಿವೃತ್ತ ಕಮಾಂಡರ್ ಶ್ಯಾಮರಾಜ್ ವಿ.ಭಟ್ ಎಡನೀರು(ನಿವೃತ್ತ ಯೋಧ ನಮನ), ನವೀನ್ ಎಂ.ಅಂಚನ್ (ದಿವ್ಯಾಂಗ ಸಾಹಸಿಗ ನಮನ), ಕೈರಬೆಟ್ಟು ವಿಶ್ವನಾಥ ಭಟ್ (ಹರಿದಾಸ ನಮನ), ನಾರಾಯಣ ಶೆಟ್ಟಿ ನಂದಳಿಕೆ (ರಂಗÀ ನಮನ), ರವೀಂದ್ರ ಎಸ್.ಕೋಟ್ಯಾನ್ (ಸಮಾಜ ನಮನ), ಶ್ರೀಧರ ಉಚ್ಚಿಲ್ (ಅಕ್ಷರ ನಮನ), ನವೀನ್ ಶೆಟ್ಟಿ ಇನ್ನಬಾಳಿಕೆ (ಸಂಘಟಕ ನಮನ) ಪ್ರಶಸ್ತಿ ಪ್ರದಾನಿಸಿದರು. ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್, ಕಿಶೋರ್ ಶೆಟ್ಟಿ ಪಿಲಾರು, ನಿತೇಶ್ ಪೂಜಾರಿ ಮಾರ್ನಾಡ್, ಕು| ದಿಯಾ ಇನ್ನಾ, ಕು| ವೈಷ್ಣವಿ ಡಿ.ಶೆಟ್ಟಿ, ಕು| ಅದ್ವಿಕಾ ಶೆಟ್ಟಿ, ಕು| ಭಾವಿಕಾ ಬಿ.ಸುವರ್ಣ, ಕು| ತೀರ್ಥ ಪೆÇಳಲಿ ಇವರಿಗೆ ನಮನ ಸಿರಿ ಯುವ ಪುರಸ್ಕಾರ 2020 ಪ್ರದಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಾಲ ಕವಿಯತ್ರಿ ಆದಿತಿ ಆರ್.ದೇಶಪಾಂಡೆ ಬೆಂಗಳೂರು ರಚಿತ `ಸಾಘವಿ ಶತಭಿಷಾ ನಕ್ಷತ್ರ' ಕವನ ಸಂಕಲನವನ್ನು ವಜ್ರದೇಹಿಶ್ರೀ ಬಿಡುಗಡೆಗೊಳಿಸಿ ಅಭಿನಂದಿಸಿದರು.
ಪುಣೆಯಲ್ಲಿ ನೆಲೆಸಿರುವ ನನ್ನನ್ನು ಮುಂಬಯಿಗೆ ಕರೆಸಿಕೊಂಡು ಗೌರವಿಸುತ್ತಿರುವುದು ಇದು ಕೇವಲ ನನ್ನ ಹಿರಿಮೆಯಲ್ಲ. ರಾಷ್ಟ್ರಕ್ಕೆ ಸಂದ ಗೌರವ. ವಿಧಿಯ ಇಚ್ಛೆಯಿಂದ ವಿಕಲಾಂಗನಾದರೂ ರಾಷ್ಟ್ರ ರಕ್ಷಣೆಗಾಗಿ ಈಗಲೂ ನನಗೆ ಗನ್ ಕೊಟ್ರೆ ಎಡಕೈಯಲ್ಲಾದಾರೂ ಕೈಚಳಕ ತೋರಿಸುವೆ. ಮೈಕ್ ಹಿಡಿದಾಗ ಕೈ ನಡುಕವಾಗುತ್ತದೆ ಕಾರಣ ಪ್ರಸ್ತುತ ಗನ್ ಸೆ ಡರ್ ನಾ ಲಗ್ತಾ ಹೆ ... ಲೆಕಿನ್ ಮೈಕ್ ಸೆ ಲಗ್ತಾ ಹೆ. ನಾನೋರ್ವ ಕಮಾಂಡರ್ (ಸೈನ್ಯಾಧಿಕಾರಿ) À್ದ್ದ್ದ ಹಿರಿಮೆ ನನಗಿದೆ. ದಿಲ್ ದಿಯಾ ಹೇ ಜಾನ್ ಭೀ ದೆಹೇಂಗೆ.. ಯೇ ವತನ್.. ಅನ್ನುತ್ತಾ ಕಮಾಂಡರ್ ಶ್ಯಾಮರಾಜ್ ರಾಷ್ಟ್ರಪ್ರೇಮದ ಅಭಿಮಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಓರ್ವ ವಿಕಲಚೇತನ ಯೋಧನನ್ನು ಪರಿವಾರ ಸಹಿತ ಆಹ್ವಾನಿಸಿ ಸನ್ಮಾನಿಸಿ ರಾಷ್ಟ್ರಪ್ರೇಮ ಮೆರೆದ ರೀತಿಕಂಡು ಮನಮಿಡಿಯಿತು. ನಿಜವಾಗಿ ಯೋಧರನ್ನು ಗೌರವಿಸುವುದು ಪ್ರತೀಯೋರ್ವ ಭಾರತೀಯನ ಕರ್ತವ್ಯ ಆಗಬೇಕು. ಅಂತಹ ಕೆಲಸ ನಮನ ಫ್ರೆಂಡ್ಸ್ ಮಾಡಿ ಜನಮನ ಗೆದ್ದಿದ್ದಾರೆ. ಇಂತಹ ಸುಪುತ್ರನನ್ನು ಹೆತ್ತ ತಾಯಿ ಧನ್ಯಳು. ಎಲ್ಲರೂ ಅಭಿಮಾನ ಪಡುವಂತಹದ್ದು ಎಂದÀು ಚಂದ್ರಶೇಖರ ಪೂಜಾರಿ ಅಧ್ಯಕ್ಷೀಯ ಭಾಷಣದಲ್ಲಿ ಉಲ್ಲೇಖಿಸಿದರು.
ನನ್ನ ತಾಯಿಯ ಅನುಗ್ರಹ ಪಡೆದು, ಕುಲದೇವರು, ದೈವಗಳಿಗೆ ಕರಮುಗಿದು ಮುಂಬಯಿ ಸೇರಿದರೂ ಉನ್ನತ ಶಿಕ್ಷಣಪಡೆಯಲಾಗಿಲ್ಲ ಅನ್ನುವ ಕೊರಗು ಇತ್ತು. ಆದರೆ ಇಂದು ನನ್ನನ್ನು ಪ್ರೀತಿಸಿ ಗೌರವಿಸುವ ಅಭಿಮಾನಿ ಬಳಗ ಸಂಪಾದನೆಯೇ ನನ್ನ ದೊಡ್ಡ ಆಸ್ತಿ ಅಂದುಕೊಂಡಿದ್ದೇನೆ. ಆದರೂ ಇಲ್ಲಿನ ಕನ್ನಡ ಪತ್ರಿಕೆಗಳು ನನ್ನನ್ನು ಪೆÇ್ರೀತ್ಸಹಿಸಿದ ಕಾರಣ ಬರಹಗಾರನಾಗಿ ಗುರುತಿಸಿ ಕೊಳ್ಳುವಂತಾಯಿತು ಎಂದು ಧ್ವನಿಮುದ್ರಣದಲ್ಲಿ ಪ್ರಭಾಕರ ಬೆಳುವಾಯಿ ತನ್ನ ಅನಿಸಿಕೆ ವ್ಯಕ್ತಪಡಿಸಿದರು.
ಆರಂಭದಲ್ಲಿ ಅಂತರಾಷ್ಟ್ರೀಯ ಮಾನ್ಯತಾ ವಾಸ್ತುತಜ್ಞ ಪಂಡಿತ್ ನವೀನ್‍ಚಂದ್ರ ಆರ್.ಸನಿಲ್ ದೀಪ ಪ್ರಜ್ವಲಿಸಿ ವಾರ್ಷಿಕೋತ್ಸವಕ್ಕೆ ಚಾಲನೆಯನ್ನೀಡಿದರು. ಈ ಸಂದರ್ಭದಲ್ಲಿ ಪ್ರಕಾಶ್ ಮೂಡಬಿದ್ರಿ, ಸುರೇಶ್ ಆಚಾರ್ಯ ಕಲ್ಮನೆ, ಕೃಷ್ಣ ಬಿ.ಶೆಟ್ಟಿ ಅಂಧೇರಿ, ಭಾಸ್ಕರ್ ಸುವರ್ಣ ಸಸಿಹಿತ್ಲು, ರವೀಂದ್ರ ಶೆಟ್ಟಿ ಇನ್ನಬೀಡು, ಹರೀಶ್ ಎಸ್.ಪೂಜಾರಿ, ನ್ಯಾಯವಾದಿ ಸೌಮ್ಯ ಎಸ್.ಪೂಜಾರಿ, ಪ್ರವೀಣ್ ರಾಮ ಸನಿಲ್, ಆರ್ಚಕರಾದ ಗುರು ಶಂಕರ್ ಭಟ್ ಮತ್ತು ಶಂಕರ್ ಗುರು ಭಟ್ ರಾವಾಲ್ಪಡ ಉಪಸ್ಥಿತರಿದ್ದು ಶುಭಾರೈಸಿದರು.
ಈ ಸಂದರ್ಭದಲ್ಲಿ ಗೋಪಿ ಬಾಬು ಪೂಜಾರ್ತಿ, ಪ್ರಭಾಕರ ಬೆಳುವಾಯಿ, ಶೋಧನಾ ಪ್ರಭಾಕರ್, ಮಾ| ಪ್ರಥಿü ್ವನ್ ಪಿ. ಬೆಳುವಾಯಿ ಪರಿವಾರವನ್ನು ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಅತಿಥಿüಗಳು ಸನ್ಮಾನಿಸಿ ಅಭಿನಂದಿಸಿದರು. ಅತಿಥಿü ಗಣ್ಯರು, ಪುರಸ್ಕೃತರು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಹರ್ಷವ್ಯಕ್ತ ಪಡಿಸಿದರು.
ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮವನ್ನಾಗಿಸಿ ಗಾನ ವೈಭವವನ್ನು, ನಗರದ ನಾಮಾಂಕಿತ ಕಲಾವಿದರು ನೃತ್ಯ ವೈಭವ, ತುಳು ಹಾಸ್ಯ ಪ್ರಹಸನ ಸಾದರ ಪಡಿಸಿದರು. ಬಿಲ್ಲವರ ಅಸೋಸಿಯೇಶನ್ ಅಂಧೇರಿ ಸ್ಥಳೀಯ ಕಚೇರಿಯ ಕಲಾವಿದರು ಚಂದ್ರಶೇಖರ ಕಂಬಾರ ಮೂಲ ರಚನೆಯ ನಾರಾಯಣ ಶೆಟ್ಟಿ ನಂದಳಿಕೆ ವಿರಚಿತ, ಮನೋಹರ ಶೆಟ್ಟಿ ನಂದಳಿಕೆ ಇವರ ನಿರ್ದೇಶನದಲ್ಲಿ `ನಾಗ ಸಂಪಿಗೆÀ' ತುಳು ನಾಟಕ ಪ್ರದರ್ಶಿಸಿದರು.
ಅಶೋಕ್ ಪಕ್ಕಳ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿüಗಳು, ಸನ್ಮಾನಿತರನ್ನು ಪರಿಚಯಿಸಿಸಭಾ ಕಾರ್ಯಕ್ರಮ ನಿರೂಪಿಸಿದರು. ಸ್ವರ್ಗೀಯ ರಾಮ ಬಿ.ಸನಿಲ್ ನಾಮಕರಣದ ವೇದಿಕೆಯ ಬಗ್ಗೆ ಧರ್ಮೇಶ್ ಎಸ್.ಸಾಲ್ಯಾನ್ ತಿಳಿಸಿದರು. ನಿತೇಶ್ ಪೂಜಾರಿ ಮಾರ್ನಾಡ್, ಕು| ತೀರ್ಥ ಪೆÇಳಲಿ, ಕು| ಕೃಪಾ ಪೂಜಾರಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ನಮನ ಫ್ರೆಂಡ್ಸ್ ಮುಂಬಯಿ ಸಂಸ್ಥಾಪಕ ಪ್ರಭಾಕರ ಬೆಳುವಾಯಿ ಅತಿಥಿsಗಣ್ಯರು ಫಲಪುಷ್ಪ, ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಿ ಕೃತಜ್ಞತೆ ಸಮರ್ಪಿಸಿದರು.