ಬ್ರಹ್ಮಕಲಶೋತ್ಸವದ ಪೂರ್ವಸಿದ್ಧತೆ-ಸಂಕೋಚ ಪೂಜಾಧಿಗಳ ಸಂಪನ್ನ
ಮುಂಬಯಿ, ಫೆ.08: ಮಲಾಡ್ ಪೂರ್ವದ ಕುರಾರ್ ವಿಲೇಜ್‍ನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾ ಪರಮೇಶ್ವರಿ ಮಂದಿರದ ಪುನಃರ್‍ನಿರ್ಮಾಣ ನಿಮಿತ್ತ ಪೂರ್ವಸಿದ್ಧತೆಯಾಗಿಸಿ ಸಂಕೋಚ ನಡೆಸಿ ಪೂಜಾಧಿಗಳನ್ನು ನೆರವೇರಿಸಲಾಯಿತು.
ಕಳೆದ ಮಂಗಳವಾರ ವೇ| ಮೂ| ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ ಅವರು ತನ್ನ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಸೂಡ ಪ್ರಾರ್ಥನೆಗೈದು ತೀರ್ಥ ಪ್ರಸಾದ ವಿತರಿಸಿ ಹರಸಿದರು. ಸಮಿತಿ ಅಧ್ಯಕ್ಷ ರಘುನಾಥ ಕೆ.ಕೊಟ್ಟಾರಿ ಮತ್ತು ಆಶಾ ಆರ್.ಕೊಟ್ಟಾರಿ ದಂಪತಿ ಪೂಜಾಧಿಗಳ ಜಯಮಾನತ್ವವಹಿಸಿದ್ದರು.
ದೇವಸ್ಥಾನದ ಜಿರ್ಣೋದ್ಧಾರ, ಮುಖ್ಯದ್ವಾರಕ್ಕೆ ರಜಕ ಕವಚ, ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಬ್ರಹ್ಮಕಲಶೋತ್ಸವವನ್ನುಇದೇ ಫೆ.23 ರಿಂದ 28ರ ಸಪ್ತದಿನಗಳಲ್ಲಿ ಮಂದಿರದ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದು ಎಲ್ಲವೂ ನಿರ್ವಿಘ್ನವಾಗಿ ನೆರವೇರಿಸುವಂತೆ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಎಸ್.ಬಿ ಕೋಟ್ಯಾನ್ ಪ್ರಾಥಿರ್üಸಿದರು.
ಈ ಸಂದರ್ಭದಲ್ಲಿ ಮಂದಿರ ಸಮಿತಿಯ ಉಪಾಧ್ಯಕ್ಷ ಪದ್ಮನಾಭ ಟಿ.ಶೆಟ್ಟಿ, ಗೌರವ ಕೋಶಾಧಿಕಾರಿ ಬಾಬು ಎಂ.ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಮಂತ್ರಿತ ಸದಸ್ಯರು, ಸದಸ್ಯರು ಹಾಗೂ ಭಕ್ತರನೇಕರು ಉಪಸ್ಥಿತರಿದ್ದರು.