Wednesday 26th, February 2020
canara news

ಯೂನಿವರ್ಸಿಟಿ ಆಫ್ ಡಿಸ್ಟ್ಟಿಂಕ್ಶನ್ ಲಾರ್ನಿಂಗ್ ಎಜ್ಯುಕೇಶನ್ ಆರ್ಜೇಂಟೈನಾ ಸಂಸ್ಥೆಯಿಂದ

Published On : 08 Feb 2020   |  Reported By : Rons Bantwal


ಅಬ್ದುಲ್ ಶಕೀಲ್ ದೇರಳಕಟ್ಟೆ ಮತ್ತು ಶ್ರೀಮತಿ ಸಂಸದ್ ಕುಂಜತ್ತಬೈಲ್ ಇವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಥೈಲ್ಯಾಂಡ್ (ಸಿಲೊಮ್), ಫೆ.01: ಯುನಿವರ್ಸಿಟಿ ಆಫ್ ಡಿಶ್ಟಂನ್ಸ್ ಲಾರ್ನಿಂಗ್ ಎಜ್ಯುಕೇಶನ್ ಆರ್ಜೇಂಟೈನಾ ಪ್ರಸಿದ್ಧಿಯ ಸೈಂಟ್ ಪಾವ್ಲ್'ಸ್ ಇಂಟರ್ನೇಶನಲ್ ಯುನಿವರ್ಸಿಟಿ (ಎಸ್ಪಿಐಯು) ಶೈಕ್ಷಣಿಕ ಸಂಸ್ಥೆಯು ವಾರ್ಷಿಕ ಅಂತರಾಷ್ಟ್ರೀಯ ಘಟಿಕೋತ್ಸವ ಸಮಾರಂಭ ಇಂದಿಲ್ಲಿ ಶನಿವಾರ ಸಂಜೆ ಥೈಲ್ಯಾಂಡ್ ರಾಷ್ಟ್ರದ ಸಿಲೋಮ್ ಇಲ್ಲಿನ ಹೊಟೇಲ್ ಹಾಲೀಡೇ ಇನ್ನ್ ಸಿಲೊಮ್ ಇದರ ಕ್ರಿಸ್ಟಲ್ ಬಾಲ್ರೂಂನ ಸಭಾಗೃಹದಲ್ಲಿ ಮಾಜಿ ವಿದೇಶಗಳ ಭಾರತೀಯ ರಾಯಭಾರಿ ಡಾ. ವಿ.ಬಿ ಸೋನಿ ಅಧ್ಯಕ್ಷತೆಯಲ್ಲಿ ನೆರವೇರಿತು.

ಘಟಿಕೋತ್ಸವದಲ್ಲಿ ಪಿ.ಎನ್ ಅಕಾಡೆಮಿ ಥೈಲ್ಯಾಂಡ್ ಇದರ ಮುಖ್ಯಸ್ಥ ಪಾವ್ಲ್ ಪಿ.ಸ್ರಿನರೂಲಾ ಮುಖ್ಯ ಅತಿಥಿಯಾಗಿ ಮತ್ತು ಗೌರವ ಅತಿಥಿಯಾಗಳಾಗಿ ಥೈಲ್ಯಾಂಡ್ ನ ಪ್ರತಿಷ್ಠಿತ ಶಿಕ್ಷಣತಜ್ಞೆ ಕೆ.ರೋನೆಲ್, ಪ್ರಾಂಶುಪಾಲ ಅಡೋಲ್ಫ್ ಪೆರಿ ಜರ್ಮನ್ ಮತ್ತು ಎಸ್ಪಿಐಯು ಇದರ ಭಾರತೀಯ ಪ್ರತಿನಿಧಿ ಡಾ| ಎಂ.ಬಿಸಾನ್ವಿ ಉಪಸ್ಥಿತರಿದ್ದು ಕರ್ನಾಟಕದ ಮಂಗಳೂರು ಮೂಲತಃ ವಿದೇಶಿ ಯುವ್ಯೋದ್ಯಮಿಯ ಸಾಧನಾಶೀಲತೆ ಮತ್ತು ಸಮಾಜ ಸೇವೆ ಗುರುತಿಸಿ ಯುನೈಟೆಡ್ ರೆಡಿಮಿಕ್ಸ್ ಕಾಂಕ್ರೀಟ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಅನಿವಾಸಿ ಭಾರತೀಯ ಉದ್ಯಮಿ, ಕೆಪಿಸಿಸಿ ಎನ್‍ಆರ್‍ಐ ಸೌದಿ ಅರೇಬಿಯಾ ಘಟಕದ ಅಧ್ಯಕ್ಷ ಅಬ್ದುಲ್ ಶಕೀಲ್ ದೇರಳಕಟ್ಟೆ (ರೆಂಜಡಿ) ಮತ್ತು ಅತ್ಯಮೂಲ್ಯ ಸಮಾಜ ಸೇವೆ ಪರಿಗಣಿಸಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಸಮಾಜ ಸೇವಕಿ ಶ್ರೀಮತಿ ಸಂಸದ್ ಕುಂಜತ್ತಬೈಲ್ (ಮಂಗಳೂರು) ಇವರಿಗೆ ಗೌರವ ಡಾಕ್ಟರೇಟ್ ಸನದು ಪ್ರದಾನಿಸಿ ಅಭಿನಂದಿಸಿದರು.

ಈ ಶುಭಾವಸರದಲ್ಲಿ ಝೈನೂದ್ಧೀನ್ ಮುನ್ನೂರು, ಸನದ್ ಅಬ್ದುಲ್ ರಹಮಾನ್, ಮಹಮ್ಮದ್ ಇಕ್ಬಾಲ್, ಮಹಮ್ಮದ್ ಹರ್ಷದ್ ಗಣ್ಯರು ಉಪಸ್ಥಿತರಿದ್ದು ಪುರಸ್ಕೃತರಿಗೆ ಅಭಿನಂದಿಸಿದರು.

 

 
More News

ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ
ಕಂಬಳ ಕೋಣಗಳ ಓಟಗಾರ ಶ್ರೀನಿವಾಸ ಗೌಡರಿಗೆ ಹೆಗ್ಗಡೆಯವರಿಂದ ಸನ್ಮಾನ
ಕಂಬಳ ಕೋಣಗಳ ಓಟಗಾರ ಶ್ರೀನಿವಾಸ ಗೌಡರಿಗೆ ಹೆಗ್ಗಡೆಯವರಿಂದ ಸನ್ಮಾನ

Comment Here