ಮುಂಬಯಿ, ಫೆ.13: ಉಡುಪಿ ಕಲ್ಯಾಣ್ಫುರ ಇಲ್ಲಿನ ಕೆಮ್ಮಣ್ಣು ನಿವಾಸಿಯಾದ ಸ್ಮಿತಾ ಲೋಕೇಶ್ ಸಂತೂರ್ (43.) ಇಂದಿಲ್ಲಿ ಗುರುವಾರ ಉಡುಪಿಯ ಆದರ್ಶ್ ಆಸ್ಪತ್ರೆಯಲ್ಲಿ ಮೆದುಳು ಸ್ರಾವದಿಂದ ನಿಧನರಾದರು.
ಉಡುಪಿ ಅಂಚೆ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಮೃತರು ತಾಯಿ, ಪತ್ನಿ, ಎರಡು ಗಂಡು ಮಕ್ಕಳು ಸೇರಿದಂತೆ ಬಂಧು ಬಳಗ ಆಗಲಿದ್ದಾರೆ. ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಸದಸ್ಯ ಸುರೇಶ್ ಕೋಟ್ಯಾನ್ ಅವರ ಸಹೋದರಿ ಮಗಳಾಗಿದ್ದು, ಸ್ಮಿತಾ ಸಂತೂರ್ ನಿಧನಕ್ಕೆ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಎಲ್ಲಾ ಪದಾಧಿಕಾರಿಗಳು, ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿ ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ, ಸದ್ಗತಿ ಕೋರಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.