(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.15: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ವಾರ್ಷಿಕವಾಗಿ ನೆರವೇರಿಸುತ್ತಿರುವಂತೆ ಈ ಬಾರಿ ಮಂಡಳಿಯ ಅಮೃತ ಮಹೋತ್ಸವದ ಶುಭಾವಸರದಲ್ಲಿ ಸಾರ್ವಜನಿಕ ಓಂ-ಶನಿ-ಓಂ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಧಾರ್ಮಿಕ ಕಾರ್ಯಕ್ರಮವನ್ನು ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದÀಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಿತು. ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ದೀಪ ಬೆಳಗಿಸಿ ವಾರ್ಷಿಕ ಗ್ರಂಥ ಪಾರಾಯಣಕ್ಕೆ ಚಾಲನೆ ನೀಡಿದರು.
ಶ್ರೀ ಚಂದ್ರಶೇಖರ್ ಎಸ್.ಶಾಂತಿ (ಅಧ್ಯಕ್ಷರು) ಇವರ ಪೌರೋಹಿತ್ಯದಲ್ಲಿ ನಡೆಸಲ್ಪಟ್ಟ ಪಾರಾಯಣ ಕಾರ್ಯಕ್ರಮದಲ್ಲಿ ಶ್ರೀ ಉಳ್ಳ್ಳೂರು ಶೇಖರ ಶಾಂತಿ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯದರ್ಶಿ ಶ್ರೀ ರವೀಂದ್ರ ಎ.ಶಾಂತಿ ಪುಜಾಧಿಗಳನ್ನು ನೇರವೇರಿಸಿ, ಶ್ರೀ ಶನೀಶ್ವರ ಮಹಾಪೂಜೆ ನೆರವೇರಿಸಿ ಹರಸಿದರು. ಅಸೋಸಿಯೇಶನ್‍ನ ಉಪಾಧ್ಯಕ್ಷ ದಯಾನಂದ್ ಆರ್.ಪೂಜಾರಿ (ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ), ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ಮತ್ತು ವನಿತಾ ಅಶೋಕ್ ದಂಪತಿ ಪೂಜೆಯ ಯಜಮಾನಿಕೆ ವಹಿಸಿದ್ದರು.
ಬಿ.ಎಂ ಸುವರ್ಣ ಮೂಲ್ಕಿ, ಯಶೋಧರ ಡಿ.ಪೂಜಾರಿ, ವಾಸು ಸಾಲ್ಯಾನ್, ಬಾಲಕೃಷ್ಣ ಪೂಜಾರಿ, ನಾರಾಯಣ ಬಂಗೇರ ಮತ್ತು ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಇತರ ಕಲಾವಿದರು ತಾಳಮದ್ದಲೆ ರೂಪದಲ್ಲಿ ಶ್ರೀ ಶನೀಶ್ವರ ಗ್ರಂಥ ಪಾರಾಯಣ ನಡೆಸಿದರು.
ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಶ್ರೀ ಧನಂಜಯ ಶಾಂತಿ, ಗೌ| ಪ್ರ| ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಸೇವಾದಳದ ದಳಪತಿ (ಜಿಒಸಿ) ಗಣೇಶ್ ಕೆ.ಪೂಜಾರಿ, ಬಿಲ್ಲವರ ಭವನದÀ ವ್ಯವಸ್ಥಾಪಕರುಗಳಾದ ಬಿ.ಚಂದ್ರಶೇಖರ್ ಸಾಲ್ಯಾನ್ ಸೇರಿದಂತೆ ಅಸೋಸಿಯೇಶನ್‍ನ ಇನ್ನಿತರ ಪದಾಧಿಕಾರಿಗಳು, ಅಸೋಸಿಯೇಶನ್‍ನ ಎಲ್ಲಾ ಸ್ಥಳೀಯ ಸಮಿತಿಗಳ ಪ್ರಮುಖರು, ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡÀರು. ಗಂಗಾಧರ್ ಕಲ್ಲಡಿ ಪ್ರಸಾದ ವಿತರಿಸಿದರು.