Saturday 10th, May 2025
canara news

ಕನ್ನಡ ವೆಲ್ಫೇರ್ ಸೊಸೈಟಿ (ರಿ.) ಘಾಟ್ಕೋಪರ್ ಸಂಭ್ರಮಿಸಿದ 52ನೇ ವಾರ್ಷಿಕೋತ್ಸವ

Published On : 16 Feb 2020   |  Reported By : Rons Bantwal


ಪ್ರಭಾ ಕೋಡು ಭೋಜ ಶೆಟ್ಟಿ ಸಾಹಿತ್ಯ ಪ್ರಶಸ್ತಿ-ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.15: ಭಾವೀ ಯುವ ಜನಾಂಗಕ್ಕೆ ನಮ್ಮ ಸಂಸ್ಕೃತಿ, ಪರಂಪರೆಗಳನ್ನು ರೂಪಿಸುವ ಉದ್ದೇಶವೇ ಸಂಘ ಸಂಸ್ಥೆಗಳದ್ದಾಗಿದೆ. ಇದನ್ನು ಕಾರ್ಯಗತವಾಗಿಸುವಲ್ಲಿ ಕನ್ನಡ ವೆಲ್ಫೇರ್ ಸೊಸೈಟಿ ಯಶ ಕಂಡಿದೆ. ಈ ಸಂಸ್ಥೆ ನನ್ನ ಪರಿವಾರ ಇದ್ದಂತೆ ಅನ್ನಲು ಅಭಿಮಾನವಾಗುತ್ತಿದೆ. ಕಳೆದ ಸುಮಾರು ಐದುವರೆ ದಶಕಗಳಿಂದ ಈ ಸಂಸ್ಥೆ ಸಮಾಜ ಮತ್ತು ಜನಪರ ಸೇವೆಗೈದು ಸಂಸ್ಕಾರ, ಸಂಸ್ಕೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇದು ನಿಜವಾಗಿಯೂ ಅಭಿನಂದನೀಯ ಮತ್ತು ಸ್ವಾಗತಾರ್ಹ. ಓರ್ವ ನಗರ ಸೇವಕಿಯಾಗಿ ನನಗೆ ಬಹಳಷ್ಟು ಜವಾಬ್ದಾರಿ ಇದೆ. ಈ ಎಲ್ಲಾ ಜವಾಬ್ದಾರಿಯ ಜೊತೆಗೆ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವ ಸಂಸ್ಥೆಯ ಬಗ್ಗೆಯೂ ಕಾಳಜಿ ವಹಿಸುವುದು ನನ್ನ ಕರ್ತವ್ಯವಾಗಿದೆ ಎಂದು ಬಿಎಂಸಿ ಪಂತ್‍ನಗರ ವಾರ್ಡ್‍ನ ನಗರ ಸೇವಕಿ ರಾಖಿ ಜಾಧವ್ ಸಾಲ್ಯಾನ್ ತಿಳಿಸಿದರು.

ಇಂದಿಲ್ಲಿ ಶನಿವಾರ ಅಪರಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ನಿರ್ಮಿತ ಮಧ್ಯಗುತ್ತು ಲೀಲಾವತಿ ಶ್ಯಾಮ ಶೆಟ್ಟಿ ವೇದಿಕೆಯಲ್ಲಿ ಕನ್ನಡ ವೆಲ್ಫೇರ್ ಸೊಸೈಟಿ (ರಿ.) ಘಾಟ್ಕೋಪರ್ ಸಂಸ್ಥೆ ತನ್ನ 52ನೇ ವಾರ್ಷಿಕೋತ್ಸವ ಸಂಭ್ರಮಿಸಿದ್ದು ಸೊಸೈಟಿಯ್ ನಾಮಫಲಕ ಅನಾವರಣಗೈದು ಸಮಾರಂಭ ಉದ್ಘಾಟಿಸಿ ರಾಖಿ ಜಾಧವ್ ಮಾತನಾಡಿದರು.

ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾಬಾಳಿಕೆ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಬಂಟ್ಸ್ ಸಂಘ ಮುಂಬಯಿ ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಗೌರವ ಅತಿಥಿüಗಳಾಗಿ ಬಂಟ್ಸ್ ಸಂಘದ ಮಹಾವಿಷ್ಣು ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ, ಬಂಟ್ಸ್ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಬಂಟ್ಸ್ ಸಂಘದ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ ಸಿಎ| ವಿಶ್ವನಾಥ್ ಶೆಟ್ಟಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ನಗರ ಸೇವಕಿ ಮನೀಷಾ ರಹಟೆ ಉಪಸ್ಥಿತರಿದ್ದು ಅತಿಥಿüವರ್ಯರು ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.

ಕನ್ನಡ ವೆಲ್ಫೇರ್‍ನ ಉಪಾಧ್ಯಕ್ಷ ಜಯರಾಜ್ ಜೈನ್, ಗೌ| ಪ್ರ| ಕಾರ್ಯದರ್ಶಿ ಸುಧಾಕರ್ ಎಲ್ಲೂರು, ಗೌ| ಕೋಶಾಧಿಕಾರಿ ಹರೀಶ್ ಎಂ.ಶೆಟ್ಟಿ, ಜತೆ ಕಾರ್ಯದರ್ಶಿ ರಮಾನಂದ್ ಶೆಟ್ಟಿ, ಜತೆ ಕೋಶಾಧಿಕಾರಿ ತಿಮ್ಮ ಎಸ್. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತ ನಾರಾಯಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎನ್.ಶೆಟ್ಟಿ ಉಪಸ್ಥಿತರಿದ್ದು ಪ್ರಭಾ ಕೋಡು ಭೋಜ ಶೆಟ್ಟಿ ಸಾಹಿತ್ಯ ಪ್ರಶಸ್ತಿಯನ್ನು ರಾಮಮೋಹನ್ ಶೆಟ್ಟಿ ಬಳ್ಕುಜೆ ಇವರಿಗೆ ಪ್ರದಾನಿಸಿದರು ಹಾಗೂ ಶಾಂತ ನಾರಾಯಣ ಶೆಟ್ಟಿ ರಂಗ ಪ್ರಶಸ್ತಿಯನ್ನು ಶ್ರೀನಾಥ್ ಮೂಲ್ಕಿ ಇವರಿಗೆ ಪ್ರಕಟಿಸಿದರು. ಬಳಿಕ ಪ್ರತಿಷ್ಠಿತ ಉದ್ಯಮಿ ಕೆ.ಎಂ ಶೆಟ್ಟಿ (ಮೆಕಾೈ ಸಮೂಹ), ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣಕಾಸು ತಜ್ಞ ಡಾ| ಆರ್.ಕೆ ಶೆಟ್ಟಿ, ಸಂಘದ ಹಿರಿಯ ಸದಸ್ಯ ಎಸ್.ಎ ಮೆಂಡನ್ ಇವರನ್ನು ಅತಿಥಿüಗಳು ಸನ್ಮಾನಿಸಿ ಶುಭಾರೈಸಿದರು. ಪದಾಧಿಕಾರಿಗಳು ಕಲಾವಿದರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿವಂದಿಸಿದರು.

ಸಂಘದ ಸದಸ್ಯೆಯರು, ಮಕ್ಕಳು ನೃತ್ಯಾವಳಿ, ಭಕ್ತಿಭಾವ ಲಹರಿ, ವಿವಿಧ ಮನೋರಂಜನಾ ಮತ್ತು ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾದರ ಪಡಿಸಿದ್ದು, ಕನ್ನಡ ವೆಲ್ಫೇರ್‍ನ ಕಲಾವಿದರು ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ನಿರ್ದೇಶನದಲ್ಲಿ `ಶ್ರೀದೇವಿ ಮಹಾತ್ಮೆ' ಯಕ್ಷಗಾನ ಪ್ರದರ್ಶಿಸಿದರು.

ವೀಣಾ ಶೆಟ್ಟಿ ಬಳಗವು ಪ್ರಾರ್ಥನೆಯನ್ನಾಡಿದರು. ಸುಧಾಕರ್ ಎಲ್ಲೂರು ಸ್ವಾಗತಿಸಿದರು. ನವೀನ್ ಶೆಟ್ಟಿ ಇನ್ನಾಬಾಳಿಕೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತ ಜಯ ಎ.ಶೆಟ್ಟಿ ಅತಿಥಿü ಪರಿಚಯಗೈದರು. ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನೀಡಿ ಗೌರವಿಸಿದರು. ಅಶೋಕ ಪಕ್ಕಳ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here